ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

200 ವರ್ಷಗಳ ನಂತರ ಇತಿಹಾಸ ಸೃಷ್ಟಿಸಿದ 19 ವರ್ಷದ ಯುವಕ; ಭಾರತದ 2ನೇ ವೇದಮೂರ್ತಿ ಎಂಬ ಹೆಗ್ಗಳಿಕೆ

19-Year-Old Scholar Creates History: 19 ವರ್ಷದ ವಿದ್ಯಾರ್ಥಿ ದೇವವ್ರತ್ ಮಹೇಶ್ ರೇಖೆ 200 ವರ್ಷಗಳ ನಂತರ ಕಾಶಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶುಕ್ಲ ಯಜುರ್ವೇದದ ಸುಮಾರು 2,000 ಮಂತ್ರಗಳನ್ನು 50 ದಿನಗಳ ನಿರಂತರ ಪಠಣ ಮಾಡುವ ಮೂಲಕ ಭಾರತದ 2ನೇ ವೇದಮೂರ್ತಿ ಎಂಬ ಗೌರವ ಪದವಿಗೆ ಪಾತ್ರರಾಗಿದ್ದಾರೆ.

ದೇವವ್ರತ್ ಮಹೇಶ್ ರೇಖೆ

ವಾರಣಸಿ: ಮಹಾರಾಷ್ಟ್ರದ (Maharashtra) 19 ವರ್ಷದ ಯುವ ಶಾಸ್ತ್ರೀಯ ವಿದ್ಯಾರ್ಥಿ ದೇವವ್ರತ್ ಮಹೇಶ್ ರೇಖೆ (Devvrat Mahesh Rekhe) ಉತ್ತರ ಪ್ರದೇಶದ ಕಾಶಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶುಕ್ಲ ಯಜುರ್ವೇದದ (Shukla Yajurveda) ಸುಮಾರು 2,000 ಮಂತ್ರಗಳನ್ನು 50 ದಿನಗಳಲ್ಲಿ ನಿರಂತರವಾಗಿ, ಒಂದೂ ಬಾರಿ ವಿರಾಮವಿಲ್ಲದೆ ದಂಡಕ್ರಮ ಪಠಣ ಮಾಡಿದ್ದಾರೆ. ಮಹೇಶ್‌ ಅವರ ಈ ಸಾಧನೆಗಾಗಿ ವೇದಮೂರ್ತಿ ಎಂಬ ಬಿರುದು ನೀಡಲಾಗಿದೆ.

ವೇದಮೂರ್ತಿ ಮಹೇಶ್ ರೇಖೆ 200 ವರ್ಷಗಳ ಇತಿಹಾಸದಲ್ಲಿ ಈ ಸಂಕೀರ್ಣವಾದ ವೇದ ಪಾರಾಯಣವನ್ನು ಅದರ ಶುದ್ಧ ಶಾಸ್ತ್ರೀಯ ರೂಪದಲ್ಲಿ ಪೂರ್ಣಗೊಳಿಸಿದ ಎರಡನೇ ವಿದ್ವಾಂಸ ಎನಿಸಿಕೊಂಡಿದ್ದಾರೆ. ದೇವವ್ರತ್ ಮಹೇಶ್ ಅವರ ಅಸಾಧಾರಣ ಸಾಧನೆಯ ಗೌರವಾರ್ಥವಾಗಿ ಕಾಶಿಯಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.

ಪ್ರಥಮ ಬಾರಿಗೆ ಗಂಗಾ ದಡದಲ್ಲಿ ‘ಶ್ರೀಸಿದ್ಧಾಂತ ಶಿಖಾಮಣಿʼ ಪಾರಾಯಣ: ಕಾಶಿ ಪೀಠದ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹೊಸ ದಾಖಲೆ

ರಥಯಾತ್ರೆ ದಾಟುವಿಕೆಯಿಂದ ಮಹಮೂರ್ಗಂಜ್‌ವರೆಗೆ ನಡೆದ ಈ ಮೆರವಣಿಗೆಯಲ್ಲಿ 500ಕ್ಕೂ ಹೆಚ್ಚು ವೈದಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಾದ್ಯಗಳು ಮತ್ತು ಶಂಖಗಳ ನಾದದೊಂದಿಗೆ ವಾತಾವರಣವು ಹಬ್ಬದ ವಾತಾವರಣದಲ್ಲಿತ್ತು. ಈ ವೇಳೆ ವಿವಿಧೆಡೆ ಭಕ್ತರು ಪುಷ್ಪವೃಷ್ಟಿ ಮಾಡಿದರು. ಸಮಾರಂಭದಲ್ಲಿ ಶೃಂಗೇರಿ ಶಾರದ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂ ಅವರ ವಿಶೇಷ ಸಂದೇಶವನ್ನು ವಾಚಿಸಲಾಯಿತು.

