ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India: ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಏರ್‌ ಇಂಡಿಯಾದಿಂದ ಮತ್ತೊಂದು ಎಡವಟ್ಟು...! ಏನದು ಅಂತೀರಾ..?

ಏರ್ ಇಂಡಿಯಾ ಸಂಸ್ಥೆ ಮತ್ತೆ ಮುನ್ನೆಲೆಗೆ ಬಂದಿದ್ದು, ‘ವಿಮಾನದಲ್ಲಿನ 12 ಶೌಚಾಲಯಗಳಲ್ಲಿ 11 ಶೌಚಾಲಯಗಳು ಬ್ಲಾಕ್ ಆಗಿ ಟೇಕ್ ಅಫ್ ಆಗಿದ್ದ ವಿಮಾನ ಪ್ರಯಾಣ ಆರಂಭಿಸಿ ಐದು ಗಂಟೆಯಲ್ಲಿಯೇ ಕೆಳಗಿಳಿದಿದೆ. ಶಿಕಾಗೋದಿಂದ ಹೊಸದಿಲ್ಲಿಗೆ ಆಗಮಿಸುತ್ತಿದ್ದ ವಿಮಾನದ ಶೌಚಾಲಯಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಮೀಸಲಾಗಿ ಇದ್ದ 1 ಶೌಚಾಲಯ ಹೊರತುಪಡಿಸಿ ಉಳಿದವುಗಳ ಬಳಕೆ ಅಸಾಧ್ಯವಾಗಿತ್ತು.

ಏರ್‌ ಇಂಡಿಯಾ ವಿಮಾನ ಟಾಯ್ಲೆಟ್‌

ಬೆಂಗಳೂರು: ಕಳೆದ ಕೆಲದಿನಗಳಿಂದ ಏರ್ ಇಂಡಿಯಾ(Air India) ವಿಮಾನ ಸಂಸ್ಥೆ ವಿವಾದದ ಕಾರಣದಿಂದಲ್ಲೇ ಮುನ್ನಲೆಗೆ ಬರುತ್ತಿದ್ದು, ಇತ್ತೀಚೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟಾಟಾ ಗ್ರೂಪ್ (Tata Group) ಒಡೆತನದ ಏರ್ ಇಂಡಿಯಾ ಸಂಸ್ಥೆ ಮುರಿದ ಸೀಟು ನೀಡಿದ್ದಕ್ಕಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲೇ ವೃದ್ಧೆಯೊಬ್ಬರಿಗೆ ಮುಂಗಡವಾಗಿ ಬುಕ್​ ಮಾಡಿದ್ದ ವ್ಹೀಲ್​ಚೇರ್​ ಕೊಡಲು ನಿರಾಕರಿಸಿದ್ದು, ಇದರ ಪರಿಣಾಮವಾಗಿ 82 ವರ್ಷದ ಮಹಿಳೆ ನಡೆಯಲಾಗದೆ ಬಿದ್ದು ಐಸಿಯುನಲ್ಲಿ ದಾಖಲಾಗಿರುವ ಘಟನೆ ವರದಿಯಾಗಿತ್ತು. ಅಲ್ಲದೇ ಆ ವೃದ್ಧೆಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ ತೀವ್ರ ನಿಗಾದಲ್ಲಿರಲಾಗಿತ್ತು.

