ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾರಾಮತಿ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಕಾಂಗ್ರೆಸ್; ಸುನೇತ್ರ ಪವಾರ್ ಅವಿರೋಧ ಆಯ್ಕೆ

ಅಜಿತ್ ಪವಾರ್ ನಿಧನದ ಬಳಿಕ ತೆರವಾಗಿರುವ ಬಾರಾಮತಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 23 ರಂದು ನಡೆಯಲಿದೆ. ಅಂತಿಮ ಕ್ಷಣದಲ್ಲಿ ಈಗ ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದೆ. ಹೀಗಾಗಿ ಸುನೇತ್ರ ಪವಾರ್ ಅವಿರೋಧ ಆಯ್ಕೆ ಖಚಿತವಾಗಿದೆ. ಶರದ್ ಪವಾರ್ ಮತ್ತು ಸುಪ್ರಿಯಾ ಸುಲೇ ಸೇರಿದಂತೆ ಹಿರಿಯ ಎನ್‌ಸಿಪಿ (ಎಸ್‌ಪಿ) ನಾಯಕರ ಒತ್ತಾಯದ ಕಾರಣದಿಂದ ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದೆ.

ಸುನೇತ್ರ ಪವಾರ್ (ಸಂಗ್ರಹ ಚಿತ್ರ)

ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ (Maharastra DCM) ಅಜಿತ್ ಪವಾರ್ (Ajit Pawar) ಅವರ ನಿಧನದ ಬಳಿಕ ತೆರವಾಗಿರುವ ಬಾರಾಮತಿ ವಿಧಾನ ಸಭಾ ಕ್ಷೇತ್ರದ (Baramati Assembly) ಉಪಚುನಾವಣೆ (Baramati by election ) ಏಪ್ರಿಲ್ 23 ರಂದು ನಡೆಯಲಿದೆ. ಅಂತಿಮ ಕ್ಷಣದಲ್ಲಿ ಇದೀಗ ಚುನಾವಣಾ ಕಣದಿಂದ ಕಾಂಗ್ರೆಸ್ (Cogress) ಹಿಂದೆ ಸರಿದಿದ್ದು ಸುನೇತ್ರ ಪವಾರ್ (Sunetra Pawar) ಅವರ ಗೆಲುವಿಗೆ ಮಣೆ ಹಾಕಿಕೊಟ್ಟಿದೆ. ಶರದ್ ಪವಾರ್ ಮತ್ತು ಸುಪ್ರಿಯಾ ಸುಲೇ ಸೇರಿದಂತೆ ಹಿರಿಯ ಎನ್‌ಸಿಪಿ (ಎಸ್‌ಪಿ) ನಾಯಕರ ಒತ್ತಾಯದ ಕಾರಣದಿಂದ ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದೆ ಎನ್ನಲಾಗಿದೆ.

ವರ್ಷದ ಆರಂಭದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಎನ್‌ಸಿಪಿ ಮಾಜಿ ನಾಯಕ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಸುನೇತ್ರ ಅವರ ಪತಿ ಅಜಿತ್ ಪವಾರ್ ನಿಧನರಾಗಿದ್ದು, ಅವರ ಬಳಿಕ ಬಾರಾಮತಿ ಕ್ಷೇತ್ರಕ್ಕೆ ಸುನೇತ್ರ ಅವರನ್ನು ಎನ್‌ಸಿಪಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಎನ್‌ಸಿಪಿ ನಾಯಕರ ಒತ್ತಾಯದ ಕಾರಣದಿಂದ ಕಾಂಗ್ರೆಸ್ ಈಗ ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಹಿಂದಕ್ಕೆ ಕರೆಸಿದೆ. ಇದರಿಂದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಸುನೇತ್ರ ಪವಾರ್ ಅವರು ಅವಿರೋಧವಾಗಿ ಗೆಲ್ಲಲಿದ್ದಾರೆ.

7ನೇ ವೇತನ ಆಯೋಗ, ಮಹಿಳಾ ಸುರಕ್ಷತೆ : ಪಶ್ಚಿಮ ಬಂಗಾಳಕ್ಕೆ ಆರು ಗ್ಯಾರಂಟಿ ಘೋಷಿಸಿದ ಪ್ರಧಾನಿ

ಛಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ನೇತೃತ್ವದ ಹಿರಿಯ ಎನ್‌ಸಿಪಿ ನಾಯಕರ ನಿಯೋಗವು ಕಾಂಗ್ರೆಸ್ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗಿ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು ಎನ್ನಲಾಗಿದೆ.

ಪವಾರ್ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಬಾರಾಮತಿ ವಿಧಾನ ಸಭಾ ಕ್ಷೇತ್ರದಲ್ಲಿ 1991ರಿಂದಲೂ ಅಜಿತ್ ಪವಾರ್ ಗೆದ್ದಿದ್ದರು. ಅದಕ್ಕೂ ಮೊದಲು ಅವರ ಚಿಕ್ಕಪ್ಪ ಶರದ್ ಪವಾರ್ ಈ ಕ್ಷೇತ್ರದ ಮೇಲೆ ನಿಯಂತ್ರಣ ಹೊಂದಿದ್ದರು.

ಜನವರಿಯಲ್ಲಿ ಬಾರಾಮತಿಯಲ್ಲಿ ಇಳಿಯುವ ವೇಳೆ ವಿಮಾನ ಅಪಘಾತಕ್ಕೀಡಾಗಿ ಅಜಿತ್ ಪವಾರ್ ಸಾವನ್ನಪ್ಪಿದ್ದರು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಾರಾಮತಿ ಶಾಸಕರಾಗಿದ್ದ ಅವರ ಸ್ಥಾನಕ್ಕೆ ಒಂದು ತಿಂಗಳ ಬಳಿಕ ಅವರ ಪತ್ನಿ ಸುನೇತ್ರ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

ಕಾಂಗ್ರೆಸ್ ಹಿಂದೆ ಸರಿದಿದ್ದು ಏಕೆ?

ಮಹಾರಾಷ್ಟ್ರದಲ್ಲಿ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಗುರುವಾರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಪಕ್ಷದ ಅಭ್ಯರ್ಥಿ ಅಮರ್ ಮೋರೆ ಅವರು ಬಾರಾಮತಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ತಿಳಿಸಿದರು.

"ರಣಕಹಳೆʼಯಾದೀತೇ ʼಬಣ್ಣದ ತಗಡಿನ ತುತ್ತೂರಿʼ ?

ಭಾರತೀಯ ಚುನಾವಣಾ ಆಯೋಗವು ಬಿಜೆಪಿಯ ಬಿ-ತಂಡದಂತೆ ಕಾರ್ಯನಿರ್ವಹಿಸುತ್ತಿದೆ. ಬಾರಾಮತಿ ಕ್ಷೇತ್ರದಲ್ಲಿ ಸೈದ್ಧಾಂತಿಕ ಯುದ್ಧ ಉಂಟು ಮಾಡಲು ಸುನೇತ್ರಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯುವಂತೆ ಅದು ಮಾಡಿತ್ತು. ಆದರೆ ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಭಾಗವಾಗಿದ್ದ ಅಜಿತ್ ಪವಾರ್ ಅವರ ಮೇಲಿನ ಗೌರವದಿಂದಾಗಿ ಪಕ್ಷವು ಅಂತಿಮವಾಗಿ ತನ್ನ ನಿಲುವನ್ನು ಬದಲಾಯಿಸಿದೆ ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author