ಚಂಡೀಗಢ ಮೇಯರ್ ಚುನಾವಣೆ; ಆಮ್ ಆದ್ಮಿ ಭದ್ರಕೋಟೆಯಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ
ಭಾರೀ ರಾಜಕೀಯ ನಾಟಕದ ನಡುವೆಯೂ ಗುರುವಾರ (ಜನವರಿ 29) ಚಂಡೀಗಢ ಮಹಾನಗರ ಪಾಲಿಕೆ ಮೇಯರ್, ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯಿತು. ಬಿಜೆಪಿ ನಾಯಕ ಸೌರಭ್ ಜೋಶಿ 18 ಮತಗಳನ್ನು ಪಡೆದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಯೋಗೇಶ್ ಧಿಂಗ್ರಾ ಅವರನ್ನು ಸೋಲಿಸುವ ಮೂಲಕ ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ
ಸಂಗ್ರಹ ಚಿತ್ರ -
ಭಾರೀ ರಾಜಕೀಯ ನಾಟಕದ ನಡುವೆಯೂ ಗುರುವಾರ (ಜನವರಿ 29) ಚಂಡೀಗಢ ಮಹಾನಗರ ಪಾಲಿಕೆ ಮೇಯರ್, ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯಿತು. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸೌರಭ್ ಜೋಶಿ 18 ಮತಗಳನ್ನು ಪಡೆದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಯೋಗೇಶ್ ಧಿಂಗ್ರಾ ಅವರನ್ನು ಸೋಲಿಸುವ ಮೂಲಕ ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಯೋಗೇಶ್ ಧಿಂಗ್ರಾ 11 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗುರುಪ್ರೀತ್ ಗಬ್ಬಿ ಏಳು ಮತಗಳನ್ನು ಪಡೆದರು.
ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್, ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಬೆಳಿಗ್ಗೆ 11 ಗಂಟೆಗೆ ಮತದಾನ ಆರಂಭವಾಯಿತು. ರಾಜ್ಯದಲ್ಲಿ ಆಮ್ ಆದ್ಮಿ ಸರ್ಕಾರವಿದ್ದರೂ, ಫಲಿತಾಂಶವು ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಮೇಲೆ ಬಿಜೆಪಿಯ ನಿರಂತರ ಹಿಡಿತವನ್ನು ಒತ್ತಿಹೇಳುತ್ತದೆ. ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ 18 ಕೌನ್ಸಿಲರ್‌ಗಳನ್ನು ಹೊಂದಿದೆ, ಕಾಂಗ್ರೆಸ್ 6 ಮತ್ತು ಆಪ್ 11, ಮತ್ತು ಸಂಸತ್ ಸದಸ್ಯರಿಗೆ ಹೆಚ್ಚುವರಿ ಮತವಿತ್ತು. ಬಿಜೆಪಿಯ ಜಸ್ಮನ್‌ಪ್ರೀತ್ ಸಿಂಗ್ ಹಿರಿಯ ಉಪ ಮೇಯರ್ ಆಗಿ ಆಯ್ಕೆಯಾದರು. ಹದಿನೆಂಟು ಬಿಜೆಪಿ ಕೌನ್ಸಿಲರ್‌ಗಳು ಕೈ ಎತ್ತುವ ಮೂಲಕ ಅವರ ಪರವಾಗಿ ಮತ ಚಲಾಯಿಸಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿಯ ಚುನಾವಣೆಗೆ ಅಖಾಡ ಸಜ್ಜು
ಆಮ್ ಆದ್ಮಿಗೆ ಮುಳುವಾಗಿದಲ್ಲಿ?
ಆಪ್ ಹಾಗೂ ಕಾಂಗ್ರೆಸ್ ಮೈತ್ರಿ ಮುರಿದು ಬಿದ್ದ ಬಳಿಕ ಈ ಬಾರಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಿತು . ಆದರೆ ಕೇವಲ 7 ಮತಗಳನ್ನು ಮಾತ್ರ ಪಡೆದುಕೊಂಡಿದೆ. ಇತ್ತೀಚೆಗೆ, ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದ ಚಂಡೀಗಢ ಎಎಪಿ ಉಸ್ತುವಾರಿ ಜರ್ನೈಲ್ ಸಿಂಗ್, “ಅಧಿಕಾರ ಹಂಚಿಕೆಗಾಗಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ” ಎಂದಿದ್ದರು. ಈ ಆರೋಪವು ಕಾಂಗ್ರೆಸ್ ಮತ್ತು ಎಎಪಿ ನಡುವೆ ಮತ್ತಷ್ಟು ಜಠಿಲತೆ ಹುಟ್ಟುಹಾಕಿತ್ತು.