ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Modi-Putin: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ; ವಿಷನ್ 2030 ಒಪ್ಪಂದಕ್ಕೆ ಸಹಿ

ಭಾರತ–ರಷ್ಯಾ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಆಯಾಮ ಸಿಕ್ಕಿದ್ದು, ದೀರ್ಘಕಾಲದ ವಿಶ್ವಾಸ ಹಾಗೂ ತಂತ್ರಜ್ಞಾನ ಸಹಯೋಗದ ಆಧಾರದಲ್ಲಿ ಗಟ್ಟಿಯಾಗಿರುವ ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡೆಸಿದ ಮಾತುಕತೆಯ ಬಳಿಕ 2030ರ ಆರ್ಥಿಕ ಸಹಕಾರ ಯೋಜನೆಯನ್ನ ಒಪ್ಪಂದ ಮಾಡಿಕೊಳ್ಳಲಾಗಿದೆ.

ಭಾರತದೊಂದಿಗೆ ಮಹತ್ವದ ಒಪ್ಪಂದಕ್ಕೆ ರಷ್ಯಾ ಸನ್ನದ್ಧ

ಮೋದಿ - ಪುಟಿನ್ -

Profile
Sushmitha Jain Dec 5, 2025 8:50 PM

ನವದೆಹಲಿ: ಭಾರತ ಮತ್ತು ರಷ್ಯಾ (India and Russia) ಹಲವು ದಶಕಗಳಿಂದ ಪರಸ್ಪರ ವಿಶ್ವಾಸ, ತಂತ್ರಜ್ಞಾನ ಹಂಚಿಕೆ ಮತ್ತು ರಾಜತಾಂತ್ರಿಕ ಬೆಂಬಲದ ಆಧಾರದ ಮೇಲೆ ಗಟ್ಟಿಯಾದ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದೆ. ಇದೀಗ ಈ ದೀರ್ಘಕಾಲದ ಸ್ನೇಹಕ್ಕೆ ಮತ್ತೊಂದು ಹೊಸ ಅಧ್ಯಾಯ ಸೇರ್ಪಡೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(President Vladimir Putin) ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಯಲ್ಲಿ 2030ರವರೆಗೆ ಸಮಗ್ರ ಆರ್ಥಿಕ ಸಹಕಾರ ಯೋಜನೆ (India–Russia Business Forum) ಅಂತಿಮಗೊಂಡಿದೆ. ಈ ಮೂಲಕ ಎರಡು ರಾಷ್ಟ್ರಗಳು ಹೊಸ ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಸನ್ನದ್ಧವಾಗಿದ್ದು, ಪುಟಿನ್ ಮತ್ತು ಮೋದಿ ನಡುವೆ ನಡೆಯ ಮಾತುಕತೆಯ ಪ್ರಮುಖ ಅಂಶಗಳು ಇಲ್ಲಿವೆ.


ಹೌದು ಎರಡು ದಿನಗಳ ಭಾರತ ಭೇಟಿಗೆ ಬಂದಿರುವ ಅಧ್ಯಕ್ಷ ಪುಟಿನ್ ಜೊತೆ ನಡೆದ ಈ ಚರ್ಚೆಯಲ್ಲಿ, ವ್ಯಾಪಾರ, ಕೈಗಾರಿಕೆ, ಇಂಧನ ಹಾಗೂ ವಿಜ್ಞಾನ–ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ ಕುರಿತು ಪ್ರಮುಖ ನಿರ್ಧಾರಗಳು ಕೈಗೊಳ್ಳಲಾಗಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕಾಕ್ಕೂ ಟಕ್ಕರ್ ನೀಡಲು ಭಾರತ- ರಷ್ಯಾ ಯೋಜನೆ ರೂಪಿಸಿದೆ ಎನ್ನಲಾಗಿದೆ.

2030ಕ್ಕೆ 100 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಗುರಿ

ಶೃಂಗಸಭೆಯ ಬಳಿಕ ಜಂಟಿ ವಿವರಣೆಯಲ್ಲಿ, ಎರಡು ದೇಶಗಳ ನಾಯಕರೂ 2030ರೊಳಗೆ ವಾರ್ಷಿಕ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಘೋಷಿಸಿದ್ದು, ಈ ಮೂಲಕ ಪ್ರಸ್ತುತ 70 ಬಿಲಿಯನ್ ಡಾಲರ್ ವ್ಯಾಪಾರವನ್ನು ಇನ್ನಷ್ಟು ಬಲಪಡಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ.

