ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election Result 2025: ಎನ್‌ಡಿಎ ಭಾರೀ ಮುನ್ನಡೆ; JDU ಕಮಾಲ್‌, ನಿತೀಶ್‌ ಸಿಎಂ ಆಗೋದು ಫಿಕ್ಸ್‌!

Bihar Election: ಬಿಹಾರದಲ್ಲಿ ಚುನಾವಣೆಯ ಫಲಿತಾಂಶ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಎನ್‌ಡಿಗೆ ಸಂಪೂರ್ಣ ಬಹುಮತವನ್ನು ಪಡೆದುಕೊಂಡು ಮುನ್ನಡೆಯನ್ನು ಸಾಧಿಸಿದೆ. ಇದುವರೆಗೆ ಎನ್‌ಡಿಗೆ 190 ಕ್ಕೂ ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡದೆ. ಬೆಳಿಗ್ಗೆ 8 ಗಂಟೆಗೆ ಎಣಿಕೆ ಆರಂಭವಾಯಿತು, ಮತ್ತು ಅಂಚೆ ಮತಪತ್ರಗಳು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎಗೆ ತಕ್ಷಣದ ಆರಂಭವನ್ನು ನೀಡಿತು. ಬೆಳಿಗ್ಗೆ 10:30 ರ ಸುಮಾರಿಗೆ, ಆರಂಭಿಕ ಮುನ್ನಡೆಗಳು ಬಿಜೆಪಿಗೆ ಕಂಡುಬಂದವು.

ಸಂಗ್ರಹ ಚಿತ್ರ

ಪಟನಾ: ಬಿಹಾರದಲ್ಲಿ ಚುನಾವಣೆಯ ಫಲಿತಾಂಶ (Bihar Election Result 2025) ನಿರ್ಣಾಯಕ ಹಂತಕ್ಕೆ ತಲುಪಿದ್ದು, ಎನ್‌ಡಿಗೆ ಸಂಪೂರ್ಣ ಬಹುಮತವನ್ನು ಪಡೆದುಕೊಂಡು ಮುನ್ನಡೆಯನ್ನು ಸಾಧಿಸಿದೆ. ಇದುವರೆಗೆ ಎನ್‌ಡಿಗೆ 190 ಕ್ಕೂ ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡದೆ. (Nitish Kumar) ಇನ್ನು ಮಹಾಘಟಬಂಧನ್ 50 ಸ್ಥಾನಗಳಲ್ಲಿ ಮುಂದಿದೆ. ಜೆಡಿ(ಯು) ಸೇರಿದಂತೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಭಾರಿ ಗೆಲುವು ಸಿಗುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿದ್ದವು.

ಬೆಳಿಗ್ಗೆ 8 ಗಂಟೆಗೆ ಎಣಿಕೆ ಆರಂಭವಾಯಿತು, ಮತ್ತು ಅಂಚೆ ಮತಪತ್ರಗಳು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎಗೆ ತಕ್ಷಣದ ಆರಂಭವನ್ನು ನೀಡಿತು. ಬೆಳಿಗ್ಗೆ 10:30 ರ ಸುಮಾರಿಗೆ, ಆರಂಭಿಕ ಮುನ್ನಡೆಗಳು ಬಿಜೆಪಿಗೆ ಕಂಡುಬಂದವು. ಆರಂಭಿಕ ಟ್ರೆಂಡ್‌ಗಳು ಆಡಳಿತಾರೂಢ ಎನ್‌ಡಿಎ 185 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬಹುಮತದ ಗಡಿಯನ್ನು ಸುಲಭವಾಗಿ ದಾಟುವಂತೆ ಮಾಡಿದ್ದವು. ತೇಜಸ್ವಿ ಯಾದವ್ ಅವರ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಎರಡನೇ ಸ್ಥಾನ ಪಡೆಯುವ ನಿರೀಕ್ಷೆಯಿದ್ದು, 54 ಸ್ಥಾನಗಳಲ್ಲಿ ಮುಂದಿದೆ. ಪ್ರಶಾಂತ್ ಕಿಶೋರ್ ಅವರ ಹೊಸ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ಮತ್ತು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ತಲಾ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು.

2020 ರ ಚುನಾವಣೆಯಲ್ಲಿ, NDA ವಿಧಾನಸಭೆಯಲ್ಲಿ ಬಹುಮತ ಗಳಿಸಿತು. 125 ಸ್ಥಾನಗಳನ್ನು ಗೆದ್ದಿತು, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದಾಗ್ಯೂ, ಆಗಸ್ಟ್ 2022 ರಲ್ಲಿ, ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ RJD-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಜೊತೆ ಸರ್ಕಾರ ರಚಿಸಿದ್ದರು.

ಈ ಸುದ್ದಿಯನ್ನೂ ಓದಿ: Bihar Election Results 2025 LIVE: ಬಿಹಾರ ಚುನಾವಣೆ ಮತ ಎಣಿಕೆ ಫಲಿತಾಂಶ: ಕ್ಷಣಕ್ಷಣದ ಸುದ್ದಿ

ಎರಡು ಹಂತದಲ್ಲಿ ನಡೆದ ಬಿಹಾರದ 18ನೇ ವಿಧಾನಸಭಾ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ (Woman Voters) ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಪುರುಷರ ಮತದಾನ ಪ್ರಮಾಣ ಶೇ. 62.8 ಆಗಿದ್ದರೆ, ಮಹಿಳೆಯರ ಮತದಾನ ಪ್ರಮಾಣ ಶೇ. 71.6. ಒಟ್ಟು 1,00,16,921 ಪುರುಷರು ಮತ ಚಲಾಯಿಸಿದರೆ 1,00,20,796 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಅಂದರೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರು 3,875 ಹೆಚ್ಚಿರುವುದನ್ನು ಇದು ತೋರಿಸಿದೆ.

ನಿತೀಶ್‌ ಸಿಎಂ ಆಗೊದು ಖಚಿತ?

ಬಿಜೆಪಿಗಿಂತ ಹೆಚ್ಚಿನ ಸ್ಥಾನವನ್ನು ಕಾಯ್ದುಕೊಂಡಿರುವ ಜೆಡಿಯು ಸರ್ಕಾರ ರಚಿಸುವುದು ಬಹುತೇಕ ಖಚಿತ. ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಯು ದುರ್ಬಲ ಶಕ್ತಿಯಾಗಿ ಕಾಣುತ್ತಿದ್ದ ಸಮಯದಲ್ಲಿಯೇ ಎನ್‌ಡಿಎ ಮೈತ್ರಿಕೂಟವನ್ನು ನಿತೀಶ್‌ ಎತ್ತಿ ನಿಲ್ಲಿಸಿದ್ದರು.