Earthquake: ದೆಹಲಿ ಬೆನ್ನಲ್ಲೇ ಬಿಹಾರ, ಸಿಕ್ಕಿಂನಲ್ಲೂ ಭೂಕಂಪ; 2.3 ತೀವ್ರತೆ ದಾಖಲು
ಬೆಳ್ಳಂ ಬೆಳಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ ಐದು ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದೆ. ಕೇಂದ್ರಬಿಂದು ದೆಹಲಿಯ ಬಳಿ ಇದೆ ಎಂದು ವರದಿಯಾಗಿದೆ. ಭೂಮಿ ಕಂಪಿಸಿದ ಅನುಭವ ಆಗುತ್ತಿದ್ದಂತೆ ಜನ ಭಯಭೀತಗೊಂಡು ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಇದೀಗ ಇದರ ಬೆನ್ನಲ್ಲೇ ಬಿಹಾರ ಮತ್ತು ಸಿಕ್ಕಿಂನ ಕೆಲವು ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.


ಪಟನಾ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳ್ಳಂ ಬೆಳಗ್ಗೆ ಭೂಕಂಪ(Earthquake) ಸಂಭವಿಸಿದ್ದು, ಗಾಢ ನಿದ್ದೆಯಲ್ಲಿದ್ದ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಇದೀಗ ಇದರ ಬೆನ್ನಲ್ಲೇ ಬಿಹಾರ ಮತ್ತು ಸಿಕ್ಕಿಂನ ಕೆಲವು ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಸೋಮವಾರ ಬೆಳಿಗ್ಗೆ 08.02 ಕ್ಕೆ ಬಿಹಾರದ ಸಿವಾನ್‌ನಲ್ಲಿ ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಬೆಳಿಗ್ಗೆ 08.13 ಕ್ಕೆ ಸಿಕ್ಕಿಂನ ಲಾಚುಂಗ್‌ನಲ್ಲಿ 5 ಕಿ.ಮೀ ಆಳದಲ್ಲಿ 2.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.
An earthquake with a magnitude of 4.0 on the Richter Scale hit Siwan, Bihar at 08:02 IST today
— ANI (@ANI) February 17, 2025
(Source - National Center for Seismology) pic.twitter.com/mNcVErOpq6
ಬೆಳ್ಳಂ ಬೆಳಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ ಐದು ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದೆ. ಕೇಂದ್ರಬಿಂದು ದೆಹಲಿಯ ಬಳಿ ಇದೆ ಎಂದು ವರದಿಯಾಗಿದೆ. ಭೂಮಿ ಕಂಪಿಸಿದ ಅನುಭವ ಆಗುತ್ತಿದ್ದಂತೆ ಜನ ಭಯಭೀತಗೊಂಡು ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಬೆಳಿಗ್ಗೆ ಗಂಟೆ 5:36:55 ಕ್ಕೆ ಸಂಭವಿಸಿದೆ. ಕೆಲವು ಸೆಕೆಂಡುಗಳ ಕಾಲ ನಡೆದ ಕಂಪನವು ವಸತಿ ಪ್ರದೇಶಗಳಲ್ಲಿ ಅನುಭವಿಸುವಷ್ಟು ಪ್ರಬಲವಾಗಿದ್ದು, ನಿವಾಸಿಗಳಲ್ಲಿ ಭಯಭೀತರಾಗಿದ್ದರು.
ಈ ಸುದ್ದಿಯನ್ನೂ ಓದಿ: Delhi Earthquake: ದೆಹಲಿಯಲ್ಲಿ ಪ್ರಬಲ ಭೂಕಂಪ; 4.0 ತೀವ್ರತೆ ದಾಖಲು
ಪ್ರಧಾನಿ ನರೇಂದ್ರ ಮೋದಿ ಸಂದೇಶ
ಇನ್ನ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಶಾಂತವಾಗಿರಿ, ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಎಂದಿದ್ದಾರೆ.ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕಂಪನಗಳು ಅನುಭವಕ್ಕೆ ಬಂದಿವೆ. ಎಲ್ಲರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು, ಘಟನೆಯ ನಂತರ ಉಂಟಾಗಬಹುದಾದ ಆಘಾತಗಳ ಬಗ್ಗೆ ಎಚ್ಚರದಿಂದಿರಲು ಹೇಳಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇಡುತ್ತಿದ್ದಾರೆ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.