ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಬೆ ಹೈಕೋರ್ಟ್ ಆವರಣದಲ್ಲೇ ಘೋರ ದುರಂತ; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Bombay High Court: ಮುಂಬೈಯಲ್ಲಿನ ಬಾಂಬೆ ಹೈಕೋರ್ಟ್ ಆವರಣದ ಸಮೀಪ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆತಂಕ ಮೂಡಿಸಿದೆ. ತಕ್ಷಣ ಸ್ಥಳದಲ್ಲಿದ್ದವರು ಮತ್ತು ಪೊಲೀಸರು ಬೆಂಕಿಯನ್ನು ಆರಿಸಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಮುಂಬೈ, ಡಿ. 16: ವಕೀಲರೊಂದಿಗಿನ ಜಗಳದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ (Bombay High Court) ಬಳಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಸಂಜೆ ಬಾಂಬೆ ಹೈಕೋರ್ಟ್ ಆವರಣದ ಹೊರಗೆ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ಮತ್ತು ಅಲ್ಲಿದ್ದ ಕೆಲವರು ತಕ್ಷಣ ಮಧ್ಯ ಪ್ರವೇಶಿಸಿ ಬೆಂಕಿಯನ್ನು ನಂದಿಸಿದರು. ಪ್ರಕಾಶ್ ಸಾವಂತ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ದಕ್ಷಿಣ ಮುಂಬೈಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಶೇ. 50ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರಾವಳಿ ಸಿಂಧುದುರ್ಗ ಜಿಲ್ಲೆಯ ಕಂಕವಲಿಯ ನಿವಾಸಿ ಸಾವಂತ್ ಮತ್ತು ವಕೀಲರ ನಡುವಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ವಿಚಾರದಲ್ಲಿ ಉಂಟಾದ ವಿವಾದವು ಈ ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಸಾವಂತ್ ವಕೀಲರೊಬ್ಬರಿಗೆ 80,000 ರೂ. ಪಾವತಿಸಿದ್ದಾರೆ ಎನ್ನಲಾಗಿದೆ. ಆದರೆ ವಕೀಲರು ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆಜಾದ್ ಮೈದಾನ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಮಕ್ಕಳನ್ನು ಸಾಕಲು ಸಾಧ್ಯವಾಗದೆ ಮೂವರನ್ನು ಕೊಂದು ತಂದೆ ಆತ್ಮಹತ್ಯೆ

ಮಕ್ಕಳ ಕಳ್ಳತನದ ಆರೋಪದ ಮೇಲೆ ಸಾಧುಗಳ ಮೇಲೆ ಕ್ರೂರವಾಗಿ ಹಲ್ಲೆ

ಮಕ್ಕಳ ಕಳ್ಳತನದ ಆರೋಪ ಹೊರಿಸಿ ಗುಂಪೊಂದು ಮೂವರು ಸಾಧುಗಳನ್ನು ಕೋಲು ಮತ್ತು ಬೆಲ್ಟ್‌ಗಳಿಂದ ಕ್ರೂರವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದಿದೆ. ಇದರ ವಿಡಿಯೊ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡರು. ಪೊಲೀಸರು ಅಪರಿಚಿತ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಡಿಯೊವನ್ನು ಆಧರಿಸಿ, ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮಚ್ಲಿಶಹರ್ ನಿಲ್ದಾಣದ ಬಳಿ ಈ ಆಘಾತಕಾರಿ ಘಟನೆ ನಡೆದಿದೆ.

ಇಲ್ಲಿ ಐದರಿಂದ ಆರು ಯುವಕರು ಮೂವರು ಸಾಧುಗಳನ್ನು ಕ್ರೂರವಾಗಿ ಥಳಿಸಿದ್ದಾರೆ. ಅವರನ್ನು ಮಕ್ಕಳ ಕಳ್ಳರು ಎಂದು ಆರೋಪಿಸಿ, ರಸ್ತೆಯ ಮಧ್ಯದಲ್ಲಿ ಥಳಿಸಲಾಗಿದೆ. ಈ ಸಮಯದಲ್ಲಿ ಅಲ್ಲಿ ಜನರು ಗುಂಪು ಸೇರಿದ್ದರು. ಆದರೆ ಯಾರೂ ಮಧ್ಯ ಪ್ರವೇಶಿಸಿರಲಿಲ್ಲ. ಬದಲಾಗಿ ಜನರು ಈ ಘಟನೆಯ ವಿಡಿಯೊಗಳನ್ನು ಮಾಡುತ್ತಲೇ ಇದ್ದರು. ಯಾರೋ ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.

ವಿಡಿಯೊ ವೈರಲ್ ಆದ ನಂತರ, ಜಾನ್ಪುರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದರು. ಜನರು ಮೂವರು ಸಾಧುಗಳನ್ನು ಕೋಲು, ಬೆಲ್ಟ್‌ಗಳಿಂದ ಹೊಡೆಯುವುದು ಮತ್ತು ಒದೆಯುವುದು ಮತ್ತು ಗುದ್ದುವುದನ್ನು ವಿಡಿಯೊದಲ್ಲಿಕಂಡು ಬಂದಿದೆ. ಮೂವರು ಸಾಧುಗಳು ಕೈಮುಗಿದು ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಿದ್ದರು. ಆದರೆ ಅಲ್ಲಿದ್ದ ಯಾರೂ ಕರುಣೆ ತೋರಿಸಲಿಲ್ಲ. ಅವರನ್ನು ಹೊಡೆಯುವ ಜನರಿಗೆ ಸಹ ಕಾನೂನಿನ ಬಗ್ಗೆ ಯಾವುದೇ ಭಯ ಇದ್ದಂತೆ ಕಾಣಲಿಲ್ಲ. ಸಾಧುಗಳಿಗೆ ರಕ್ತ ಬರುವವರೆಗೂ ಥಳಿಸಲಾಯಿತು.