500ವರ್ಷಗಳ ಕನಸು ನನಸು... ರಾಮಮಂದಿರದ ಶಿಖರದ ಮೇಲೆ ಹಾರಾಡಿದ ಧರ್ಮ ಧ್ವಜ-ಮೋದಿಯಿಂದ ವಿಶೇಷ ಪೂಜೆ
Ram mandir dhwajarohan: ಅಯೋಧ್ಯೆಯ ಐತಿಹಾಸಿಕ ಧ್ವಜಾರೋಹಣ ಉತ್ಸವದ ನಿಮಿತ್ತ ಇಂದು ನವೆಂಬರ್ 25, 2025 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಜನ್ಮಭೂಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಾರ್ಗಶೀರ್ಷ ಮಾಸದ ಶುಭ ವಿವಾಹ ಪಂಚಮಿಯಂದು ನಡೆಯುತ್ತಿರುವ ಈ ಕಾರ್ಯಕ್ರಮವು ರಾಮಮಂದಿರದ ಪ್ರಮುಖ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಸಂಕೇತವಾಗಿದೆ.
ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಅಯೋಧ್ಯೆಯ ರಾಮ ಮಂದಿರದ (Ayodhya Ram Mandir) ಶಿಖರದ ಮೇಲೆ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ದೆಹಲಿಯಿಂದ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣದ ಮೂಲಕ ಅಯೋಧ್ಯೆಗೆ ಆಗಮಿಸಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸಾಕೇತ್ ಕಾಲೇಜನ್ನು ತಲುಪಿದರು. ಪ್ರಧಾನಿ ಮೋದಿ ಸಾಕೇತ್ ಕಾಲೇಜಿನಿಂದ ರಸ್ತೆ ಮೂಲಕ ರಾಮ ಮಂದಿರಕ್ಕೆ ರೋಡ್ ಶೋ ಮೂಲಕ ಹೊರಟರು.
ರಾಮ ಜನ್ಮಭೂಮಿ ದೇವಾಲಯದಲ್ಲಿ ಐತಿಹಾಸಿಕ ಧ್ವಜಾರೋಹಣಕ್ಕೂ ಮುನ್ನ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೇಷಾವತಾರ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಪ್ತಮಂದಿರವನ್ನು ತಲುಪಿದರು. ಇಲ್ಲಿ ಮಹರ್ಷಿ ವಸಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯಾ, ನಿಷಾದರಾಜ ಗುಹ ಮತ್ತು ಮಾತಾ ಶಬರಿ ಅವರಿಗೆ ಸಂಬಂಧಿಸಿದ ದೇವಾಲಯಗಳಿವೆ.
ಪ್ರಧಾನಿ ಮೋದಿಯವರ ಭೇಟಿ ಆಧ್ಯಾತ್ಮಿಕವಾಗಿಯೂ ಮಹತ್ವದ್ದಾಗಿದೆ. ಏಕೆಂದರೆ ಅವರು ಮಧ್ಯಾಹ್ನ 12 ಗಂಟೆಗೆ ದೇವಾಲಯ ಸಂಕೀರ್ಣದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಿದರು. ಈ ಧ್ವಜಾರೋಹಣವನ್ನು ದೇವಾಲಯದ ನಿರ್ಮಾಣ ಪೂರ್ಣಗೊಂಡ ಸಂಕೇತ ಮತ್ತು ಪ್ರಮುಖ ಸಾಂಸ್ಕೃತಿಕ ಆಚರಣೆ ಎಂದು ಪರಿಗಣಿಸಲಾಗಿದೆ.
ವಿಡಿಯೊ ವೀಕ್ಷಿಸಿ:
#WATCH | Ayodhya Dhwajarohan | Prime Minister Narendra Modi reaches the Saptmandir, which houses temples related to Maharshi Vashishtha, Maharshi Vishwamitra, Maharshi Agastya, Maharshi Valmiki, Devi Ahilya, Nishadraj Guha and Mata Shabari
— ANI (@ANI) November 25, 2025
(Source: DD) pic.twitter.com/JM9qKbb8Uu
#WATCH | Ayodhya Dhwajarohan | Prime Minister Narendra Modi offers prayers at the Sheshavtar Mandir ahead of the historic flag hoisting at Shri Ram Janmabhoomi Temple
— ANI (@ANI) November 25, 2025
(Source: DD) pic.twitter.com/o2hcuBMF7g
ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಅವರು ರಾಮಲಲ್ಲಾ ದೇವಾಲಯದ ಮೇಲ್ಭಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ. ಅತ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೇವಾಲಯ ಸಂಕೀರ್ಣಕ್ಕೆ ಪ್ರವೇಶವನ್ನು QR ಕೋಡ್‌ನೊಂದಿಗೆ ಆಹ್ವಾನಿಸಲಾದ ಅತಿಥಿಗಳಿಗೆ ಮಾತ್ರ ಪ್ರವೇಶವಿದೆ. ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ರಾಮ ದೇವಾಲಯದ ಮೇಲ್ಭಾಗದಲ್ಲಿ ಧರ್ಮಧ್ವಜದ ಪ್ರತಿಷ್ಠಾಪನೆಯು ಅಭಿಜಿತ್ ಮುಹೂರ್ತ (ರಾಮ ಮಾಸದ ಸಮಯ) ದ ಸಮಯದಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಮ ಮಂದಿರದ ಮೊದಲ ಮಹಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ದರ್ಬಾರ್‌ನಲ್ಲಿ ಪೂಜೆ ಸಲ್ಲಿಸಿದರು. ಭಗವಾನ್ ರಾಮ ಲಲ್ಲಾ ಅವರ ಪವಿತ್ರೀಕರಣದ ಸಮಯದಲ್ಲಿ ರಾಮ ದರ್ಬಾರ್ ಅನ್ನು ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿಲ್ಲ. ರಾಮ ದರ್ಬಾರ್ ಇತ್ತೀಚೆಗೆ ಪೂರ್ಣಗೊಂಡಿತು.