ದೇವವ್ರತ್ ಮಹೇಶ್ ರೇಖೆ ಅವರಿಗೆ ಸನ್ಮಾನ:



ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ʼʼ19 ವರ್ಷದ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಮಾಡಿದ ಸಾಧನೆ ತಿಳಿದು ಬಹಳ ಸಂತೋಷವಾಯಿತು. ಮುಂದಿನ ಪೀಳಿಗೆಯವರು ಇದನ್ನು ಸ್ಮರಿಸುತ್ತಾರೆʼʼ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಶಿ ತಮಿಳು ಸಂಗಮದ ನಾಲ್ಕನೇ ಆವೃತ್ತಿಯಲ್ಲಿ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಅವರನ್ನು ಸನ್ಮಾನಿಸಿದರು.

ದಕ್ಷಿಣ ಭಾರತದ ಹೆಸರಾಂತ ಶ್ರೀ ಶೃಂಗೇರಿ ಶಾರದ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ವಿದ್ಯಾಶಂಕರ ಭಾರತೀ ಜೀ ಮಹಾರಾಜರು ಕೂಡ ಅಭಿನಂದಿಸಿದರು. ಅಕ್ಟೋಬರ್ 2ರಿಂದ ನವೆಂಬರ್ 30ರ ವರೆಗೆ ಸತತ 50 ದಿನಗಳ ಕಾಲ ದೇವವ್ರತರು ಈ ಸಾಧನೆ ಮಾಡಿದರು.

ದೇವವ್ರತ ಮಹೇಶ್ ರೇಖೆ ಪ್ರತಿದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಶುಕ್ಲ ಯಜುರ್ವೇದದ ಸುಮಾರು 2,000 ಮಂತ್ರಗಳ ದಂಡಕ್ರಮ ಪಠಣ ಮಾಡಿದರು. ದಂಡಕ್ರಮ ಎಂದರೆ ಪ್ರತಿಯೊಂದು ಮಂತ್ರವನ್ನು 11 ವಿಭಿನ್ನ ಅನುಕ್ರಮಗಳಲ್ಲಿ ಪುನರಾವರ್ತಿಸಬೇಕು. ಇದು ಅತ್ಯಂತ ಕಠಿಣ. ಇದನ್ನು ಕೊನೆಯ ಬಾರಿಗೆ 200 ವರ್ಷಗಳ ಹಿಂದೆ ನಾಸಿಕ್‌ನ ವೇದಮೂರ್ತಿ ನಾರಾಯಣ್ ಶಾಸ್ತ್ರಿ ದೇವ್ ಮಾಡಿದ್ದರು. ಇದು ವಿಶ್ವದಲ್ಲಿ ಎರಡನೇ ಬಾರಿಗೆ ಮತ್ತು ಭಾರತದಲ್ಲಿ 200 ವರ್ಷಗಳ ನಂತರ ಸಂಭವಿಸಿದೆ.

ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ವಿದ್ಯಾಶಂಕರ ಭಾರತೀ ಜಿ ಮಹಾರಾಜ್ ದೇವವ್ರತ್ ಅವರಿಗೆ ಚಿನ್ನಾಭರಣ ಹಾಗೂ 1 ಲಕ್ಷದ 11 ಸಾವಿರದ 116 ರೂಪಾಯಿ ಗೌರವಧನ ನೀಡಿದರು.

