BhagyaLakshmi Serial: ಕೊನೆಗೂ ಆದಿಯನ್ನೇ ಮದುವೆ ಆದ ಭಾಗ್ಯ! ತಾಂಡವ್ ಕಥೆ ಏನು?
BhagyaLakshmi Serial: ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ ಅಂತೂ ಭಾಗ್ಯ , ಆದಿಯನ್ನೇ ಮದುವೆ ಆಗಿದ್ದಾಳೆ. ಎಲ್ಲ ಸವಾಲ್ ಅವನ್ನು ಮೀರಿ ಹೊಸ ಭರವಸೆಯೊಂದಿಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದಾಳೆ. ಮಾವ ಮತ್ತು ಮನೆಯವರ ಮಾತಿಗೆ ಕಟ್ಟು ಬಿದ್ದು ತಾಂಡವ್ ಜೊತೆಗೆ ಮರುಮದುವೆಗೆ ಸಜ್ಜಾಗಿದ್ದಳು ಭಾಗ್ಯ. ತಾಂಡವ್ ಸ್ವಾರ್ಥದ ಮುಖವಾಡದ ಪ್ರಪಂಚಕ್ಕೆ ಮತ್ತೆ ಕಾಲಿಡಲು ಮದು ಮಗಳಾಗಿ ಮತ್ತೆ ಹೆಜ್ಜೆ ಇಟ್ಟಿದ್ದಳು. ಆದರೆ ಕೊನೆಗೆ ಆಗಿದ್ದೇ ಬೇರೆ.
ಭಾಗ್ಯಲಕ್ಷ್ಮೀ ಧಾರಾವಾಹಿ -
ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ (Bhagyalakshmi Serial) ಅಂತೂ ಭಾಗ್ಯ , ಆದಿಯನ್ನೇ ಮದುವೆ ಆಗಿದ್ದಾಳೆ. ಎಲ್ಲ ಸವಾಲ್ ಅವನ್ನು ಮೀರಿ ಹೊಸ ಭರವಸೆಯೊಂದಿಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದಾಳೆ. ಮಾವ ಮತ್ತು ಮನೆಯವರ ಮಾತಿಗೆ ಕಟ್ಟು ಬಿದ್ದು ತಾಂಡವ್(Thandav)ಜೊತೆಗೆ ಮರುಮದುವೆಗೆ ಸಜ್ಜಾಗಿದ್ದಳು ಭಾಗ್ಯ. ತಾಂಡವ್ ಸ್ವಾರ್ಥದ ಮುಖವಾಡದ ಪ್ರಪಂಚಕ್ಕೆ ಮತ್ತೆ ಕಾಲಿಡಲು ಮದು ಮಗಳಾಗಿ ಮತ್ತೆ ಹೆಜ್ಜೆ ಇಟ್ಟಿದ್ದಳು. ಆದರೆ ಕೊನೆಗೆ ಆಗಿದ್ದೇ ಬೇರೆ.
ಇದನ್ನೂ ಓದಿ: Triptii Dimri: ವಿಕ್ಟೋರಿಯಾಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾದ ತೃಪ್ತಿ ಡಿಮ್ರಿ
ಶ್ರೇಷ್ಠಾ ಕಿಡ್ನಾಪ್
ತಾಂಡವ್ ಮೋಸದಿಂದ, ನಾಟಕ ಮಾಡಿಕೊಂಡು ಭಾಗ್ಯಳನ್ನು ಮತ್ತೆ ಮದುವೆ ಆಗಬೇಕು, ಅವಳ ಜೀವನವನ್ನು ನರಕ ಮಾಡಬೇಕು ಎಂದು ಹಸೆಮಣೆಯವರೆಗೂ ಬಂದಿದ್ದನು. ಇವನ ನಾಟಕ ಯಾರಿಗೂ ಗೊತ್ತಾಗಲಿಲ್ಲ. ಆದರೆ ಭಾಗ್ಯಗೆ ಡೌಟ್ ಇತ್ತು. ಅಷ್ಟೇ ಅಲ್ಲ ಶ್ರೇಷ್ಠಾ ಎಲ್ಲ ವಿಚಾರಗಳನ್ನು ಹೇಳಿ ಬಿಡ್ತಾಳೆ ಅಂತ ಕಿಡ್ನಾಪ್ ಕೂಡ ಆಗಿದ್ದಳು.
