ಕ್ಯಾಚರ್, ಜ.12: ಬಾಂಗ್ಲಾದೇಶದಿಂದ ಬಂದಿರಬಹುದೆಂದು ಹೇಳಲಾದ ದೊಡ್ಡ ಬಲೂನ್ ಅನ್ನು ಅಸ್ಸಾಂನ (Assam) ಕ್ಯಾಚರ್ ಜಿಲ್ಲೆಯಲ್ಲಿ ಭಾನುವಾರ ಪತ್ತೆಹಚ್ಚಲಾಗಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ. ಬಾಂಗ್ಲಾದೇಶದ (Bangladesh) ಸಿಲ್ಹೆಟ್‌ನಲ್ಲಿರುವ ಘಿಲಾಚಾರ ದ್ವಿಮುಖಿ ಪ್ರೌಢಶಾಲೆಯ ಹೆಸರನ್ನು ಬಲೂನಿನ (Ballon) ಮೇಲೆ ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಚರ್‌ನ ಬೋರ್ಖೋಲಾ ಪ್ರದೇಶದಲ್ಲಿ ಬಲೂನ್ ಪತ್ತೆಯಾಗಿದೆ.
ಅಸಾಮಾನ್ಯವಾಗಿ ದೊಡ್ಡ ಬಲೂನ್ ಕೃಷಿ ಹೊಲಕ್ಕೆ ಇಳಿದಾಗ ಎಲ್ಲರ ಗಮನ ಸೆಳೆಯಿತು ಎಂದು ಸ್ಥಳೀಯರು ಹೇಳಿದರು. ಅದನ್ನು ನೋಡಿ ಗಾಬರಿಗೊಂಡ ಗ್ರಾಮಸ್ಥರು ವಿಲೇಜ್ ಡಿಫೆನ್ಸ್ ಪಾರ್ಟಿ (ವಿಡಿಪಿ) ಗೆ ಮಾಹಿತಿ ನೀಡಿದರು. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
Pakistan Drones: ಭಾರತದೊಳಗೆ ನುಗ್ಗಿದ ಪಾಕ್ ಡ್ರೋನ್‌ಗಳು, ಹೊಡೆದುರುಳಿಸಿದ ಸೇನೆ
ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿತು. ನಂತರ ಕ್ಯಾಚರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ಕೂಡ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಬರುವ ಹೊತ್ತಿಗೆ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತ್ತು.
ಶಾಲೆಯ ಹೆಸರಿನ ಜೊತೆಗೆ, ಬಲೂನಿನ ಮೇಲೆ ಮೂವರು ವ್ಯಕ್ತಿಗಳ ಛಾಯಾಚಿತ್ರಗಳು ಮತ್ತು ಬಂಗಾಳಿ ಭಾಷೆಯಲ್ಲಿ ಬರೆದ ಪಠ್ಯವಿತ್ತು. ಬಲೂನ್ ಅಂತಾರಾಷ್ಟ್ರೀಯ ಗಡಿಯನ್ನು ಹೇಗೆ ದಾಟಿತು ಮತ್ತು ಯಾವುದೇ ಭದ್ರತಾ ಅಡೆತಡೆಗಳಿವೆಯೇ ಎಂದು ತಿಳಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
2025ನೇ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಪಾಕಿಸ್ತಾನಿ ಗುರುತುಗಳನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ ಪತ್ತೆಯಾಗಿತ್ತು. ಭಾರತೀಯ ಸೇನೆಯು ಬಲೂನ್ ವಶಪಡಿಸಿಕೊಂಡಿತ್ತು. ಆ ಬಲೂನ್ ವಿಮಾನವನ್ನು ಹೋಲುತ್ತಿತ್ತು. ಅದರ ಮೇಲೆ ಪಾಕಿಸ್ತಾನಿ ಧ್ವಜದ ಗುರುತು ಮತ್ತು PIA (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಎಂದು ಬರೆಯಲಾಗಿತ್ತು. ಅದರ ಮೇಲೆ PIA ಎಂಬ ಪದವನ್ನು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಬರೆದಿರುವುದು ಕಂಡು ಬಂದಿತ್ತು.
ಇದಕ್ಕೂ ಮೊದಲು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮನೆಯೊಂದರ ಛಾವಣಿಯ ಮೇಲೆ ಇದೇ ರೀತಿಯ ಬಲೂನ್ ಪತ್ತೆಯಾಗಿತ್ತು. ಆ ಬಲೂನ್ ವಿಮಾನವನ್ನು ಹೋಲುತ್ತಿತ್ತು. ಪಾಕಿಸ್ತಾನಿ ಧ್ವಜದ ಗುರುತುಗಳು ಮತ್ತು ಅದರ ಮೇಲೆ PIA (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಎಂದು ಬರೆಯಲಾಗಿತ್ತು. ಉನಾ ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಇದೇ ರೀತಿಯ ಘಟನೆ ವರದಿಯಾದ ಕೆಲವು ದಿನಗಳ ನಂತರ ಈ ಘಟನೆ ನಡೆದಿತ್ತು. ಇದು ಕೂಡ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಇನ್ನು ನವೆಂಬರ್ ತಿಂಗಳಿನಲ್ಲಿ ಪಾಕಿಸ್ತಾನ ಎಂದು ಬರೆದಿರುವ ಬಲೂನ್ ಭಾರತದ ಅಂತಾರಾಷ್ಟ್ರೀಯ ಗಡಿ ಪ್ರದೇಶವಾದ ಜಮ್ಮುವಿನ ಬಳಿ ಪತ್ತೆಯಾಗಿತ್ತು. ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ಜಮ್ಮುವಿನೊಳಗೆ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ರಂಜನ್ ಪ್ರದೇಶದಲ್ಲಿ ಹಸಿರು ಮತ್ತು ಬಿಳಿ ಬಣ್ಣದ ಬಲೂನ್ ಪತ್ತೆಯಾಗಿತ್ತು. ಘರೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಡು ಬಂದ ಬಲೂನ್ ಅನ್ನು ಸೇನಾ ಸಿಬ್ಬಂದಿಯೊಂದಿಗೆ ತೆರಳಿದ ಪೊಲೀಸ್ ತಂಡ ವಶಕ್ಕೆ ಪಡೆದಿತ್ತು.