I Am God ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ: ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಕ್ಕೆ ಸಾಥ್
ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಫೆ. 1ರಂದು ಅವರು ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಅವರ ಮಗನ ಹೊಸ ಪಯಣಕ್ಕೆ ಶುಭಾಶಯ ಕೋರಿದ್ದಾರೆ.
ಬೆಂಗಳೂರು: ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಶನಿವಾರ (ಫೆ. 1) ಅವರು ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಅವರ ಮಗನ ಹೊಸ ಪಯಣಕ್ಕೆ ಶುಭಾಶಯ ಕೋರಿದ್ದಾರೆ. 'ಧ್ವಜ' ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದ ರವಿ ಗೌಡ (Ravi Gowda) ʼI Am ಗಾಡ್ʼ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರವಿ ಗೌಡ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಿಸಿರುವ I Am ಗಾಡ್ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಅನಾವರಣಗೊಳಿಸಿದರು.
ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ʼʼರವಿ ಗೌಡ ಹುಟ್ಟುವ ಮುಂಚೆಯೇ ಬಸವೇಗೌಡ ನನಗೆ ಪರಿಚಯ. ನಾನು ಬಸವೇಗೌಡರ ಮಗ ಸಿನಿಮಾದಲ್ಲಿ ನಟಿಸುತ್ತಾನೆ. ನಿರ್ಮಾಪಕ ಆಗುತ್ತಾನೆ. ನಿರ್ದೇಶಕನಾಗುತ್ತಾನೆ ಎಂದುಕೊಂಡಿರಲಿಲ್ಲ. ಸಿನಿಮಾ ಕ್ಷೇತ್ರಗಳಲ್ಲಿ ಒಳ್ಳೆ ನಟನಾಗಿ, ನಿರ್ದೇಶಕನಾಗಿ ಮೂಡಿ ಬರಲಿ. ದುಡ್ಡಿದ್ರೆ ಯಾರು ಬೇಕಾದರೂ ನಿರ್ಮಾಪಕರು ಆಗಬಹುದು. ಆದರೆ ನಟನೆ, ನಿರ್ದೇಶಕರಾಗುವುದು ರಕ್ತದಲ್ಲಿ ಬಂದಾಗ ಮಾತ್ರ ಸಾಧ್ಯವಾಗುವುದು. ಬಸವೇಗೌಡ ಮಗ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವುದು ಸಂತಸ. ಈ ಕ್ಷೇತ್ರದಲ್ಲಿ ಪ್ರಬುದ್ಧವಾಗಿ ಬೆಳೆಯಬೇಕು ಎಂದು ಆಶಿಸುತ್ತೇನೆ. ನಾನು ಸಿನಿಮಾ ನೋಡುತ್ತೇನೆ. ಸಿನಿಮಾ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆಯಲಿʼʼ ಎಂದು ಶುಭ ಹಾರೈಸಿದರು.
ʼI Am ಗಾಡ್ʼ ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Rashmika Mandanna: ಇನ್ನೊಂದು ಬಹುನಿರೀಕ್ಷಿತ ಬಾಲಿವುಡ್ ಚಿತ್ರಕ್ಕೆ ರಶ್ಮಿಕಾ ಆಯ್ಕೆ; ಮತ್ತೊಮ್ಮೆ ಸೂಪರ್ ಸ್ಟಾರ್‌ಗೆ ಜೋಡಿ
ಸಿಬಿಜಿ ಪ್ರೊಡಕ್ಷನ್ಸ್ ನಡಿ ಮೂಡಿ ಬರ್ತಿರುವ ʼI Am ಗಾಡ್ʼ ಚಿತ್ರಕ್ಕೆ ʼಕಾಂತಾರʼ ಮೂಲಕ ಮ್ಯಾಜಿಕ್ ಮಾಡಿದ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ರವಿ ವರ್ಮಾ ಸಾಹಸ ನಿರ್ದೇಶನ ಹಾಗೂ ಜಿತಿನ್ ದಾಸ್ ಕ್ಯಾಮೆರಾ ಕೆಲಸ , ಸುರೇಶ್ ಅರುಮುಗಂ ಸಂಕಲನ ಚಿತ್ರಕ್ಕಿರಲಿದೆ.