ನವದೆಹಲಿ: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯು ಭಾರತದಲ್ಲಿ ತನ್ನ ವ್ಯವಹಾರ ವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, 2026 ರಿಂದ 2030 ರ ಅವಧಿಯಲ್ಲಿ ದೇಶದಲ್ಲಿ ಹೆಚ್ಚುವರಿ 13 ಶತಕೋಟಿ ಡಾಲರ್ ಬೃಹತ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಇಂದು ನವದೆಹಲಿ ಯಲ್ಲಿ ನಡೆದ ಪ್ರಮುಖ ಉನ್ನತ ಮಟ್ಟದ ಸಭೆಯಲ್ಲಿ ಅಮೆಜಾನ್ ಸಿಇಓ ಆಂಡಿ ಜಸ್ಸಿ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಮಹತ್ವದ ನಿರ್ಧಾರ ಪ್ರಕಟಿಸಿದರು. ಈ ಹೊಸ ಹೂಡಿಕೆಯೊಂದಿಗೆ, 2010 ರಿಂದ 2030 ರ ಅವಧಿಯಲ್ಲಿ ಭಾರತದಲ್ಲಿ ಅಮೆಜಾನ್ ಮಾಡಲಿರುವ ಒಟ್ಟು ಸಂಚಿತ ಹೂಡಿಕೆಯ ಮೊತ್ತ 88 ಶತಕೋಟಿ ಡಾಲರ್ ದಾಟಿದಂತಾಗುತ್ತದೆ.
2030ರ ವೇಳೆಗೆ ದೇಶದಲ್ಲಿ ಅದ್ಭುತ ರೀತಿಯಲ್ಲಿ ಎಐ ಮತ್ತು ಕ್ಲೌಡ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಅಮೆಜಾನ್ ಮುಂದಾಗಿದ್ದು, ಈ ಮೂಲಕ ಅಮೆಜಾನ್ ಅತಿ ದೊಡ್ಡ ಜಾಗತಿಕ ಎಐ ಮತ್ತು ಕ್ಲೌಡ್ ಮೂಲಸೌಕರ್ಯ ಹೂಡಿಕೆದಾರರಲ್ಲಿ ಒಂದಾಗಿ ಹೊರಹೊಮ್ಮಲಿದೆ. ಈ ಹೂಡಿಕೆಯು ಮುಂಬೈ ಮತ್ತು ಹೈದರಾಬಾದ್ ನಲ್ಲಿರುವ ಎಡಬ್ಲ್ಯೂಎಸ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ವಿಸ್ತರಿಸಲಿದ್ದು, ಸ್ಟಾರ್ಟ್ ಅಪ್ ಗಳು, ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಕಸ್ಟಮ್ ಎಐ ಚಿಪ್ ಗಳು, ನಿರ್ವಹಿಸಲ್ಪಡುವ ಎಐ ಸೇವೆಗಳು, ಸುರಕ್ಷಿತ ಮತ್ತು ವಿಶ್ವಾಸಾರ್ಹ ಕ್ಲೌಡ್ ತಂತ್ರಜ್ಞಾನಗಳು ಹಾಗೂ ಡೆವಲಪರ್ ಪರಿಕರಗಳನ್ನು ಒದಗಿಸಲಿದೆ. ಇದರಿಂದ ಅವುಗಳು ವೇಗವಾಗಿ ಹೊಸ ಆವಿಷ್ಕಾರಗಳನ್ನು ಮಾಡಲು, ತ್ವರಿತವಾಗಿ ವಿಸ್ತರಣೆ ಹೊಂದಲು ಮತ್ತು ಜಾಗತಿಕವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ.
2010-2030ರ ಅವಧಿಯಲ್ಲಿ ಭಾರತದಲ್ಲಿ ಅಮೆಜಾನ್ ನ ಒಟ್ಟು ಸಂಚಿತ ಹೂಡಿಕೆಯು 88 ಶತಕೋಟಿ ಡಾಲರ್ ಗಿಂತಲೂ ಹೆಚ್ಚಾಗಿದೆ. ಅಮೆಜಾನ್ ತನ್ನ ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವ್ಯವಹಾರಕ್ಕೆ ಶಕ್ತಿ ನೀಡುವ ಕಾರ್ಯಾಚರಣಾ ಜಾಲದಲ್ಲಿ ಹೂಡಿಕೆಯನ್ನು ಮುಂದುವರಿಸಲಿದೆ. ಕಂಪನಿಯು ಈ ವರ್ಷ 20ಕ್ಕಿಂತಲೂ ಹೆಚ್ಚು ಹೊಸ ಫುಲ್ ಫಿಲ್ ಮೆಂಟ್ ಕೇಂದ್ರಗಳನ್ನು ಮತ್ತು 100ಕ್ಕಿಂತಲೂ ಹೆಚ್ಚು ಹೊಸ ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳನ್ನು ಪ್ರಾರಂಭಿಸಲು ಯೋಜಿಸಿದೆ. ಇದು ದೇಶಾದ್ಯಂತ ಗ್ರಾಹಕರಿಗೆ, ವಿಶೇಷವಾಗಿ ಶ್ರೇಣಿ 3 ಮತ್ತು 4 ನಗರಗಳಲ್ಲಿ ವೇಗದ ಮತ್ತು ವಿಶ್ವಾಸಾರ್ಹ ವಿತರಣೆ ಮಾಡಲು ನೆರವಾಗಲಿದೆ.
ಇದನ್ನೂ ಓದಿ: Modi-Putin: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ; ವಿಷನ್ 2030 ಒಪ್ಪಂದಕ್ಕೆ ಸಹಿ
ಜೊತೆಗೆ, ಕೆಲವೇ ನಿಮಿಷಗಳಲ್ಲಿ, ಗಂಟೆಗಳಲ್ಲಿ ಮತ್ತು ಮರುದಿನವೇ ವಿತರಣೆ ಮಾಡುವ ಮೂಲಕ ಅತ್ಯಂತ ವೇಗದ ಮತ್ತು ವಿಶಾಲವಾದ ಆಯ್ಕೆಗಳ ಸಂಪೂರ್ಣ ಶ್ರೇಣಿಯನ್ನು ನೀಡುತ್ತದೆ. ಅಮೆಜಾನ್ ತನ್ನ ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಜಾಲವನ್ನು ಮುನ್ನಡೆಸುತ್ತಿರುವ ಹತ್ತಾರು ಸಾವಿರ ಡೆಲಿವರಿ ಅಸೋಸಿಯೇಟ್ ಗಳ ಕಲ್ಯಾಣದ ಮೇಲೆ ಗಮನ ಕೇಂದ್ರೀಕರಿಸುವ ಸಮ್ಮಾನ್ ಎಂಬ ವಿಶೇಷ ಕಾರ್ಯಕ್ರಮವನ್ನೂ ಘೋಷಿಸಿದೆ.
ಈ ಸಂದರ್ಭದಲ್ಲಿ ಅಮೆಜಾನ್ ಸಿಇಓ ಆಂಡಿ ಜಸ್ಸಿ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಭಾರತದಲ್ಲಿ ಅಮೆಜಾನ್ ಇ-ಕಾಮರ್ಸ್, ಎಐ ಮತ್ತು ಕ್ಲೌಡ್, ಮತ್ತು ಮನರಂಜನೆ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿರುವುದರಿಂದ ಈ ಭೇಟಿಯು ಮಹತ್ವ ಪಡೆದುಕೊಂಡಿತ್ತು. ಕಂಪನಿಯ ಭಾರತದ ವ್ಯವಹಾರವು ಬಲವಾದ ಬೆಳವಣಿಗೆಯ ಹಾದಿಯಲ್ಲಿದೆ ಮತ್ತು ವಿಶೇಷವಾಗಿ ಅದರ ಇ-ಕಾಮರ್ಸ್ ಹಾಗೂ ಎಡಬ್ಲ್ಯೂಎಸ್ ವ್ಯವಹಾರದಲ್ಲಿ ಹೆಚ್ಚಿನ ಗ್ರಾಹಕ ಬೇಡಿಕೆಯಿದೆ ಎಂದು ತಿಳಿಸಿದರು.