ಅಂತಾರಾಷ್ಟ್ರೀಯ ಒತ್ತಡದ ನಡುವೆಯೂ ಭಾರತ ರಷ್ಯಾದಿಂದ ತೈಲ ಆಮದು ಕಡಿಮೆ ಮಾಡದ ವಿಚಾರವನ್ನು ಉಲ್ಲೇಖಿಸಿದ ಪುಟಿನ್, “ಭಾರತದ ಪ್ರಗತಿಗೆ ಅಗತ್ಯವಾದ ಇಂಧನವನ್ನು ನಿರಂತರವಾಗಿ ಪೂರೈಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಓದಿ: Modi-Putin: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಒಟ್ಟಾಗಿ ನಿಂತಿವೆ ; ಮೋದಿ
ಉಕ್ರೇನ್ ಸಂಘರ್ಷ – ಶಾಂತಿಯುತ ಪರಿಹಾರಕ್ಕೆ ಭಾರತ ಬೆಂಬಲ

ಮೋದಿ ಅವರು ಮಾತನಾಡಿ, ಉಕ್ರೇನ್ ಸಂಘರ್ಷದಲ್ಲಿ ಶಾಂತಿಯುತ ಹಾಗೂ ಶಾಶ್ವತ ಪರಿಹಾರಕ್ಕಾಗಿ ಭಾರತ ಸದಾ ಪ್ರಯತ್ನಿಸುತ್ತಿದ್ದು, ಇದಕ್ಕೆ ಬೇಕಾದ ಉತ್ತೇಜನ ನೀಡುತ್ತದೆ ಎಂದು ಪುನರುಚ್ಚರಿಸಿದ್ದಾರೆ.

ಕೈಗಾರಿಕೆ: ರಷ್ಯಾದಲ್ಲೇ ಭಾರತೀಯ ಯೂರಿಯಾ ಘಟಕ

ಕೈಗಾರಿಕಾ ಸಹಕಾರದ ಭಾಗವಾಗಿ, ರಷ್ಯಾದ ಯುರಾಲ್ಕೆಮ್ ಕಂಪನಿಯೊಂದಿಗೆ ಭಾರತೀಯ ಸಂಸ್ಥೆಗಳು ರಷ್ಯಾದಲ್ಲೇ ಯೂರಿಯಾ ಕಾರ್ಖಾನೆ ನಿರ್ಮಿಸುವ ಒಪ್ಪಂದ ಮಾಡಿಕೊಂಡಿದ್ದು, ಭವಿಷ್ಯದಲ್ಲಿ ಭಾರತದಲ್ಲಿಯೂ ಇದೇ ತಂತ್ರಜ್ಞಾನ ಆಧಾರಿತ ಘಟಕಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.

ಆಹಾರ ಗುಣಮಟ್ಟ ಸುಧಾರಣೆಗೆ ಮಹತ್ವದ ಒಪ್ಪಂದ

ಎಫ್‌ಎಸ್‌ಎಸ್‌ಎಐ ಮತ್ತು ರಷ್ಯಾದ ಗ್ರಾಹಕ ರಕ್ಷಣೆ ಸಂಸ್ಥೆಗಳು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಧಾನ್ಯ, ಹಣ್ಣು, ತರಕಾರಿ, ಪ್ಯಾಕೇಜ್ಡ್ ಆಹಾರ ಸೇರಿದಂತೆ ಆಮದು–ರಫ್ತು ವಸ್ತುಗಳ ಗುಣಮಟ್ಟ ಮಾನದಂಡ, ಪರೀಕ್ಷಾ ವಿಧಾನಗಳಲ್ಲಿ ಪರಸ್ಪರ ಜ್ಞಾನ ಹಂಚಿಕೊಳ್ಳಲಿವೆ. ಇದರಿಂದ ಎರಡು ರಾಷ್ಟ್ರಗಳ ಆಹಾರ ಸರಬರಾಜು ವ್ಯವಸ್ಥೆ ಮತ್ತಷ್ಟು ವಿಶ್ವಾಸಾರ್ಹವಾಗಲಿದೆ.

