ಲಾಸ್ ವೇಗಾಸ್‌ನಲ್ಲಿ 2026 ರ ಬಿಗ್ ಸ್ಕ್ರೀನ್ ಅಚೀವ್‌ಮೆಂಟ್ ಅವಾರ್ಡ್‌ಗಳಿಗಾಗಿ ಸಿನಿಮಾಕಾನ್ ಸಜ್ಜಾಗುತ್ತಿದೆ. ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ (Las Vegas) ನಡೆಯುವ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಮುಖ ಚಲನಚಿತ್ರ ವ್ಯಾಪಾರ ಪ್ರದರ್ಶನವಾಗಿದೆ. ಹಾಲಿವುಡ್‌ನ (Hollywood) ಸಾಕಷ್ಟು ಚಿತ್ರ ನಿರ್ಮಾಣ ಹಾಗೂ ವಿತರಣೆ ಸಂಸ್ಥೆಗಳು ಈ ಸಮಾವೇಶದಲ್ಲಿ ಭಾಗಿ ಆಗುತ್ತವೆ. ತಮ್ಮು ಮುಂದಿನ ಸಿನಿಮಾಗಳನ್ನು ಘೋಷಣೆ ಮಾಡುವುದು ಮಾತ್ರವಲ್ಲ, ಬಿಡುಗಡಗೆ ಸಿದ್ಧವಾಗಿರುವ ಸಿನಿಮಾಗಳ ಟೀಸರ್, ಟ್ರೈಲರ್ (Trailer) ಬಿಡುಗಡೆ ಮಾಡಿ ಗಮನ ಸೆಳೆಯುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಲಾಸ್ ವೇಗಾಸ್ ವಿಮಾನ ಏರಿದ್ದಾರೆ ಎನ್ನಲಾಗ್ತಿದೆ. ಸೀಸರ್ಸ್ ಪ್ಯಾಲೇಸ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು ಏಪ್ರಿಲ್ 13 ರಂದು ಯಶ್ (Yash) ಹಾಜರಾಗುತ್ತಾರೆ ಎಂದು ವರದಿಯಾಗಿದೆ.
ವಿಡಿಯೋ ವೈರಲ್
'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಎಕ್ಸ್‌ಕ್ಲೂಸಿವ್ ಟೀಸರ್ ಪ್ರದರ್ಶನವಾಗಲಿದೆ. ಯಶ್ ಕೂಡ ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ತಂಡ ಆಗಲಿ ನಟನಾಗಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೀಗ ಯಶ್ ಅವರ ವಿಡಿಯೋಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ: BhagyaLakshmi Serial: ಕೊನೆಗೂ ಆದಿಯನ್ನೇ ಮದುವೆ ಆದ ಭಾಗ್ಯ! ತಾಂಡವ್ ಕಥೆ ಏನು?
ಜೇಮ್ಸ್ ಕ್ಯಾಮರೂನ್ ಸಿನಿಮಾ ಯುನೈಟೆಡ್ ಸ್ಪಿರಿಟ್ ಆಫ್ ದಿ ಇಂಡಸ್ಟ್ರಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಕ್ಯಾಮರೂನ್ ಹಾಲಿವುಡ್‌ನಲ್ಲಿ ತಮ್ಮ ಹೆಸರನ್ನು ದೊಡ್ಡದಾಗಿಸಿಕೊಂಡಿದ್ದಾರೆ, ನಮ್ಮ ಕಾಲದ ಅತಿದೊಡ್ಡ ಬ್ಲಾಕ್‌ಬಸ್ಟರ್ ನಿರ್ದೇಶಕರಲ್ಲಿ ಒಬ್ಬರು ಎಂದು ಸಾಬೀತುಪಡಿಸಿದ್ದಾರೆ.
ವೈರಲ್ ವಿಡಿಯೋ
'ರಾಮಾಯಣ' ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. 4000 ಕೋಟಿ ರೂ. ಬಜೆಟ್‌ನಲ್ಲಿ 'ರಾಮಾಯಣ' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ದೀಪಾವಳಿ ಸಂಭ್ರಮದಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. 2ನೇ ಭಾಗ ಸಿನಿಮಾ ನೋಡಲು ಮುಂದಿನ ವರ್ಷ ದೀಪಾವಳಿವರೆಗೆ ಕಾಯಬೇಕು. ಇನ್ನು ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿರುವುದು ಖಚಿತವಾಗಿದೆ. ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದು ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 8 ಬಾರಿ ಅಕಾಡೆಮಿ ಪ್ರಶಸ್ತಿ ಪಡೆದ DNEG ಸಂಸ್ಥೆ ಚಿತ್ರಕ್ಕೆ ವಿಎಫ್‌ಎಕ್ಸ್ ವರ್ಕ್ ಮಾಡ್ತಿದೆ.
ಇದನ್ನೂ ಓದಿ: Asha Bhosle Health Update: ಆಶಾ ಭೋಂಸ್ಲೆ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಮೊಮ್ಮಗಳು
ಗೀತು ಮೋಹನ್ ದಾಸ್ ನಿರ್ದೇಶನದ ಗ್ಯಾಂಗ್‌ಸ್ಟರ್ ಸಿನಿಮಾ 'ಟಾಕ್ಸಿಕ್'. ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲಿ ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆ ಯಶ್ ಕೂಡ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.