ಭಾರತದಲ್ಲಿ ಕಾರ್ಯಾರಂಭ ಮಾಡಿದಾಗಿನಿಂದ, ಅಮೆಜಾನ್ 12 ಮಿಲಿಯನ್ ಸಣ್ಣ ಉದ್ಯಮ ಗಳನ್ನು ಡಿಜಿಟಲೀಕರಣಗೊಳಿಸಿದೆ, 20 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಒಟ್ಟು ಸಂಚಿತ ಇ-ಕಾಮರ್ಸ್ ರಫ್ತುಗಳನ್ನು ಸಾಧ್ಯವಾಗಿಸಿದೆ ಮತ್ತು 2.8 ಮಿಲಿಯನ್ ಉದ್ಯೋಗಗಳಿಗೆ ಬೆಂಬಲ ನೀಡಿದೆ. ಅಮೆಜಾನ್ 10 ಮಿಲಿಯನ್ ಗಿಂತಲೂ ಹೆಚ್ಚು ಭಾರತೀಯರಿಗೆ ಕ್ಲೌಡ್ ಕೌಶಲ್ಯಗಳ ಕುರಿತು ತರಬೇತಿಯನ್ನೂ ನೀಡಿದೆ. 2030 ರವರೆಗೆ, ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರಗಳನ್ನು ವಿಸ್ತರಿಸಲು ಮತ್ತು ಬೆಂಬಲಿಸಲು ಒಟ್ಟು 48 ಶತಕೋಟಿ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ.
ಸರ್ಕಾರದ ಆದ್ಯತೆಗಳಿಗೆ ಅನುಗುಣವಾಗಿ, ಅಮೆಜಾನ್ ಎಐ- ಆಧಾರಿತ ಡಿಜಿಟಲೀಕರಣ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ತನ್ನ ಗಮನವನ್ನು ಮುಂದುವರಿಸಲಿದೆ. ಕಂಪನಿ ಯು 3.8 ಮಿಲಿಯನ್ ಉದ್ಯೋಗಗಳು, $80 ಬಿಲಿಯನ್ ಒಟ್ಟು ಸಂಚಿತ ರಫ್ತುಗಳನ್ನು ಬೆಂಬಲಿಸಲು, 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ಎಐ ಪ್ರಯೋಜನಗಳನ್ನು ಒದಗಿಸಲು ಮತ್ತು 4 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಐ ಶಿಕ್ಷಣವನ್ನು ಓದಿಸುವ ಪ್ರತಿಜ್ಞೆ ಮಾಡಿದೆ.
ಈ ಕುರಿತು ಅಮೆಜಾನ್ ನ ಅಮೆಜಾನ್ ಸಿಇಓ ಆಂಡಿ ಜಸ್ಸಿ ಮಾತನಾಡಿ , "ನಾವು ಒಂದು ದಶಕಕ್ಕೂ ಹೆಚ್ಚು ಸಮಯದ ಹಿಂದೆ ಭಾರತಕ್ಕೆ ಬಂದೆವು. ಅಂದಿನಿಂದ ನಮ್ಮ ವಿವಿಧ ವ್ಯವಹಾರಗಳ ಮೂಲಕ ಗ್ರಾಹಕರು, ಮಾರಾಟಗಾರರು, ಡೆವಲಪರ್ ಗಳು, ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮ ಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿದೆ, ವಿಶೇಷವಾಗಿ ನಮ್ಮ ಇ-ಕಾಮರ್ಸ್, ಎಐ ಮತ್ತು ಕ್ಲೌಡ್ ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ನಾವು ಭಾರತದಲ್ಲಿ ಅಮೆಜಾನ್ ಅನ್ನು ಬೆಳೆಸುತ್ತಿರುವಾಗ, ಎಐ ತಂತ್ರಜ್ಞಾನದ ಲಭ್ಯತೆಯನ್ನು ಎಲ್ಲರಿಗೂ ತಲುಪಿಸುವುದು, ಸಣ್ಣ ಉದ್ಯಮಗಳನ್ನು ಡಿಜಿಟಲೀಕರಣಗೊಳಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ರಫ್ತುಗಳನ್ನು ಉತ್ತೇಜಿಸುವುದು ನಮ್ಮ ಆದ್ಯತೆಯಾಗಿದೆ. ಭಾರತದ ಆದ್ಯತೆಗಳೊಂದಿಗೆ ನಮ್ಮ ವ್ಯವಹಾರದ ಆದ್ಯತೆಗಳು ಕೂಡ ಸದಾ ಒಂದೇ ಆಗಿರುತ್ತವೆ. ಭಾರತ ದಲ್ಲಿನ ನಮ್ಮ ವ್ಯವಹಾರಗಳಾದ್ಯಂತ ಇರುವ ಬೇಡಿಕೆಯನ್ನು ಪೂರೈಸಲು ಮತ್ತು ಈ ಆದ್ಯತೆ ಗಳನ್ನು ಸಾಧಿಸಲು ದೇಶಕ್ಕೆ ಸಹಾಯ ಮಾಡಲು ನಾವು ಮುಂಬರುವ ಐದು ವರ್ಷಗಳಲ್ಲಿ 48 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ. ಪ್ರಧಾನಮಂತ್ರಿ ಮೋದಿಯವರ ವಿಕಸಿತ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನದಿಂದ ನಾವು ಪ್ರೇರಿತರಾಗಿದ್ದೇವೆ ಮತ್ತು ಭಾರತದ ಬೆಳವಣಿಗೆಯ ಪಯಣದಲ್ಲಿ ದೀರ್ಘಕಾಲದ ಪಾಲುದಾರರಾಗಲು ನಾವು ಬದ್ಧರಾಗಿದ್ದೇವೆ" ಎಂದರು.
ಎಐ ಮತ್ತು ಕ್ಲೌಡ್ ಮೂಲಸೌಕರ್ಯದಲ್ಲಿ ಅಮೆಜಾನ್ ನ ಹೆಚ್ಚುವರಿ 13 ಶತಕೋಟಿ ಡಾಲರ್ ಹೂಡಿಕೆಯ ಕುರಿತು ಹೆಚ್ಚಿನ ಮಾಹಿತಿ: ಈ ಹೊಸ ಹೂಡಿಕೆಯು 2026 ರಿಂದ 2030ರ ಅವಧಿಯಲ್ಲಿ ಭಾರತದಲ್ಲಿ ಅಮೆಜಾನ್ ಮಾಡುತ್ತಿರುವ ಒಟ್ಟು ಎಐ ಮತ್ತು ಕ್ಲೌಡ್ ಹೂಡಿಕೆ ಯೋಜನೆಗಳ ನ್ನು 21 ಶತಕೋಟಿ ಡಾಲರ್ ಗಿಂತಲೂ ಹೆಚ್ಚಿಸಲಿದೆ. ಇದು ಮುಂಬೈ ಮತ್ತು ಹೈದರಾಬಾದ್ ನ ಎರಡು ವಲಯ ಗಳಲ್ಲಿ ಎಐ ಹಾಗೂ ಕ್ಲೌಡ್ ಮೂಲಸೌಕರ್ಯವನ್ನು ಹೆಚ್ಚಿಸಲಿದ್ದು, ಅದಕ್ಕೆ ಬೆಂಬಲ ನೀಡಲಿದೆ.
ಎಡಬ್ಲ್ಯೂಎಸ್ ನ ಈ ಎರಡೂ ವಲಯಗಳು ಗ್ರಾಹಕರು ತಮ್ಮ ಡೇಟಾವನ್ನು ಭಾರತದ ಒಳಗಡೆ ಯೇ ಸುರಕ್ಷಿತವಾಗಿ ಸಂಗ್ರಹಿಸಲು ಅನುವು ಮಾಡಿಕೊಡುತ್ತವೆ. ಜೊತೆಗೆ ಹೆಚ್ಚಿನ ಸಾಮರ್ಥ್ಯದ ಟ್ರೇನಿಯಮ್ ಚಿಪ್ ಗಳು ಮತ್ತು ಎಡಬ್ಲ್ಯೂಎಸ್ ನ ಪ್ರಮುಖ ಇನ್ಫರೆನ್ಸ್ ಇಂಜಿನ್ ಆದ ಅಮೆಜಾನ್ ಬೆಡ್ ರಾಕ್ ಸೇರಿದಂತೆ ವಿಶ್ವದ ಅತ್ಯಂತ ಸುಧಾರಿತ ಎಐ ಮತ್ತು ಕ್ಲೌಡ್ ತಂತ್ರಜ್ಞಾನವನ್ನು ಬಳಸುವ ಅವಕಾಶವನ್ನು ಅವರಿಗೆ ಕಲ್ಪಿಸುತ್ತವೆ.
ಅಮೆಜಾನ್ ಕಿರೋ ಮತ್ತು ಕ್ವಿಕ್ ಮೂಲಕ ಭಾರತದಾದ್ಯಂತ ಇರುವ ಡೆವಲಪರ್ ಗಳು ಮತ್ತು ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಅತ್ಯಂತ ವೇಗವಾಗಿ ಸುಧಾರಿತ ಎಐ ಮತ್ತು ಏಜೆಂಟಿಕ್ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಹಾಗೂ ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ನ್ಯಾಷನಲ್ ಹೆಲ್ತ್ ಅಥಾರಿಟಿ (ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ), ಗವರ್ನಮೆಂಟ್ ಇ-ಮಾರ್ಕೆಟ್ ಪ್ಲೇಸ್ (ಜಿಇಎಂ), ಅಪೋಲೊ ಟೈರ್ಸ್, ಡೆಲಿವರಿ, ಫಿಸಿಕ್ಸ್ ವಾಲಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಲಕ್ಷಾಂತರ ಭಾರತೀಯ ಉದ್ಯಮಗಳು, ಸ್ಟಾರ್ಟ್ ಅಪ್ ಗಳು ಮತ್ತು ಸರ್ಕಾರಿ ಸಂಸ್ಥೆಗಳು ಈಗಾಗಲೇ ಎಐ ಕಾರ್ಯಭಾರಗಳನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲು, ತರಬೇತಿ ನೀಡಲು ಮತ್ತು ನಿಯೋಜಿಸಲು ಎಡಬ್ಲ್ಯೂಎಸ್ ಅನ್ನು ಬಳಸುತ್ತಿವೆ. ಮೊದಲ ದಿನದಿಂದಲೂ, ಎಡಬ್ಲ್ಯೂಎಸ್ ತನ್ನ ಮೂಲಸೌಕರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಿದೆ, ಇದರಿಂದಾಗಿ ಗ್ರಾಹಕರು ತಮ್ಮ ಡೇಟಾ ಎಲ್ಲಿರಬೇಕು, ಅದನ್ನು ಯಾರು ಪ್ರವೇಶಿಸಬಹುದು ಮತ್ತು ಅದು ಹೇಗೆ ಸುರಕ್ಷಿತವಾಗಿರುತ್ತದೆ ಎಂಬುದರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ.
ಡೆಲಿವರಿ ಅಸೋಸಿಯೇಟ್ ಗಳಿಗಾಗಿ ವಿಶೇಷ ಕಾರ್ಯಕ್ರಮವಾದ ಸಮ್ಮಾನ್ ಕುರಿತು ಹೆಚ್ಚಿನ ಮಾಹಿತಿ: ಅಮೆಜಾನ್ ಇಂಡಿಯಾ ತನ್ನ ಲಾಜಿಸ್ಟಿಕ್ಸ್ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ತಾರು ಸಾವಿರ ಡೆಲಿವರಿ ಅಸೋಸಿಯೇಟ್ ಗಳಿಗಾಗಿ ಸಮ್ಮಾನ್ ಎಂಬ ಸಮಗ್ರ ಕಲ್ಯಾಣ ಕಾರ್ಯ ಕ್ರಮವನ್ನು ಪ್ರಾರಂಭಿಸಿದೆ. ಈ ಯೋಜನೆಗಳಲ್ಲಿ ಅಸೋಸಿಯೇಟ್ ಗಳು ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಗಳು, ಸರ್ಕಾರಿ ಸೌಲಭ್ಯಗಳು ಮತ್ತು ಆರ್ಥಿಕ ಒಳಗೊಳ್ಳುವಿಕೆ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆಯಲಿದ್ದಾರೆ.
