ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: "ಭಾರತೀಯ ಸೇನೆಯು ಮೇಲ್ಜಾತಿಯವರ ಕೈಯಲ್ಲಿದೆ"; ಮತ್ತೆ ಸಶಸ್ತ್ರ ಪಡೆ ಕುರಿತು ನಾಲಿಗೆ ಹರಿಬಿಟ್ಟ ರಾಹುಲ್‌

ಬಿಹಾರದ ವಿಧಾನ ಸಭಾ ಚುನಾವಣೆಗೂ ಮುನ್ನ ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಬಹು ದೊಡ್ಡ ವಿವಾದವನ್ನು ಸೃಷ್ಠಿಸಿದ್ದಾರೆ. ಪ್ರಚಾರ ರ್ಯಾಲಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ, ಭಾರತೀಯ ಸೇನೆಯು "ದೇಶದ ಜನಸಂಖ್ಯೆಯ ಶೇಕಡಾ 10 ರಷ್ಟು ಜನರ ನಿಯಂತ್ರಣದಲ್ಲಿದೆ" ಎಂದು ಮೇಲ್ಜಾತಿಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿ ಭಾರೀ ವಿವಾದವನ್ನು ಹುಟ್ಟು ಹಾಕಿದ್ದಾರೆ. ದೇಶದ ಜನಸಂಖ್ಯೆಯ ಶೇ. 90 ರಷ್ಟು ಜನರಿಗೆ ಸ್ಥಳಾವಕಾಶವಿರುವ, ಜನರು ಘನತೆ ಮತ್ತು ಸಂತೋಷದಿಂದ ಬದುಕಬಹುದಾದ ಭಾರತವನ್ನು ನಾವು ಬಯಸುತ್ತೇವೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದವರಿಗಾಗಿ ಹೋರಾಡಿದೆ" ಎಂದು ರಾಹುಲ್ ಗಾಂಧಿ ಹೇಳಿದರು.

ಪಟನಾ: ಬಿಹಾರದ ವಿಧಾನ ಸಭಾ ಚುನಾವಣೆಗೂ (Bihar Assembly Election) ಮುನ್ನ ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಬಹು ದೊಡ್ಡ ವಿವಾದವನ್ನು ಸೃಷ್ಠಿಸಿದ್ದಾರೆ. ಪ್ರಚಾರ ರ್ಯಾಲಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಮಂಗಳವಾರ, ಭಾರತೀಯ ಸೇನೆಯು (Indian Armed Force) "ದೇಶದ ಜನಸಂಖ್ಯೆಯ ಶೇಕಡಾ 10 ರಷ್ಟು ಜನರ ನಿಯಂತ್ರಣದಲ್ಲಿದೆ" ಎಂದು ಮೇಲ್ಜಾತಿಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನೀವು ಸೂಕ್ಷ್ಮವಾಗಿ ಗಮನಿಸಿದರೆ, ದೇಶದ ಜನಸಂಖ್ಯೆಯ ಶೇ. 90 ರಷ್ಟು ಜನರು ದಲಿತರು, ಮಹಾ ದಲಿತರು, ಹಿಂದುಳಿದವರು, ಅತ್ಯಂತ ಹಿಂದುಳಿದವರು ಅಥವಾ ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರು. ಶೇ. 90 ರಷ್ಟು ಜನರು ಸಮಾಜದ ಅತ್ಯಂತ ಹಿಂದುಳಿದ ಮತ್ತು ಬುಡಕಟ್ಟು ವರ್ಗಗಳಿಂದ ಬಂದವರು" ಎಂದು ಹೇಳಿದರು.

