ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಪ್ರಾಧ್ಯಾಪಕನಿಗೆ ಕಡ್ಡಾಯ ರಜೆ ನೀಡಿದ ಐಐಟಿ ಬಾಂಬೆ

Students Suicide Row: ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪ್ರಾಧ್ಯಾಪಕ ಸೂರ್ಯನಾರಾಯಣ ದೂಲ್ಲಾ ಅವರನ್ನು ಆಡಳಿತಾತ್ಮಕ ವ್ಯವಹಾರಗಳ ಡೀನ್ ಹುದ್ದೆಯಿಂದ ತೆಗೆದುಹಾಕಿ ರಜೆಯ ಮೇಲೆ ಕಳುಹಿಸಲಾಗಿದೆ. ಪರೀಕ್ಷೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ದ ಬಳಿಕ ಸಾಹಿಲ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಂಗ್ರಹ ಚಿತ್ರ

ಮುಂಬೈ: ಪರೀಕ್ಷೆ ಸಮಯದಲ್ಲಿ ಮೊಬೈಲ್ ಬಳಸಿ ಸಿಕ್ಕಿಬಿದ್ದ ಆರೋಪ ಕೇಳಿ ಬಂದ ಬಳಿಕ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ (Students Suicide Row) ಮಾಡಿಕೊಂಡಿದ್ದ ಐಐಟಿ ಬಾಂಬೆ (IIT Bombay) ವಿದ್ಯಾರ್ಥಿ ಸಾಹಿಲ್ ವಾಕೋಡೆ ಪ್ರಕರಣದ ಪ್ರಮುಖ ಆರೋಪಿ ಪ್ರಾಧ್ಯಾಪಕನನ್ನು (Professor Suryanarayana Doolla) ರಜೆ ಮೇಲೆ ಕಳುಹಿಸಲಾಗಿದೆ ಎನ್ನಲಾಗಿದೆ. ಸಾಹಿಲ್ ಆತ್ಮಹತ್ಯೆಗೆ (Students Suicide Row) ಪ್ರಚೋದನೆ ಮತ್ತು ಜಾತಿ ತಾರತಮ್ಯ ಮುಖ್ಯ ಕಾರಣ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಐಐಟಿ ಬಾಂಬೆ ಪ್ರಾಧ್ಯಾಪಕ ಸೂರ್ಯನಾರಾಯಣ ದೂಲ್ಲಾ ಅವರ ವಿರುದ್ಧ ಆರೋಪ ಕೇಳಿ ಬಂದಿದೆ.

ಪರೀಕ್ಷೆಯ ಸಮಯದಲ್ಲಿ ಚಾಟ್‌ಜಿಪಿಟಿ ಬಳಸಲು ಮೊಬೈಲ್ ಫೋನ್ ಬಳಸಿ ಸಿಕ್ಕಿಬಿದ್ದ ಕೆಲವೇ ಗಂಟೆಗಳಲ್ಲಿ, ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಐಐಟಿ ಬಾಂಬೆ ಪ್ರಾಧ್ಯಾಪಕ ಸೂರ್ಯನಾರಾಯಣ ದೂಲ್ಲಾ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎನ್ನಲಾಗಿದೆ.

ʼʼಭಾರತ–ಪಾಕಿಸ್ತಾನ ಸಂಘರ್ಷ ನಿಲ್ಲಿಸಿ 3 ಕೋಟಿ ಜೀವ ಉಳಿಸಿದೆʼʼ: ಮತ್ತೊಮ್ಮೆ ಪುಂಗಿ ಊದಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಎನರ್ಜಿ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಸಾಹಿಲ್ ವಾಕೋಡೆ (22) ಸೆಪ್ಟೆಂಬರ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಜಾತಿ ತಾರತಮ್ಯದ ಆರೋಪದಲ್ಲಿ ಸೂರ್ಯನಾರಾಯಣ ದೂಲ್ಲಾ ಅವರು ಬುಧವಾರ ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗಬೇಕಿದೆ. ಇದಕ್ಕೂ ಮುನ್ನ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಅವರನ್ನು ಆಡಳಿತಾತ್ಮಕ ವ್ಯವಹಾರಗಳ ಡೀನ್ ಹುದ್ದೆಯಿಂದ ತೆಗೆದುಹಾಕಿ ರಜೆ ಮೇಲೆ ಕಳುಹಿಸಲಾಗಿದೆ.

ಪ್ರಾಧ್ಯಾಪಕರು ತಮ್ಮ ಜಾತಿಯ ಕಾರಣದಿಂದಾಗಿ ಕಿರುಕುಳ ನೀಡುತ್ತಿದ್ದಾರೆ. ನಿಂದಿಸಿ, ಅವಮಾನ ಮಾಡುತ್ತಾರೆ ಎಂದು ಸಾಹಿಲ್ ಅವರು ತಮ್ಮ ತಾಯಿ ಸೋನಾಲಿ ವಾಕೋಡೆ ಬಳಿ ಹೇಳಿದ್ದರು. ಇದು ಕಳೆದ ಸುಮಾರು ಮೂರು ತಿಂಗಳುಗಳಿಂದ ನಡೆಯುತ್ತಿತ್ತು ಎಂದು ಸಾಹಿಲ್ ತಾಯಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.



ಮಧ್ಯಂತರ ಸೆಮಿಸ್ಟರ್ ಪರೀಕ್ಷೆಯ ಸಮಯದಲ್ಲಿ ಸಾಹಿಲ್ ಚಾಟ್‌ಜಿಪಿಟಿ ಬಳಸುತ್ತಿರುವ ಆರೋಪ ಮಾಡುವವರು ಅದಕ್ಕೆ ಸಂಬಂಧಿಸಿ ಸಾಕ್ಷ್ಯವನ್ನು ಒದಗಿಸಲಿ ಎಂದು ಅವರ ತಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಸಾಹಿಲ್ ಅವರು ಸಂಸ್ಥೆಯ ಎಸ್‌ಸಿ/ಎಸ್‌ಟಿ ಘಟಕಕ್ಕೆ ಯಾವುದೇ ದೂರು ನೀಡಿರಲಿಲ್ಲ ಎಂದು ಐಐಟಿ ಬಾಂಬೆ ಫ್ಯಾಕಲ್ಟಿ ಫೋರಂ ಅಧ್ಯಕ್ಷ ರಾಜಕುಮಾರ್ ಪಂತ್ ತಿಳಿಸಿದ್ದಾರೆ.

ಗಣೇಶ ಚತುರ್ಥಿ ಅನ್ನದಾನದ ವೇಳೆ ಘೋರ ದುರಂತ: ಕುದಿಯುವ ಸಾಂಬಾರ್ ಪಾತ್ರೆಗೆ ಬಿದ್ದು ಮಹಿಳೆ ಸಾವು! ವಿಡಿಯೊ ವೈರಲ್‌

ಸಾಹಿಲ್ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ಐಐಟಿ ಬಾಂಬೆ, ಈ ಘಟನೆಗೆ ಕಾರಣವಾದ ವಿವರಗಳು ಮತ್ತು ಸನ್ನಿವೇಶಗಳು ಸಂಬಂಧಿತ ಅಧಿಕಾರಿಗಳ ತನಿಖೆಗೆ ಒಳಪಟ್ಟಿವೆ. ಹೀಗಾಗಿ ಈ ಕುರಿತು ಯಾವುದೇ ಮಾಹಿತಿ ನೀಡುವುದು ಈಗ ಸೂಕ್ತವಲ್ಲ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author