ನೆರವು, ಸಮಗ್ರ ವಿಮೆ ರಕ್ಷಣೆ, ರಸ್ತೆ ಸುರಕ್ಷತಾ ಕ್ರಮಗಳು ಮತ್ತು ಇನ್ನಿತರ ಸೌಕರ್ಯಗಳನ್ನು ಈ ಯೋಜನೆಗಳು ಒಳಗೊಂಡಿವೆ. ಈ ಕಾರ್ಯಕ್ರಮದ ಭಾಗವಾಗಿ, ಅಮೆಜಾನ್ ಈ ವರ್ಷ ತನ್ನ ಆಶ್ರಯ್ ವಿಶ್ರಾಂತಿ ಕೇಂದ್ರಗಳನ್ನು 250 ಸ್ಥಳಗಳಿಗೆ ವಿಸ್ತರಿಸಲಿದ್ದು, ಇದು ಇಡೀ ಉದ್ಯಮದಲ್ಲಿರುವ ಯಾವುದೇ ಡೆಲಿವರಿ ಅಸೋಸಿಯೇಟ್ ಗಳ ಬಳಕೆಗೆ ಮುಕ್ತವಾಗಿರುತ್ತದೆ. ಕಾರ್ಯಾಚರಣೆ ಮತ್ತು ಅಸೋಸಿಯೇಟ್ ಗಳ ಕಲ್ಯಾಣಕ್ಕಾಗಿ ಅಮೆಜಾನ್ ಇಂಡಿಯಾ ಇತ್ತೀಚೆಗೆ ಘೋಷಿಸಿದ 300 ಮಿಲಿಯನ್ ಡಾಲರ್ ಹೂಡಿಕೆಯ ಒಂದು ಭಾಗವನ್ನು ಈ ಯೋಜನೆಗಳನ್ನು ಬಲಪಡಿಸಲು ಮತ್ತು ವಿಸ್ತರಿಸಲು ಬಳಸಲಾಗುತ್ತದೆ.
Amazon.in: ಭಾರತದ ಅತ್ಯಂತ ಪ್ರೀತಿಯ ಇ-ಕಾಮರ್ಸ್ ಮಾರುಕಟ್ಟೆ: Amazon.in ಅನ್ನು 10 ಕೋಟಿಗಿಂತಲೂ ಹೆಚ್ಚು ಗ್ರಾಹಕರು ಮತ್ತು 17 ಲಕ್ಷಕ್ಕಿಂತಲೂ ಹೆಚ್ಚು ಮಾರಾಟಗಾರರು ಪ್ರೀತಿಸು ತ್ತಾರೆ ಮತ್ತು ನಂಬುತ್ತಾರೆ. ಇದು ಭಾರತದ ಪ್ರತಿಯೊಂದು ಪಿನ್ ಕೋಡ್ ನಲ್ಲಿರುವ ಗ್ರಾಹಕರಿಗೂ ಅತ್ಯಂತ ವಿಶಾಲವಾದ ವಸ್ತುಗಳ ಆಯ್ಕೆಗಳನ್ನು ಒದಗಿಸುತ್ತದೆ ಹಾಗೂ ಕೆಲವೇ ನಿಮಿಷಗಳಲ್ಲಿ, ಗಂಟೆಗಳಲ್ಲಿ ಅಥವಾ ಮರುದಿನವೇ ಆರ್ಡರ್ ಗಳನ್ನು ತಲುಪಿಸುತ್ತದೆ.