ತಾಂಡವ್ ಬದಲಾಗಿಲ್ಲ!
ತಾಯಿ ಆಗುತ್ತಿರುವ ಶ್ರೇಷ್ಠ ಬಳಿಕ ಆದಿಯಿಂದಾಗಿ ತಪ್ಪಿಸಿಕೊಂಡು ಬಂದು ಮದುವೆ ಮಂಟಪಕ್ಕೆ ಬಂದು, ತಾಂಡವ್ ಬದಲಾಗಿಲ್ಲ, ಭಾಗ್ಯ ಲೈಫ್ ಹಾಳು ಮಾಡಬೇಕು ಎಂದು ಅವನು ಇಷ್ಟೆಲ್ಲ ನಾಟಕ ಮಾಡಿದ, ಭಾಗ್ಯ ಮೇಲೆ ಅವನಿಗೆ ದ್ವೇಷ ಹೆಚ್ಚಾಗಿದೆಯೇ ಹೊರತು, ಕಡಿಮೆ ಆಗಿಲ್ಲ. ಇದೆಲ್ಲ ನಾಟಕ, ನನ್ನ ಹೊಟ್ಟೆಯಲ್ಲಿ ಈಗ ತಾಂಡವ್ ಮಗು ಬೆಳೆಯುತ್ತಿದೆ ಎಂದು ಶ್ರೇಷ್ಠ ಎಲ್ಲರ ಮುಂದೆ ಹೇಳಿದ್ದಾಳೆ.
ತಾಂಡವ್ ಅಸಲಿ ಆಟ ಎಲ್ಲರಿಗೂ ಗೊತ್ತಾಗಿದೆ, ಶ್ರೇಷ್ಠ ಎಲ್ಲರ ಎದುರು ಸತ್ಯ ಹೇಳಿದ್ದಾಳೆ. ಈಗ ಭಾಗ್ಯ-ಆದಿ ಮದುವೆ ನಡೆದಿದೆ. ಆದಿ ಅಪ್ಪ ಕೂಡ ಒಳ್ಳೆಯ ಸೊಸೆ ಮನೆಗೆ ಬರಬೇಕು ಅಂತ ಬಯಸಿದ್ದೆ. ಹಾಗೇ ಆಯ್ತು ಅಂತ ಸಂತೋಷ ವ್ಯಕ್ತಪಡಿಸಿದ್ದಾನೆ. ಇನ್ನೂ ಆದಿ ಕೂಡ ಈ ಎರಡೂ ಕುಟುಂಬ ನಮ್ಮದು ಎಂದಿದ್ದಾನೆ. ಈ ಎರಡೂ ಕುಟುಂವನ್ನು ನಡೆಸಿಕೊಂಡು ಹೋಗುವೆ ಅಂತ ಭಾಗ್ಯ ಕೂಡ ಹೇಳಿದ್ದಾಳೆ.
ಇದನ್ನೂ ಓದಿ: Asha Bhosle Health Update: ಆಶಾ ಭೋಂಸ್ಲೆ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಮೊಮ್ಮಗಳು
ತಾಂಡವ್ ಚಾಪ್ಟರ್‌ನ್ನು ಅಂತ್ಯ ಮಾಡುವ ಸಾಧ್ಯತೆ ಇದೆ. ಇನ್ನೊಂದು ಕಡೆ ಶ್ರೇಷ್ಠಗೂ ಕೂಡ ತಾಂಡವ್ ಜೊತೆ ಚೆನ್ನಾಗಿ ಬದುಕುವ ಆಸೆ ಶುರು ಆಗಿದೆ. ಅವಳು ಕೂಡ ಭಾಗ್ಯ ತಂಟೆಗೆ ಬರ್ತಾಳಾ? ಇಲ್ಲವಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ. ಈ ಧಾರಾವಾಹಿಯು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತದೆ.