ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ನೊಬೆಲ್‌ ಸಿಗದಿದ್ದರೇನು? ಕೊನೆಗೂ ಫಿಫಾ ಶಾಂತಿ ಪ್ರಶಸ್ತಿ ತನ್ನದಾಗಿಸಿಕೊಂಡ ಟ್ರಂಪ್‌

ನೊಬೆಲ್‌ ಶಾಂತಿ ಪ್ರಶಸ್ತಿ ಕೈತಪ್ಪಿದ್ದರಿಂದ ಭಾರೀ ನಿರಾಸೆಗೊಳಗಾಗಿದ್ದ ಡೊನಾಲ್ಡ್‌ ಟ್ರಂಪ್‌ಗೆ ಇದೀಗ ಫಿಫಾದ (FIFA) ಹೊಸದಾಗಿ ರಚಿಸಲಾದ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಜನರನ್ನು ಒಗ್ಗೂಡಿಸುವ ಮತ್ತು ಭವಿಷ್ಯದ ಪೀಳಿಗೆಗೆ ಭರವಸೆ ತರುವ ವ್ಯಕ್ತಿಗಳನ್ನು ಗುರುತಿಸಲು ವಿನ್ಯಾಸಗೊಳಿಸಲಾಗಿದೆ.

ಕೊನೆಗೂ ಫಿಫಾ ಶಾಂತಿ ಪ್ರಶಸ್ತಿ ತನ್ನದಾಗಿಸಿಕೊಂಡ ಟ್ರಂಪ್‌

ಡೊನಾಲ್ಡ್‌ ಟ್ರಂಪ್‌ -

Vishakha Bhat
Vishakha Bhat Dec 6, 2025 9:24 AM

ವಾಷಿಂಗ್ಟನ್‌: ನೊಬೆಲ್‌ ಶಾಂತಿ ಪ್ರಶಸ್ತಿ ಕೈತಪ್ಪಿದ್ದರಿಂದ ಭಾರೀ ನಿರಾಸೆಗೊಳಗಾಗಿದ್ದ ಡೊನಾಲ್ಡ್‌ ಟ್ರಂಪ್‌ಗೆ ಇದೀಗ ಫಿಫಾದ (FIFA) ಹೊಸದಾಗಿ ರಚಿಸಲಾದ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಜನರನ್ನು ಒಗ್ಗೂಡಿಸುವ ಮತ್ತು ಭವಿಷ್ಯದ ಪೀಳಿಗೆಗೆ ಭರವಸೆ ತರುವ ವ್ಯಕ್ತಿಗಳನ್ನು ಗುರುತಿಸಲು ವಿನ್ಯಾಸಗೊಳಿಸಲಾಗಿದೆ. 2026ರ ವಿಶ್ವಕಪ್‌ನ ಅಧಿಕೃತ ಡ್ರಾ ಸಮಾರಂಭದಲ್ಲಿ ಈ ಗೌರವವನ್ನು ನೀಡಲಾಯಿತು. ಅಮೆರಿಕ ಮೆಕ್ಸಿಕೊ ಮತ್ತು ಕೆನಡಾದೊಂದಿಗೆ ಸಹ-ಆತಿಥ್ಯ ವಹಿಸುತ್ತಿರುವ ಈ ಟೂರ್ನಮೆಂಟ್‌ನ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

ಫಿಫಾ ಶಾಂತಿ ಪ್ರಶಸ್ತಿ ಪ್ರಮಾಣಪತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ವಿಶ್ವದಾದ್ಯಂತ ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸಲು ಕೈಗೊಂಡ ಕ್ರಮಗಳಿಗಾಗಿ ಶ್ಲಾಘಿಸಲಾಗಿದೆ. ಚಿನ್ನದ ಪದಕ ಧರಿಸಿ, ಭೂಗೋಳವನ್ನು ಎತ್ತುವ ಕೈಗಳ ಆಕಾರದ ಚಿನ್ನದ ಟ್ರೋಫಿಯನ್ನು ಹಿಡಿದಿದ್ದ ಟ್ರಂಪ್, ಇನ್ಫಾಂಟಿನೊ ಅವರಿಂದ ಆತ್ಮೀಯ ಪರಿಚಯ ಪಡೆದರು. "ಇದು ನಿಮ್ಮ ಶಾಂತಿ ಬಹುಮಾನ" ಎಂದು ಇನ್ಫಾಂಟಿನೊ ಘೋಷಿಸಿದರು.

: ಟ್ರಂಪ್‌ ತಂಗಿದ ಹೋಟೆಲ್‌ ಸೂಟ್‌ನಲ್ಲಿ ಪುಟಿನ್‌ ವಿಶ್ರಾಂತಿ; ಇದರ ಬಾಡಿಗೆ ಎಷ್ಟು ಗೊತ್ತಾ?

ಪ್ರಶಸ್ತಿ ಸ್ವೀಕಾರದ ಕುರಿತು ಮಾತನಾಡಿದ ಟ್ರಂಪ್‌, ಫಿಫಾ ಶಾಂತಿ ಪ್ರಶಸ್ತಿ ನನ್ನ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಅವರು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸೇರಿದಂತೆ ತಮ್ಮ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು. ಇತರ ಎರಡು ಆತಿಥೇಯ ರಾಷ್ಟ್ರಗಳ ನಾಯಕರಾದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಮೆಕ್ಸಿಕನ್ ಅಧ್ಯಕ್ಷೆ ಕೌಡಿಯಾ ಶೀನ್‌ಬಾಮ್‌ ಅವರನ್ನು ಶ್ಲಾಘಿಸಿದರು."ಈ ಪ್ರಶಸ್ತಿ ನನಗೆ ಮಾತ್ರವಲ್ಲ, ಅಮೆರಿಕ ಮತ್ತು ವಿಶ್ವಕಪ್ ಆತಿಥೇಯ ರಾಷ್ಟ್ರಗಳಿಗೆ ಸೇರಿದ್ದು ಎಂದು ಟ್ರಂಪ್ ಹೇಳಿದರು.

ಇನ್ಸಾಂಟಿನೊ ಅವರು ಟ್ರಂಪ್ ಗಾಜಾದಲ್ಲಿ ಕದನ ವಿರಾಮ ಸ್ಥಾಪಿಸುವಲ್ಲಿನ ಪಾತ್ರಕ್ಕಾಗಿ ನೊಬೆಲ್‌ಗೆ ಅರ್ಹರು ಎಂದು ಸೂಚಿಸಿದ್ದರು. ಫಿಫಾ ಅಧ್ಯಕ್ಷರೊಂದಿಗಿನ ನಿಕಟ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್ ಅವರನ್ನು ಈ ಹೊಸ ಪ್ರಶಸ್ತಿಗೆ ಮುಂಚೂಣಿಯಲ್ಲಿ ಪರಿಗಣಿಸಲಾಗಿತ್ತು. "ಶಾಂತಿಗಾಗಿ ಅಸಾಧಾರಣ ಕ್ರಮಗಳನ್ನು ಗುರುತಿಸುವ ಮತ್ತು ವಿಶ್ವದಾದ್ಯಂತ ಜನರನ್ನು ಒಗ್ಗೂಡಿಸುವವರನ್ನು ಗೌರವಿಸುವ ಪ್ರಶಸ್ತಿ" ಎಂದು ಫಿಫಾ ಈ ಪ್ರಶಸ್ತಿಯನ್ನು ಕರೆದಿದೆ.