ವೇದಮೂರ್ತಿ ಪಟ್ಟದ ಬಗ್ಗೆ ಇಲ್ಲಿದೆ ಮಾಹಿತಿ

ವೇದಗಳ ಜ್ಞಾನವುಳ್ಳವರು ವೇದಮೂರ್ತಿಗಳು ಎಂದು ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ವಿದ್ಯಾಶಂಕರ ಭಾರತೀ ಜಿ ಮಹಾರಾಜ್ ವಿವರಿಸಿದರು. ಈ ಬಿರುದನ್ನು ವೇದಗಳು ಮತ್ತು ಹಿಂದೂ ಧರ್ಮಗ್ರಂಥಗಳನ್ನು ದೀರ್ಘಕಾಲದವರೆಗೆ ಅಧ್ಯಯನ ಮಾಡಿ ಅವುಗಳನ್ನು ಕಂಠಪಾಠ ಮಾಡಿದ ವಿದ್ವಾಂಸರು ಮತ್ತು ಸನ್ಯಾಸಿಗಳಿಗೆ ನೀಡಲಾಗುತ್ತದೆ. ವೇದಗಳನ್ನು ಆಳವಾಗಿ ಅಧ್ಯಯನ ಮಾಡಿದ ಮತ್ತು ವೈದಿಕ ಸಂಪ್ರದಾಯಗಳ ಸಂರಕ್ಷಣೆ ಮತ್ತು ಪ್ರಸರಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಜನರನ್ನು ವೇದಮೂರ್ತಿ ಎಂದೂ ಕರೆಯುತ್ತಾರೆ.

ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಿದ ಶೃಂಗೇರಿ ಜಗದ್ಗುರು

ʼʼಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬ ವ್ಯಕ್ತಿಯೂ, ದೇವವ್ರತರು ಶುಕ್ಲ ಯಜುರ್ವೇದದ 2,000 ಮಂತ್ರಗಳನ್ನು ಒಳಗೊಂಡಿರುವ ಮಧ್ಯಂಡಿನ ಶಾಖೆಯ ದಂಡಕರ್ಮ ಪಾರಾಯಣವನ್ನು 50 ದಿನಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಿದ್ದಾರೆಂದು ತಿಳಿದು ಸಂತೋಷಪಡುತ್ತಾರೆ. ಇದು ಅನೇಕ ವೇದ ಶ್ಲೋಕಗಳು ಮತ್ತು ಪವಿತ್ರ ಪದಗಳನ್ನು ಒಳಗೊಂಡಿದೆ. ಅವುಗಳನ್ನು ಅವರು ಸಂಪೂರ್ಣ ಶುದ್ಧತೆಯಿಂದ ಉಚ್ಚರಿಸಿದರು. ಈ ಸಾಧನೆಯು ನಮ್ಮ ಗುರು ಸಂಪ್ರದಾಯದ ಅತ್ಯುತ್ತಮ ರೂಪವನ್ನು ಪ್ರತಿನಿಧಿಸುತ್ತದೆʼʼ ಎಂದು ಪ್ರಧಾನಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ʼʼಕಾಶಿಯ ಸಂಸದನಾಗಿ, ಈ ಪವಿತ್ರ ಭೂಮಿಯಲ್ಲಿ ಅವರ ಅಸಾಧಾರಣ ಸಾಧನೆ ಬಗ್ಗೆ ನನಗೆ ಹೆಮ್ಮೆಯಿದೆ. ಅವರ ಕುಟುಂಬ, ಸಂತರು, ಋಷಿಗಳು, ವಿದ್ವಾಂಸರು ಮತ್ತು ಈ ತಪಸ್ಸಿನಲ್ಲಿ ಅವರನ್ನು ಬೆಂಬಲಿಸಿದ ದೇಶಾದ್ಯಂತದ ಎಲ್ಲ ಸಂಸ್ಥೆಗಳಿಗೆ ನನ್ನ ನಮನಗಳುʼʼ ಎಂದು ಪ್ರಧಾನಿ ತಿಳಿಸಿದ್ದಾರೆ.

ದೇವವ್ರತ್ ಮಹೇಶ್ ರೇಖೆ ಯಾರು?

ದೇವವ್ರತ್ ಮಹೇಶ್ ರೇಖೆ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ದೇವವ್ರತ ಮಹೇಶ ರೇಖೆ ಅವರ ತಂದೆ ಮಹೇಶ ಚಂದ್ರಕಾಂತ ರೇಖೆ ಕೂಡ ಶ್ರೇಷ್ಠ ವಿದ್ವಾಂಸರು. ಅವರ ಮಗನ ಮೊದಲ ಗುರುವೂ ಹೌದು. 5ನೇ ವಯಸ್ಸಿನಿಂದ ದೇವವ್ರತ್ ವೇದ ಮಂತ್ರಗಳನ್ನು ಪಠಿಸಲು ಪ್ರಾರಂಭಿಸಿದರು.