ಇಂದಿನ ಇಂಗ್ಲೆಂಡ್ ವಿರುದ್ಧದ ಸೆಮಿ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಬುಮ್ರಾ
IND vs ENG T20 World Cup Semi-Final: ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್ ಹಾಗೂ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೋಸ್ ಬಟ್ಲರ್ ಅವರು ಫಾರ್ಮ್‌ನಲ್ಲಿ ಇಲ್ಲ. ಸೀಮಿತ ಓವರ್‌ಗಳಲ್ಲಿ ಅಮೋಘ ಸಾಧಕರಾಗಿರುವ ಬಟ್ಲರ್ ಅವರು ಇಲ್ಲಿ ಲಯಕ್ಕೆ ಮರಳದಂತೆ ನೋಡಿಕೊಳ್ಳುವತ್ತ ಬೌಲರ್‌ಗಳು ಚಿತ್ತ ಹರಿಸಬೇಕಿದೆ.
Jasprit Bumrah -
ಮುಂಬಯಿ, ಮಾ.5: ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯುವ 2026 ರ ಟಿ20 ವಿಶ್ವಕಪ್‌ನ 2 ನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಪರಸ್ಪರ ಸೆಣಸಾಡಲು ಸಜ್ಜಾಗಿವೆ. ಈ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಒಂದು ವಿಕೆಟ್ ಕಿತ್ತರೆ ದಿಗ್ಗಜರ ಜತೆ ಎಲೈಟ್ ಪಟ್ಟಿ ಸೇರಲಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಬುಮ್ರಾಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧ ಅವರು ಒಂದು ವಿಕೆಟ್ ಕಿತ್ತರೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 42 ನೇ ಆಟಗಾರರಾಗಲಿದ್ದಾರೆ. ಹಾಲಿ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆದವರ ಪಟ್ಟಿಯಲ್ಲಿ 17 ನೇ ಸ್ಥಾನದಲ್ಲಿದ್ದಾರೆ. 6 ಪಂದ್ಯಗಳಲ್ಲಿ, ಬುಮ್ರಾ ಭಾರತ ತಂಡದ ಪರ 9 ವಿಕೆಟ್ ಕಬಳಿಸಿದ್ದಾರೆ.
ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್ ಹಾಗೂ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೋಸ್ ಬಟ್ಲರ್ ಅವರು ಫಾರ್ಮ್‌ನಲ್ಲಿ ಇಲ್ಲ. ಸೀಮಿತ ಓವರ್‌ಗಳಲ್ಲಿ ಅಮೋಘ ಸಾಧಕರಾಗಿರುವ ಬಟ್ಲರ್ ಅವರು ಇಲ್ಲಿ ಲಯಕ್ಕೆ ಮರಳದಂತೆ ನೋಡಿಕೊಳ್ಳುವತ್ತ ಬೌಲರ್‌ಗಳು ಚಿತ್ತ ಹರಿಸಬೇಕಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಸತತ ಮೂರನೇ ಟಿ20 ವಿಶ್ವಕಪ್ ಸೆಮಿಫೈನಲ್ ಮುಖಾಮುಖಿ ಇದಾಗಿದೆ. 2022ರ ಟೂರ್ನಿಯ ನಾಲ್ಕರ ಘಟ್ಟದಲ್ಲಿ ಇಂಗ್ಲೆಂಡ್ ತಂಡವು ಭಾರತಕ್ಕೆ ಸೋಲುಣಿಸಿತ್ತು. 2024ರಲ್ಲಿ ಗಯಾನದಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಭಾರತ ತಂಡವು ಸೇಡು ತೀರಿಸಿಕೊಂಡಿತ್ತು. ಆ ವರ್ಷ ಚಾಂಪಿಯನ್ ಕೂಡ ಆಗಿತ್ತು.
ಹೈವೋಲ್ಟೇಜ್ ಭಾರತ-ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿ ಪಂದ್ಯದ ಪಿಚ್ ರಿಪೋರ್ಟ್
ಕಳೆದ ಎರಡು ಪಂದ್ಯಗಳಲ್ಲಿ ದುಬಾರಿಯಾಗಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಅರ್ಶ್‌ದೀಪ್ ಸಿಂಗ್ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಸ್ಥಾನದಲ್ಲಿ ಕುಲ್‌ದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವಕಾಶ ಪಡೆಯುವ ಸಾಧ್ಯತೆ ಅಧಿಕ. ಉಭಯ ಆಟಗಾರರು ಈ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಕೂಡ ಹೊಂದಿದ್ದಾರೆ.
ಸಂಭಾವ್ಯ ತಂಡಗಳು
ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಹ್ಯಾರಿ ಬ್ರೂಕ್ (ನಾಯಕ), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಜೇಮೀ ಓವರ್ಟನ್, ಜೋಫ್ರಾ ಆರ್ಚರ್, ಆದಿಲ್ ರಶೀದ್.
ಭಾರತ: ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್‌ದೀಪ್ ಯಾದವ್.
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜೀಯೊಹಾಟ್‌ಸ್ಟಾರ್
ಆರಂಭ: ರಾತ್ರಿ 7ಕ್ಕೆ