ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Yash: ʻಟಾಕ್ಸಿಕ್‌ʼ ಚಿತ್ರದ ಓವರ್‌ಸೀಸ್‌ ಹಕ್ಕುಗಳು ದುಬಾರಿ ಮೊತ್ತಕ್ಕೆ ಸೇಲ್;‌ ಖರೀದಿ ಮಾಡಿದವರು ಯಾರು?

Toxic Movie Overseas Rights: ಟಾಕ್ಸಿಕ್‌ ಸಿನಿಮಾದ ವಿತರಣಾ ವ್ಯವಹಾರವು ಈಗ ಜಾಗತಿಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಫಾರ್ಸ್ ಫಿಲ್ಮ್ (Phars Film) ಸಂಸ್ಥೆಯು 'ಟಾಕ್ಸಿಕ್' ಚಿತ್ರದ ವಿದೇಶಿ ಹಕ್ಕುಗಳನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಮಾರ್ಚ್ 19 ರಂದು ಈ ಸಿನಿಮಾ ತೆರೆಕಾಣುತ್ತಿದೆ.

ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ತೆರೆಗೆ ಬರಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಸದ್ಯ ಚಿತ್ರದ ವಿತರಣಾ ಹಕ್ಕುಗಳ ಮಾರಾಟ ಜೋರಾಗಿದೆ. ಈಗಾಗಲೇ ತೆಲುಗಿನ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮಾಲೀಕ ದಿಲ್ ರಾಜು ಅವರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಟಾಕ್ಸಿಕ್ ವಿತರಣಾ ಹಕ್ಕುಗಳನ್ನು ಬರೋಬ್ಬರಿ 120 ಕೋಟಿ ರೂ.ಗಳಿಗೆ ಖರೀದಿ ಮಾಡಿದ್ದಾರೆ. ಇದೀಗ ಟಾಕ್ಸಿಕ್‌ ಚಿತ್ರದ ವಿದೇಶದ ಹಕ್ಕುಗಳ ಮಾರಾಟ ಪ್ರಕ್ರಿಯೆ ಮುಗಿದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಫಾರ್ಸ್ ಫಿಲ್ಮ್ (Phars Film) ಸಂಸ್ಥೆಯು 'ಟಾಕ್ಸಿಕ್' ಚಿತ್ರದ ಓವರ್‌ಸೀಸ್‌ ಹಕ್ಕುಗಳನ್ನು ಖರೀದಿಸಿದೆ. ಭಾರತೀಯ ಚಿತ್ರವೊಂದಕ್ಕೆ ಸಿಕ್ಕಿರುವ ಅತ್ಯಂತ ದುಬಾರಿ ವಿದೇಶಿ ಒಪ್ಪಂದಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ. ಕಮಿಷನ್ ಆಧಾರದ ಮೇಲೆ ಬರೋಬ್ಬರಿ 105 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಡೆದುಕೊಂಡು, ಈ ಡೀಲ್‌ ಓಕೆ ಮಾಡಲಾಗಿದೆಯಂತೆ.ಚಿತ್ರದ ಟ್ರೇಲರ್ ಬಿಡುಗಡೆಗೂ ಮುನ್ನವೇ ಚಿತ್ರದ ಬಗ್ಗೆ ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ನಡೆಯುತ್ತಿರುವುದು, ಟಾಕ್ಸಿಕ್‌ಗೆ ಇರುವ ಬೇಡಿಕೆ ಎಂಥದ್ದು ಎಂಬುದನ್ನು ಇದು ತೋರಿಸುತ್ತದೆ.

Yash Toxic teaser: ಯಶ್ ಟಾಕ್ಸಿಕ್‌ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ

ಅಂದಹಾಗೆ, ಈ ಒಪ್ಪಂದವು ಕೇವಲ 'ಟಾಕ್ಸಿಕ್' ಚಿತ್ರದ ಭಾರತೀಯ ಭಾಷೆಯ ಆವೃತ್ತಿಗಳಿಗೆ (ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ) ಮಾತ್ರ ಅನ್ವಯಿಸುತ್ತದೆ ಮತ್ತು ಇಂಗ್ಲಿಷ್ ಆವೃತ್ತಿಯನ್ನು ಇದು ಒಳಗೊಂಡಿಲ್ಲ. ನೇಪಾಳ, ಜಪಾನ್ ಮತ್ತು ಚೀನಾ ಹೊರತುಪಡಿಸಿ, ವಿಶ್ವದಾದ್ಯಂತ ಟಾಕ್ಸಿಕ್‌ ಸಿನಿಮಾವನ್ನು ಏಕಕಾಲದಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಫಾರ್ಸ್ ಫಿಲ್ಮ್ಸ್‌ನ ಸಿಇಒ ಹೇಳೋದೇನು?

