ದಿಸ್‌ಪುರ, ಡಿ. 30: ಅಸ್ಸಾಂ ಪೊಲೀಸರು (Assam Police) ಪ್ರಮುಖ ಭಯೋತ್ಪಾದಕ ಜಾಲವನ್ನು ಬೇಧಿಸಿದ್ದು, ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ (Terror module) ಸಂಪರ್ಕ ಹೊಂದಿದ್ದ 11 ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈಶಾನ್ಯದಲ್ಲಿ, ವಿಶೇಷವಾಗಿ ಅಸ್ಸಾಂನಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಭಾರತೀಯ ಭದ್ರತಾ ಪಡೆ ಮತ್ತು ಗುಪ್ತಚರ ವ್ಯವಸ್ಥೆಯು ಭಾರಿ ಕಣ್ಗಾವಲನ್ನು ಕಾಯ್ದುಕೊಂಡಿದೆ.
ಬಂಧಿತ ವ್ಯಕ್ತಿಗಳನ್ನು ನಾಸಿಂ ಉದ್ದೀನ್ ಅಲಿಯಾಸ್ ನಜಿಮುದ್ದೀನ್, ಅಲಿಯಾಸ್ ತಮೀಮ್ (24), ಜುನಾಬ್ ಅಲಿ (38), ಅಫ್ರಾಹಿಂ ಹುಸೇನ್ (24), ಮಿಜಾನೂರ್ ರೆಹಮಾನ್ (46), ಸುಲ್ತಾನ್ ಮೆಹಮೂದ್ (40), ಎಂಡಿ ಸಿದ್ದಿಕ್ ಅಲಿ (46), ರಸಿದುಲ್ (82), ಮಾಹಿನ್ (2), ಶಾರುಕ್ (82), ಮಾಹಿನ್ (22), ಎಂಡಿ ದಿಲ್ಬರ್ ರಜಾಕ್ (26), ಮತ್ತು ಜಾಗೀರ್ ಮಿಯಾ (33) ಎಂದು ಗುರುತಿಸಲಾಗಿದೆ.
ಅಸ್ಸಾಂ ಸೇನಾ ನೆಲೆಯ ಮೇಲೆ ಉಗ್ರರ ದಾಳಿ, ಮೂವರು ಯೋಧರಿಗೆ ಗಾಯ
ಕೇಂದ್ರ ಗುಪ್ತಚರ ಸಂಸ್ಥೆಗಳ ವಿಶ್ಲೇಷಣೆಯ ಆಧಾರದ ಮೇಲೆ, ಪೊಲೀಸ್ ಅಧಿಕಾರಿಗಳಿಗೆ ಇಮಾಮ್ ಮಹ್ಮದರ್ ಕಫಿಲಾ (IMK) ಘಟಕದ ಚಟುವಟಿಕೆಗಳ ಕುರಿತು ಎಚ್ಚರಿಕೆ ನೀಡಲಾಗಿತ್ತು. ಐಎಂಕೆ ಎಂಬುದು ಬಾಂಗ್ಲಾದೇಶ ಮೂಲದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯ ಒಂದು ಶಾಖೆಯಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಐಎಂಕೆಯನ್ನು 2018ರಲ್ಲಿ ಜೆಎಂಬಿ ಸದಸ್ಯ ಜ್ಯುವೆಲ್ ಮಹ್ಮದ್ ಅಲಿಯಾಸ್ ಇಮಾಮ್ ಮಹ್ಮದ್ ಹಬೀಬುಲ್ಲಾ ಅಲಿಯಾಸ್ ಸೊಹೈಲ್ ಸ್ಥಾಪಿಸಿದ್ದ. ಅವನು ಐಎಂಕೆಯ ಅಮೀರ್ ಬಿರುದನ್ನು ಹೊಂದಿದ್ದಾನೆ ಮತ್ತು ಘಜ್ವತುಲ್ ಹಿಂದ್‍ನ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾನೆ.