ದೇಶದ ಜನಸಂಖ್ಯೆಯ ಶೇ. 90 ರಷ್ಟು ಜನರಿಗೆ ಸ್ಥಳಾವಕಾಶವಿರುವ, ಜನರು ಘನತೆ ಮತ್ತು ಸಂತೋಷದಿಂದ ಬದುಕಬಹುದಾದ ಭಾರತವನ್ನು ನಾವು ಬಯಸುತ್ತೇವೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದವರಿಗಾಗಿ ಹೋರಾಡಿದೆ" ಎಂದು ರಾಹುಲ್ ಗಾಂಧಿ ಹೇಳಿದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸುರೇಶ್ ನಖುವಾ, "ರಾಹುಲ್ ಗಾಂಧಿ ಈಗ ಸಶಸ್ತ್ರ ಪಡೆಗಳಲ್ಲಿ ಜಾತಿಯನ್ನು ಹುಡುಕುತ್ತಿದ್ದಾರೆ ಮತ್ತು ಶೇ. 10 ರಷ್ಟು ಜನರು ಅದನ್ನು ನಿಯಂತ್ರಿಸುತ್ತಾರೆ ಎಂದು ಹೇಳುತ್ತಾರೆ. ಪ್ರಧಾನಿ ಮೋದಿ ಮೇಲಿನ ದ್ವೇಷದಲ್ಲಿ, ಅವರು ಈಗಾಗಲೇ ಭಾರತವನ್ನು ದ್ವೇಷಿಸುವ ಗೆರೆಯನ್ನು ದಾಟಿದ್ದಾರೆ" ಎಂದು ಹೇಳಿದರು.

ರಾಹುಲ್‌ ಗಾಂಧಿ ಸೇನೆ ಕುರಿತು ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಅಗಸ್ಟ್‌ನಲ್ಲಿ, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ "ಅರುಣಾಚಲ ಪ್ರದೇಶದಲ್ಲಿ ಚೀನಾದ ಪಡೆಗಳು ಭಾರತೀಯ ಸೈನಿಕರನ್ನು ಥಳಿಸುತ್ತಿವೆ" ಎಂಬ ಹೇಳಿಕೆಗಾಗಿ ಸುಪ್ರೀಂ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಚೀನಾದ ಸೇನೆಯು ಭಾರತದ 2,000 ಚದರ ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೈನಿಕರನ್ನು "ಥಳಿಸುತ್ತಿದೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Rahul Gandhi: ಬಿಹಾರದಲ್ಲಿ ಹೆಚ್ಚಾಯ್ತು ಚುನಾವಣೆ ಕಾವು; ಕೆರೆಗೆ ಜಿಗಿದು ಮೀನು ಹಿಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಲಕ್ನೋದ ನಿವೃತ್ತ ರಕ್ಷಣಾ ಅಧಿಕಾರಿಯೊಬ್ಬರು ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹೇಳಿಕೆಗಳು ಭಾರತೀಯ ಸೇನೆಯ ಮಾನನಷ್ಟಕ್ಕೆ ಕಾರಣವಾಗಿವೆ ಮತ್ತು ಅದರ ಪ್ರತಿಷ್ಠೆಯನ್ನು ಹಾಳುಮಾಡಿವೆ ಎಂದು ಅವರು ಆರೋಪಿಸಿದ್ದರು. ಅಲಹಾಬಾದ್ ಹೈಕೋರ್ಟ್ ಈ ಹಿಂದೆ ದೂರನ್ನು ರದ್ದುಗೊಳಿಸಲು ನಿರಾಕರಿಸಿತ್ತು, ನಂತರ ಗಾಂಧಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, ಹಿರಿಯ ಕಾಂಗ್ರೆಸ್ ನಾಯಕನ ಹೇಳಿಕೆಗಳ ವಿಶ್ವಾಸಾರ್ಹತೆ ಮತ್ತು ಆಧಾರವನ್ನು ಪ್ರಶ್ನಿಸಿ, "ನೀವು ನಿಜವಾದ ಭಾರತೀಯರಾಗಿದ್ದರೆ, ನೀವು ಇದನ್ನೆಲ್ಲಾ ಹೇಳುತ್ತಿರಲಿಲ್ಲ" ಎಂದು ತರಾಟೆಗೆ ತೆಗೆದುಕೊಂಡಿತ್ತು.