ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Toxic Teaser: ದಿಢೀರ್‌ ಅಂತ ಸರ್ಪ್ರೈಸ್‌ ನೀಡಿದ ‌ʻರಾಕಿಂಗ್‌ ಸ್ಟಾರ್‌ʼ ಯಶ್; ರಾಯನ ಮತ್ತೊಂದು ಝಲಕ್‌ ನೋಡಲು ನೀವು ರೆಡಿನಾ?

Toxic Teaser Release Date: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಅನ್ನು ದಿಢೀರ್‌ ಎಂದು ಘೋಷಣೆ ಮಾಡಲಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ 'ರಾಯ' ಎಂಬ ರಗಡ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದು, ಈಗ ರಿಲೀಸ್‌ ಆಗಿರುವ ಹೊಸ ಪೋಸ್ಟರ್ ಭೀಕರ ಹಿಂಸಾಚಾರದ ಸುಳಿವು ನೀಡಿದೆ.

`ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' (Toxic: A Fairytale for Grown-ups) ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರದ ರಗಡ್ ಲುಕ್ ಇರುವ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಸಿನಿಪ್ರಿಯರ ಕುತೂಹಲಕ್ಕೆ ತೆರೆ ಎಳೆಯಲು ಸಜ್ಜಾಗಿದೆ. ಈ ಚಿತ್ರದ ಅಧಿಕೃತ ಟೀಸರ್ ಫೆಬ್ರವರಿ 20ರಂದು ಬೆಳಿಗ್ಗೆ 9.35ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸದ್ದಿಲ್ಲದೇ ಫ್ಯಾನ್ಸ್‌ಗೆ ಸಖತ್‌ ನ್ಯೂಸ್‌ ನೀಡಿದ್ದಾರೆ ರಾಕಿ ಭಾಯ್.

ರಕ್ತಸಿಕ್ತ ರಣರಂಗದಲ್ಲಿ 'ರಾಯ'ನ ಅಬ್ಬರ

ಯಶ್ ಅವರು ಟಾಕ್ಸಿಕ್‌ನಲ್ಲಿ 'ರಾಯ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗ ಬಿಡುಗಡೆಯಾಗಿರುವ ಹೊಸ ಪೋಸ್ಟರ್‌ನಲ್ಲಿ ರಕ್ತಸಿಕ್ತ ಹಿಮಪಾತದ ನಡುವೆ ನಿಂತಿರುವ ಅವರ ಅವತಾರ ನಡುಕ ಹುಟ್ಟಿಸುವಂತಿದೆ. ಮದ್ಯದ ಬಾಟಲಿ ಹಿಡಿದು ನಿಂತಿರುವ ಯಶ್ ಸುತ್ತಲೂ ಭೀಕರ ಹಿಂಸಾಚಾರದ ಕುರುಹುಗಳು ಎದ್ದು ಕಾಣುತ್ತಿದ್ದು, ಚಿತ್ರವು ಕರಾಳ ಹಿಂಸೆ ಮತ್ತು ನೈತಿಕ ಸಂಘರ್ಷದ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಪೋಸ್ಟರ್‌ ಮೂಲಕವೇ ಸದ್ದು ಜೋರು ಮಾಡಿದ್ದಾರೆ ಯಶ್.

Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್‌

ಕುತೂಹಲ ಮೂಡಿಸಿದ ಟೀಸರ್ ತಂತ್ರ

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ಈ ಚಿತ್ರದ ಪ್ರಚಾರದ ಶೈಲಿಯೇ ವಿಭಿನ್ನವಾಗಿದೆ. ಕಥೆಯ ಬಗ್ಗೆ ಯಾವುದೇ ಸುಳಿವು ನೀಡದೆ ಕೇವಲ ಪಾತ್ರಗಳ ಮೂಲಕವೇ ಹೈಪ್ ಸೃಷ್ಟಿಸಿರುವ ನಿರ್ದೇಶಕಿ ಗೀತು ಮೋಹನ್ ದಾಸ್, ಟೀಸರ್ ಅನ್ನು ಕೇವಲ ಒಂದು ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ದೃಶ್ಯದ ಶಕ್ತಿ ಮತ್ತು ಚಿತ್ರದ ವಾತಾವರಣವು ಭಾಷೆಯ ಗಡಿ ಮೀರಿ ಪ್ರೇಕ್ಷಕರನ್ನು ತಲುಪಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಈ ಹಿಂದೆ ಬಂದ ಟಾಕ್ಸಿಕ್ ಟೀಸ್‌ ಕೂಡ ಇಂಗ್ಲಿಷ್‌ನ ಕೆಲ ಡೈಲಾಗ್‌ಗಳನ್ನು ಸೇರಿಸಿ, ಒಂದೇ ಭಾಷೆಯಲ್ಲಿ ರಿಲೀಸ್‌ ಮಾಡಲಾಗಿತ್ತು.‌

Yash-Radhika Pandit: ರಾಕಿ ಭಾಯ್‌‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!

ದೊಡ್ಡ ತಾರಾಗಣವೇ ಪ್ಲಸ್‌ ಪಾಯಿಂಟ್‌

ನಟ ಯಶ್ ಅವರು ರಾಯ ಎಂಬ ಪಾತ್ರ ಮಾಡಿದರೆ, 'ನಾಡಿಯಾ' ಪಾತ್ರದಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. 'ಎಲಿಜಬೆತ್' ಆಗಿ ಹುಮಾ ಖುರೇಷಿ ಇದ್ದರೆ, 'ಗಂಗಾ' ಪಾತ್ರದಲ್ಲಿ ನಯನತಾರಾ ನಟಿಸಿದ್ದಾರೆ. ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಕ್ರಮವಾಗಿ 'ರೆಬೆಕಾ' ಮತ್ತು 'ಮೆಲಿಸಾ' ಎಂಬ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

ಜಾಗತಿಕ ಮಟ್ಟದ ತಾಂತ್ರಿಕ ತಂಡ

'ಟಾಕ್ಸಿಕ್' ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಸಾಹಸ ನಿರ್ದೇಶನ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ ಹಾಗೂ ಉಜ್ವಲ್ ಕುಲಕರ್ಣಿ ಅವರ ಸಂಕಲನ ಈ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಕಾಣಲಿದೆ.