ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

8th Pay Commission: ಎಂಟನೇ ವೇತನ ಆಯೋಗ ಜಾರಿ ಹಿನ್ನೆಲೆ; ವೇತನ, ಪಿಂಚಣಿ ಹೊರೆ ನಿರ್ವಹಿಸಲು ರೈಲ್ವೆ ಇಲಾಖೆಯ ವೆಚ್ಚ ಕಡಿತ

ಎಂಟನೇ ವೇತನ ಆಯೋಗ ಜಾರಿಗೆ ತರುವ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ನೌಕರರ ವೇತನ ಮತ್ತು ಪಿಂಚಣಿಯನ್ನು ನಿರ್ವಹಿಸಲು ನಿರ್ವಹಣೆ, ಖರೀದಿ ಮತ್ತು ಇಂಧನ ಬಳಕೆಗಳಲ್ಲಿ ವೆಚ್ಚ ಕಡಿತ ಕ್ರಮಗಳನ್ನು ಕೈಗೊಂಡಿದೆ. ಶಿಫಾರಸುಗಳ ಅನುಷ್ಠಾನವು 2026ರ ಜನವರಿ 1ರಂದು ಜಾರಿಗೆ ಬರುವ ಸಾಧ್ಯತೆಯಿದೆ.

ವೇತನ, ಪಿಂಚಣಿ ಹೊರೆ ನಿರ್ವಹಿಸಲು ರೈಲ್ವೆ ಇಲಾಖೆಯಿಂದ ವೆಚ್ಚ ಕಡಿತ

ಸಾಂದರ್ಭಿಕ ಚಿತ್ರ -

Priyanka P
Priyanka P Dec 15, 2025 6:55 PM

ನವದೆಹಲಿ, ಡಿ. 15: ಎಂಟನೇ ವೇತನ ಆಯೋಗವನ್ನು (8th Pay Commission) ರಚಿಸಿದ ದಿನಾಂಕದಿಂದ 18 ತಿಂಗಳ ಒಳಗೆ ವರದಿ ಸಲ್ಲಿಕೆಯಾಗಬೇಕೆಂಬ ನಿರೀಕ್ಷೆ ಇದ್ದರೂ ಶಿಫಾರಸುಗಳ ಅನುಷ್ಠಾನವು 2026ರ ಜನವರಿ 1ರಂದು ಪೂರ್ವಾನ್ವಯವಾಗಿ ಜಾರಿಗೆ ಬರುವ ಸಾಧ್ಯತೆಯಿದೆ. ಎಂಟನೇ ವೇತನ ಆಯೋಗ ಜಾರಿಗೆ ಬರುವ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ ಮತ್ತು ಪಿಂಚಣಿಗಳ ನೀಡಬೇಕಿರುವುದರಿಂದ ದೊಡ್ಡ ಆರ್ಥಿಕ ಹೊರೆಯನ್ನು ತಪ್ಪಿಸಲು, ಭಾರತೀಯ ರೈಲ್ವೆಯು ನಿರ್ವಹಣೆ, ಖರೀದಿ ಮತ್ತು ಇಂಧನ ಬಳಕೆಯಲ್ಲಿ ವೆಚ್ಚ ಕಡಿತ ಕ್ರಮಗಳನ್ನು ಆರಂಭಿಸಿದೆ. ಇದು ಹಣಕಾಸು ಭಾರವನ್ನು ತಪ್ಪಿಸಲು ಸಹಾಯಕವಾಗಲಿದೆ.

ವಿಳಂಬದ ನಂತರ, ಅಂತಿಮವಾಗಿ ಕೇಂದ್ರ ಸರ್ಕಾರವು ಈ ವರ್ಷದ ಅಕ್ಟೋಬರ್‌ನಲ್ಲಿ ತನ್ನ ಸಿಬ್ಬಂದಿ ಮತ್ತು ಪಿಂಚಣಿದಾರರ ವೇತನ ಮತ್ತು ಭತ್ಯೆಗಳನ್ನು ಪರಿಶೀಲಿಸಲು ಟರ್ಮ್ಸ್ ಆಫ್ ರೆಫರೆನ್ಸ್ (ToR) ಅಧಿಸೂಚನೆಯೊಂದಿಗೆ 8ನೇ ವೇತನ ಆಯೋಗವನ್ನು ರಚಿಸಿದೆ.

