ಪಟನಾ: ಬಿಹಾರದಲ್ಲಿ ಚುನಾವಣೆ (Bihar Assembly Election) ಕಾವು ಏರಿದ್ದು, ಪ್ರಶಾಂತ್ ಕಿಶೋರ್ (Prashant Kishor) ನೇತೃತ್ವದ ಜನ್ ಸುರಾಜ್ ಪಕ್ಷವು ಇಂದು ಮಧ್ಯಾಹ್ನ ತನ್ನ ಪಕ್ಷದಿಂದ ಸ್ಪರ್ಧಿಸುವ 51 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಠ್ಯಪುಸ್ತಕಗಳನ್ನು ಬರೆದ ಗಣಿತಜ್ಞ, ಮಾಜಿ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯರು ಸೇರಿದಂತೆ ಹಲವರು ಈ ಬಾರಿ ಸುರಾಜ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ. ಮೊದಲ ಪಟ್ಟಿಯಲ್ಲಿ, ಶೇಕಡಾ 16 ರಷ್ಟು ಅಭ್ಯರ್ಥಿಗಳು ಮುಸ್ಲಿಮರು ಮತ್ತು ಶೇಕಡಾ 17 ರಷ್ಟು ಅತ್ಯಂತ ಹಿಂದುಳಿದ ಸಮುದಾಯವರಿದ್ದಾರೆ.
ಚುನಾವಣಾ ಸ್ಪರ್ಧೆಗಾಗಿ ಕಿಶೋರ್ ಹಲವಾರು ಮಾಜಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ನ್‌ಡಿಎ, ಭಾರತ ಬಣ ಮತ್ತು ಪ್ರಶಾಂತ್ ಕಿಶೋರ್ ಅವರ ಹೊಸದಾಗಿ ಉದಯಿಸುತ್ತಿರುವ ಜನ್ ಸುರಾಜ್ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ. ರಾಜಕೀಯ ವೀಕ್ಷಕರು ಜಾನ್ ಸುರಾಜ್ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಬಹುದು ಎಂದು ಊಹಿಸಿದ್ದಾರೆ.
ಬಿಹಾರಕ್ಕೆ ಹೊಸ ರಾಜಕಾರಣದ ಪರಿಚಯ ಮಾಡಿಕೊಡುವುದಾಗಿ ಭರವಸೆ ನೀಡಿರುವ ಪ್ರಶಾಂತ್ ಕಿಶೋರ್, ಅದರಂತೆ ತಮ್ಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ವಚ್ಛ ಚಾರಿತ್ರ್ಯ ಮತ್ತು ಭ್ರಷ್ಟಾಚಾರ ಆರೋಪರಹಿತ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ. ಜನ ಸ್ವರಾಜ್ ಪಕ್ಷದ ಸಂಸ್ಥಾಪಕ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿರುವುದು ಸ್ಪಷ್ಟವಾಗಿದೆ. ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೇ, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಪ್ರಶಾಂತ್ ಕಿಶೋರ್ ಜನತೆಗೆ ಸಂದೇಶ ಕಳುಹಿಸಿದ್ದರು.
ಈ ಸುದ್ದಿಯನ್ನೂ ಓದಿ: Chirag Paswan: ಬಿಹಾರ ಚುನಾವಣೆ; ಎಲೆಕ್ಷನ್ ಹೊಸ್ತಿಲಲ್ಲಿ ಉಲ್ಟಾ ಹೊಡೆದ್ರಾ ಚಿರಾಗ್ ಪಾಸ್ವಾನ್..?
ಪ್ರಶಾಂತ್ ಕಿಶೋರ್ ಅವರು ಕಾರ್ಗಹರ್ ಅಥವಾ ರಾಘೋಪುರ್ ಕ್ಷೇತಗಳಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಕಾರ್ಗಹರ್ ವಿಧಾನಸಭಾ ಕ್ಷೇತ್ರವು ರೋಹ್ತಾಸ್ ಜಿಲ್ಲೆಯಲ್ಲಿದ್ದು, ಪ್ರಸ್ತುತ ಕಾಂಗ್ರೆಸ್‌ನ ಸಂತೋಷ್ ಕುಮಾರ್ ಮಿಶ್ರಾ ಶಾಸಕರಾಗಿದ್ದಾರೆ. ಅದೇ ರೀತಿ ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ ಅಧ್ಯಕ್ಷ ತೇಜಸ್ವಿ ಯಾದವ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2020 ರ ವಿಧಾನಸಭಾ ಚುನಾವಣೆಯಲ್ಲಿ, ಆರ್‌ಜೆಡಿ 75 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ನಂತರ ಬಿಜೆಪಿ 74 ಸ್ಥಾನ ಬಿಜೆಪಿ ಪಡೆದುಕೊಂಡಿತ್ತು.