ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್

Adigas Yatra: ಜಪಾನ್ ಎಂದರೆ ಕೇವಲ ಒಂದು ದೇಶವಲ್ಲ, ಅದೊಂದು ವಿಸ್ಮಯ ಲೋಕ. ಪ್ರಾಚೀನ ಸಂಪ್ರದಾಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿ ಕೈಕೈ ಹಿಡಿದು ಸಾಗುತ್ತವೆ. ಜಪಾನ್‌ನ ಸಾಂಸ್ಕೃತಿಕ ಮತ್ತು ಆಹಾರ ವೈವಿಧ್ಯದ ರಾಜಧಾನಿ ಎಂಬ ಹೆಗ್ಗಳಿಕೆಗೆ ಒಸಾಕಾ ಪಾತ್ರವಾಗಿದೆ. ಜಪಾನ್‌ನಲ್ಲಿ ನೀವು ನೋಡಬೇಕಾದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 25: ಜಪಾನ್ ಎಂದರೆ ಕೇವಲ ಒಂದು ದೇಶವಲ್ಲ, ಅದೊಂದು ವಿಸ್ಮಯ ಲೋಕ. ಪ್ರಾಚೀನ ಸಂಪ್ರದಾಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿ ಕೈಕೈ ಹಿಡಿದು ಸಾಗುತ್ತವೆ. ನಿಮ್ಮ ಜಪಾನ್ (Japan) ಪ್ರವಾಸವನ್ನು ಅತ್ಯಂತ ಸ್ಮರಣೀಯವಾಗಿಸಲು ಅಡಿಗಾಸ್‌ ಯಾತ್ರಾ ಅದ್ಭುತವಾದ ಪ್ರವಾಸಿ ಪ್ಯಾಕೇಜ್‌ (Japan Tour) ಅನ್ನು ರೂಪಿಸಿದೆ. ಅಂದಹಾಗೆ ಜಪಾನ್‌ನಲ್ಲಿ ನೀವು ನೋಡಬೇಕಾದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ.

ಜಪಾನ್‌ನ ಸಾಂಸ್ಕೃತಿಕ ಮತ್ತು ಆಹಾರ ವೈವಿಧ್ಯದ ರಾಜಧಾನಿ ಎಂಬ ಹೆಗ್ಗಳಿಕೆಗೆ ಒಸಾಕಾ ಪಾತ್ರವಾಗಿದೆ. ವಿಶ್ವಪ್ರಸಿದ್ಧ ಒಸಾಕಾ ಅಕ್ವೇರಿಯಂ, ಅದ್ಭುತ ವಾಸ್ತುಶಿಲ್ಪದ ಉಮೆದಾ ಸ್ಕೈ ಬಿಲ್ಡಿಂಗ್ ಹಾಗೂ ಐತಿಹಾಸಿಕ ಒಸಾಕಾ ಕೋಟೆಯ ವೀಕ್ಷಣೆ ಅನನ್ಯ ಅನುಭವ ನೀಡುತ್ತದೆ. ಇದರೊಂದಿಗೆ ಡೋಟನ್‌ಬೋರಿ ಮತ್ತು ಶಿಂದಾಸಿಬಾಸಿಯಲ್ಲಿ ಶಾಪಿಂಗ್ ಮಾಡಲು ಹಾಗೂ ಸುತ್ತಾಡಲು ಬಿಡುವಿನ ಸಮಯ ಸಿಗಲಿದೆ.

ಕ್ಯೋಟೋ ಜಪಾನ್‌ನ ಸಾಂಸ್ಕೃತಿಕತೆಯ ಹೃದಯಭಾಗವಾಗಿದೆ. ಇಲ್ಲಿ ಹೊಳೆಯುವ ಕಿಂಕಾಕುಜಿ ದೇವಾಲಯ (ಗೋಲ್ಡನ್ ಪೆವಿಲಿಯನ್), ಪ್ರಶಾಂತವಾದ ಅರಾಸಿಯಾಮಾ ಬಿದಿರು ಕಾಡು (Bamboo Grove) ಹಾಗೂ ಸಾಂಪ್ರದಾಯಿಕ ಜಪಾನೀಸ್ ಟೀ ಸೆರೆಮನಿಯ (ಚಹಾ ಸಮಾರಂಭ) ವಿಶಿಷ್ಟ ಅನುಭವವನ್ನು ಆಸ್ವಾದಿಸಬಹುದು. ನಾರಾದಲ್ಲಿ ಐತಿಹಾಸಿಕ ತೋಡೈಜಿ ದೇವಾಲಯ ಮತ್ತು ಸಾವಿರಾರು ಸುಂದರ ಜಿಂಕೆಗಳಿಂದ ಕೂಡಿದ ನಾರಾ ಜಿಂಕೆ ಪಾರ್ಕ್ ಇಲ್ಲಿನ ಪ್ರಮುಖ ಆಕರ್ಷಣೆಗಳು.

