ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Toxic: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಟಾಕ್ಸಿಕ್‌ ಚಿತ್ರತಂಡ

Toxic: ಬೆಂಗಳೂರು ಮೂಲದ ‘ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಾದ ‘ಕೆವಿಎನ್’ ಹಾಗೂ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಪರವಾಗಿ ಈ ನೋಟಿಸ್ ನೀಡಿದೆ. ‘ನಮ್ಮ ಕಕ್ಷಿದಾರರ ಹಕ್ಕುಸ್ವಾಮ್ಯ ಹೊಂದಿರುವ ಟಾಕ್ಸಿಕ್ ಸಿನಿಮಾಗೆ ಸಂಬಂಧಿಸಿದಂತೆ ನೀವು ಡಿಜಿಟಲ್ ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಕಂಟೆಂಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ.

‘ಟಾಕ್ಸಿಕ್’ ಚಿತ್ರ

'ಟಾಕ್ಸಿಕ್ : ಎ ಫೇರಿ ಟೇಲ್ ಫಾರ್ (Toxic: A Fairy Tale) ಗ್ರೋನ್-ಅಪ್ಸ್' ಚಿತ್ರದ ತಂಡ ಚಿತ್ರದ ಬಗ್ಗೆ ಸುಳ್ಳು ಹಾಗೂ ನಿಂದನಾತ್ಮಕ ವಿಷಯಗಳನ್ನು ಹಂಚಿಕೊಳ್ಳಬಾರದು ಎಂದು ಬಿಡುಗಡೆಗೂ ಮುನ್ನವೇ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತರಲಾಗಿತ್ತು. ಯೂಟ್ಯೂಬರ್ ಸೂರಜ್ ಕುಮಾರ್ (Suraj Kumar) ಎಂಬುವವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತಮಗೆ ಬಂದಿರುವ ಲೀಗಲ್ ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

ಬೆಂಗಳೂರು ಮೂಲದ ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಟಾಕ್ಸಿಕ್ ಕುರಿತು ಬಂದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಯೂಟ್ಯೂಬರ್ ಸೂರಜ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Amruthadhaare serial: ಕುಡಿದ ಮತ್ತಿನಲ್ಲಿ ಜೈದೇವ್ ಸತ್ಯ ಬಾಯಿ ಬಿಡ್ತಾನಾ?

ಬೆಂಗಳೂರು ಮೂಲದ ‘ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಾದ ‘ಕೆವಿಎನ್’ ಹಾಗೂ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಪರವಾಗಿ ಈ ನೋಟಿಸ್ ನೀಡಿದೆ. ‘ನಮ್ಮ ಕಕ್ಷಿದಾರರ ಹಕ್ಕುಸ್ವಾಮ್ಯ ಹೊಂದಿರುವ ಟಾಕ್ಸಿಕ್ ಸಿನಿಮಾಗೆ ಸಂಬಂಧಿಸಿದಂತೆ ನೀವು ಡಿಜಿಟಲ್ ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಕಂಟೆಂಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಪಿಟಿಐ ವರದಿ ಪ್ರಕಾರ, ಬೆಂಗಳೂರಿನ ನ್ಯಾಯಾಲಯವು ಟಾಕ್ಸಿಕ್ ವಿರುದ್ಧ ಯಾವುದೇ ಸುಳ್ಳು ಅಥವಾ ಮಾನನಷ್ಟಕರ ವಿಷಯದ ಪ್ರಕಟಣೆ ಅಥವಾ ಪ್ರಸಾರವನ್ನು ತಡೆಯುವ ಎಕ್ಸ್-ಪಾರ್ಟೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದೆ. ಎಕ್ಸ್ ಕಾರ್ಪ್ ಸೇರಿದಂತೆ ವಿವಿಧ ಪ್ರತಿವಾದಿಗಳ ವಿರುದ್ಧ ಪ್ರೊಡಕ್ಷನ್ ಹೌಸ್ ಕೆವಿಎನ್ ಪ್ರೊಡಕ್ಷನ್ಸ್ ಎಲ್ ಎಲ್ ಪಿ ಸಲ್ಲಿಸಿದ ಮೊಕದ್ದಮೆಯ ಮೇರೆಗೆ ಆಗಸ್ಟ್ 22 ರಂದು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಧ್ಯಂತರ ಆದೇಶವನ್ನು ಹೊರಡಿಸಿತು.



ಸಿನಿಮಾ ವಿಮರ್ಶಕರ ಮೇಲೆ ಚಿತ್ರತಂಡಗಳು ಬೇರೆ ಸಂಸ್ಥೆಯ ಮೂಲಕ ಲೀಗಲ್ ನೋಟಿಸ್ ಅಥವಾ ಕಾಪಿರೈಟ್ ಸ್ಟ್ರೈಕ್ ನೀಡುವುದು ಇದೇ ಮೊದಲೇನಲ್ಲ.

ಇದನ್ನೂ ಓದಿ: Allu Arjun: ಫೋರ್ಬ್ಸ್ ಇಂಡಿಯಾ ಕವರ್ ಪೇಜ್‌ನಲ್ಲಿ ಮಿಂಚಿದ ಅಲ್ಲು ಅರ್ಜುನ್

ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಎರಡು ದಿನಕ್ಕೆ 190 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಆದರೂ ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಹಿಂಸೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕೆಲವರು ಚಿತ್ರವನ್ನು ಬೆಂಬಲಿಸಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಕೂಡ ನಟಿಸಿದ್ದಾರೆ.

Yashaswi Devadiga

View all posts by this author