ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇಂದ್ರದಿಂದ ವಿಶ್ವಾಸಘಾತ: ಮತ್ತೊಂದು ಪ್ರತಿಭಟನೆ ಬಗ್ಗೆ ಸಿಜೆಪಿ ಎಚ್ಚರಿಕೆ

CJP protest: ಕೇಂದ್ರ ಸರ್ಕಾರವು ಯುವಕರಿಗೆ ನೀಡಿದ ಭರವಸೆಯನ್ನು ಮುರಿದು ವಿಶ್ವಾಸದ್ರೋಹ ಮಾಡಿದೆ. ಹೀಗಾಗಿ ಜಂತರ್ ಮಂತರ್ ಮಾದರಿಯ ಮತ್ತೊಂದು ಪ್ರತಿಭಟನೆಯನ್ನು ನಡೆಸುವ ಬಗ್ಗೆ ಕಾಕ್ರೋಚ್ ಜನತಾ ಪಕ್ಷ ಎಚ್ಚರಿಕೆಯನ್ನು ನೀಡಿದೆ. ಕೂಡಲೇ ಜಂತರ್ ಮಂತರ್ ಪ್ರತಿಭಟನೆ ಕೊನೆಗೊಳಿಸಲು ನೀಡಿದ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನೇತೃತ್ವದಲ್ಲಿ ಇತ್ತೀಚೆಗೆ ದೆಹಲಿಯ (Delhi) ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯನ್ನು (Jantar Mantar protest) ಶಾಂತಿಯುತವಾಗಿ ಕೊನೆಗೊಳಿಸಲು ಕೇಂದ್ರ ಸರ್ಕಾರವು ನೀಡಿರುವ ಭರವಸೆಯನ್ನು ಈಡೇರಿಸಿಲ್ಲ. ತಕ್ಷಣವೇ ಇದನ್ನು ಈಡೇರಿಸದಿದ್ದರೆ ಮತ್ತೊಂದು ಪ್ರತಿಭಟನೆಯನ್ನು ನಡೆಸುವುದಾಗಿ ಭಾನುವಾರ ಎಚ್ಚರಿಕೆ ನೀಡಿರುವ ಸಿಜೆಪಿ (CJP), ಕೇಂದ್ರ ಸರ್ಕಾರವು ಯುವಕರಿಗೆ ದ್ರೋಹ ಮಾಡಿದೆ. ಅವರಿಗೆ ಕೊಟ್ಟಿರುವ ಭರವಸೆಯನ್ನು ಮುರಿದಿದೆ ಎಂದು ಆರೋಪಿಸಿದೆ.

ದೇಶಾದ್ಯಂತ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳನ್ನು ಕೊನೆಗೊಳಿಸಲು ಸರ್ಕಾರ ಮಣಿದು ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿತ್ತು. ಆದರೆ ಅದನ್ನು ಇನ್ನೂ ಈಡೇರಿಸಲಾಗಿಲ್ಲ ಎಂದು ಕಾಕ್ರೋಚ್ ಜನತಾ ಪಕ್ಷದ ನಾಯಕರು ಹೇಳಿದೆ.

ಸಿಜೆಪಿ ಕಾರ್ಯಕರ್ತರ ಮೇಲಿನ ದಾಳಿ ಬಳಿಕ ಶಿಥಿಲಗೊಂಡಿದ್ದ ಶಾಲೆಗೆ ಹೊಸ ಕಟ್ಟಡ: ರಾಜಸ್ಥಾನ ಸರ್ಕಾರ ಆದೇಶ

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಿಜೆಪಿ, ಶಾಂತಿಯುತ ಚಳುವಳಿಯನ್ನು ಕೊನೆಗೊಳಿಸಲು ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಆದರೆ ಅದು ಈಗ ತನ್ನ ಮಾತು ಮರೆಯುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಸರ್ಕಾರವು ಒಂದು ಪೀಳಿಗೆಯನ್ನು ಅವಮಾನಿಸಲು ನಾವು ಬಿಡುವುದಿಲ್ಲ ಎಂದು ತಿಳಿಸಿದೆ.

ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ನ್ಯಾಯಾಲಯದಿಂದ ಪದೇ ಪದೇ ವಿನಂತಿಗಳು ಬಂದಿದ್ದರೂ ಕೂಡ ಸರ್ಕಾರ ಇನ್ನೂ ಪಟ್ಟಿಯನ್ನು ಒದಗಿಸಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ, ಸಿಜೆಪಿ ಸಹ -ಸಂಚಾಲಕ ಸೌರವ್ ದಾಸ್ ಮತ್ತು ಕಾನೂನು ವ್ಯವಹಾರಗಳ ನಾಯಕಿ ರತ್ನಾ ಸಿಂಗ್ ತಿಳಿಸಿದ್ದಾರೆ.

ಸರ್ಕಾರ ಗಂಭೀರವಾಗಿ ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ನಾವು ಪ್ರತಿಭಟನೆ ಹಿಂತೆಗೆದುಕೊಂಡಿದ್ದೆವು. ಆದರೆ ಈಗ ಸರ್ಕಾರವು ಈ ದೇಶದ ಯುವ ಪೀಳಿಗೆಯನ್ನು ವಂಚಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಒಡಿಶಾ ಕರಾವಳಿಯಲ್ಲಿ ಮುಳುಗಿದ ಸರಕು ಹಡಗು: ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ

ತಮಗೆ ನೀಡಿರುವ ಭರವಸೆಯನ್ನು ಈಡೇರಿಸದೇ ಇದ್ದರೆ ಕಾಕ್ರೋಚ್ ಜನತಾ ಪಕ್ಷವು ಮತ್ತೊಮ್ಮೆ ಪ್ರತಿಭಟನೆ ನಡೆಸಲಿದೆ. ಈ ಕುರಿತು ನಿರ್ಣಯ ಕೈಗೊಳ್ಳಲು ಆಗಸ್ಟ್ 24ರಂದು ಸಭೆ ಸೇರ ಲಾಗುವುದು. ಆತ್ಮಹತ್ಯೆ ನಡೆಸಿರುವ ನೀಟ್ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ಸಲುವಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಏನು ಎಂಬುದು ಕೂಡ ತಿಳಿದು ಬಂದಿಲ್ಲ. ಯುವ ಪೀಳಿಗೆಗೆ ನೀಡಿದ ಪ್ರತಿಯೊಂದು ಬದ್ಧತೆಯನ್ನು ಈಡೇರಿಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author