Japan

ಹಿರೋಶಿಮಾ ನಗರವು ತನ್ನ ಇತಿಹಾಸ ಮತ್ತು ಶಾಂತಿಯ ಸಂದೇಶ ಸಾರುವ ತಾಣವಾಗಿದೆ. ಮಿಯಾಜಿಮಾ ದ್ವೀಪ (ಫೆರಿ ಸೇವೆ ಒಳಗೊಂಡಿದೆ), ತೇಲುವ ದೇವಸ್ಥಾನದಂತೆ ಭಾಸವಾಗುವ ಇತ್ಸುಕುಶಿಮಾ ದೇವಾಲಯ, ಇತಿಹಾಸದ ಗುರುತಾದ ಅಟಾಮಿಕ್ ಬಾಂಬ್ ಡೋಮ್ ಹಾಗೂ ಶಾಂತಿ ಸ್ಮಾರಕ ಸಂಗ್ರಹಾಲಯವು ನಿಮ್ಮನ್ನು ಜಪಾನ್‌ನ ರೋಚಕ ಚರಿತ್ರೆಯನ್ನು, ಅವರ ಅವಿಸ್ಮರಣೀಯ ಸಾಹಸಗಾಥೆಯನ್ನು ತೆರೆದಿಡುತ್ತದೆ.

ಪ್ರವಾಸಿಗರ ಅಚ್ಚುಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ

ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಭವ್ಯವಾದ ಇಂಪೀರಿಯಲ್ ಪ್ಯಾಲೇಸ್, ಐತಿಹಾಸಿಕ ಅಸಾಕುಸಾ ದೇವಾಲಯ ಮತ್ತು ನಕಮಿಸೆ ಸ್ಟ್ರೀಟ್, 350 ಮೀಟರ್ ಎತ್ತರದಿಂದ ನಗರದ ನೋಟ ನೀಡುವ ಟೋಕಿಯೊ ಸ್ಕೈಟ್ರಿ ಹಾಗೂ ಒಡೈಬಾ ಪ್ರದೇಶಗಳನ್ನು ಸುತ್ತಬಹುದು. ಜೊತೆಗೆ ಹವಾಮಾನಕ್ಕೆ ಅನುಗುಣವಾಗಿ ಮೌಂಟ್ ಫುಜಿ 5ನೇ ನಿಲ್ದಾಣ, ಓವಾಕುಡಾನಿ ಕಣಿವೆ, ಹಕೋನೆ ರೋಪ್‌ವೇ ಮತ್ತು ಅಶಿ ಸರೋವರದ ಕ್ರೂಸ್ ಪ್ರವಾಸದ ಮಜವನ್ನು ಇಮ್ಮಡಿಗೊಳಿಸಲಿವೆ. ಜಪಾನ್‌ನ ಬುಲೆಟ್ ರೈಲು ಪ್ರಯಾಣವು ಅದ್ಭುತವಾಗಿರುತ್ತದೆ. ಬುಲೆಟ್ ರೈಲಿನಲ್ಲಿ ಒಸಾಕಾದಿಂದ ಹಿರೋಶಿಮಾ ಹಾಗೂ ಹಿರೋಶಿಮಾದಿಂದ ಟೋಕಿಯೊಗೆ ಪ್ರಯಾಣಿಸುವ ರೋಮಾಂಚಕಾರಿ ಅನುಭವ ನಿಮ್ಮದಾಗುತ್ತದೆ.

Japan City

ಟೋಕಿಯೊದ ಟೀಮ್‌ ಲ್ಯಾಬ್‌ ಪ್ಲಾನೆಟ್ಸ್‌ನಲ್ಲಿ ಅತ್ಯಾಧುನಿಕ ಡಿಜಿಟಲ್ ಕಲಾ ಪ್ರದರ್ಶನಗಳ ವಿಸ್ಮಯಕಾರಿ ಲೋಕವನ್ನು ನೀವು ವೀಕ್ಷಿಸಬಹುದು. ಟೋಕಿಯೊ ಸ್ಕೈಟ್ರಿನಲ್ಲಿ 350 ಮೀಟರ್ ಎತ್ತರದಲ್ಲಿ ನಿಂತು ವರ್ಣರಂಜಿತ ನಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಅಡಿಗಾಸ್‌ ಯಾತ್ರಾದ ವಿಶೇಷತೆ ಏನೆಂದರೆ, ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುವುದು. 4 ಸ್ಟಾರ್‌ ಹೋಟೆಲ್‌ಗಳಲ್ಲಿ ಅತ್ಯುತ್ತಮ ಊಟೋಪಚಾರ, ಭಾರತೀಯ-ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್‌, ಸ್ಥಳೀಯ ಪರ್ಮಿಟ್‌, ಟ್ಯಾಕ್ಸ್‌, ಕಾಂಟಿನೆಂಟಲ್ ಬ್ರೇಕ್‌ ಫಾಸ್ಟ್‌, ವಿಮೆ, ವೀಸಾ ವ್ಯವಸ್ಥೆ ಸೇರಿದಂತೆ ಸಮಗ್ರ ಅನುಕೂಲಗಳನ್ನು ಒದಗಿಸುತ್ತಾರೆ. ಹೀಗಾಗಿ ನೆಮ್ಮದಿಯ ಪ್ರವಾಸದ ಅದ್ಭುತ ಅನುಭವ ನಿಮ್ಮದಾಗುತ್ತದೆ. ಅಕ್ಟೋಬರ್, ನವೆಂಬರ್ ತಿಂಗಳ ಪ್ರವಾಸಗಳಿಗೆ ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ಕೂಡಲೇ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ: 080-26616678/ 7022259008/ 9449478944. website: www.adigasyatra.com