ಆಗಸ್ಟ್ 2024ರಲ್ಲಿ ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಯ ನಂತರ, ಜೆಎಂಬಿ, ಅನ್ಸಾರುಲ್ಲಾ ಬಾಂಗ್ಲಾ ತಂಡ (ಎಬಿಟಿ) ಮತ್ತು ಭಾರತೀಯ ಉಪಖಂಡದ ಅಲ್-ಖೈದಾ (ಎಕ್ಯೂಐಎಸ್)ನ ಹಿರಿಯ ನಾಯಕರು ಐಎಂಕೆ ನಾಯಕತ್ವಕ್ಕೆ ತನ್ನ ಭಾರತೀಯ ಮಾಡ್ಯೂಲ್‌ಗಳನ್ನು ಸಕ್ರಿಯಗೊಳಿಸಲು ಮತ್ತು ವಿಸ್ತರಿಸಲು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಬಳಿಕ, ಉಮರ್ ಮತ್ತು ಖಾಲಿದ್ ಎಂದು ಗುರುತಿಸಲ್ಪಟ್ಟ ಬಾಂಗ್ಲಾದೇಶಿ ಪ್ರಜೆಗಳನ್ನು ಅಸ್ಸಾಂನೊಳಗೆ ಚಟುವಟಿಕೆಗಳನ್ನು ಸಂಘಟಿಸಲು ನಿಯೋಜಿಸಲಾಯಿತು.
ನಂತರ ನಡೆಸಿದ ತನಿಖೆಯಿಂದ ಈ ಚಟುವಟಿಕೆಗಳು ಸುರಕ್ಷಿತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಂಯೋಜಿಸಲ್ಪಡುವುದಾಗಿ ಬಹಿರಂಗವಾಯಿತು. ಪೂರ್ವ ಆಕಾಶ ಎಂಬ ಹೆಸರಿನ ಒಂದು ಗ್ರೂಪ್ ಪ್ರಮುಖ ಸಂಪರ್ಕ ಮತ್ತು ನೇಮಕಾತಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ಮೂಲದ ವ್ಯಕ್ತಿಗಳನ್ನು ಈ ಜಾಲತಾಣದ ಮೂಲಕ ಆಕ್ರಮಣಕಾರಿ ಚಿಂತನೆಗಳಿಗೆ ಪ್ರೇರೇಪಿಸಲಾಗುತ್ತಿದ್ದು, ನೇಮಕಾತಿ ಮತ್ತು ಹಣಕಾಸು ಸಹಾಯ ಮಾಡಲಾಗುತ್ತಿದೆ. ಈ ನೇಮಕಾತಿ ಭಾರತದ ಪಾಸ್‍ಪೋರ್ಟ್ ಹೊಂದಿರುವ ವ್ಯಕ್ತಿಗಳು, ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಇತಿಹಾಸ ಹೊಂದಿರುವವರು ಮತ್ತು ನಿಷೇಧಿತ ಉಗ್ರ ಸಂಘಟನೆಗಳ ಮಾಜಿ ಸದಸ್ಯರನ್ನು ಗುರಿಯಾಗಿಸಿಕೊಂಡಿದೆ.
ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ದಾಳಿ; ಇಬ್ಬರು ಸೈನಿಕರು ಹುತಾತ್ಮ
ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ಮೂಲದ ವ್ಯಕ್ತಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡಲಾಗುತ್ತಿದೆ. ಆರ್ಥಿಕವಾಗಿ ಸಜ್ಜುಗೊಳಿಸಲಾಗುತ್ತಿದೆ ಮತ್ತು ಈ ಸಂಘಟನೆಯೊಂದಿಗೆ ಸಂಪರ್ಕ ಹೊಂದಿಸಲಾಗುತ್ತಿದೆ. ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಮತ್ತು ಬಾಂಗ್ಲಾದೇಶಕ್ಕೆ ಈ ಹಿಂದೆ ಭೇಟಿ ನೀಡಿರುವ ವ್ಯಕ್ತಿಗಳು ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಮಾಜಿ ಸದಸ್ಯರು ಇದರಲ್ಲಿ ಸೇರಿದ್ದಾರೆ.
ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಾದ ನಂತರ, JMB, ABT ಮತ್ತು AQISನ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು ಹಾಗೂ ಧೈರ್ಯ ತುಂಬಲಾಯಿತು. ಇದರ ಪರಿಣಾಮವಾಗಿ ಅವರ ಸೈದ್ಧಾಂತಿಕ ಪ್ರಭಾವ ಮತ್ತು ಐಎಂಕೆ ಸಂಬಂಧಿತ ವೇದಿಕೆಗಳ ಮೂಲಕ ಭಾರತೀಯ ಜಾಲಗಳು ಪುನರುಜ್ಜೀವನಗೊಂಡಿವೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) 2023 ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), 1967ರ ಬಹು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಮತ್ತಷ್ಟು ತನಿಖೆಯನ್ನು ಮುಂದುವರಿಸಲಾಗಿದೆ.