ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ; ರಾಜಸ್ಥಾನದಲ್ಲಿ ಅಪ್ರಾಪ್ತ ಸೇರಿ ಮೂವರು ಆರೋಪಿಗಳ ಬಂಧನ

ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮುಂಬೈನಲ್ಲಿ ಗುಂಡಿನ ದಾಳಿ ನಡೆಸಿದ್ದ ಮೂವರು ದುಷ್ಕರ್ಮಿಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮುಂಬೈನಿಂದ ದೆಹಲಿಗೆ ರೈಲಿನ ಮೂಲಕ ಪಲಾಯನ ಮಾಡಲು ಯತ್ನಿಸುತ್ತಿದ್ದ ಶೂಟರ್‌ಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.

ಸಂಗ್ರಹ ಚಿತ್ರ

ಮುಂಬೈ: ನಟ ಟೈಗರ್ ಶ್ರಾಫ್ (Attack on Tiger Shroff) ಅವರ ಕಾರಿನ ಮೇಲೆ ಮುಂಬೈನಲ್ಲಿ ಗುಂಡಿನ ದಾಳಿ ನಡೆಸಿದ್ದ ಮೂವರು ದುಷ್ಕರ್ಮಿಗಳನ್ನು ರಾಜಸ್ಥಾನದ (Rajasthan) ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮುಂಬೈನಿಂದ ದೆಹಲಿಗೆ ರೈಲಿನ ಮೂಲಕ ಪಲಾಯನ ಮಾಡಲು ಯತ್ನಿಸುತ್ತಿದ್ದ ಶೂಟರ್‌ಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಹರಿಯಾಣದವರು ಮತ್ತು ಓರ್ವ ಬಿಹಾರ ಮೂಲದವನು ಎಂಬುದು ತಿಳಿದುಬಂದಿದೆ.

ಆರೋಪಿಗಳಲ್ಲಿ ಓರ್ವ ಹರಿಯಾಣದ ಸೋನಿಪತ್‌ನ 17 ವರ್ಷದ ಅಪ್ರಾಪ್ತನಾಗಿದ್ದಾನೆ. ಉಳಿದ ಇಬ್ಬರನ್ನು ಬಿಹಾರದ ಬೇಗುಸರಾಯ್ ಮೂಲದ, ಪ್ರಸ್ತುತ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿ ವಾಸಿಸುತ್ತಿರುವ ಮತ್ತು ರಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿರುವ 22 ವರ್ಷದ ಹೃತಿಕ್ ಕುಮಾರ್ ಅಲಿಯಾಸ್ ರೋಷನ್, ಹಾಗೂ ಹರಿಯಾಣದ ಸೋನಿಪತ್‌ನ 18 ವರ್ಷದ ರೆಹಾನ್ ಎಂದು ಗುರುತಿಸಲಾಗಿದೆ.

ಮುಂಬೈ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ರಾಜಸ್ಥಾನ ದರೋಡೆಕೋರ ನಿಗ್ರಹ ಕಾರ್ಯಪಡೆ (AGTF) ​​ಮತ್ತು ಕೋಟಾ ನಗರ ಪೊಲೀಸರ ಜಂಟಿ ತಂಡವು ಮೂವರು ಶೂಟರ್‌ಗಳನ್ನು ಬಂಧಿಸಿದೆ. ಆರೋಪಿಗಳು ಪುಣೆ-ಜೈಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಇಂದು ಬೆಳಿಗ್ಗೆ ಗುಂಡು ಹಾರಿಸಿದವರ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.

ದಾಳಿಯ ನಂತರ ಆರೋಪಿಗಳು ಮುಂಬೈನ ಅಂಧೇರಿ ರೈಲು ನಿಲ್ದಾಣದ ಬಳಿ ತಾವು ಬಂದಿದ್ದ ಬೈಕ್ ಅನ್ನು ಬಿಟ್ಟು, ದೆಹಲಿ ಕಡೆಗೆ ಹೋಗುತ್ತಿದ್ದ ರೈಲನ್ನು ಹತ್ತಿ ಪರಾರಿಯಾಗಿದ್ದರು. ಮುಂಬೈ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ರೈಲು ಹತ್ತಿರುವ ಸುಳಿವು ಸಿಕ್ಕಿದೆ. ತಕ್ಷಣವೇ ಈ ಮಾಹಿತಿಯನ್ನು ರಾಜಸ್ಥಾನ ಪೊಲೀಸರಿಗೆ ರವಾನಿಸಲಾಯಿತು.

ಟೈಗರ್‌ ಶ್ರಾಫ್‌ಗಾಗಿ 45 ನಿಮಿಷ ಕಾದು ಕುಳಿತಿದ್ದ ಶೂಟರ್‌ಗಳು! ಗನ್‌ ಜ್ಯಾಮ್‌ ಆಗಿದ್ದರಿಂದ ಉಳಿಯಿತಾ ನಟನ ಜೀವ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ

ಪ್ರಾಥಮಿಕ ತನಿಖೆಯ ಪ್ರಕಾರ, ಈ ಶೂಟರ್‌ಗಳು ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಮುಂಬೈ ಪೊಲೀಸರು ಆರೋಪಿಗಳನ್ನು ಮುಂಬೈಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಈ ದಾಳಿಯ ಹಿಂದಿನ ನೈಜ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

Vishakha Bhat Heggar

View all posts by this author