ಮಗಳಿಗಾಗಿ ಮನೆ ಊಟ ತಂದು ರೈಲ್ವೇ ಸ್ಟೇಶನ್‌ನಲ್ಲಿ ಚಳಿಯಲ್ಲಿ ನಡುಗುತ್ತಾ ಕಾದ ತಂದೆ

ಪ್ರತಿ 10 ವರ್ಷಗಳಿಗೊಮ್ಮೆ ವೇತನ ಸಮಿತಿಯನ್ನು ರಚಿಸಲಾಗುತ್ತದೆ. ಇದು ತನ್ನ ಉದ್ಯೋಗಿಗಳ ವೇತನ ಮತ್ತು ಭತ್ಯೆಗಳನ್ನು ಪರಿಶೀಲಿಸುತ್ತದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು 2016ರ ಜನವರಿ 1ರಂದು ಜಾರಿಗೆ ತರಲಾಯಿತು. 2016-17ರ ಹಣಕಾಸು ವರ್ಷದೊಳಗೆ ಬಾಕಿ ಹಣವನ್ನು ಪಾವತಿಸಲಾಯಿತು.

ವರದಿಯ ಪ್ರಕಾರ, ಭಾರತೀಯ ರೈಲ್ವೆ 2024–25ರಲ್ಲಿ ಶೇ. 98.90ರಷ್ಟು ಕಾರ್ಯಾಚರಣಾ ಅನುಪಾತ (OR) ದಾಖಲಿಸಿದ್ದು, 1,341.31 ಕೋಟಿ ರೂ. ನಿವ್ವಳ ಆದಾಯವನ್ನು ಉಳಿಸಿದೆ. 2025–26ಕ್ಕೆ, ರೈಲ್ವೆಯು ಶೇಕಡಾ 98.42 OR ಗುರಿಯನ್ನು ಹೊಂದಿದ್ದು, ನಿವ್ವಳ ಆದಾಯವು 3,041.31 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಭಾರತೀಯ ರೈಲ್ವೆ ಹಣಕಾಸು ನಿಗಮದ (IRFC) ವಾರ್ಷಿಕ ಪಾವತಿಗಳು 2027-28ರಿಂದ ಕಡಿಮೆಯಾಗುವ ನಿರೀಕ್ಷೆಯಿರುವುದರಿಂದ, ಒಟ್ಟು ಬಜೆಟ್ ಬೆಂಬಲ (GBS) ಮೂಲಕ ಇತ್ತೀಚಿನ ಬಂಡವಾಳ ವೆಚ್ಚಗಳಿಗೆ ಹಣಕಾಸು ಒದಗಿಸುವುದರಿಂದ ರೈಲ್ವೆ ಸಾಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಎಂಟನೇ ವೇತನ ಆಯೋಗ ಜಾರಿಗೆ ತರುವ ಕಾಲಮಿತಿ

ಇತ್ತೀಚಿನ ಮಾಹಿತಿಯ ಪ್ರಕಾರ, ಎಂಟನೇ ವೇತನ ಆಯೋಗದ ಜಾರಿಗೆ ತರುವ ದಿನಾಂಕ ಮತ್ತು ಹಣಕಾಸು ವ್ಯವಸ್ಥೆಯನ್ನು ನಂತರ ನಿರ್ಧರಿಸಲಾಗುವುದು ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.

ರೈಲ್ವೇ ಪ್ರಯಾಣಿಕರೇ ಅಲರ್ಟ್‌.... ಅಲರ್ಟ್‌! ಹಬ್ಬಕ್ಕೆ ಟಿಕೆಟ್ ಕಾಯ್ದಿರಿಸುವ ಮುನ್ನ ಈ ವಿಚಾರ ತಿಳ್ಕೊಳಿ

ಎಂಟನೇ ಕೇಂದ್ರ ವೇತನ ಆಯೋಗವನ್ನು (CPC) ಈಗಾಗಲೇ ರಚಿಸಲಾಗಿದೆ. ಕೇಂದ್ರ ವೇತನ ಆಯೋಗದ ಟರ್ಮ್ಸ್ ಆಫ್ ರೆಫರೆನ್ಸ್ (ToR) ಅನ್ನು ಹಣಕಾಸು ಸಚಿವಾಲಯದ ಇತ್ತೀಚೆಗೆ ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ನೌಕರರ ಸಂಖ್ಯೆ ಸುಮಾರು 50.14 ಲಕ್ಷ ಮತ್ತು ಪಿಂಚಣಿ ಪಡೆಯುವವರ ಸಂಖ್ಯೆ ಸುಮಾರು 69 ಲಕ್ಷವಾಗಿದೆ. ಎಂಟನೇ CPC ಜಾರಿಗೆ ತರುವ ದಿನಾಂಕವನ್ನು ಸರ್ಕಾರ ನಿರ್ಧರಿಸಲಿದೆ. ಅಂಗೀಕೃತ ಶಿಫಾರಸುಗಳನ್ನು ಜಾರಿಗೆ ತರಲು ಸೂಕ್ತ ಹಣಕಾಸು ವ್ಯವಸ್ಥೆಯನ್ನು ಸರ್ಕಾರ ಒದಗಿಸುವುದು ಎಂದು ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.