ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಲ್ಯದಲ್ಲೇ ಆರ್‌ಎಸ್‌ಎಸ್‌ಗೆ ಎಂಟ್ರಿ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಕ್ರಾಂತಿ: ನೂತನ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿಯ ಅಪರೂಪದ ಪಾಲಿಟಿಕಲ್‌ ಜರ್ನಿ ಇದು

Pralhad Joshi: ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ ಜೋಶಿ ಆಯ್ಕೆಯಾಗಿದ್ದಾರೆ. ಈಗಾಗಲೇ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾಗಿರುವಚ ಅವರಿಗೆ ಹೆಚ್ಚುವರಿಯಾಗಿ ಶಿಕ್ಷನ ಖಾತೆ ನೀಡಲಾಗಿದೆ. ಅವರ ರಾಜಕೀಯ ಜರ್ನಿಯ ವಿವರ ಇಲ್ಲಿದೆ.

ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ)

ಬೆಂಗಳೂರು, ಜು. 25: ಶನಿವಾರ ದೇಶ ಬಹುದೊಡ್ಡ ರಾಜಕೀಯ ಸ್ಥಿತ್ಯಂತರಕ್ಕೆ ಸಾಕ್ಷಿಯಾಯಿತು. ಸಿಜೆಪಿ, ಯುವ ಜನತೆಯ ಆಕ್ರೋಶಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ (Dharmendra Pradhan) ರಾಜೀನಾಮೆ ನೀಡಿದರೆ, ಶಿಕ್ಷಣ ಇಲಾಖೆಯ ಜವಾಬ್ದಾರಿ ಕರ್ನಾಟಕದ ಸಜ್ಜನ ರಾಜಕಾರಣಿ ಎಂದೇ ಕರೆಸಿಕೊಳ್ಳುವ, ಬಿಜೆಪಿ ನಾಯಕ, ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರ ಹೆಗಲ ಮೇಲೆ ಬಿತ್ತು. ಆ ಮೂಲಕ ಕರ್ನಾಟಕದ ಪಾಲಿಗೆ ಬಹುದೊಡ್ಡ ಜಬಾಬ್ದಾರಿ ಸಿಕ್ಕಂತಾಗಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ (MNRE) ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಲ್ಹಾದ್‌ ಜೋಶಿ ಹೆಚ್ಚುವರಿಯಾಗಿ ಶಿಕ್ಷಣ ಖಾತೆ ಲಭಿಸಿದೆ.

64 ವರ್ಷದ ಜೋಶಿ 2024ರಲ್ಲಿ ಧಾರವಾಡ ಕ್ಷೇತ್ರದ ಸಂಸದರಾಗಿ 5ನೇ ಬಾರಿಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದವರು. ಮೋದಿ ಟೀಮ್‌ನ ಪ್ರಮುಖ ನಾಯಕರಾಗಿರುವ ಅವರಿಗೆ ಸತತ 2ನೇ ಬಾರಿಗೆ ಕೇಂದ್ರದಲ್ಲಿ ಸಚಿವ ಸ್ಥಾನವೂ ಸಿಕ್ಕಿತು. 2019ರಲ್ಲಿ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಳ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ ಅವರಿಗೆ ಅಪಾರ ಅನುಭವದ ಆಧಾರದಲ್ಲಿ ಇದೀಗ ಶಿಕ್ಷಣ ಇಲಾಖೆಯಂತಹ ಸೂಕ್ಷ್ಮ ಮತ್ತು ಪ್ರಮುಖ ಇಲಾಖೆ ನೀಡಲಾಗಿದೆ. ಸದ್ಯ ವಿವಾದದಿಂದಲೇ ಸದ್ಯ ಮಾಡುತ್ತಿರುವ ಈ ಇಲಾಖೆಯ ಜಬಾಬ್ದಾರಿ ಯಾವ ರೀತಿ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರಲ್ಹಾದ್‌ ಜೋಶಿ ಪ್ರತಿಕ್ರಿಯೆ:



ಸತತ 5 ಬಾರಿ ಆಯ್ಕೆಯಾಗುವ ಮೂಲಕ ದಾಖಲೆ

ಬಿಎ ಪದವಿ ಪಡೆದಿರುವ ಜೋಶಿ ಅವರಿಗೆ ರಾಜಕಾರಣಿಯಾಗಲು ಪ್ರೇರಣೆಯಾಗಿದ್ದು ಬಾಲ್ಯದಲ್ಲೇ ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡಿದ್ದ ಅನುಭವ. 9 ವರ್ಷದಲ್ಲೇ ಆರ್‌ಎಸ್‌ಎಸ್‌ ಸೇರಿದ್ದ ಅವರು ಅಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ 1992ರಲ್ಲಿ ಸಕ್ರಿಯ ರಾಜಕೀಯಕ್ಕೆ ಬಂದರು. 1992ರಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನ ಉಳಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ಅವರು, ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿ ದೇಶದ ಗಮನ ಸೆಳೆದಿದ್ದರು. ಆ ಘಟನೆ ಅವರ ಬದುಕಿಗೆ ಬಹುದೊಡ್ಡ ತಿರುವು ನೀಡಿತು.

ನೂತನ ಶಿಕ್ಷಣ ಸಚಿವರಾಗಿ ಪ್ರಲ್ಹಾದ್‌ ಜೋಶಿ ನೇಮಕ; ಕನ್ನಡಿಗನ ಹೆಗಲಿಗೆ ಬಿತ್ತು ಪ್ರಮುಖ ಜವಾಬ್ದಾರಿ

1995ರಲ್ಲಿ ಧಾರವಾಡ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಜೋಶಿ, 1998ರಲ್ಲಿ ಧಾರವಾಡ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದರು. ಅದಾದ ಬಳಿಕ 2004ರಲ್ಲಿ ಮೊದಲ ಬಾರಿಗೆ ಧಾರವಾಡ ಲೋಕಸಭೆಗೆ ಆಯ್ಕೆಯಾದರು. ಅಲ್ಲಿಂದ ಸತತವಾಗಿ 2009, 2014, 2019 ಮತ್ತು 2024 ಹೀಗೆ 5 ಬಾರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದರು. ಧಾರವಾಡ ಕ್ಷೇತ್ರದಲ್ಲಿ ಸತತ 5 ಬಾರಿ ಜಯ ಗಳಿಸಿದ ಮೊದಲ ರಾಜಕಾರಣಿ ಎನಿಸಿಕೊಂಡರು. ಈ ಹಿಂದೆ ಈ ಕ್ಷೇತ್ರದಲ್ಲಿ ಸರೋಜಿನಿ ಮಹಿಷಿ ಮತ್ತು ಡಿ.ಕೆ. ನಾಯಕರ್‌ 4 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ

2006ರಿಂದ 2013ರವರೆಗೂ ಕರ್ನಾಟಕ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು 2014ರಿಂದ 2016ರವರೆಗೂ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕರಾಗಿರುವ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ವೇಳೆ ತಳಮಟ್ಟದಿಂದಲೇ ಸಂಘಟಿಸಿದ್ದರು. ಅಲ್ಲದೆ ಪಕ್ಷವು ರಾಜಸ್ಥಾನ ಚುನಾವಣಾ ಉಸ್ತುವಾರಿ ನೀಡಿದಾಗ ಆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಜೆಪಿ ಸಂಭ್ರಮಾಚರಣೆ; ದೀಪ್ಕೆ ಹೇಳಿದ್ದೇನು?

ವಿವಿಧ ಜವಾಬ್ದಾರಿ

ಹಲವು ಸ್ಥಾಯಿ ಸಮಿತಿಗಳ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸ್ಥಾಯಿ ಸಮಿತಿ, ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸ್ಥಾಯಿ ಸಮಿತಿ, ರೈಲ್ವೇ ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. 2014ರಿಂದ ಲೋಕಸಭೆಯ ಅಧ್ಯಕ್ಷರ ಸಮಿತಿ, ನಗರಾಭಿವೃದ್ಧಿ ಸಚಿವಾಲಯ, ವಸತಿ ಮತ್ತು ನಗರ ಬಡತನ ನಿರ್ಮೂಲನೆಯ ಸಲಹಾ ಸಮಿತಿ, ನೀತಿಶಾಸ್ತ್ರ ಸಮಿತಿ, ಸಾಮಾನ್ಯ ಉದ್ದೇಶಗಳ ಸಮಿತಿ, ಸವಲತ್ತುಗಳ ಸಮಿತಿಯ ಸದಸ್ಯರಾಗಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author