ಇದೀಗ ಮತ್ತೊಂದ ಅವಾಂತರದಿಂದಾಗಿ ಏರ್ ಇಂಡಿಯಾ ಸಂಸ್ಥೆ ಮತ್ತೇ ಮುನ್ನೆಲೆಗೆ ಬಂದಿದ್ದು, ‘ವಿಮಾನದಲ್ಲಿನ 12 ಶೌಚಾಲಯಗಳಲ್ಲಿ 11 ಶೌಚಾಲಯಗಳು ಬ್ಲಾಕ್ ಆಗಿ ಟೇಕ್ ಅಫ್ ಆಗಿದ್ದ ವಿಮಾನ ಪ್ರಯಾಣ ಆರಂಭಿಸಿ ಐದು ಗಂಟೆಯಲ್ಲಿಯೇ ಕೆಳಗಿಳಿದಿದೆ. ಶಿಕಾಗೋದಿಂದ ಹೊಸದಿಲ್ಲಿಗೆ ಆಗಮಿಸುತ್ತಿದ್ದ ವಿಮಾನದ ಶೌಚಾಲಯಗಳಲ್ಲಿ ಸಮಸ್ಯೆ ಉಂಟಾಗಿ ಬಳಕೆಗೆ ಅರ್ಹವಲ್ಲದ ಪರಿಸ್ಥಿತಿಯಲ್ಲಿತ್ತು. ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಮೀಸಲಾಗಿದ್ದ 1 ಶೌಚಾಲಯ ಹೊರತುಪಡಿಸಿ ಉಳಿದವುಗಳ ಬಳಕೆ ಅಸಾಧ್ಯವಾಗಿತ್ತು. ಹೀಗಾಗಿ, 300 ಪ್ರಯಾಣಿಕರು ಭಾರೀ ತೊಂದರೆ ಅನುಭವಿಸಿದ್ದು, ಶಿಕಾಗೋದಿಂದ ವಿಮಾನ ಟೇಕಾಫ್ ಆದ ವೇಳೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

ಹೌದು ಅಮೆರಿಕದ ಶಿಕಾಗೋ ದಿಂದ ಹೊಸದಿಲ್ಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಸ್ವಚ್ಛತೆ ಸಮಸ್ಯೆ ಎದುರಾಗಿದ್ದರಿಂದ ಮತ್ತೆ ಶಿಕಾಗೋಗೆ ಹಿಂದುರಿಗಿದೆ. ಮಾ.6ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏರ್ ಇಂಡಿಯಾದ ಅವ್ಯವಸ್ಥೆಯಿಂದ ಸುಮಾರು 10 ಗಂಟೆಗಳ ವಿಮಾನ ತಡವಾಗಿದ್ದು, ಪ್ರಯಾಣಿಕರು ನಿಗದಿತ ಸಮಯಕ್ಕೆ ತಲುಪದೇ ಪರದಾಡಿದ್ದಾರೆ. ಇನ್ನು ಈ ವೇಳೆ ವಿಮಾನದ ಸಿಬ್ಬಂದಿಗಳ ಜೊತೆ ಜತೆಗೆ ಕೆಲವು ಪ್ರಯಾಣಿಕರು ವಾಗ್ವಾದ ನಡೆಸುತ್ತಿದ್ದಾರೆ ಎನ್ನವಾಗಿರುವ ವೀಡಿಯೋಗಳೂ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಆಗಿವೆ.

ಈ ಸುದ್ದಿಯನ್ನು ಓದಿ: Viral Video: ಹೆತ್ತ ತಂದೆಗೇ ಕೋಲಿನಿಂದ ಥಳಿಸಿದ ಹೆಣ್ಣು ಮಕ್ಕಳು; ಆತ ಮೃತಪಟ್ಟ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್‌

