ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election: ಚುನಾವಣಾ ಪ್ರಚಾರ ಯಾರಿಗೆ ಬೇಕು...?ನಮ್ಗೆ ಬಿರಿಯಾನಿ ಸಿಕ್ರೆ ಸಾಕು! ಭಾರೀ ವೈರಲಾಗ್ತಿದೆ ಈ ವಿಡಿಯೊ

Viral Video: ಬಿಹಾರ ವಿಧಾಸಭಾ ಚುನಾವಣಾ ಪ್ರಚಾರದ ವೇಳೆ ಬಿರಿಯನಿಗಾಗಿ ಗಲಾಟೆ ನಡೆದಿರುವ ಘಟನೆ ಕಿಶನ್‌ಗಂಜ್‌ನಲ್ಲಿ ನಡೆದಿದೆ. ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಭ್ಯರ್ಥಿ ಬೆಂಬಲಿಗರು ಬಿರಿಯಾನಿ ಹಂಚಿಕೆ ವೇಳೆ ಗಲಾಟೆ ಮಾಡಿದ್ದು ಇದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪಟನಾ: ಚುನಾವಣಾ ಪ್ರಚಾರದ (Bihar Legislative Assembly elections) ವೇಳೆ ಬಿರಿಯನಿಗಾಗಿ ಜನರು ತಟ್ಟೆ ಹಿಡಿದು ಗಲಾಟೆ ನಡೆಸಿರುವ ಘಟನೆ ಬಿಹಾರದ (bihar) ಕಿಶನ್‌ಗಂಜ್‌ನಲ್ಲಿ (Kishanganj) ನಡೆದಿದೆ. ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen) ಅಭ್ಯರ್ಥಿ ತೌಸಿಫ್ ಆಲಂ ( Tausif Alam) ಅವರ ಬೆಂಬಲಿಗರು ಬಿರಿಯನಿಗಾಗಿ ಗಲಾಟೆ ನಡೆಸಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದು, ಚುನಾವಣೆ ಪ್ರಚಾರದಲ್ಲಿ ಬಿರಿಯಾನಿ ವಿತರಣೆ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿದ್ದಾರೆ.

ನವೆಂಬರ್ ತಿಂಗಳ ಆರಂಭದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಅದರಂತೆ ಕಿಶನ್‌ಗಂಜ್‌ನ ಬಹದ್ದೂರ್‌ಗಂಜ್ ಕ್ಷೇತ್ರದಲ್ಲಿ ಚುನಾವಣಾ ಪೂರ್ವ ರಾಲಿ ನಡೆಸುತ್ತಿದ್ದ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನ ಅಭ್ಯರ್ಥಿ ತೌಸಿಫ್ ಆಲಂ ಅವರ ಬೆಂಬಲಿಗರು ಬಿರಿಯನಿಗಾಗಿ ಗಲಾಟೆ ನಡೆಸಿದ್ದಾರೆ.