ಕಂಪನಿಯು ತನ್ನ ಶೇಕಡ 85 ರಷ್ಟು ಹೊಸ ಗ್ರಾಹಕರನ್ನು ಮತ್ತು ಶೇಕಡ 65ಕ್ಕಿಂತ ಹೆಚ್ಚು ಆರ್ಡರ್ ಗಳನ್ನು ಶ್ರೇಣಿ 2 ಮತ್ತು 3ರ ನಗರಗಳಿಂದ ಪಡೆಯುತ್ತಿದೆ. ಗ್ರಾಹಕರಿಗೆ ತಲುಪಿಸಲಾಗುವ ಒಟ್ಟು ಆರ್ಡರ್ ಗಳಲ್ಲಿ ಸುಮಾರು ಅರ್ಧದಷ್ಟು ದಿನಬಳಕೆಯ ಅಗತ್ಯ ವಸ್ತುಗಳಾಗಿದ್ದು, ಇದು Amazon.in ಅನ್ನು ಭಾರತದಲ್ಲಿ ದೈನಂದಿನ ಅಗತ್ಯಗಳ ಪೂರೈಕೆಯ ನಂಬಿಕಸ್ಥ ಆಯ್ಕೆಯನ್ನಾಗಿ ಮಾಡಿದೆ. ಭಾರತದ ಅತಿ ದೊಡ್ಡ ಪಾವತಿಸಿದ ಸದಸ್ಯತ್ವ ಕಾರ್ಯಕ್ರಮಗಳಲ್ಲಿ ಒಂದಾಗಿ ಪ್ರೈಮ್ ಬೆಳೆಯುತ್ತಲೇ ಇದೆ. ಇದರ ಸದಸ್ಯರ ಸಂಖ್ಯೆ ಈ ವರ್ಷ 2023ಕ್ಕೆ ಹೋಲಿಸಿದರೆ ದುಪ್ಪಟ್ಟಾಗುವ ನಿರೀಕ್ಷೆಯಿದೆ ಮತ್ತು ಶೇಕಡ 70 ಕ್ಕಿಂತ ಹೆಚ್ಚು ಹೊಸ ಪ್ರೈಮ್ ಸದಸ್ಯರು ಮೆಟ್ರೋ ಅಲ್ಲದ ನಗರಗಳಿಂದ ಬರುತ್ತಿದ್ದಾರೆ. ಭಾರತದಲ್ಲಿ ಹೊಸ ಪ್ರೈಮ್ ಚಂದಾದಾರಿಕೆಗಳನ್ನು ಹೆಚ್ಚಿಸುವಲ್ಲಿ ಪ್ರೈಮ್ ವಿಡಿಯೋ ಪ್ರಮುಖ ಪ್ರೇರಕ ಶಕ್ತಿಯಾಗಿ ಮುಂದುವರಿದಿದೆ. ಇದು ಪ್ರಸ್ತುತ ಎಕ್ಸ್ ಕ್ಲೂಸಿವ್ ಒರಿಜಿನಲ್ ಗಳಿಗಾಗಿ ಭಾರತದ ಅತಿ ದೊಡ್ಡ ಸ್ಟ್ರೀಮಿಂಗ್ ಸೇವೆಯಾಗಿದ್ದು, ಅಮೆಜಾನ್ ಎಂಎಕ್ಸ್ ಪ್ಲೇಯರ್ ಮತ್ತು ಪ್ರೈಮ್ ವಿಡಿಯೋದ ಅತ್ಯುತ್ತಮ ಮನರಂಜನೆಯನ್ನು ಒಂದೇ ವಿಭಾಗದಲ್ಲಿ ನೀಡುತ್ತದೆ.
*
- 2030ರ ವೇಳೆಗೆ ಭಾರತದಲ್ಲಿ ಎಐ ಮತ್ತು ಕ್ಲೌಡ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಹೆಚ್ಚುವರಿ 13 ಶತಕೋಟಿ ಡಾಲರ್ ಅನ್ನು ಹೂಡಿಕೆ ಮಾಡಲಿದೆ. ಅಮೆಜಾನ್ ಭಾರತದಲ್ಲಿ 35 ಶತಕೋಟಿ ಡಾಲರ್ ಹೊಸ ಹೂಡಿಕೆಗಳನ್ನು ಘೋಷಿಸಿದ ಆರು ತಿಂಗಳ ಒಳಗಾಗಿ ಈ ಪ್ರಕಟಣೆ ಹೊರ ಬಿದ್ದಿದೆ.
- ಈ ಇತ್ತೀಚಿನ ಹೂಡಿಕೆಯು ಅಮೆಜಾನ್ ಅನ್ನು ಭಾರತದಲ್ಲಿನ ಅತಿ ದೊಡ್ಡ ಜಾಗತಿಕ ಎಐ ಮತ್ತು ಕ್ಲೌಡ್ ಮೂಲಸೌಕರ್ಯ ಹೂಡಿಕೆದಾರರಲ್ಲಿ ಒಂದನ್ನಾಗಿ ಮಾಡಲಿದೆ. ಇದರೊಂದಿಗೆ ಅಮೆಜಾನ್ ಭಾರತದಲ್ಲಿನ ಅತಿ ದೊಡ್ಡ ವಿದೇಶಿ ಹೂಡಿಕೆದಾರ, ಅತಿ ಹೆಚ್ಚು ಇ- ಕಾಮರ್ಸ್ ರಫ್ತುಗಳನ್ನು ಸಾಧ್ಯವಾಗಿಸಲು ಕಾರಣವಾದ ಸಂಸ್ಥೆ ಮತ್ತು ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಲ್ಲಿ ಒಂದಾಗಿದೆ.
