ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Toxic Teaser:‌ ಯಶ್ ಜೊತೆ ಕಾರಿನಲ್ಲಿದ್ದ ಆ ಸುಂದರಿ 'ನಟಾಲಿಯಾ' ಅಲ್ಲ! 'ಟಾಕ್ಸಿಕ್' ಮಿಸ್ಟರಿ ಹುಡುಗಿ ಬಗ್ಗೆ ಬಿಗ್ ಟ್ವಿಸ್ಟ್ ಕೊಟ್ಟ ಡೈರೆಕ್ಟರ್!‌

Toxic Mystery Girl: ಯಶ್ ನಟನೆಯ 'ಟಾಕ್ಸಿಕ್' ಟೀಸರ್‌ನಲ್ಲಿ ಕಾರಿನ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ ಯಾರು ಎಂಬ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಆರಂಭದಲ್ಲಿ ಅವರು ಉಕ್ರೇನ್ ಮೂಲದ ನಟಾಲಿಯಾ ಬರ್ನ್ ಎಂದು ಭಾವಿಸಲಾಗಿತ್ತು, ಆದರೆ ನಿರ್ದೇಶಕಿ ಗೀತು ಮೋಹನ್‌ದಾಸ್‌ ಆ ನಟಿಯ ಬಗ್ಗೆ ಫುಲ್‌ ಮಾಹಿತಿ ಹಂಚಿಕೊಂಡಿದ್ದಾರೆ.

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರ Toxic: A Fairy Tale for Grown-Ups ಸಿನಿಮಾದ ಟೀಸರ್‌ ಭಾರಿ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಇಮೇಜ್‌ ಹಂಗು ತೊರೆದು ನಟ ಯಶ್‌ ಅವರು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ವಿದೇಶಿ ನಟಿಯೊಬ್ಬರ ಜೊತೆ ಕಾರಿನಲ್ಲಿ ಹಸಿಬಿಸಿ ಸೀನ್‌ನಲ್ಲಿ ಮಿಂಚಿದ್ದಾರೆ. ಆದರೆ ಈ ದೃಶ್ಯದಲ್ಲಿ ಕಾಣಿಸಿಕೊಂಡ ಆ ವಿದೇಶಿ ನಟಿ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅವರು ಯಾರು ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಸಿನಿಪ್ರಿಯರು ಅಂದುಕೊಂಡಿದ್ದನ್ನೆ ತಲೆಕೆಳಗೆ ಮಾಡಿದ್ದಾರೆ ನಿರ್ದೇಶಕಿ ಗೀತು ಮೋಹನ್‌ದಾಸ್!‌

ಕಾರಿನಲ್ಲಿದ್ದ ಹುಡುಗಿ ನಟಾಲಿಯಾ ಬರ್ನ್ ಅಲ್ಲ!

ಹೌದು, ಈ ಹಿಂದೆ ಕಾರಿನ ಸೀನ್‌ನಲ್ಲಿ ಯಶ್‌ ಜೊತೆ ರೊಮ್ಯಾನ್ಸ್‌ ಮಾಡಿದ್ದ ನಟಿಯನ್ನು ಉಕ್ರೇನ್‌ ಮೂಲದ ಈ 40ರ ಹರೆಯದ ನಟಾಲಿಯಾ ಬರ್ನ್ ಎಂದು ಹೇಳಲಾಗಿತ್ತು. ಅದರ ಎಫೆಕ್ಟ್‌ ಹೇಗಿತ್ತು ಎಂದರೆ, ಒಂದೇ ದಿನದಲ್ಲಿ ನಟಾಲಿಯಾ ಬರ್ನ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 50 ಸಾವಿರ ಫಾಲೋವರ್ಸ್‌ ಹೆಚ್ಚಾಗಿದ್ದರು. ಆದರೆ ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರು ಅದಕ್ಕೊಂದು ಟ್ವಿಸ್ಟ್‌ ಕೊಟ್ಟಿದ್ದು, ಸೆಮಿಟರಿ (ಸ್ಮಶಾನ) ಸೀನ್‌ನಲ್ಲಿ ಯಶ್‌ ಕಾಣಿಸಿಕೊಂಡಿರುವ ನಟಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Yash Meets Shivanna: ರಾಕಿಭಾಯ್‌ ಮೀಟ್ಸ್‌ ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

ಆ ನಟಿ ಯಾರು?

ಗೀತು ಮೋಹನ್‌ದಾಸ್‌ ನೀಡಿರುವ ಮಾಹಿತಿ ಪ್ರಕಾರ, ಆ ನಟಿ ನಟಾಲಿಯಾ ಬರ್ನ್ ಅಲ್ಲ, ಅವರ ಹೆಸರು ಬೀಟ್ರಿಜ್ ಟೌಫೆನ್‌ಬಾಚ್ (Beatriz Taufenbach)! "ಈ ಸುಂದರಿಯೇ ನನ್ನ ಸ್ಮಶಾನದ ಹುಡುಗಿ" ಎಂದು ಗೀತು ಮೋಹನ್‌ದಾಸ್‌ ಅವರು ಬೀಟ್ರಿಜ್ ಟೌಫೆನ್‌ಬಾಚ್ ಅವರನ್ನು ಟ್ಯಾಗ್‌ ಮಾಡಿದ್ದಾರೆ. ಇದೀಗ ಬೀಟ್ರಿಜ್ ಯಾರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅಂದಹಾಗೆ, ಇವರು ಸೋಶಿಯಲ್‌ ಮೀಡಿಯಾದಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ 1800+ ಮಂದಿ ಫಾಲೋವರ್ಸ್‌ ಇದ್ದಾರೆ ಮತ್ತು ಇವರ ಅಕೌಂಟ್‌ ಪ್ರೈವೆಟ್‌ ಆಗಿದೆ.

ʻಟಾಕ್ಸಿಕ್‌ʼ ಟೀಸರ್‌ ರಿಲೀಸ್‌ ಬೆನ್ನಲ್ಲೇ ಯಶ್‌ ಪ್ರತಿಭೆಯನ್ನು ಕೊಂಡಾಡಿದ ನಿರ್ದೇಶಕಿ ಗೀತು ಮೋಹನ್‌ದಾಸ್‌

ಬೀಟ್ರಿಜ್ ಟೌಫೆನ್‌ಬಾಚ್ ಅವರು ಮೂಲತಃ ಬ್ರೆಜಿಲ್ ದೇಶದವರು. ನಟಿ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿರುವ ಇವರು 'ಟಾಕ್ಸಿಕ್' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ಬೀಟ್ರಿಜ್ ಟೌಫೆನ್‌ಬಾಚ್ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿಲ್ಲ.

ಗೀತು ಮೋಹನ್‌ದಾಸ್‌ ನಿರ್ದೇಶನದ ‌ʻಟಾಕ್ಸಿಕ್ʼ ಸಿನಿಮಾವು ಮಾರ್ಚ್‌ 19ರಂದು ತೆರೆಕಾಣುತ್ತಿದ್ದು, ಇದರ ಹೀರೋ ಆಗಿರುವ ಯಶ್‌ ಅವರು ಸ್ಕ್ರಿಪ್ಟ್‌ ಮತ್ತು ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.