"ಟಾಕ್ಸಿಕ್ ಮೂಲಕ ಗಡಿಗಳನ್ನು ಮೀರಿ ತಲುಪುವಂತಹ ಕಥೆಯನ್ನು ಹೇಳುವುದು ನಮ್ಮ ಗುರಿಯಾಗಿತ್ತು. ಈ ಚಿತ್ರವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ತಲುಪಿಸಲು ಮತ್ತು ಅದರ ಕಥಾವಸ್ತುವು ವಿವಿಧ ಸಂಸ್ಕೃತಿಗಳ ನಡುವೆ ಬೆಸೆಯುವುದನ್ನು ನೋಡಲು ನಾವು ಹೆಮ್ಮೆಪಡುತ್ತೇವೆ. ಈ ವಿದೇಶಿ ಬಿಡುಗಡೆಯು ಫಿಲ್ಮ್ಸ್‌ಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ವಿಶ್ವಾದ್ಯಂತ ವೀಕ್ಷಕರು 'ಟಾಕ್ಸಿಕ್'ನ ತೀವ್ರತೆ ಮತ್ತು ಭಾವನಾತ್ಮಕ ಆಳವನ್ನು ಅನುಭವಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ಫಾರ್ಸ್ ಫಿಲ್ಮ್ಸ್‌ನ ಸಿಇಒ ಮತ್ತು ಸ್ಥಾಪಕ ಅಹ್ಮದ್ ಗೊಲ್ಚಿನ್ ಹೇಳಿದ್ದಾರೆ.

'ಟಾಕ್ಸಿಕ್‌ʼ ಜತೆಗಿನ ಬಾಕ್ಸ್‌ ಆಫೀಸ್‌ ವಾರ್‌ ತಪ್ಪಿಸಲು 'ಧುರಂಧರ್ 2' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ? ವೈರಲ್ ಪೋಸ್ಟ್‌ನ‌ ಅಸಲಿಯತ್ತೇನು?

ಟಾಕ್ಸಿಕ್‌ ನಿರ್ಮಾಪಕರು ಹೇಳಿದ್ದೇನು?

"ಟಾಕ್ಸಿಕ್ ಅನ್ನು ಸಾರ್ವತ್ರಿಕ ಚಿತ್ರವನ್ನಾಗಿ ರೂಪಿಸಲಾಗಿದೆ. ಇಂತಹ ಬೃಹತ್ ಚಿತ್ರಕ್ಕೆ ಅಸಾಧಾರಣ ಜಾಗತಿಕ ಶಕ್ತಿ ಮತ್ತು ವಿಶ್ವಾಸಾರ್ಹತೆ ಹೊಂದಿರುವ ಪಾಲುದಾರರ ಅಗತ್ಯವಿತ್ತು. ಫಾರ್ಸ್ ಫಿಲ್ಮ್ಸ್ ಭಾರತೀಯ ಸಿನಿಮಾವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಶಕ್ತಿಯುತವಾಗಿ ನೆಲೆಗೊಳಿಸುವಲ್ಲಿ ಸತತವಾಗಿ ಸಾಬೀತುಪಡಿಸಿದೆ. ನಿಜಕ್ಕೂ ಒಂದು ಹೆಗ್ಗುರುತಾಗಲಿರುವ ಈ ವಿದೇಶಿ ವಿತರಣಾ ಒಪ್ಪಂದಕ್ಕಾಗಿ ಅವರೊಂದಿಗೆ ಕೈಜೋಡಿಸಲು ನಾವು ಹೆಮ್ಮೆಪಡುತ್ತೇವೆ" ಎನ್ನುತ್ತಾರೆ ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ ನಾರಾಯಣ.

ಗೀತು ಮೋಹನ್ ದಾಸ್ ನಿರ್ದೇಶಿಸಿರುವ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairytale for Grown-Ups) ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಹಲವು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. 'ಟಾಕ್ಸಿಕ್' ಚಿತ್ರವು ಮಾರ್ಚ್ 19, 2026 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.