ಸಂಗೀತ ಲೋಕದಲ್ಲಿ ಮನರಂಜನೆಯ ಜೊತೆಗೆ ನಾದ ಸುಧೆ ಹರಿಸುತ್ತಿರುವ ಕಾರ್ಯಕ್ರಮ ಸರಿಗಮಪ (saregamapa little champs 2026) ಹೊಸ ಆವೃತ್ತಿ ಬರುತ್ತಿದೆ. ಸರಿಗಮಪ ಕನ್ನಡದ ಕಾರ್ಯಕ್ರಮ ಈಗಾಗಲೇ 20ಕ್ಕೂ ಹೆಚ್ಚು ಸೀಸನ್‌ಗಳನ್ನ ಪೂರೈಸಿದೆ. ಸರಿಗಮಪ ಸೀನಿಯರ್ ಸೀಸನ್, ಸರಿಗಮಪ ಲಿಟಲ್ ಚಾಂಪ್ಸ್, ಸರಿಗಮಪ ಚಾಂಪಿಯನ್ಸ್ ರೀ-ಯೂನಿಯನ್ ಸೇರಿದಂತೆ ಹಲವು ಭಾಗವಾಗಿ ಸಂಗೀತದ ಸವಿ ನೀಡಿದೆ ಕಾರ್ಯಕ್ರಮ (Programme). ಸರಿಗಮಪ ಹೊಸ ಸೀಸನ್‌ನ ಕುರಿತು ಪ್ರೋಮೋ (Zee Kannada Promo) ರಿಲೀಸ್ ಮಾಡಿದೆ ತಂಡ.
ಪ್ರೋಮೋ ಮೂಲಕ ಖಡಕ್ ಉತ್ತರ
ಸರಿಗಮಪ ಶೋನಲ್ಲಿ ಪ್ರತಿ ಬಾರಿಯೂ ಸಿಂಪತಿಗಾಗಿ ಅನೇಕರನ್ನು ತರುತ್ತಾರೆ, ಆಡಿಷನ್ ನಡೆಸುವಾಗಲೇ ಆ ರೀತಿಯಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಈ ಬಗ್ಗೆ ಹಲವು ಬಾರಿ ಟ್ರೋಲ್ ಕೂಡ ಆಗಿದೆ. ಈ ಎಲ್ಲ ವದಂತಿಗಳಿಗೆ ವಾಹಿನಿ ಪ್ರೋಮೋ ಮೂಲಕ ಖಡಕ್ ಉತ್ತರ ನೀಡಿದೆ.
ಇದನ್ನೂ ಓದಿ: Anchor Anushree: ಆ್ಯಂಕರ್ ಅನುಶ್ರೀ- ರೋಷನ್ ಮದುವೆ ಇನ್ವಿಟೇಶನ್ ರಿವೀಲ್, ʼಏಕಾಂಗಿ ನಂತರ ಈಗ ಅರ್ಧಾಂಗಿʼ ಎಂದ ಅನುಶ್ರೀ
ವಿಜಯ್ ಪ್ರಕಾಶ್ ಅವರು ಪ್ರೋಮೋದಲ್ಲಿ ಹೈಲೈಟ್ ಆಗಿದ್ದಾರೆ. ಮೊದಲಿಗೆ ಚೆನ್ನಾಗಿ ಹಾಡಿದವರನ್ನು ರೆಜೆಕ್ಟ್ ಮಾಡಿ, ಬಳಿಕ ಕಷ್ಟಗಳನ್ನು ಹೇಳಿಕೊಂಡ ಮಗುವನ್ನ ಸೆಲೆಕ್ಟ್ ಮಾಡೋ ರೀತಿ ತೋರಿಸಲಾಗಿದೆ.ನಂತರ ವಿಜಯ್ ಪ್ರಕಾಶ್ ವಿವರಿಸುತ್ತಾರೆ.
