ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saregamapa Tamil winner : ತಮಿಳು ಸರಿಗಮಪ ವೇದಿಕೆ ಮೇಲೆ ಮೋಡಿ ಮಾಡಿದ ಕನ್ನಡತಿ ಶಿವಾನಿ ನವೀನ್‌ಗೆ ಸಿಗಲಿಲ್ಲ ವಿನ್ನರ್‌ ಪಟ್ಟ!

Shivani Naveen: 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಿವಾನಿ ಆರಂಭದಿಂದಲೂ ಅಲ್ಲಿನ ವೀಕ್ಷಕರ ಗಮನಸೆಳೆದುಕೊಂಡೇ ಬಂದರು. ಪ್ರತಿಬಾರಿಯೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಗೆದ್ದರು. 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋ ಕಳೆದ ಮೇ 24ರಿಂದ ಆರಂಭವಾಗಿದ್ದು, ಮೆಗಾ ಆಡಿಷನ್ ರೌಂಡ್‌ನಲ್ಲಿ ತಮಿಳಿನ 'ವಾಗೈ ಸೂಡ ವಾ' ಸಿನಿಮಾದ 'ಪೋರಾನೇ ಪೋರಾನೇ' ಹಾಡನ್ನು ಶಿವಾನಿ ಹಾಡಿದ್ದರು.

ತಮಿಳು ಸರಿಗಮಪ ವೇದಿಕೆ ಮೇಲೆ ಮಿಂಚಿದ ಶಿವಾನಿಗೆ ಸಿಗಲಿಲ್ಲ ವಿನ್ನರ್‌ ಪಟ್ಟ!

ಶಿವಾನಿ ನವೀನ್‌ ಗಾಯಕಿ -

Yashaswi Devadiga
Yashaswi Devadiga Nov 24, 2025 11:15 AM

ಚಿಕ್ಕಮಗಳೂರು ಮೂಲದ ಪ್ರತಿಭಾನ್ವಿತ ಗಾಯಕಿ ಶಿವಾನಿ ನವೀನ್ (shivani saregamapa tamil) ತಮಿಳಿನ 'ಸರಿಗಮಪ' ಶೋನಲ್ಲಿ(saregamapa tamil winner 2025) 5ನೇ ಫೈನಲಿಸ್ಟ್‌ ಆಗಿ ಹೊರಹೊಮ್ಮಿದ್ದರು. 'ಸರಿಗಮಪ' ಲಿಟಲ್ ಚಾಂಪ್ಸ್ ಸೀಸನ್ 19ರ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಶಿವಾನಿ ನವೀನ್‌ ಅವರು ತಮಿಳು 'ಸರಿಗಮಪ' ಶೋನಲ್ಲೂ ಮಿಂಚಿದ್ದಾರೆ. ಆದರೆ ಶಿವಾನಿ ಸೋತಿದ್ದಾರೆ. ಗಾಯಕಿ ಸುಸಂತಿಕಾ ಜಯಚಂದ್ರನ್ (susanthika saregamapa) ಗೆಲುವಿನ ನಗೆ ಬೀರಿದ್ದಾರೆ.

'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋ

'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಿವಾನಿ ಆರಂಭದಿಂದಲೂ ಅಲ್ಲಿನ ವೀಕ್ಷಕರ ಗಮನಸೆಳೆದುಕೊಂಡೇ ಬಂದರು. ಪ್ರತಿಬಾರಿಯೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಗೆದ್ದರು. 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋ ಕಳೆದ ಮೇ 24ರಿಂದ ಆರಂಭವಾಗಿದ್ದು, ಮೆಗಾ ಆಡಿಷನ್ ರೌಂಡ್‌ನಲ್ಲಿ ತಮಿಳಿನ 'ವಾಗೈ ಸೂಡ ವಾ' ಸಿನಿಮಾದ 'ಪೋರಾನೇ ಪೋರಾನೇ' ಹಾಡನ್ನು ಶಿವಾನಿ ಹಾಡಿದ್ದರು.

ಇದನ್ನೂ ಓದಿ: ತಮಿಳು Saregamapa ಶೋನಲ್ಲಿ ಕನ್ನಡತಿಯ ಹವಾ! ಫಿನಾಲೆ ತಲುಪಿದ ಗಾಯಕಿ ಶಿವಾನಿ ನವೀನ್‌

ಅಂದು ಆ ಹಾಡಿಗೆ ಜಡ್ಜ್‌ಗಳಾದ ಶ್ರೀನಿವಾಸ್, ಶ್ವೇತಾ ಮೋಹನ್, ಟಿ. ರಾಜೇಂದರ್ ತಲೆದೂಗಿದ್ದರು. ನಂತರ ಅದೇ ವೇದಿಕೆಯಲ್ಲಿ 'ಸೋಜುಗದ ಸೂಜು ಮಲ್ಲಿಗೆ' ಹಾಡನ್ನು ಹಾಡುವಂತೆ ಶಿವಾನಿಗೆ ವಿಜಯ್ ಪ್ರಕಾಶ್ ಸೂಚಿಸಿದ್ದರು.

ಫಿನಾಲೆ

ನವೆಂಬರ್ 23 ರಂದು ನಡೆದ ಲೈವ್ ಫಿನಾಲೆಯಲ್ಲಿ, ಆರು ಸ್ಪರ್ಧಿಗಳು - ಸುಸಂತಿಕಾ, ಸಬೇಷನ್, ಸೆಂಥಮಿಳನ್, ಪವಿತ್ರ, ಶ್ರೀಹರಿ ಮತ್ತು ಶಿವಾನಿ - ಕರ್ನಾಟಕ ಸಂಗೀತ, ಮಾಧುರ್ಯ ಮತ್ತು ಪಾಶ್ಚಾತ್ಯ ಸಂಗೀತ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಹಾಡಿದರು.

ಈ ಫಿನಾಲೆಯಲ್ಲಿ, ಸಬೇಶನ್, ಶ್ರೀಹರಿ, ಸೆಂಥಮಿಳನ್, ಪವಿತ್ರ, ಸುಸಂತಿಕಾ ಮತ್ತು ಶಿವಾನಿ ಆರು ಸ್ಪರ್ಧಿಗಳು ಸ್ಪರ್ಧಿಸಿದರು. ಅಂತಿಮ ಸುತ್ತಿನಲ್ಲಿ ಎರಡು ಹಾಡುಗಳನ್ನು ಹಾಡಿದರು. ಅಂಕ ಮತ್ತು ಜನರು ನೀಡಿದ ವೋಟ್‌ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಯಿತು. ಸಂಗೀತ ಸಂಯೋಜಕರಾದ ದೇವಾ ಮತ್ತು ಗಂಗೈ ಅಮರನ್ ಜೊತೆಗೆ, ನಟ ವಿಶಾಲ್ ಕೂಡ ಈ ಫಿನಾಲೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ಯಾರೆಲ್ಲ ಎಷ್ಟನೇ ಸ್ಥಾನ?

ಸಬೇಶನ್ ಈ ಕಾರ್ಯಕ್ರಮದಲ್ಲಿ ಗೆಲ್ಲುವ ನಿರೀಕ್ಷೆಯಿದ್ದರೂ, ಸುಸಂತಿಕಾ ಅವರನ್ನು ಪ್ರಶಸ್ತಿ ವಿಜೇತೆ ಎಂದು ಘೋಷಿಸಲಾಯಿತು. ನಂತರ ಸಬೇಶನ್ ಎರಡನೇ ಸ್ಥಾನ ಪಡೆದರು. ಚಿನ್ನು ಸೆಂಥಮಿಳನ್ ಮೂರನೇ ಸ್ಥಾನ ಪಡೆದರು. ಇದಲ್ಲದೆ, ಸೀಸನ್‌ನ ಹೆಚ್ಚು ಚರ್ಚೆಗೆ ಗ್ರಾಸವಾದ ಸ್ಪರ್ಧಿ ಪವಿತ್ರಾ ಗೋಲ್ಡನ್ ವಾಯ್ಸ್ ಪ್ರಶಸ್ತಿಯನ್ನು ಸಹ ಗೆದ್ದರು. ಶ್ರೀಹರಿ ಮತ್ತು ಶಿವಾನಿಗೆ ವಿಶೇಷ ಬಹುಮಾನಗಳನ್ನು ನೀಡಲಾಯಿತು.

ಬಹುಮಾನ ಏನು?

ಸಂಗೀತ ಸಂಯೋಜಕ ದೇವಾ ಸ್ವತಃ ವಿಜೇತರಿಗೆ ಬಹುಮಾನಗಳನ್ನು ನೀಡಿದರು. ಅದರಂತೆ, ಪ್ರಶಸ್ತಿ ಗೆದ್ದ ಸುಸಂತಿಕಾಗೆ 60 ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಯಿತು. ಎರಡನೇ ಸ್ಥಾನ ಪಡೆದ ಸಬೇಸನ್‌ಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ಮೂರನೇ ಸ್ಥಾನ ಪಡೆದ ಚಿನ್ನು ಸೆಂತಮಿಳ್‌ಗೆ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಯಿತು. ಅದೇ ರೀತಿ, ಗೋಲ್ಡನ್ ವಾಯ್ಸ್ ಆಗಿ ಆಯ್ಕೆಯಾದ ಪವಿತ್ರಾಗೆ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಯಿತು.

ಇದನ್ನೂ ಓದಿ: Bigg Boss Kannada 12: ಡಾಗ್‌ ಸತೀಶ್‌ 80 ಸಾವಿರ ರೂಪಾಯಿ ಶರ್ಟ್‌ನ್ನ ಸ್ಪಂದನಾ ಹಾಳು ಮಾಡಿದ್ದು ಹೌದಾ? ಏನಪ್ಪಾ ಮ್ಯಾಟ್ರು ?

ಶಿವಾನಿ ಗೆಲ್ಲಬೇಕು ಎಂದು ಕನ್ನಡಿಗರು ಹಾರೈಸಿದ್ದರು. ಶಿವಾನಿ ಪರ್ಫಾರ್ಮೆನ್ಸ್ ವೀಡಿಯೋಗಳೆಲ್ಲಾ ವೈರಲ್ ಆಗಿತ್ತು.