ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ... ಏನಿದು ಇಂಟ್ರೆಸ್ಟಿಂಗ್ ಕಹಾನಿ?

ಸಾಲದ ಸುಳಿಯಲ್ಲಿ ಸಿಲುಕಿದ್ದ ಕೂಲಿ ಕಾರ್ಮಿಕನ ( daily wage worker) ಬದುಕು ರಾತ್ರೋರಾತ್ರಿ ಬದಲಾಗಿದೆ. ದಿನಗೂಲಿ ಮಾಡುತ್ತಿದ್ದ ಕಾರ್ಮಿಕ ಈಗ ಕೋಟ್ಯಧಿಪತಿ (Billionaire) ಯಾಗಿದ್ದಾನೆ. ಇದರ ಹಿಂದಿನ ಕಥೆ ಬಹಳ ರೋಚಕವಾಗಿದೆ. ಪಂಜಾಬ್‌ನ (Punjab) ಮೋಗಾದ (Moga) ದಿನಗೂಲಿ ಕಾರ್ಮಿಕ ಜಸ್ಮಾಯಿಲ್ ಸಿಂಗ್ ಅವರು ಕೇವಲ 6 ರೂ. ಕೊಟ್ಟು ಖರೀದಿ ಮಾಡಿದ ಲಾಟರಿ ಟಿಕೆಟ್ ಅವರ ಬದುಕನ್ನೇ ಬದಲಾಯಿಸಿದೆ.

ಮೋಗಾ: ಸಾಲದ ಸುಳಿಯಲ್ಲಿ ಸಿಲುಕಿದ್ದ ಕೂಲಿ ಕಾರ್ಮಿಕನ (Daily wage worker) ಬದುಕು ರಾತ್ರೋರಾತ್ರಿ ಬದಲಾಗಿದೆ. ದಿನಗೂಲಿ ಮಾಡುತ್ತಿದ್ದ ಕಾರ್ಮಿಕ ಈಗ ಕೋಟ್ಯಧಿಪತಿ (Billionaire)ಯಾಗಿದ್ದಾನೆ. ಇದರ ಹಿಂದಿನ ಕಥೆ ಬಹಳ ರೋಚಕವಾಗಿದೆ. ಪಂಜಾಬ್‌ನ (Punjab) ಮೋಗಾದ (Moga) ದಿನಗೂಲಿ ಕಾರ್ಮಿಕ ಜಸ್ಮಾಯಿಲ್ ಸಿಂಗ್ ಅವರು ಕೇವಲ 6 ರೂ. ಕೊಟ್ಟು ಖರೀದಿ ಮಾಡಿದ ಲಾಟರಿ ಟಿಕೆಟ್ (state lottery) ಅವರ ಬದುಕನ್ನೇ ಬದಲಾಯಿಸಿದೆ. ಲಕ್ಷಾಂತರ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರ ಅದೃಷ್ಟ ಖುಲಾಯಿಸಿದ್ದು, ಅವರೀಗ ಕೋಟ್ಯಧಿಪತಿಯಾಗಿದ್ದಾರೆ.

ಜಸ್ಮಾಯಿಲ್ ಸಿಂಗ್ ಅವರು 6 ರೂ. ಕೊಟ್ಟು ಖರೀದಿ ಮಾಡಿದ್ದ ರಾಜ್ಯ ಲಾಟರಿಯಿಂದ ಅವರು ಈಗ 1 ಕೋಟಿ ರೂ. ಗೆದ್ದಿದ್ದಾರೆ. ಇದರಿಂದ ಅವರ ಕುಟುಂಬದಲ್ಲಿ ಈಗ ಸಂತೋಷ ನೆಲೆಸಿದೆ. ಇಟ್ಟಿಗೆ ಗೂಡುಗಳ ಮಾರಾಟಗಾರನಾಗಿ ಕೆಲಸ ಮಾಡುವ ಜಸ್ಮಾಯಿಲ್, ಫಿರೋಜ್‌ಪುರ ಜಿಲ್ಲೆಯ ಜಿರಾಗೆ ಭೇಟಿ ನೀಡಿದ್ದಾಗ ರಾಜ್ಯ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಆ ಸಣ್ಣ ಕಾಗದದ ತುಂಡು ತನ್ನ ಕುಟುಂಬದ ಜೀವನವನ್ನೇ ಬದಲಾಯಿಸುತ್ತದೆ ಎಂಬುದು ಅವರು ಊಹೆಯನ್ನೂ ಮಾಡಿರಲಿಲ್ಲ.