ಆಲಂ ಅವರ ನಾಮಪತ್ರ ಸಲ್ಲಿಕೆಗೆ ಮುನ್ನ ಫಾತಿಹಾ ಖಾನಿ ಪ್ರಾರ್ಥನಾ ಅಧಿವೇಶನವನ್ನು ನಡೆಸಲಾಯಿತು. ಈ ವೇಳೆ ಸೇರಿದ್ದ ಸಾವಿರಾರು ಜನರಿಗೆ ಬಿರಿಯಾನಿಯನ್ನು ವಿತರಿಸಲಾಯಿತು. ಆದರೆ ಈ ವೇಳೆ ನೂಕು ನುಗ್ಗಲು ಉಂಟಾಗಿದ್ದುಗಲಾಟೆಗೆ ಕಾರಣವಾಗಿತ್ತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಬಿರಿಯನಿಗಾಗಿ ಜನರು ಮುಗಿಬಿದ್ದಿದ್ದು, ಕೆಲವರು ತಟ್ಟೆಯನ್ನು ಹಿಡಿಯಲು ಒಬ್ಬರ ಮೇಲೆ ಇನ್ನೊಬ್ಬರು ಹತ್ತಿದರು. ಕೆಲವರು ಹತ್ತಿರದಲ್ಲಿರುವವರನ್ನು ತಳ್ಳುವ ಪ್ರಯತ್ನ ಮಾಡಿದರು. ಶಾಂತಿಯುತವಾಗಿ ನಡೆಯುತ್ತಿರುವಂತೆ ಕಾಣುತ್ತಿದ್ದ ಬಿರಿಯಾನಿ ವಿತರಣೆ ವೇಳೆ ಜನರು ತಳ್ಳುವುದು, ತಟ್ಟೆಯನ್ನು ಹಿಡಿಯಲು ಪರದಾಡುವುದನ್ನು ಕಾಣಬಹುದು. ಇದರಿಂದ ಗಲಾಟೆ ಉಂಟಾಗಿದೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಕಾಮೆಂಟ್ ಮಾಡಿದ್ದು ಇದು ಪ್ರಚಾರ ರಾಲಿಯೊ ಅಥವಾ ಆಹಾರ ರಿಯಾಲಿಟಿ ಶೋ ನ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೊ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಈಳವರು ಇದು ಬಿಹಾರದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಆಹಾರ ಅಥವಾ ಇತರ ಉಚಿತ ವಸ್ತುಗಳನ್ನು ಹಂಚುವುದು ಪ್ರಚೋದನೆಯಾಗಿದೆ. ಎಂದು ಕೆಲವರು ತಿಳಿಸಿದ್ದಾರೆ.



ಬಿರಿಯಾನಿ ಹಂಚಿಕೆ ವಿಚಾರವನ್ನು ಸಮರ್ಥಿಸಿಕೊಂಡಿರುವ ತೌಸಿಫ್ ಆಲಂ, ಇದು ಧಾರ್ಮಿಕ ಸಭೆಯಾಗಿದ್ದು, ಫಾತಿಹಾ ಖಾನಿ ಆಚರಣೆಯ ಹಿನ್ನೆಲೆಯಲ್ಲಿ ಬಿರಿಯಾನಿಯನ್ನು ವಿತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ನನ್ನ ಬೆಂಬಲಿಗರ ಶಾಂತಿಯುತ ಸಭೆಯಾಗಿತ್ತು. ನನ್ನ ಬೆಂಬಲಿಗರು ಸಮಸ್ಯೆಯನ್ನು ಬಗೆ ಪರಿಹರಿಸಲು ಪ್ರಯತ್ನಿಸಿದರು ಎಂದರು.

ಇದನ್ನೂ ಓದಿ: ಪ್ರಹ್ಲಾದ ಜೋಶಿ ಅವರಿಂದ ಚೆನ್ನೈನಲ್ಲಿ ವಿಂಡರ್ಜಿ ಇಂಡಿಯಾ 2025 ಉದ್ಘಾಟನೆ

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಆಜಾದ್ ಸಮಾಜ ಪಕ್ಷ (ASP), ಜನತಾ ಪಕ್ಷ (AJP) ಜೊತೆಗೆ ಗ್ರ್ಯಾಂಡ್ ಡೆಮಾಕ್ರಟಿಕ್ ಅಲೈಯನ್ಸ್‌ನ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ 64 ಸ್ಥಾನಗಳನ್ನು ಗುರಿಯಾಗಿಸಿಕೊಂಡು ದೊಡ್ಡ ಮೈತ್ರಿಕೂಟದೊಂದಿಗೆ 35 ಸ್ಥಾನಗಳ ಮೇಲೆ ಕೇಂದ್ರೀಕರಿಸಿದೆ.

ವಿದ್ಯಾ ಇರ್ವತ್ತೂರು

View all posts by this author