ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranbir Kapoor: ಬಾಕ್ಸ್ ಆಫೀಸ್‌ನಲ್ಲಿ ಅದ್ದೂರಿ ಆರಂಭ ಪಡೆದ ʻರಾಮಾಯಣʼ; ಮೊದಲ ದಿನ ಈ ಸಿನಿಮಾದ ಕಲೆಕ್ಷನ್‌ ಎಷ್ಟಾಗಬಹುದು?

Ramayana Box Office Collection Day 1: ಬಾಕ್ಸ್‌ ಆಫೀಸ್‌ನಲ್ಲಿ ʻರಾಮಾಯಣʼ ಸಿನಿಮಾ ದಾಖಲೆಗಳನ್ನು ಧೂಳೀಪಟ ಮಾಡುತ್ತಿದ್ದು, ಮೊದಲ ದಿನವೇ ಭರ್ಜರಿ ಕಮಾಯಿ ಆಗುವ ಲಕ್ಷಣಗಳು ಸಿಕ್ಕಿವೆ. ರಣಬೀರ್‌ ಕಪೂರ್‌, ಯಶ್‌ ನಟನೆಯ ಈ ಸಿನಿಮಾಗೆ ಹಿಂದಿ ವರ್ಷನ್‌ನಿಂದ ಭಾರಿ ಗಳಿಕೆ ಆಗುತ್ತಿದೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಆರಂಭ ಪಡೆದುಕೊಂಡಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು, ಬಿಡುಗಡೆಯಾದ ಮೊದಲ ದಿನ (ನ.5) ಸಂಜೆ 6 ಗಂಟೆಯ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ಭಾಷೆಗಳ ಎಲ್ಲಾ ಫಾರ್ಮ್ಯಾಟ್‌ಗಳಿಂದ ಒಟ್ಟು 55+ ಕೋಟಿ ಕಲೆಕ್ಷನ್ ಮಾಡುವ ಮೂಲಕ ನಾಗಾಲೋಟ ಮುಂದುವರಿಸಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಆರಂಭ

ಭಾರತದ ಬಾಕ್ಸ್ ಆಫೀಸ್‌ನಲ್ಲಿ ದಾಖಲಾಗಿರುವ ಈ ಕಲೆಕ್ಷನ್ ಪೈಕಿ, ಸಿಂಹಪಾಲು ಮೂಲ ಹಿಂದಿ ಆವೃತ್ತಿಯಿಂದಲೇ ಹರಿದುಬಂದಿದೆ. ದೇಶಾದ್ಯಂತ ಪ್ರದರ್ಶನಗೊಂಡ 15,651 ಶೋಗಳಿಂದ ಹಿಂದಿ ಆವೃತ್ತಿ 33.89 ಕೋಟಿ ಬಾಚಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಅವರಿಂದಾಗಿ ಕನ್ನಡ ಡಬ್ಬಿಂಗ್ ಆವೃತ್ತಿಯು ಕೇವಲ 936 ಶೋಗಳಿಂದಲೇ ಬರೋಬ್ಬರಿ 5.37 ಕೋಟಿ ಗಳಿಕೆ ದಾಖಲಿಸಿ ಗಮನ ಸೆಳೆದಿದೆ.

ಕೇರಳ, ತಮಿಳು ವರ್ಷನ್‌ಗೆ ನೀರಸ ಪ್ರತಿಕ್ರಿಯೆ

ವಿಶೇಷವೆಂದರೆ, ತೆಲುಗು ಆವೃತ್ತಿಯು 1,352 ಹೆಚ್ಚಿನ ಶೋಗಳನ್ನು ಹೊಂದಿದ್ದರೂ ಕನ್ನಡಕ್ಕಿಂತ ಕಡಿಮೆ, ಅಂದರೆ 4.41 ಕೋಟಿ ಕಲೆಕ್ಷನ್ ಮಾಡಿದೆ. ತಮಿಳು ಆವೃತ್ತಿ 740 ಶೋಗಳಿಂದ 1.82 ಕೋಟಿ ಗಳಿಸಿದರೆ, ಮಲಯಾಳಂ ಡಬ್ಬಿಂಗ್ ಆವೃತ್ತಿಯು 420 ಶೋಗಳಿಂದ ಕೇವಲ 98 ಲಕ್ಷ ಗಳಿಸಿದೆ. ಆದರೆ, ತಮಿಳುನಾಡು, ಕೇರಳಂನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಧುರಂಧರ್‌ ದಾಖಲೆ ಉಡೀಸ್‌