ಅವರ ಮೊಬೈಲ್ ಗೆ ಲಾಟರಿ ಮಾರಾಟಗಾರರು ಕರೆ ಮಾಡಿ ನಿಮ್ಮ ಲಾಟರಿ ಸಂಖ್ಯೆಯನ್ನು ಪರಿಶೀಲಿಸಿ. ನೀವು 1 ಕೋಟಿ ರೂ. ಗೆದ್ದಿದ್ದೀರಿ ಎಂದಾಗ ಅವರಿಗೆ ಅದನ್ನು ನಂಬುವುದು ಸಾಧ್ಯವಾಗಲಿಲ್ಲ. ಹೀಗಾಗಿ ಪದೇಪದೇ ಅವರು ಲಾಟರಿ ಸಂಖ್ಯೆಯನ್ನು ಪರಿಶೀಲಿಸಿದರು. ಬಳಿಕ ಮನೆಗೆ ಮಾಹಿತಿಯನ್ನು ನೀಡಿದರು.

ಜಿರಾದಿಂದ ಅವರು ಮನೆಗೆ ಬಂದಾಗ ಅಲ್ಲಿ ಹಬ್ಬದ ಆಚರಣೆ ಇತ್ತು. ಜಾಸ್ಮಾಯಿಲ್ ಮತ್ತು ಅವರ ಕುಟುಂಬವು ಸಿಹಿತಿಂಡಿಗಳನ್ನು ವಿತರಿಸುತ್ತಿದ್ದರು. ಬೀದಿಯಲ್ಲಿ ಡೋಲ್‌ ಸದ್ದು ಕೇಳುತ್ತಿತ್ತು, ಸ್ಥಳೀಯರು ನೃತ್ಯ ಮಾಡಿ ಸಂಭ್ರಮಿಸುತ್ತಿದ್ದರು. ಲಾಟರಿ ಗೆದ್ದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಣದಿಂದ 25 ಲಕ್ಷ ರೂಪಾಯಿ ಸಾಲವನ್ನು ತೀರಿಸಿ ಉಳಿದ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಎತ್ತಿಡುವುದಾಗಿ ಹೇಳಿದ್ದಾರೆ.

ಜಸ್ಮಾಯಿಲ್ ಮೂವರು ಮಕ್ಕಳ ತಂದೆಯಾಗಿದ್ದು, ಇದರಲ್ಲಿ ಒಬ್ಬರು ವಿಶೇಷ ಅಗತ್ಯವುಳ್ಳವರಾಗಿದ್ದಾರೆ. ಜಸ್ಮಾಯಿಲ್ ಪತ್ನಿ ವೀರ್ಪಾಲ್ ಕೌರ್ ಮಾತನಾಡಿ, ನಾವು ಈ ದಿನವನ್ನು ಎಂದಿಗೂ ಊಹಿಸಿರಲಿಲ್ಲ. ತುಂಬಾ ಸಂತೋಷವಾಗಿದೆ. ಈ ಹಣದಿಂದ ನಾವು ನಮ್ಮ ಮಕ್ಕಳಿಗೆ ಅರ್ಹವಾದ ಜೀವನವನ್ನು ಒದಗಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral video: ದಟ್ಟ ಅರಣ್ಯಕ್ಕೆ ಕೊಳ್ಳಿ ಇಟ್ಟ ಪಾಪಿ! ದಂಪತಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಕಾಡ್ಗಿಚ್ಚು ದುರಂತ

ಫಿರೋಜ್‌ಪುರ ಜಿಲ್ಲೆಯ ಒಬ್ಬರು ರಾಜ್ಯ ಲಾಟರಿ ಮೂಲಕ ಕೋಟ್ಯಾಧಿಪತಿಯಾಗಿರುವುದು ಇದು ನಾಲ್ಕನೇ ಬಾರಿಯಾಗಿದೆ. ಜಿರಾ ಮೂಲದ ಲಾಟರಿ ಏಜೆಂಟ್ ಪರ್ವಿಂದರ್ ಪಾಲ್ ಸಿಂಗ್ ಅವರು ವಿಜೇತ ಟಿಕೆಟ್ ಅನ್ನು ತಮ್ಮ ಅಂಗಡಿಯಲ್ಲಿ ಮಾರಾಟ ಮಾಡಿದ್ದಾರೆ. ರಾಜ್ಯ ಲಾಟರಿಯಿಂದ ಈಗ ಫಿರೋಜ್‌ಪುರ ಜಿಲ್ಲೆಯಲ್ಲಿ ನಾಲ್ವರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author