ಕನ್ನಡದ ಸೂಪರ್‌ಸ್ಟಾರ್ ಯಶ್ (Actor Yash) ಅವರ ಮುಂಬರುವ ಚಿತ್ರ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ರಿಲೀಸ್‌ಗೆ (Toxic: A Fairytale for Grown-Ups) ಫ್ಯಾನ್ಸ್ ಕಾಯುತ್ತಿದ್ದಾರೆ. ಕೆಜಿಎಫ್ ಫ್ರಾಂಚೈಸಿಯ ಅದ್ಭುತ ಯಶಸ್ಸಿನ ನಂತರ ಈ ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲ ಫ್ಯಾನ್ಸ್‌ಗೆ ಇದೆ. ಕೆಜಿಎಫ್ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರ 'ಟಾಕ್ಸಿಕ್' ಸಿನಿಮಾ ಪ್ರಚಾರದ ಭಾಗವಾಗಿ ಪ್ರತಿಷ್ಠಿತ 'ವೆರೈಟಿ' ನಿಯತಕಾಲಿಕೆಯ (Variety’s Cover Reveal) ಕವರ್ ಪೇಜ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಪೋಟೋಗೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ.
ಕವರ್ ಪೇಜ್ ಮೇಲೆ ಯಶ್
ಅಂತಾರಾಷ್ಟ್ರೀಯ ನಿಯತಕಾಲಿಕೆ ‘ವೆರೈಟಿ’ ತನ್ನ ಕವರ್ ಪೇಜ್ ಮೇಲೆ ಯಶ್ ಅವರ ಫೋಟೋವನ್ನು ಫೀಚರ್ ಮಾಡಿದೆ. ‘ಇದು ಯಶ್ ಎಫೆಕ್ಟ್’ ಎಂದು ಬರೆದಿದೆ. ಐಷಾರಾಮಿ ಕಾರಿನ ಒಳಗೆ ಬಿಳಿ ಬಣ್ಣದ ಸೂಟ್ ಹಾಗೂ ಹ್ಯಾಟ್ ಧರಿಸಿ ಯಶ್ ಸ್ಟೈಲಿಶ್ ಪೋಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: Amruthadhaare Serial: ಜೆಡಿಗೆ ವಿಧಿಯ ಶಾಪ; ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ ಮಾಡಿದ ಪಾಪ!
ಖ್ಯಾತ ಚಲನಚಿತ್ರ ನಿರ್ಮಾಪಕಿ ಗೀತು ಮೋಹನ್ ದಾಸ್ ನಿರ್ದೇಶಿಸಿದ ಈ ಚಿತ್ರವನ್ನು ಯಶ್ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೆ ಬೆಂಬಲಿಸುತ್ತಿದ್ದಾರೆ, ಇದು ಈಗಾಗಲೇ ಸಿನಿಮಾ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.
ಈ ಕವರ್ ಸ್ಟೋರಿಯು ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ, ಒಬ್ಬ ಪ್ರಭಾವಿ ನಿರ್ಮಾಪಕನಾಗಿಯೂ ಯಶ್ ಹೇಗೆ ಬೆಳೆಯುತ್ತಿದ್ದಾರೆ ಎಂದು ತೋರಿಸಿದೆ. ವೆರೈಟಿ ಕವರ್ ಪೇಜ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟ್ರೆಂಡ್ ಆಗಿದೆ.
ಅನೇಕ ಬಳಕೆದಾರರು ಮುಖಪುಟದ ಯಶ್ ಲುಕ್ ಹೊಗಳಿದರೆ, ಇನ್ನೂ ಕೆಲವರು ಗೀತು ಮೋಹನ್ ದಾಸ್ ಅವರೊಂದಿಗೆ ಯಶ್ ಸಿನಿಮಾ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಅನ್ನು ಅಭಿವೃದ್ಧಿಯಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ಭಾರತೀಯ ಚಲನಚಿತ್ರಗಳಲ್ಲಿ ಒಂದನ್ನಾಗಿ ಮಾಡಿದೆ.
ಮಾರ್ಚ್ 19ಕ್ಕೆ ರಿಲೀಸ್ ಆಗ್ಬೇಕಿದ್ದ ಸಿನಿಮಾ ಜೂನ್ 4ಕ್ಕೆ ಪೋಸ್ಟ್‌ಪೋನ್ ಆದಾಗ ರಾಕಿ ಭಾಯ್ ಅಭಿಮಾನಿಗಳು ಸಮಾಧಾನ ಮಾಡಿಕೊಂಡಿದ್ದರು.
ಇನ್ನೆರಡು ತಿಂಗಳು ಹೇಗಾದರೂ ಮಾಡಿ ಕಾಯೋಣ ಅಂದುಕೊಂಡಿದ್ದರು. ಅಷ್ಟರಲ್ಲೇ ಯಶ್ ಕಡೆಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿತ್ತು. ಈ ಬಾರಿ ಅಂತೂ ಯಾವಾಗ ರಿಲೀಸ್ ಅನ್ನೋ ಡೇಟ್ ಕೂಡ ಇರಲಿಲ್ಲ.
ಇದನ್ನೂ ಓದಿ: Amruthadhaare Serial: ದಿವಾನ್ ಮನೆಯಲ್ಲಿ ಗೌತಮ್ - ಭೂಮಿಕಾ ರಾಜ್ಯಭಾರ; ಪೊಲೀಸ್ ಕೈಗೆ ಸಿಕ್ಕಿರೋ ಕೇಡಿ ಕತೆ ಹರೋಹರ!
ಯಶ್ 'ಟಾಕ್ಸಿಕ್' ಡೇಟ್ ಅನ್ನು ಮುಂದೂಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಡೇಟ್ ಹರಿದಾಡುತ್ತಿತ್ತು. ಆಗಸ್ಟ್ ತಿಂಗಳಲ್ಲಿ 'ಟಾಕ್ಸಿಕ್' ರಿಲೀಸ್ ಆಗಬಹುದು ಎಂದು ಕೆಲವು ಫ್ಯಾನ್ಸ್ ಪೇಜ್‌ಗಳಲ್ಲಿ ಹರಿದಾಡಿದ್ದವು. ಇನ್ನು ಸಿನಿಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಒಟ್ಟಾಗಿ ಬಂಡವಾಳ ಹೂಡಿದ್ದಾರೆ.