ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮತ್ತೆ ಕಾಂಗ್ರೆಸ್‌ ವಿರುದ್ಧ ನಿಂತ್ರಾ ಶಶಿ ತರೂರ್‌; ಎಐ ಶೃಂಗಸಭೆ ಕುರಿತು ಹೇಳಿದ್ದೇನು?

ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗ ಸಭೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಶ್ಲಾಘಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಂದು ದಿನದ ಹಿಂದೆಯಷ್ಟೇ ಎಐ ಶೃಂಗಸಭೆಯ ಕುರಿತು ಮಾತನಾಡಿ ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನ ಎಂದಿದ್ದರು. ಇದರ ಮರುದಿನವೇ ಶಶಿ ತರೂರ್ ಎಐ ಶೃಂಗಸಭೆಯನ್ನು ಶ್ಲಾಘಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಎಐ ಶೃಂಗಸಭೆ (AI Summit) ತುಂಬಾ ಚೆನ್ನಾಗಿದೆ ಎಂದು ಕಾಂಗ್ರೆಸ್ (Congress) ಸಂಸದ ಶಶಿ ತರೂರ್ (MP Shashi Tharoor) ಹೇಳಿದ್ದಾರೆ. ಕಾಂಗ್ರೆಸ್ ಟೀಕೆಗಳ ನಡುವೆಯೇ ಶಶಿ ತರೂರ್ ಎಐ ಶೃಂಗಸಭೆಯನ್ನು ಶ್ಲಾಘಿಸಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಎಐ ಶೃಂಗಸಭೆಯ ಕುರಿತು ಮಾತನಾಡಿ ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನ ಎಂದಿದ್ದರು. ಇದರ ಬೆನ್ನಲ್ಲೇ ಶಶಿ ತರೂರ್ ಈ ಹೇಳಿಕೆ ನೀಡಿದ್ದಾರೆ. ಅವರು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಎಐ ಇಂಪ್ಯಾಕ್ಟ್ ಶೃಂಗಸಭೆಯ ಮೊದಲ ಎರಡು ದಿನಗಳು ಅತ್ಯಂತ ಚೆನ್ನಾಗಿ ಕಳೆದಿವೆ. ಕೆಲವು ದೋಷಗಳು ಯಾವುದೇ ದೊಡ್ಡ ಕಾರ್ಯಕ್ರಮಗಳಲ್ಲಿ ಸಂಭವಿಸಬಹುದು ಎಂದು ತಿಳಿಸಿದರು.

ನಾರಾಯಣ ಗುರುಗಳ ಕುರಿತಾದ ತಮ್ಮ ಹೊಸ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೃತಕ ಬುದ್ಧಿಮತ್ತೆ ಅಭಿವೃದ್ಧಿಯಲ್ಲಿ ಹೊಸದಾಗಿ ಸಂಯೋಜಿತವಾದ ಜಗತ್ತನ್ನು ನೋಡ ಬಯಸುವವರಿಗೆ ಇಲ್ಲಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ವಿಶ್ವ ನಾಯಕರ ಹಾಜರಾತಿ ಹೆಚ್ಚು ಪ್ರಭಾವ ಬೀರಲಿದೆ. ಮೊದಲ ಎರಡು ದಿನಗಳ ಕಾರ್ಯಕ್ರಮ ಅತ್ಯಂತ ಚೆನ್ನಾಗಿ ನಡೆದವು. ಕೆಲವು ದೋಷಗಳು ಯಾವುದೇ ದೊಡ್ಡ ಕಾರ್ಯಕ್ರಮಗಳಲ್ಲಿ ಸಂಭವಿಸಬಹುದು ಎಂದು ಹೇಳಿದರು.

ಬಾಂಗ್ಲಾ ಹಿಂದೂ ಪೊಲೀಸ್ ಹತ್ಯೆ ಪ್ರಕರಣದ ಆರೋಪಿ ಪಲಾಯನಕ್ಕೆ ಯತ್ನ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆ ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನ ಎಂದಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ಹಿರಿಯ ನಾಯಕರು ನಿರ್ವಹಣೆಯಿಂದ ದೇಶಕ್ಕೆ ಮುಜುಗರ ಎಂದು ಹೇಳಿದ್ದರು.