ವೈದ್ಯಕೀಯ ಸಂಶೋಧನೆ–ಆರೋಗ್ಯ ಕ್ಷೇತ್ರದಲ್ಲಿ ಹೊಸ ಜಂಟಿ ಅಭಿಯಾನ

ಕ್ಯಾನ್ಸರ್ ಚಿಕಿತ್ಸೆ, ಹೃದ್ರೋಗ ನಿರ್ವಹಣೆ, ಲಸಿಕೆ ತಂತ್ರಜ್ಞಾನ, ಬಯೋ–ಮೆಡಿಸಿನ್ ಮೊದಲಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತ–ರಷ್ಯಾ ಒಟ್ಟಿಗೆ ಸಂಶೋಧನೆ ನಡೆಸಲು ಒಪ್ಪಿಕೊಂಡಿವೆ. ವೈದ್ಯರು, ಸಂಶೋಧಕರು ಹಾಗೂ ಆರೋಗ್ಯ ಸಂಸ್ಥೆಗಳ ನಡುವೆ ಜ್ಞಾನ, ತಂತ್ರಜ್ಞಾನ ಮತ್ತು ತರಬೇತಿ ವಿನಿಮಯ ಹೆಚ್ಚಲಿದೆ.


ಡಾಲರ್ ಬದಲು “ರೂರೂ”ಗೆ ಒತ್ತು: ಭಾರತ–ರಷ್ಯಾ ವ್ಯಾಪಾರಕ್ಕೆ ಹೊಸ ದಿಕ್ಕು

ಭಾರತ ಮತ್ತು ರಷ್ಯಾ ದೇಶಗಳು ಪರಸ್ಪರ ವ್ಯಾಪಾರ ವಹಿವಾಟಿನಲ್ಲಿ ಅಮೆರಿಕನ್ ಡಾಲರ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮಹತ್ವದ ಹೆಜ್ಜೆಯನ್ನಿಟ್ಟಿವೆ. ಎರಡು ರಾಷ್ಟ್ರಗಳು ಮುಂದೆ ನಡೆಯುವ ವಾಣಿಜ್ಯ ವ್ಯವಹಾರಗಳಲ್ಲಿ ತಮ್ಮ ದೇಶಗಳ ಸ್ಥಳೀಯ ಕರೆನ್ಸಿಗಳಾದ ಭಾರತೀಯ ರೂಪಾಯಿ ಮತ್ತು ರಷ್ಯಾದ ರೂಬಲ್ ಬಳಕೆಗೆ ಒತ್ತು ನೀಡುವುದಾಗಿ ತಿಳಿಸಿವೆ.



ಆರೋಗ್ಯ ಕ್ಷೇತ್ರದಲ್ಲಿ ಭಾರತ–ರಷ್ಯಾ ಸಹಕಾರ

ವೈದ್ಯಕೀಯ ಸಂಶೋಧನೆ, ವೈದ್ಯಕೀಯ ಸಾಧನಗಳ ಅಭಿವೃದ್ಧಿ, ಔಷಧಿ ತಯಾರಿಕೆ ಮತ್ತು ಸಾರ್ವಜನಿಕ ಆರೋಗ್ಯ ನೀತಿಗಳಲ್ಲಿ ಭಾರತ–ರಷ್ಯಾ ರಾಷ್ಟ್ರಗಳು ಒಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿವೆ. ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆ, ಹೃದ್ರೋಗ, ಲಸಿಕೆ ತಂತ್ರಜ್ಞಾನ ಮತ್ತು ಬಯೋ–ಮೆಡಿಸಿನ್ ಕ್ಷೇತ್ರಗಳಲ್ಲಿ ಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನ ಹಂಚಿಕೆಯಿಂದ ಸಹಕಾರ ಹೆಚ್ಚಾಗಲಿದೆ.



ಭಯೋತ್ಪಾದನೆ ವಿರುದ್ಧ ಏಕಕಣ

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಮುಂದುವರಿದ ಸಹಕಾರಕ್ಕೆ ಒಪ್ಪಿಗೆ ನೀಡಿದ್ದು, ಈ ನಿರ್ಧಾರ ಪಾಕಿಸ್ತಾನಕ್ಕೆ ಆತಂಕಕಾರಿ ಸಂದೇಶವಾಗಿ ಪರಿಣಮಿಸಿದೆ.