ಈ ಕುರಿತು ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಸಂಸ್ಥೆ, ಪ್ರಯಾಣಿಕರಿಗೆ ಆದ ಸಮಸ್ಯೆಗೆ ವಿಷಾಧಿಸುತ್ತೇವೆ, ಈ ಬಗ್ಗೆ ಮಾತನಾಡಿರುವ ವಿಮಾನದ ಸಿಬ್ಬಂದಿ ಕೆಲ ಪ್ರಯಾಣಿಕರು ಪೇಪರ್‌, ಒಳಉಡುಪು ಹಾಗೂ ಕೆಲ ಪ್ಲಾಸ್ಟಿಕ್‌ ವಸ್ತುಗಳನ್ನ ಟಾಯ್ಲೆಟ್‌ನೊಳಗೆ ಹಾಕಿ ಫ್ಲಾಶ್ ಮಾಡಿರೋದೇ ಈ ಸಮಸ್ಯೆಗೆ ಕಾರಣವಾಗಿದ್ದು, ಹಿನ್ನಲೆ ವಿಮಾನದಲ್ಲಿದ್ದ 12 ಟಾಯ್ಲೆಟ್‌ಗಳಲ್ಲಿ 11 ಟಾಯ್ಲೆಟ್‌ಗಳು ಬ್ಲಾಕ್‌ ಆಗಿ ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದವು. ಹೀಗಾಗಿ ಮುಂದಿನ ನಿಲ್ದಾಣದಲ್ಲಿ ಪ್ಲೈಟ್ ಅನ್ನು ಲ್ಯಾಂಡ್ ಮಾಡಲು ರೂಟ್ ವೇ ಗಮನಿಸಿದಾಗ, ವಿಮಾನ ಅಟ್ಲಾಂಟಿಕ್‌ ಸಾಗರದ ಮೇಲೆ ಅಂದ್ರೆ ಗ್ರೀನ್‌ಲ್ಯಾಂಡ್‌ ಹಾದು ಹೋಗುತಿತ್ತು. ಇನ್ನು ಹತ್ತಿರಫ಼ ಯುರೋಪಿಯನ್‌ ನಗರಗಳಲ್ಲಿ ವಿಮಾನ ಇಳಿಸೋಣ ಅಂದರೆ ರಾತ್ರಿ ಈ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಇರುವುದಿಲ್ಲ . ಹಾಗಾಗಿ ಬೇರೆ ಉಪಾಯ ಇಲ್ಲದೇ ವಿಮಾನವನ್ನ ದೆಹಲಿ ಬದಲು ಶಿಕಾಗೋದತ್ತ ಹಿಂದಿರುಗಿಸಲಾಯಿಯು ಎಂದು ಏರ್‌ ಇಂಡಿಯಾ ಸಂಸ್ಥೆ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದೆ. ಅಲ್ಲದೇ ಪ್ರಯಾಣಿಕರ ಹಿತದೃಷ್ಟಿಯಿಂದಾಗಿ ಚಿಕಾಗೋಗೆ ಹಿಂದಿರುಗುವ ನಿರ್ಧಾರ ಮಾಡಲಾಯಿತು ಎಂದು ಏರ್ ಇಂಡಿಯಾ ತಿಳಿಸಿದ್ದು, ಚಿಕಾಗೋದಲ್ಲಿ ಇಳಿದ ಬಳಿಕ, ಎಲ್ಲಾ ಪ್ರಯಾಣಿಕರಿಗೆ ಹೋಟೆಲ್ ವಸತಿ ಮತ್ತು ದೆಹಲಿಗೆ ಪ್ರಯಾಣ ಮುಂದುವರಿಸಲು ಪರ್ಯಾಯ ವಿಮಾನ ಆಯ್ಕೆಗಳು ಸೇರಿದಂತೆ ತಕ್ಷಣದ ಸಹಾಯವನ್ನು ನೀಡಲಾಗಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.

ಇನ್ನು 'ವಿಮಾನದ ಸಿಬ್ಬಂದಿಗೆ ಈ ಸಮಸ್ಯೆ ಬಗ್ಗೆ ಮೊದಲೇ ಮಾಹಿತಿ ಇತ್ತು. ಆದರೂ ಅವರು ವಿಮಾನ ಟೇಕ್‌ ಆಫ್‌ ಮಾಡಿದರು. ಅದಲ್ಲದೆ, ವಿಮಾನದ ಕ್ಯಾಪ್ಟನ್‌ ಕೂಡ ಫ್ಲೈಟ್‌ ಶಿಕಾಗೋಗೆ ಪುನ: ಪ್ರಯಾಣ ಮಾಡುತ್ತಿದೆ ಅನ್ನೋದು ತಿಳಿಸಿರಲಿಲ್ಲ ಎಂದಿದ್ದಾರೆ. ಇನ್ನೂ ಕೆಲ ಪ್ರಯಾಣಿಕರು ವಿಮಾನ ಶಿಕಾಗೋದಿಂದ ದೆಹಲಿಯತ್ತ ಟೇಕ್‌ ಆಫ್‌ ಆಗುವಾಗಲೇ ಟಾಯ್ಲೆಟ್‌ ಪ್ಲಾಬ್ಲಂ ಬಗ್ಗೆ ಕ್ಯಾಪ್ಟನ್‌ಗೆ ಗೊತ್ತಿತ್ತು. ಆದರೂ ಮ್ಯಾನೇಜ್‌ ಮಾಡಬಹುದು ಎಂದು ಟೇಕ್‌ ಆಫ್‌ ಮಾಡಿದ್ರು ಎಂದು ಆರೋಪಿಸಿದ್ದಾರೆ.