ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೆತ್ತ ತಂದೆಗೇ ಕೋಲಿನಿಂದ ಥಳಿಸಿದ ಹೆಣ್ಣು ಮಕ್ಕಳು; ಆತ ಮೃತಪಟ್ಟ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್‌

ಮಧ್ಯಪ್ರದೇಶದ ಮೊರೆನಾದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಕೆಲ ದಿನಗಳ ನಂತರ ಆತನ ಹೆಣ್ಣುಮಕ್ಕಳು ಆತನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ಮನಕಲಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವ್ಯಕ್ತಿಯ ಹೆಣ್ಣು ಮಕ್ಕಳು ಆತನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.

ಹೆತ್ತ ತಂದೆಗೇ ಕೋಲಿನಿಂದ  ಥಳಿಸಿದ  ಪಾಪಿ ಹೆಣ್ಣು ಮಕ್ಕಳು

ವೈರಲ್‌ ವಿಡಿಯೋ

Profile Vishakha Bhat Mar 11, 2025 11:52 AM

ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಕೆಲ ದಿನಗಳ ನಂತರ ಆತನ ಹೆಣ್ಣುಮಕ್ಕಳು ಆತನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ಮನಕಲಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ (Viral Video) ವೈರಲ್‌ ಆಗಿದೆ. ಮೃತ ವ್ಯಕ್ತಿಯನ್ನು ಹರೇಂದ್ರ ಮೌರ್ಯ ಎಂದು ಗುರುತಿಸಲಾಗಿದ್ದು, ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಇಲ್ಲ ಕೊಲೆಯೇ ? ಎಂಬುದು ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ಎಲೆಕ್ಟ್ರಿಷಿಯನ್ ಆಗಿದ್ದ ಹರೇಂದ್ರ ಮೂರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಹೊಂದಿದ್ದ. ನೆರೆಹೊರೆಯವರು ಮತ್ತು ಸಂಬಂಧಿಕರು ಹೇಳುವಂತೆ ಹರೇಂದ್ರ ಆಗಾಗ ತನ್ನ ಪತ್ನಿಯೊಡನೆ ಜಗಳವಾಡುತ್ತಿದ್ದ.

ಮಾರ್ಚ್ 1 ರಂದು, ಆತ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಆಯೋಜಿಸಿದ್ದ. ಮಕ್ಕಳ ಮದುವೆಯ ನಂತರ ಪತ್ನಿ ವಿಚ್ಛೇದನ ನೀಡಿ ತಂದೆ ಮನೆಗೆ ತೆರಳುವುದಾಗಿ ಹೇಳಿದ್ದಳು. ಈ ವರ್ತನೆಯಿಂದ ಸಾಕಷ್ಟು ಮನನೊಂದ ಹರೇಂದ್ರ ಒಂದು ಕೋಣೆಯಲ್ಲಿ ತನ್ನನ್ನು ತಾನು ಬಂಧಿಸಿಕೊಂಡು ಇದ್ದ. ಆತ ಹೊರಗೆ ಬಾರದಿದ್ದಾಗ, ಕುಟುಂಬದವರು ಆತನಿಗೋಸ್ಕರ ಹುಡುಕತೊಡಗಿದ್ದರು. ನಂತರ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ತಂದೆಗೆ ಹೆಣ್ಣು ಮಕ್ಕಳು ಹೊಡೆಯುತ್ತಿರುವ ವಿಡಿಯೋ



ಸಾವಿನ ನಂತರ, ಮನೆಯಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದ ಕಾರಣ ಹರೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಆದರೆ, ಆತನ ಕುಟುಂಬಸ್ಥರು ಇದೊಂದು ಕೊಲೆ ಎಂದು ಹೇಳಿದ್ದಾರೆ. ಈ ಆರೋಪಗಳ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ವೀಡಿಯೊವೊಂದು ಹೊರಬಂದಿದೆ. ಈ ಕ್ಲಿಪ್‌ನಲ್ಲಿ ಹರೇಂದ್ರ ಪತ್ನಿ ಆತನ ಕಾಲು ಹಿಡಿದುಕೊಂಡಿರುವುದು ಕಾಣಿಸುತ್ತದೆ. ಹೆಣ್ಣುಮಕ್ಕಳು ಆತನನ್ನು ಕೋಲಿನಿಂದ ಹೊಡೆಯುತ್ತಿದ್ದಾರೆ. ಆತ ನೋವಿನಿಂದ ಕಿರುಚುತ್ತಿರುವುದು ಕಂಡುಬರುತ್ತದೆ. ಮಗ ಹೊಡೆಯುವುದನ್ನು ತಪ್ಪಿಸಲು ಬರುತ್ತಿರುವುದು ಕಂಡು ಬಂದಿದೆ.

ಈ ಸುದ್ದಿಯನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿ ಯೋಧರೊಂದಿಗೆ ಮಹಿಳೆಯ ಅನುಚಿತವಾಗಿ ವರ್ತನೆ; ವಿಡಿಯೊ ವೈರಲ್‌

ಫೆಬ್ರವರಿ 1 ರಂದು ನಡೆದ ಈ ವೈರಲ್ ವಿಡಿಯೋ ಭಾರೀ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಆ ವ್ಯಕ್ತಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಶವವನ್ನು ಗ್ವಾಲಿಯರ್ ವೈದ್ಯಕೀಯ ಕಾಲೇಜಿಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಾಲಿ ಚಂದೋರಿಯಾ ತಿಳಿಸಿದ್ದಾರೆ.