ನನಗೆ ಶೃಂಗಸಭೆಗೆ ಹೋಗಲು ಅವಕಾಶ ಸಿಗದಿದ್ದರೂ ನಾಳೆ ನಾನು ಅಲ್ಲಿ ಮಾತನಾಡುತ್ತಿದ್ದೇನೆ. ವಿಶ್ವದ ಹಲವಾರು ನಾಯಕರು ಇಲ್ಲಿದ್ದಾರೆ. ಅವರು ಎಐ ಅಭಿವೃದ್ಧಿಯಲ್ಲಿ ಹೊಸದಾಗಿ ಸಂಯೋಜಿತ ಜಗತ್ತನ್ನು ನೋಡಲು ಬಯಸುವ ಬಲವಾದ ಸಂದೇಶದೊಂದಿಗೆ ಇಲ್ಲಿಗೆ ಬಂದಿದ್ದಾರೆ ಎಂದರು.

ಭಾರತದಿಂದ ರಫೇಲ್ ಜೆಟ್‌ಗಳ ಖರೀದಿ ಮತ್ತು ಒಪ್ಪಂದದ ಮೇಕ್ ಇನ್ ಇಂಡಿಯಾ ಘಟಕದ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ತರೂರ್, ಅದರ ಕೆಲವು ಭಾಗಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಇದು ಒಪ್ಪಂದದ ಬಹಳ ಮುಖ್ಯವಾದ ಅಂಶ. ಯಾಕೆಂದರೆ ಇದು ದೇಶದ ರಕ್ಷಣೆಯನ್ನು ಬಲಪಡಿಸುವ ಭಾಗವಾಗಿದೆ. ಜೊತೆಗೆ ರಕ್ಷಣಾ ವಲಯದಲ್ಲಿ ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಭಾರತಕ್ಕೆ ರಕ್ಷಣೆ ಮುಖ್ಯ. ನಾವು ಯುದ್ಧಕ್ಕೆ ಹೋಗಲು ಬಯಸುವವರಲ್ಲ. ಇದು ಅಕ್ಷರಶಃ ರಕ್ಷಣಾತ್ಮಕ ರಕ್ಷಣೆಯಾಗಿದೆ. ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆ ವಿಷಯದಲ್ಲಿ ನಾನು ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದು ಅವರು ಹೇಳಿದರು.

ಸೇನೆಯಿಂದ ತಪ್ಪಿಸಿಕೊಳ್ಳಲು ತಲೆ, ಗಡ್ಡ ಬೋಳಿಸಿಕೊಂಡ ಜೈಶ್ ಕಮಾಂಡರ್‌ ಸೈಫುಲ್ಲಾ; ಮಹಿಳೆಯರ ಉಡುಪು, ಬುರ್ಖಾ ಧರಿಸಿ ಓಡಾಟ

ಮುಂಬರುವ ಚಿತ್ರ ಕೇರಳ ಸ್ಟೋರಿ 2 ಕುರಿತು ಮಾತನಾಡಿದ ಅವರು, ಮೊದಲ ಚಿತ್ರ ಕೇರಳ ಸ್ಟೋರಿ ದ್ವೇಷಪೂರಿತ ಚಿತ್ರ. ಸಾವಿರಾರು ಜನರನ್ನು ಮತಾಂತರಿಸಲಾಗಿದೆ. ಅದು ನಿಜವಲ್ಲ. ಹಲವಾರು ವರ್ಷಗಳಿಂದ ಇಂತಹ ಸುಮಾರು 30 ಪ್ರಕರಣಗಳು ನಡೆದಿವೆ ಎಂದು ನಾನು ಭಾವಿಸುತ್ತೇನೆ. ನಮ್ಮದು ಬಹಳ ದೊಡ್ಡ ದೇಶ. ಅಲ್ಲಿ, ಇಲ್ಲಿ ಒಂದು ಪ್ರಕರಣ ಸಂಭವಿಸಿದರೆ ಅದನ್ನು ದೊಡ್ಡ ಕಥೆಯನ್ನಾಗಿ ಮಾಡಿ ಪ್ರಚಾರಕ್ಕಾಗಿ ಬಳಸಬೇಕೆಂದು ಅರ್ಥವಲ್ಲ ಎಂದರು.

ವಿದ್ಯಾ ಇರ್ವತ್ತೂರು

View all posts by this author