ಕೊಚ್ಚಿ: ನಗರದ ತಮ್ಮನಂ ಪ್ರದೇಶದಲ್ಲಿರುವ ಕೇರಳ ಜಲ ಪ್ರಾಧಿಕಾರದ (KWA) ಫೀಡರ್ ಟ್ಯಾಂಕ್‌ನ (feeder tank) ಒಂದು ಭಾಗ ಸೋಮವಾರ ಮುಂಜಾನೆ ಕುಸಿದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ವಾಹನಗಳು ಕೊಚ್ಚಿ ಹೋದ ಘಟನೆ ನಡೆದಿದೆ. ಕೆಡಬ್ಲ್ಯೂಎ ಫೀಡರ್ ಪಂಪ್ ಹೌಸ್‌ನಲ್ಲಿರುವ ಬೃಹತ್ ಟ್ಯಾಂಕ್‌ನ ಒಂದು ಬದಿ ಕುಸಿದು ಬಿದ್ದಿದೆ. ಬೆಳಗಿನ ಜಾವ 2 ರಿಂದ 2.30ರ ನಡುವೆ ಈ ಘಟನೆ ಸಂಭವಿಸಿದೆ. ಇದು ಸುಮಾರು 1.38 ಕೋಟಿ ಲೀಟರ್‌ಗಳ ಒಟ್ಟು ಸಾಮರ್ಥ್ಯದ ಎರಡು ಕೋಣೆಗಳನ್ನು ಒಳಗೊಂಡಿದೆ. ಒಂದು ಕೋಣೆಯ ಗೋಡೆ ಒಡೆದಾಗ, ಬಿಡುಗಡೆಯಾದ ನೀರು ಕಾಂಪೌಂಡ್ ಗೋಡೆಯ ಮೂಲಕ ಹರಿದು ಹತ್ತಿರದ ಸುಮಾರು 10 ಮನೆಗಳಿಗೆ ನುಗ್ಗಿದೆ.
ಸುದ್ದಿ ತಿಳಿದ ಕೂಡಲೇ ಧಾವಿಸಿದ ಎರ್ನಾಕುಲಂ ಶಾಸಕ ಟಿಜೆ ವಿನೋದ್, ಸ್ಥಳವನ್ನು ಪರಿಶೀಲಿಸಿದರು. ರಸ್ತೆಯ ಉದ್ದಕ್ಕೂ ನಿಲ್ಲಿಸಿದ್ದ ಹಲವಾರು ವಾಹನಗಳು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿವೆ ಎಂದು ಹೇಳಿದರು. ಮನೆಗಳ ನೆಲ ಮಹಡಿಯಲ್ಲಿದ್ದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಪೀಠೋಪಕರಣಗಳು ಹಾನಿಗೊಳಗಾಗಿವೆ. ನೀರು ಹತ್ತಿರದ ಆರೋಗ್ಯ ಕೇಂದ್ರಕ್ಕೂ ನುಗ್ಗಿದ್ದು, ಔಷಧಗಳು ಮತ್ತು ಉಪಕರಣಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದರು.
ಐದು ದಶಕಗಳಿಗಿಂತಲೂ ಹಳೆಯದಾದ ಈ ಫೀಡರ್ ಟ್ಯಾಂಕ್ ಕೊಚ್ಚಿ ನಗರ ಮತ್ತು ತ್ರಿಪುನಿತುರಕ್ಕೆ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿನೋದ್ ಹೇಳಿದರು. ಹಾನಿಗೊಳಗಾದ ಕೋಣೆಯು ಕೊಚ್ಚಿ ನಗರಕ್ಕೆ ನೀರನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: PM Kisan Samman Nidhi: ಈ ನಿಯಮ ಪಾಲಿಸದಿದ್ರೆ ಪಿಎಂ ಕಿಸಾನ್ ಸಮ್ಮಾನ್ ಹಣ ನಿಮ್ಮ ಕೈ ಸೇರುವುದಿಲ್ಲ
ಯಾವುದೇ ಮುನ್ಸೂಚನೆಯಿಲ್ಲದೆ ಮಲಗಿದ್ದ ನಿವಾಸಿಗಳು ತಮ್ಮ ಮನೆಗಳಿಗೆ ನೀರು ನುಗ್ಗಿದಾಗ ಆಘಾತದಿಂದ ಎಚ್ಚರಗೊಂಡರು ಎಂದು ವಿವರಿಸಿದರು. ಪ್ರವಾಹದಲ್ಲಿ ಕನಿಷ್ಠ ಮೂರು ಮನೆಗಳ ಕಾಂಪೌಂಡ್ ಗೋಡೆಗಳು ನಾಶವಾಗಿವೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ ತ್ರಿಕಕ್ಕರ ಶಾಸಕಿ ಉಮಾ ಥಾಮಸ್, ನಷ್ಟ ಅನುಭವಿಸಿದ ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೆಡಬ್ಲ್ಯೂಎಯನ್ನು ಒತ್ತಾಯಿಸಿದರು.
ಈ ಘಟನೆಯ ಹೊರತಾಗಿಯೂ ಕೊಚ್ಚಿ ಮತ್ತು ಹತ್ತಿರದ ಪ್ರದೇಶಗಳಿಗೆ ನಿರಂತರ ನೀರು ಸರಬರಾಜು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಡಬ್ಲ್ಯೂಎ ಅಧಿಕಾರಿಗಳು ಭರವಸೆ ನೀಡಿದರು. ಉಳಿದ ಕೋಣೆಯ ಹಾನಿಯ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ.
ಕುಡಿಯುವ ನೀರಿನ ಟ್ಯಾಂಕ್‍ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಕುಡಿಯುವ ನೀರಿನ ಟ್ಯಾಂಕ್‍ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಇತ್ತೀಚೆಗೆ ಉತ್ತರ ಪ್ರದೇಶದ ಮಹರ್ಷಿ ದೇವರಹ ಬಾಬಾ ವೈದ್ಯಕೀಯ ಕಾಲೇಜಿನಲ್ಲಿ ಈ ಭಯಾನಕ ಘಟನೆ ಬೆಳಕಿಗೆ ಬಂದಿತ್ತು. ಕಾಲೇಜಿನ ಐದನೇ ಮಹಡಿಯಲ್ಲಿರುವ ಕುಡಿಯುವ ಟ್ಯಾಂಕ್‌ನಲ್ಲಿ ಶವ ಪತ್ತೆಯಾಗಿತ್ತು. ಹಾಸ್ಟೆಲ್ ಸೇರಿದಂತೆ ಅಲ್ಲಿನ ಆಸ್ಪತ್ರೆಗೂ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿತ್ತು. ಆಸ್ಪತ್ರೆಗೆ ಬಂದಿದ್ದ ರೋಗಿಗಳ ಸಂಬಂಧಿಕರು ನೀರಿನಲ್ಲಿ ದುರ್ವಾಸನೆ ಬರುತ್ತಿದೆ ಎಂದು ಅಲ್ಲಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಇತ್ತ ದೂರು ಬಂದ ಕಾರಣಕ್ಕೆ ವಾಟರ್ ಟ್ಯಾಂಕ್ ಪರಿಶೀಲನೆ ಮಾಡಲು ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿತ್ತು.