ನಾವು ಆಡಿಷನ್ ಹೀಗೆ ಮಾಡ್ತೀವಿ ಅಂತ ಅಂದಿಕೊಂಡಿದ್ದೀರಾ. ಖಂಡಿತ ಇಲ್ಲ. ಅದು ಹೇಗೆ ಆಗತ್ತೆ ಅಂದರೆ ಕರ್ನಾಟಕದ 31 ಜಿಲ್ಲೆ ತಾಲೂಕುಗಳಿಂದ ಒಂದು ಸಾರಿ ಅವಕಾಶ ಸಿಕ್ಕರೆ ಸಾಕು ಅಂತ ಕನಸು ಕಟ್ಟಿಕೊಂಡು ಬರುವ ಲಕ್ಷಾಂತರ ಮಕ್ಕಳನ್ನು ನಾವು ಆಯ್ಕೆ ಮಾಡೋದು. ಆದರೆ ಕಷ್ಟಗಳನ್ನು ಇರೋರು ಅಲ್ಲ. ಇಷ್ಟ ಪಟ್ಟು ಹಾಡುವಂತಹ ಪ್ರತಿಭೆಗಳನ್ನು. ಈ ಸಲ ಬರ್ತಾ ಇರೋದು ಛೋಟಾ ಸುನಾಮಿ ಎಂದಿದ್ದಾರೆ.
ಗಾಯಕ ಹಾಗೂ ಶೋ ಜಡ್ಜ್ ವಿಜಯ್ ಪ್ರಕಾಶ್ ಅವರು ಸೆಲೆಕ್ಷನ್ ಮಾಡೋ ವಿಚಾರವಾಗಿ ಸ್ಪಷ್ಟನೆ ನೀಡುವ ರೀತಿಯಲ್ಲಿ ಪ್ರೋಮೋ ಮಾಡಲಾಗಿದೆ. ಶೀಘ್ರದಲ್ಲಿ ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆರಂಭ ಆಗಲಿದೆ.
ಸರಿಗಮಪ ಲಿಟಲ್ ಚಾಂಪ್ಸ್ ಶೀಘ್ರದಲ್ಲೇ ವೀಕ್ಷಕರ ಮನೆ ಮನೆಗೂ ಸಂಗೀತ ಸುಧೆ ಪಸರಿಸಲಿದೆ. ಎಂದಿನಂತೆ ಕಾರ್ಯಕ್ರಮದ ನಿರೂಪಣೆ ಅನುಶ್ರೀ ಅವರು ಮಾಡಲಿದ್ದಾರೆ. ಜಡ್ಜ್ ಸೀಟ್‌ನಲ್ಲಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಹಾಗೂ ರಾಜೇಶ್ ಕೃಷ್ಣನ್ ಇರಲಿದ್ದಾರೆ ಎನ್ನಲಾಗುತ್ತಿದೆ
ಇದನ್ನೂ ಓದಿ: Actor Prabhas: 'ಕಲ್ಕಿ 2898 ಎಡಿ' ಸೀಕ್ವೆಲ್ ಚಿತ್ರೀಕರಣ ಆರಂಭ: ಇಬ್ಬರು ಸ್ಟಾರ್ ನಟರ ಎಂಟ್ರಿ?
ಈ ಬಾರಿ ಮಾಹಾಗುರುಗಳ ಸ್ಥಾನ ಪಡೆದಿದ್ದ ಹಂಸಲೇಖ ಅವರು ಕಳೆದ ಸೀಸನ್‌ನಲ್ಲಿ ಇರಲಿಲ್ಲ. ಈ ಬಾರಿಯಾದರೂ ಕಾರ್ಯಕ್ರಮಕ್ಕೆ ಬರ್ತಾರ ನೋಡಬೇಕು.ಸರಿಗಮಪ ಹಿಂದಿ ಭಾಷೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ವಿಜಯ್ ಪ್ರಕಾಶ್ ಅವರು ಈಗ ಕನ್ನಡ, ತಮಿಳು ಭಾಷೆಯಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದಾರೆ.