ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Yash: ಪತ್ನಿ ರಾಧಿಕಾ ಜೊತೆ ಹೊಸ ಲುಕ್‌ನಲ್ಲಿ ಕಂಡ ರಾಕಿಂಗ್ ಸ್ಟಾರ್ ಯಶ್!

Yash Radhika at the airport : ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಕಾಣಿಸಿಕೊಂಡರು. ರಾಧಿಕಾ ಅವರ ವಿಶೇಷ ಹುಟ್ಟುಹಬ್ಬದ ಆಚರಣೆಗೆ ದಂಪತಿ ರೆಡಿಯಾದಂತಿದೆ. ಯಶ್ ರೆಸ್ಟೋರೆಂಟ್ ಹೊರ ಭಾಗದಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಶಾರ್ಟ್ ಹೇರ್ ಹಾಗೂ ಸಣ್ಣದಾದ ಗಡ್ಡದಲ್ಲಿ ಕಾಣಿಸಿಕೊಂಡರು.

ಯಶ್‌ ರಾಧಿಕಾ

ರಾಕಿಂಗ್ ಸ್ಟಾರ್ ಯಶ್ (Rocking Star Yash) ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ (radhika pandit) ಅವರೊಂದಿಗೆ ಕಾಣಿಸಿಕೊಂಡರು. ರಾಧಿಕಾ ಅವರ ವಿಶೇಷ ಹುಟ್ಟುಹಬ್ಬದ ಆಚರಣೆಗೆ ದಂಪತಿ ರೆಡಿಯಾದಂತಿದೆ. ಯಶ್ (Yash) ರೆಸ್ಟೋರೆಂಟ್ ಹೊರ ಭಾಗದಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಶಾರ್ಟ್ ಹೇರ್ ಹಾಗೂ ಸಣ್ಣದಾದ ಗಡ್ಡದಲ್ಲಿ ಕಾಣಿಸಿಕೊಂಡರು.

'ಟಾಕ್ಸಿಕ್' ಚಿತ್ರವು ಭಾರಿ ಸಂಚಲನ

ಯಶ್ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ 'ಟಾಕ್ಸಿಕ್' ಚಿತ್ರವು ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈಗಾಗಲೇ ಚಿತ್ರದ ಬಿಡುಗಡೆಯ ಬಗ್ಗೆ ಕುತೂಹಲದಿಂದಿದ್ದರು.

ಯಶ್ ಅವರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ಟಿಕೆಟ್’ ಹೆಸರಿನ ಪಾತ್ರದ ಲುಕ್​​ಗಾಗಿ ಅವರು ಗಡ್ಡ ಹಾಗೂ ಕೂದಲನ್ನು ಕತ್ತರಿಸಿ ಸಣ್ಣದಾಗಿಸಿಕೊಂಡಿದ್ದಾರೆ. ಈಗ ಈ ಲುಕ್​​ನ ಅನಾವರಣ ಆಗಿರುವುದರಿಂದ ಯಶ್ ಅದನ್ನು ಸಾರ್ವಜನಿಕವಾಗಿ ತೋರಿಸಿದ್ದಾರೆ.

ಇದನ್ನೂ ಓದಿ: Badshah Controversy: ಖ್ಯಾತ ಗಾಯಕ ಬಾದ್‌ಶಾ ವಿರುದ್ಧ ದೂರು ದಾಖಲು; ಏನಿದು ವಿವಾದ?

ರಾಧಿಕಾ ಅವರ ಹುಟ್ಟುಹಬ್ಬಕ್ಕೆ ದಂಪತಿ ಬೆಂಗಳೂರಿಗೆ ಹಿಂತಿರುಗಿದಾಗ, ಅವರನ್ನು ನೋಡಿದ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿ, ಕುತೂಹಲದಿಂದ ಫೋಟೋಗಳನ್ನು ತೆಗೆದುಕೊಂಡರು.

ಜೂನ್ 4 ಕ್ಕೆ ಸಿನಿಮಾ ರಿಲೀಸ್‌

ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದ ಈ ಚಿತ್ರವನ್ನು ಈಗ ಜೂನ್ 4 ಕ್ಕೆ ಮುಂದೂಡಲಾಗಿದೆ. ಇತ್ತೀಚೆಗೆ ಯಶ್ ಸಾರ್ವಜನಿಕವಾಗಿ ಕೆಲವು ಬಾರಿ ಕಾಣಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಬೆಳ್ಳಿ ಪರದೆಗೆ ಮರಳುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಅವರ ಅಭಿಮಾನಿ ಬಳಗ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ರಾಕಿ ಭಾಯ್ ಹೆಸರು ಭಾರತಾದ್ಯಂತ ಚರ್ಚೆಯಲ್ಲಿದೆ.



ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಇಂದು 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ನ ಪೋಸ್ಟ್‌ಪೋನ್‌ ಆಗಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮಾರ್ಚ್ 19, 2026 ರಂದು ವಿಶ್ವಾದ್ಯಂತ ಬಿಡುಗಡೆ ಆಗಬೇಕಿದ್ದ ಸಿನಿಮಾ ಜೂನ್ 4, 2026ರಂದು ರಿಲೀಸ್‌ ಆಗಲಿದೆ. ಮಧ್ಯಪ್ರಾಚ್ಯ ಸಂಘರ್ಷ ಬಿಗಡಾಯಿಸಿದ ಕಾರಣ ಈ ನಿರ್ಧಾರಕ್ಕೆ ಬಂದಿದೆ ತಂಡ. ಪರಿಣಾಮವಾಗಿ ಗಲ್ಫ್ ದೇಶಗಳಲ್ಲಿ ಸಿನಿಮಾ ಪ್ರಚಾರಕ್ಕೆ ತೊಂದರೆಯಾಗಲಿದೆ.ಹೀಗಾಗಿ ಈ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಚಿತ್ರದ ಮೊದಲ ಬಿಡುಗಡೆ ದಿನಾಂಕ 19 ಮಾರ್ಚ್ 2026 ಕ್ಕಿಂತ ಮೊದಲೇ ನಿರ್ಮಾಪಕರು ಚಿತ್ರದ ಅಂತಿಮ ಪ್ರಚಾರ ವೇಳಾಪಟ್ಟಿಯನ್ನು ಈಗಾಗಲೇ ರೂಪಿಸಿದ್ದರು.

ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಲನಚಿತ್ರಗಳಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: Toxic postponed: ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ; ಯಶ್‌ ಫ್ಯಾನ್ಸ್‌ ಶಾಕ್‌! ಕಾರಣ ಇದು

ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಯಶ್ ಬರೆದು ಗೀತು ಮೋಹನ್‌ದಾಸ್ ನಿರ್ದೇಶಿಸಿದ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಡಬ್ ಮಾಡಿದ ಆವೃತ್ತಿಗಳೊಂದಿಗೆ ಇದೆ.

Yashaswi Devadiga

View all posts by this author