- 2010-2030ರ ಅವಧಿಯಲ್ಲಿ ಭಾರತದಲ್ಲಿ ಅಮೆಜಾನ್ ನ ಒಟ್ಟು ಸಂಚಿತ ಹೂಡಿಕೆಯು 88 ಶತಕೋಟಿ ಡಾಲರ್ ಗಿಂತಲೂ ಹೆಚ್ಚಾಗಿದೆ.
- ಸರ್ಕಾರದ ಆದ್ಯತೆಗಳಿಗೆ ಅನುಗುಣವಾಗಿ, ಅಮೆಜಾನ್ 2030 ರ ವೇಳೆಗೆ 3.8 ಮಿಲಿಯನ್ ಗಿಂತಲೂ ಹೆಚ್ಚು ಉದ್ಯೋಗಗಳನ್ನು ಹೆಚ್ಚಿಸಲು, 80 ಬಿಲಿಯನ್ ಡಾಲರ್ ಒಟ್ಟು ಸಂಚಿತ ಇ-ಕಾಮರ್ಸ್ ರಫ್ತುಗಳನ್ನು ಸಾಧ್ಯವಾಗಿಸಲು ಹಾಗೂ 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ಮತ್ತು 4 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನದ ಪ್ರಯೋಜನಗಳನ್ನು ತಲುಪಿಸುವ ಪ್ರತಿಜ್ಞೆ ಮಾಡಿದೆ.
- ಭಾರತದ ಅತ್ಯಂತ ದೊಡ್ಡ, ಸುರಕ್ಷಿತ, ವೇಗವಾದ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆ ಜಾಲವನ್ನು ನಿರ್ಮಿಸಲು ಅಮೆಜಾನ್ ತನ್ನ ಹೂಡಿಕೆಯನ್ನು ಮಾಡಲಿದ್ದು, ಈ ವರ್ಷದ ಅವಧಿಯಲ್ಲಿ ಭಾರತದಾದ್ಯಂತ 20ಕ್ಕಿಂತಲೂ ಹೆಚ್ಚು ಹೊಸ ಫುಲ್ ಫಿಲ್ ಮೆಂಟ್ ಕೇಂದ್ರಗಳನ್ನು ಮತ್ತು 100ಕ್ಕೂ ಹೆಚ್ಚು ಹೊಸ ಕೊನೆಯ ಹಂತದ ಡೆಲಿವರಿ ಸ್ಟೇಷನ್‌ಗಳನ್ನು ಪ್ರಾರಂಭಿಸಲಾಗುವುದು.
- ಡೆಲಿವರಿ ಅಸೋಸಿಯೇಟ್ ಗಳ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಗಳು, ಸರ್ಕಾರಿ ಸೌಲಭ್ಯ ಗಳು ಮತ್ತು ಆರ್ಥಿಕ ಒಳಗೊಳ್ಳುವಿಕೆ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆಯುವಲ್ಲಿ ನೆರವು, ಸಮಗ್ರ ವಿಮೆ ರಕ್ಷಣೆ, ರಸ್ತೆ ಸುರಕ್ಷತಾ ಕ್ರಮಗಳು ಮತ್ತು ಈ ವರ್ಷ ಆಶ್ರಯ್ ವಿಶ್ರಾಂತಿ ಕೇಂದ್ರಗಳ ಸಂಖ್ಯೆಯನ್ನು 250ಕ್ಕೆ ವಿಸ್ತರಿಸುವ ಮೂಲಕ ಡೆಲಿವರಿ ಅಸೋಸಿಯೇಟ್ ಗಳಿಗೆ ನೆರವಾಗಲು ಅಮೆಜಾನ್ ಸಮ್ಮಾನ್ ಎಂಬ ವಿಶೇಷ ಕಾರ್ಯಕ್ರಮವನ್ನು ಘೋಷಿಸಿದೆ.