ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟೈಗರ್‌ ಶ್ರಾಫ್‌ಗಾಗಿ 45 ನಿಮಿಷ ಕಾದು ಕುಳಿತಿದ್ದ ಶೂಟರ್‌ಗಳು! ಗನ್‌ ಜ್ಯಾಮ್‌ ಆಗಿದ್ದರಿಂದ ಉಳಿಯಿತಾ ನಟನ ಜೀವ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದಾಳಿಕೋರರು ನಟನಿಗಾಗಿ ಸುಮಾರು 45 ನಿಮಿಷಗಳ ಕಾಲ ಕಾದು ಕುಳಿತಿದ್ದರು ಎಂದು ತಿಳಿದು ಬಂದಿದೆ.

ಟೈಗರ್‌ ಶ್ರಾಫ್‌ಗಾಗಿ 45 ನಿಮಿಷ ಕಾದು ಕುಳಿತಿದ್ದ ಶೂಟರ್‌ಗಳು!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 19, 2026 12:40 PM

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ( Tiger Shroff Attack) ಅವರ ಮೇಲೆ ಮುಂಬೈನ (Mumbai) ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದಾಳಿಕೋರರು ನಟನಿಗಾಗಿ ಸುಮಾರು 45 ನಿಮಿಷಗಳ ಕಾಲ ಕಾದು ಕುಳಿತಿದ್ದರು ಎಂದು ತಿಳಿದು ಬಂದಿದೆ. 18ರ ಭಾನುವಾರ ಸಂಜೆ, ಟೈಗರ್ ಶ್ರಾಫ್ ಅವರು ಜುಹುವಿನ ಪುಷ್ಪಾ ಪಾರ್ಕ್ ಬಳಿ ಫುಟ್ಬಾಲ್ ಆಡಿ ಹಿಂತಿರುಗುತ್ತಿದ್ದರು. ಇದಕ್ಕೂ ಮುನ್ನವೇ ಮೂವರು ದುಷ್ಕರ್ಮಿಗಳು ಆ ಪ್ರದೇಶದಲ್ಲಿ ನಟನಿಗಾಗಿ ಕಾಯುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಟೈಗರ್‌ ಶ್ರಾಫ್‌ ತಮ್ಮ ಬಿಎಂಡಬ್ಲ್ಯು (BMW) ಕಾರು ಹತ್ತುತ್ತಿದ್ದಂತೆ ದಾಳಿಕೋರರು ಒಟ್ಟು 7 ಸುತ್ತು ಗುಂಡು ಹಾರಿಸಿದ್ದಾರೆ. ಇವುಗಳಲ್ಲಿ 5 ಗುಂಡುಗಳು ಕಾರಿನ ಮುಂಭಾಗದ ವಿಂಡ್‌ಶೀಲ್ಡ್ ಮತ್ತು ಕಿಟಕಿ ಗಾಜಿಗೆ ತಗುಲಿದ್ದರೆ, 2 ಗುಂಡುಗಳು ಗುರಿ ತಪ್ಪಿವೆ. ಐದನೇ ಸುತ್ತಿನ ಗುಂಡು ಹಾರಿಸಿದ ನಂತರ, ಒಬ್ಬ ಶೂಟರ್ ಕಾರಿನ ಪ್ಯಾಸೆಂಜರ್ ಸೀಟಿನ ಕಿಟಕಿಯ ಬಳಿ ಬಂದು ಅತ್ಯಂತ ಹತ್ತಿರದಿಂದ ಟೈಗರ್ ಶ್ರಾಫ್ ಅವರಿಗೆ ಗುರಿ ಇಟ್ಟು ಶೂಟ್ ಮಾಡಲು ಯತ್ನಿಸಿದ್ದಾನೆ. ಆದರೆ, ಆತ ಬಳಸುತ್ತಿದ್ದ ದೇಶಿ ನಿರ್ಮಿತ ಪಿಸ್ತೂಲ್ ತಾಂತ್ರಿಕ ದೋಷದಿಂದಾಗಿ ಜಾಮ್ ಆಗಿದೆ. ಆತ ಎರಡು ಬಾರಿ ಹಾರಿಸಲು ಯತ್ನಿಸಿದರೂ ಗನ್ ಕೆಲಸ ಮಾಡದ ಕಾರಣ ಟೈಗರ್ ಶ್ರಾಫ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾಳಿಯಲ್ಲಿ ಟೈಗರ್ ಶ್ರಾಫ್ ಅವರ ಕೈ ಹಾಗೂ ಎದೆಯ ಭಾಗಕ್ಕೆ ಕಾರಿನ ಗಾಜಿನ ಚೂರುಗಳು ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅವರ ಚಾಲಕ ಫಿರ್ದೌಸ್ ಅವರ ಎಡಗೈಗೆ ಗುಂಡು ತಗುಲಿದ್ದು, ಮತ್ತೊಬ್ಬ ಹತ್ತಿರದಲ್ಲಿದ್ದ ವ್ಯಕ್ತಿಗೂ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಗಾಯಗೊಂಡ ಹಿನ್ನಲೆಯಲ್ಲಿ ಪ್ಯಾಸೇಂಜರ್‌ ಸೀಟ್‌ನಲ್ಲಿದ್ದ ನಟ ಟೈಗರ್‌ ಶ್ರಾಫ್‌ ಸ್ವತಃ ಡ್ರೈವರ್‌ ಸೀಟ್ ತಕ್ಷಣವೇ ಶಿಫ್ಟ್‌ ಆಗಿದ್ದು, ಅಲ್ಲಿಂದ ವಾಹನವನ್ನು ಚಲಾಯಿಸಿಕೊಂಡು ತಪ್ಪಿಸಿಕೊಂಡಿದ್ದಾರೆ.

ಹೆಗಲು, ಕೈಗೆ ಬ್ಯಾಂಡೇಜ್; ಗುಂಡಿನ ದಾಳಿ ಬಳಿಕ ಟೈಗರ್‌ ಶ್ರಾಫ್‌ ಹೇಗಿದ್ದಾರೆ? ಫೋಟೋ ವೈರಲ್‌

ದಾಳಿಯ ಹೊಣೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡ ಅನಿಲ್ ಪಂಡಿತ್ ಎಂಬಾತ ಹೊತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಆತ ಈ ಕುರಿತು ಪೋಸ್ಟ್‌ ಮಾಡಿದ್ದಾನೆ. ದಾಳಿಕೊರರ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದು, ಇಬ್ಬರು ದಾಳಿಕೋರ ಚಿತ್ರ ಸೆರೆಯಾಗಿದೆ. ಪ್ರಕರಣದ ತನಿಖೆಯನ್ನು ಮುಂಬೈ ಕ್ರೈಂ ಬ್ರಾಂಚ್ ಕೈಗೆತ್ತಿಕೊಂಡಿದ್ದು, 15 ವಿಶೇಷ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ರಾಜಸ್ಥಾನದ ಕೋಟಾ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕೃತ್ಯ ನಡೆಸಿ ಓಡಿಹೋಗುತ್ತಿದ್ದ ಮೂವರು ಶಂಕಿತ ಶೂಟರ್‌ಗಳನ್ನು ಬಂಧಿಸಿದ್ದಾರೆ.