ದಸರಾ ಹಬ್ಬದ ವೇಳೆ ಆರಂಭವಾಗಿದ್ದ ಮುಂಗಡ ಬುಕಿಂಗ್‌ನಲ್ಲೇ ಚಿತ್ರವು ಅಭೂತಪೂರ್ವ ಯಶಸ್ಸು ಕಂಡಿತ್ತು. ಬಿಡುಗಡೆಗೂ ಮುನ್ನವೇ 12 ಲಕ್ಷ ಟಿಕೆಟ್‌ಗಳ ಮಾರಾಟದ ಮೂಲಕ ಚಿತ್ರವು 50+ ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ಮೂಲಕ ಶಾರುಖ್ ಖಾನ್ ನಟನೆಯ 2023ರ ಬ್ಲಾಕ್‌ಬಸ್ಟರ್ 'ಜವಾನ್' ದಾಖಲೆಯನ್ನು ಹಿಂದಿಕ್ಕಿ, ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಮುಂಗಡ ಬುಕಿಂಗ್ ಪಡೆದ ಹೆಗ್ಗಳಿಕೆಗೆ ‘ರಾಮಾಯಣ’ ಪಾತ್ರವಾಗಿದೆ. ಪ್ರಸ್ತುತ ಈ ಪಟ್ಟಿಯಲ್ಲಿ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2: ದಿ ರಿವೇಂಜ್' (52.35 ಕೋಟಿ ಮುಂಗಡ ಬುಕಿಂಗ್) ಸಿನಿಮಾ ಮೊದಲ ಸ್ಥಾನದಲ್ಲಿದೆ.

Ramayana Movie: ಸೀತೆ ಮಾತೆ ಪಾತ್ರಕ್ಕೆ ಜೀವ ತುಂಬಿದ ನಟಿ ಸಾಯಿ ಪಲ್ಲವಿ; ನೆಟ್ಟಿಗರಿಂದ ಸಿಕ್ತು ಭಾರಿ ಬಹುಪರಾಕ್!

ಮೊದಲ ದಿನ ಗಳಿಕೆ 160 ಕೋಟಿ?

ಇದು ಸಂಜೆವರೆಗಿನ ಆರಂಭಿಕ ವರದಿಯಷ್ಟೇ ಆಗಿದ್ದು, ನೈಟ್ ಶೋಗಳ ಅಧಿಕೃತ ಅಂಕಿ-ಅಂಶಗಳು ಇನ್ನಷ್ಟೇ ಹೊರಬರಬೇಕಿದೆ. ಗುರುವಾರ ರಜಾದಿನ ಅಲ್ಲದಿದ್ದರೂ ಸಂಜೆ ನಂತರ ಮಲ್ಟಿಪ್ಲೆಕ್ಸ್‌ಗಳಲ್ಲಿ ಆಕ್ಯುಪೆನ್ಸಿ ಗಣನೀಯವಾಗಿ ಏರಿಕೆಯಾಗಿದೆ. ಪ್ರಸ್ತುತ ಟ್ರೆಂಡ್ ಗಮನಿಸಿದರೆ, ಭಾರತದಲ್ಲಿ ಮೊದಲ ದಿನ ಹಿಂದಿ ಆವೃತ್ತಿಯಿಂದಲೇ 60 ರಿಂದ 70 ಕೋಟಿ ಗಳಿಕೆ ಆಗುವ ನಿರೀಕ್ಷೆ ಇದೆ. ಇನ್ನು, ಎಲ್ಲಾ ಭಾಷೆಗಳಲ್ಲಿ ಒಟ್ಟಾಗಿ 100 ಕೋಟಿ ಕಲೆಕ್ಷನ್ ಮುಟ್ಟುವ ಸಾಧ್ಯತೆಯಿದೆ. ಜತೆಗೆ, ಉತ್ತರ ಅಮೆರಿಕ ಸೇರಿದಂತೆ ವಿದೇಶಿ ಮಾರುಕಟ್ಟೆಯಿಂದ ಮೊದಲ ದಿನವೇ ಸುಮಾರು 60 ಕೋಟಿ ಹರಿದುಬರುವ ನಿರೀಕ್ಷೆಯಿದ್ದು, ವಿಶ್ವಾದ್ಯಂತ ಮೊದಲ ದಿನದ ಒಟ್ಟು ಗಳಿಕೆ 160 ಕೋಟಿ ದಾಟುವ ಸೂಚನೆ ಇದೆ.

ಯಾರೆಲ್ಲಾ ನಟಿಸಿದ್ದಾರೆ?

ವಿದೇಶಗಳಲ್ಲಿ ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಹಾಗೂ ಉತ್ತರ ಭಾರತದಲ್ಲಿ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಈ ಚಿತ್ರವನ್ನು ವಿತರಿಸಿವೆ. ಉಳಿದಂತೆ, ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ (ಶೂರ್ಪನಖಿ), ಅನುಪಮ್ ಖೇರ್ (ಜಟಾಯು), ಅರುಣ್ ಗೋವಿಲ್ (ದಶರಥ), ರವಿ ದುಬೆ (ಲಕ್ಷ್ಮಣ), ಲಾರಾ ದತ್ತಾ (ಕೈಕೇಯಿ), ಶೋಭನಾ (ಕೈಕಸಿ), ಶೀಬಾ ಚಡ್ಡಾ (ಮಂಥರೆ) ಹಾಗೂ ಕುನಾಲ್ ಕಪೂರ್ (ಇಂದ್ರ) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಹಾಗೂ ಭಾರತದ ಎ.ಆರ್. ರೆಹಮಾನ್ ಜಂಟಿಯಾಗಿ ಹಿನ್ನೆಲೆ ಸಂಗೀತ ಮತ್ತು ಗೀತೆಗಳನ್ನು ಸಂಯೋಜಿಸಿದ್ದು, ಈ ಚಿತ್ರದ ಸೊಗಸನ್ನು ಮತ್ತಷ್ಟು ಹೆಚ್ಚಿಸಿವೆ.