ಗಾಂಧಿನಗರ, ನ. 29: ಗುಜರಾತ್‌ನ ವಡೋದರದಲ್ಲಿರುವ ವಾಯು ಪಡೆ ಸ್ಟೇಷನ್‌ನ ವಿಡಿಯೊ, ಫೋಟೊವನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಜೈಷ್-ಎ-ಮೊಹಮ್ಮದ್ (Jaish-e-Mohammed) ಉಗ್ರ ಸಂಘಟನೆಯ ಉಗ್ರ ಮೊಹಮ್ಮದ್ ಸಹರುಲ್ ಇಸ್ಲಾಂ (Mohammad Saharul Islam) ಸದ್ಯ ಪೊಲೀಸರ ಬಲೆಗೆ ಬಿದ್ದು, ತನಿಖೆ ವೇಳೆ ಬೆಚ್ಚಿಬೀಳಿಸುವ ವಿವರ ಬಿಚ್ಚಿಟ್ಟಿದ್ದಾನೆ. ಪಾಕಿಸ್ತಾನಕ್ಕೆ ತೆರಳಿ ಅಧಿಕೃತವಾಗಿ ಉಗ್ರ ಸಂಘಟನೆಗೆ ಸೇರುವ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ. ಅಸ್ಸಾಂ ಮೂಲದ ಈತ ಉಗ್ರ ಚಟುವಿಟಕೆ ನಡೆಸುವ ಉದ್ದೇಶದಿಂದಲೇ ಗುಜರಾತ್‌ಗೆ ತೆರಳಿದ್ದು ಗೊತ್ತಾಗಿದೆ.
ತನಿಖೆ ವೇಳೆ ಇಸ್ಲಾಂ ಬಯಾತ್ (ಪ್ರಮಾಣ ವಚನ) ಸ್ವೀಕರಿಸಿದ ನಂತರ ತಾನು ಭಯೋತ್ಪಾದಕ ಸಂಘಟನೆಯನ್ನು ಸೇರಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಉಗ್ರ ಸಂಘಟನೆಯ ಬೇರು ವಿವಿಧ ರಾಜ್ಯಗಳಲ್ಲಿ ವ್ಯಾಪಿಸಿದೆ ಎಂದು ಹೇಳಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ವಡೋದರ ವಾಯು ಪಡೆ ಸ್ಟೇಷನ್ ವೇಳೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಈತನನ್ನು ನವೆಂಬರ್ 27ರಂದು ಪೊಲೀಸರು ಬಂಧಿಸುವ ಮೂಲಕ ಸಂಭವಿಸಬಹುದಾದ ಅತೀ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಸದ್ಯ ಈತನ ವಿಚಾರಣೆ ನಡೆಸಲಾಗುತ್ತಿದೆ.
ಚಂಡೀಗಢದಲ್ಲಿ ಭಾರಿ ಉಗ್ರ ಸಂಚು ವಿಫಲ; 5 ಕೆಜಿ ಸ್ಫೋಟಕದೊಂದಿಗೆ ಮೂವರು ಉಗ್ರರ ಬಂಧನ
ದಾಳಿ ಸಂಚು ಬಯಲು
ಅಸ್ಸಾಂನ ಕರೀಂಗಂಜ್ ಜಿಲ್ಲೆಯ 22 ವರ್ಷದ ಇಸ್ಲಾಂ ದಾಳಿ ನಡೆಸಲು ಗುಜರಾತ್‌ಗೆ ಲಗ್ಗೆ ಇಟ್ಟಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸಾಮಾನ್ಯ ಪ್ರವಾಸಿಗನ ಸೋಗಿನಲ್ಲಿ ವಡೋದರ ಇಂಡಿಯನ್ ಏರ್ ಫೋರ್ಸ್ ಸ್ಟೇಷನ್‌ಗೆ ಆಗಮಿಸಿದ ಆತ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿ ಪಾಕಿಸ್ತಾನದ ನಂಬರ್‌ಗೆ ಕಳುಹಿಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನ ಬೊಬೈಲ್ ಫಾರೆನ್ಸಿಕ್ ಸೈನ್ಸ್ ಲ್ಯಾಬ್‌ಗೆ ಹಸ್ತಾಂತರಿಸಲಾಗಿದೆ. ವರ್ಷದಿಂದ ಈತನಿಗೆ ಪಾಕಿಸ್ತಾನ ಹ್ಯಾಂಡ್ಲರ್‌ಗಳು ವ್ಯಾಟ್ಸ್‌ಆ್ಯಪ್ ಮತ್ತುಇನ್‌ಸ್ಟಾಗ್ರಾಮ್ ಮೂಲಕ ತರಬೇತಿ ನೀಡುತ್ತಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ವಡೋದರ ಏರ್‌ಬೇಸ್ ಮೇಲೆ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಆ ಮೂಲಕ ಸ್ವರ್ಗಕ್ಕೆ ತೆರಳಿ ಅಲ್ಲಾಹುವನ್ನು ಭೇಟಿಯಾಗಬಹುದು ಎಂದು ಆತನ ಬ್ರೈನ್ ವಾಶ್ ಮಾಡಲಾಗಿತ್ತು.
ಭಯಾನಕ ಸಂಚು ಬಯಲಿಗೆಳೆದ ಗುಜರಾತ್ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್
ಇಸ್ಲಾಂನನ್ನು ವಡೋದರ ಸಮೀಪ ಬಂಧಿಸಿದ ಗುಜರಾತ್ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (Gujarat ATS) ಆತನ ಬಳಿಯಿಂದ ಪಾಕಿಸ್ತಾನ ನಿರ್ಮಿತ ಎಕೆ-47, 2 ಮ್ಯಾಗಝೀನ್, 23 ಬುಲೆಟ್, ಜೈಷ್-ಎ-ಮೊಹಮ್ಮದ್ ಬಾವುಟ, ಮೊಬೈಲ್ ಫೋನ್, ಸಿಮ್ ಮತ್ತು 20,000 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ದಾಹೋಡ್ ಜಿಲ್ಲೆಯ ಕಾಡೊಂದರಲ್ಲಿ ಈ ರೈಫಲ್ ಅನ್ನು ಹಸ್ತಾಂತರಿಸಲಾಗಿತ್ತು. ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಇದನ್ನು ರವಾನಿಸಿದ್ದರು ಎನ್ನಲಾಗಿದೆ.
ಶಂಕಿತ ಉಗ್ರನ ಸಂಪರ್ಕ ಜಾಲದ ತನಿಖೆ: ಶಂಕಿತ ಉಗ್ರನ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲು
ದಾಳಿ ನಡೆಸಲು ಈತನಿಗೆ 50,000 ರೂಪಾಯಿ ನೀಡಲಾಗಿತ್ತು. ಜತೆಗೆ ಏರ್‌ಬೇಸ್ ಬಗ್ಗೆ ವಿವರ ನೀಡಲಾಗಿತ್ತು. ಸದ್ಯ ವಿಚಾರಣೆಯನ್ನು ಅಸ್ಸಾಂ, ಉತ್ತರ ಪ್ರದೇಶಕ್ಕೂ ವ್ಯಾಪಿಸಲಾಗಿದೆ. ಇಸ್ಲಾಂ ಉತ್ತರ ಪ್ರದೇಶದ ಡಿಯೋಬಾಂಡ್‌ನ ಮದ್ರಸಾದಲ್ಲಿ ಶಿಕ್ಷಣ ಪಡೆದಿದ್ದ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.