Amruthadhaare Serial: ಜೆಡಿಗೆ ವಿಧಿಯ ಶಾಪ; ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ ಮಾಡಿದ ಪಾಪ!
Amruthadhaare Serial: ಭೂಮಿಕಾ ಮತ್ತೆ ಗರ್ಭಿಣಿಯಾಗ್ತಾಳೆ ಎಂದಿರೋ ಜ್ಯೋತಿಷಿ, ಹೆತ್ತ ಮಗಳಿಂದಲೇ ಗೌತಮ್ ಜೀವಕ್ಕೆ ಅಪಾಯ ಎಂದಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ವೀಕ್ಷಕರನ್ನು ಗೊಂದಲಗೊಳಿಸಲು ಹೀಗೆ ಹೇಳಲಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ(amruthadhaare serial ) ರೋಚಕ ಟ್ವಿಸ್ಟ್ ಪಡೆದು ಸಾಗುತ್ತಿದೆ. ಭೂಮಿಕಾ ಮತ್ತೆ ಗರ್ಭಿಣಿಯಾಗ್ತಾಳೆ ಎಂದಿರೋ ಜ್ಯೋತಿಷಿ, ಹೆತ್ತ ಮಗಳಿಂದಲೇ ಗೌತಮ್ ಜೀವಕ್ಕೆ ಅಪಾಯ ಎಂದಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ವೀಕ್ಷಕರನ್ನು ಗೊಂದಲಗೊಳಿಸಲು ಹೀಗೆ ಹೇಳಲಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದೆ.
ಬೀದಿ ಬದಿಯಲ್ಲೇ ಮಲಗುವಂತಾಗಿದೆ ಜೈದೇವ್ ಪರಿಸ್ಥಿತಿ
ಈ ನಷ್ಟದಿಂದ ಹೊರಬರುವ ಮೊದಲೇ ಆತನ ಮನೆ, ಕಚೇರಿ ಎಲ್ಲವೂ ಸೀಝ್ ಆಯಿತು. ಈಗ ಗೌತಮ್ ಮರಳಿ ಮನೆ, ಕಂಪನಿ ಎಲ್ಲವನ್ನೂ ಮರಳಿ ಪಡೆದಿದ್ದಾನೆ. ಆತನಿಗೆ ಕೆಟ್ಟ ದಿನಗಳು ಆರಂಭವಾಗಿವೆ. ಜೈದೇವ್ ಒಂದು ಕಡೆ ಅಮ್ಮನನ್ನು ಹೊರ ಹಾಕಿದ್ದಾನೆ. ದಿಯಾ ಕೂಡ ಈಗಾಗಲೇ ಜೈದೇವ್ ದೂರ ಮಾಡಿದ್ದಾಗಿದೆ.
ಇದನ್ನೂ ಓದಿ: RB Choudary: ರಸ್ತೆ ಅಪಘಾತದಲ್ಲಿ ಖ್ಯಾತ ನಿರ್ಮಾಪಕ ಆರ್. ಬಿ ಚೌಧರಿ ನಿಧನ; ರಜನಿಕಾಂತ್, ಪವನ್ ಕಲ್ಯಾಣ್, ಚಿರಂಜೀವಿ ಕಂಬನಿ
ಜಯದೇವ್ ಈಗ ಆತನು ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಈ ಸಮಯದಲ್ಲಿ ಆತನ ಕೈ ಬೆರಳಲ್ಲಿ ಇದ್ದ ಚಿನ್ನದ ಉಂಗುರುವನ್ನು ವ್ಯಕ್ತಿಯೋರ್ವ ಕದ್ದು ಓಡಿದ್ದಾನೆ. ಇದರಿಂದ ಜಯದೇವ್ ಶಾಕ್ಗೆ ಒಳಗಾಗಿದ್ದಾನೆ. ಊಟಕ್ಕೂ ಗತಿ ಇಲ್ಲದೇ ಅಲೆದಾಡುತ್ತಿದ್ದಾನೆ.
ಈಗಾಗಲೇ ಜಯದೇವ್ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಅವನ ತಾಯಿ ಬದಲಾಗಿದ್ದಾಳೆ. ಇನ್ನು, ಗೌತಮ್ಗೂ ಮನೆ ಮರಳಿ ಸಿಕ್ಕಿದೆ. ಈಗ ಅವರ ಜಾತಕದಲ್ಲಿ ಮಗಳಿಂದ ಕೆಟ್ಟದಾಗುತ್ತದೆ ಎಂಬುದು ಬಂದಿದೆ.
ಜ್ಯೋತಿಷಿಯ ಈ ಮಾತಿನಿಂದ ಇನ್ನೂ ಕೆಲವು ವರ್ಷ ಅಮೃತಧಾರೆ ಮುಂದುವರೆಯುವಂತೆ ಕಾಣುತ್ತಿದೆ. ಇದರ ಅರ್ಥ, ಮಗಳಿಂದ ತೊಂದರೆ ಎಂದರೆ ಅದು ಕಳೆದು ಹೋಗಿರುವ ಮಗಳಿಂದ ಎನ್ನುವುದು ಈಗ ನಿಶ್ಚಿತವಾಗಿದೆ.
ಹಾಗಿದ್ದರೆ ಆ ಮಗಳು ಎಲ್ಲಿದ್ದಾಳೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಜ್ಯೋತಿಷಿಯ ಮಾತು ಕೇಳಿ ಕೆಲವರು ಭೂಮಿಕಾ ಮತ್ತು ಗೌತಮ್ಗೆ ಇನ್ನೊಂದು ಹೆಣ್ಣುಮಗು ಹುಟ್ಟುತ್ತದೆ. ಅದರಿಂದ ಸಮಸ್ಯೆ ಆಗಬಹುದು ಎಂದು ಹೇಳುತ್ತಿದ್ದರಾದರೂ, ಸದ್ಯದ ಮಟ್ಟಿಗೆ ಮಿಸ್ಸಿಂಗ್ ಮಗಳ ಬಗ್ಗೆ ಇನ್ನೂ ತೋರಿಸದ ಕಾರಣದಿಂದ ಆಕೆಯೇ ವಿಲನ್ ಆಗಿ ಬಂದು ತೊಂದರೆ ಕೊಡಬಹುದು ಎನ್ನಲಾಗುತ್ತಿದೆ.
ಇನ್ನೊಂದೆಡೆ ಜೈದೇವ ಬೀದಿಪಾಲಾಗಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇವನಿಗೆ ಏನಾದ್ರೂ ಭೂಮಿಕಾ-ಗೌತಮ್ ಮಗಳು ಸಿಕ್ಕು ಆಕೆಯನ್ನು ತನ್ನ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: Amruthadhaare Serial: ಜೈದೇವ್ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