ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಹಾರ, ಗುಜರಾತ್‌, ಮಧ್ಯಪ್ರದೇಶ ಉಪಚುನಾವಣೆ ಫಲಿತಾಂಶ ಇಂದು: ಸಿಜೆಪಿ ಪ್ರತಿಭಟನೆಯಿಂದ ಬಿಜೆಪಿಗೆ ಬೀಳುತ್ತಾ ಹೊಡೆತ?

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಪರಿಣಾಮ ಉಪ ಚುನಾವಣೆ ಮೇಲೆ ಬೀರುವುದೇ ? ಎನ್ನುವ ಆತಂಕ ಈಗ ಶುರುವಾಗಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಬಿಜೆಪಿ ಆಡಳಿತವಿರುವ ಮೂರು ರಾಜ್ಯಗಳಾದ ಬಿಹಾರ (Bihar), ಮಧ್ಯಪ್ರದೇಶ (Madhya Pradesh) ಮತ್ತು ಗುಜರಾತ್‌ನಲ್ಲಿ (Gujarat) ಜುಲೈ 30ರಂದು ಉಪಚುನಾವಣೆಗಳು ( by-election) ನಡೆದಿದ್ದು ಸೋಮವಾರ ಸಂಜೆ ವೇಳೆಗೆ ನಿಖರ ಫಲಿತಾಂಶ ಹೊರಬೀಳಲಿದೆ. ಬಿಜೆಪಿ ನಾಯಕರಲ್ಲಿ ಫಲಿತಾಂಶದ ಕುರಿತು ಆತಂಕ ಹೆಚ್ಚಿದೆ. ಯಾಕೆಂದರೆ ದೇಶಾದ್ಯಂತ ಇತ್ತೀಚೆಗೆ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದಿರುವ ಪ್ರತಿಭಟನೆ ಪರಿಣಾಮ ಈ ರಾಜ್ಯಗಳ ಉಪಚುನಾವಣೆ ಫಲಿತಾಂಶಗಳ ಮೇಲೆ ಬೀಳುವ ಸಾಧ್ಯತೆ ಇದೆ. ಯಾಕೆಂದರೆ ಪ್ರತಿಭಟನೆಯು ಯುವ ಮತದಾರರನ್ನು ಹೆಚ್ಚಾಗಿ ಸೆಳೆದಿತ್ತು. ಹೀಗಾಗಿ ಇದರ ಪರಿಣಾಮ ಉಪ ಚುನಾವಣೆ ಮೇಲೂ ಬೀರಬಹುದು ಎನ್ನಲಾಗುತ್ತಿದೆ.

ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರ, ಮಧ್ಯಪ್ರದೇಶದ ದಾಟಿಯಾ ಮತ್ತು ಗುಜರಾತ್‌ನ ಮಂಜಲ್‌ಪುರ ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ಗುರುವಾರ ಚುನಾವಣೆ ನಡೆದಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ದೇಶಾದ್ಯಂತ ನಡೆದ ಬೃಹತ್ ವಿದ್ಯಾರ್ಥಿಗಳ ಪ್ರತಿಭಟನೆಯ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ಇದರ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ತರಬೇತಿ ಪಡೆದಿಲ್ಲ, ಮೋಟಾರು ದೋಣಿ ಹೊಂದಿಲ್ಲ; ಅಸ್ಸಾಂ ಪ್ರವಾಹಕ್ಕೆ ಸಿಲುಕಿದ 2,000 ಸಂತ್ರಸ್ತರನ್ನು ರಕ್ಷಿಸಿದ ಯುವಕನ ಸಾಹಸಗಾಥೆ ಇಲ್ಲಿದೆ

ಬಿಜೆಪಿಯ ಭದ್ರಕೋಟೆ ಬಂಕಿಪುರ

ಬಿಹಾರದ ಬಂಕಿಪುರವು ಬಿಜೆಪಿಯ ಭದ್ರಕೋಟೆಯಾಗಿದೆ. ಈವರೆಗೆ ಅಲ್ಲಿ ಬಿಜೆಪಿ ಅಭ್ಯರ್ಥಿ ಸೋತಿಲ್ಲ. ಇಲ್ಲಿಂದ ಆಯ್ಕೆಯಾಗಿರುವ ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್ ಅವರು ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಬಿಜೆಪಿ ಯುವ ಘಟಕದ ನಾಯಕ ನೀರಜ್ ಕುಮಾರ್ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಚುನಾವಣಾ ಕಣದಲ್ಲಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಅಭಿಷೇಕ್ ಕುಮಾರ್ ಸಿನ್ಹಾ ಅವರು ನಾಮ ಪತ್ರ ಸಲ್ಲಿಸಿ ಬಳಿಕ ಕೌಟುಂಬಿಕ ಕಾರಣದಿಂದ ಕಣದಿಂದ ಹಿಂದೆ ಸರಿದರು. ಹೀಗಾಗಿ ಬಿಜೆಪಿ ಯುವ ಘಟಕದ ನಾಯಕ ನೀರಜ್ ಕುಮಾರ್ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಗುರುತಿಸಿತ್ತು. ಇದು ವಿರೋಧ ಪಕ್ಷಕ್ಕೆ ವರವಾಗಬಹುದು ಎನ್ನಲಾಗಿದೆ. ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ತೇಜಸ್ವಿ ಯಾದವ್ ತಮ್ಮ ಪಕ್ಷದ ಅಭ್ಯರ್ಥಿ ರೇಖಾ ಗುಪ್ತಾ ಅವರೇ ವಿಜೇತರಾಗುತ್ತಾರೆ ಎನ್ನುತ್ತಿದ್ದಾರೆ.

ಕಾಂಗ್ರೆಸ್ ಕ್ಷೇತ ದಾಟಿಯಾ

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರನ್ನು ಏಪ್ರಿಲ್ 2 ರಂದು ಜನತಾ ಪ್ರಾತಿನಿಧ್ಯ ಕಾಯ್ದೆ, 1951 ರ ನಿಬಂಧನೆಗಳ ಅಡಿಯಲ್ಲಿ ಅನರ್ಹಗೊಳಿಸಿದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಶುತೋಷ್ ತಿವಾರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಘನಶ್ಯಾಮ್ ಸಿಂಗ್ ನೇರ ಸ್ಪರ್ಧೆ ನಡೆಸುತ್ತಿದ್ದಾರೆ. ಮಾಜಿ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಕ್ಷೇತ್ರವಾಗಿರುವ ಇಲ್ಲಿ ಅವರು 2023ರಲ್ಲಿ ಸ್ಥಾನವನ್ನು ಕಳೆದುಕೊಂಡರು. ಇದರ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಈ ಬಾರಿ ಅಭ್ಯರ್ಥಿ ಬದಲಾವಣೆಯು ಮಿಶ್ರಾ ಅವರ ಬೆಂಬಲಿಗರನ್ನು ಕೆರಳಿಸಿದೆ. ರಾಜ ಮನೆತನದವರಾಗಿರುವ ಕುನ್ವರ್ ಘನಶ್ಯಾಮ್ ಸಿಂಗ್ ಎರಡು ಬಾರಿ ಶಾಸಕರಾಗಿದ್ದರು. ಇವರ ಆಯ್ಕೆ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲೇ ಅಸಮಾಧಾನವಿದೆ.

ʼʼ12 ವರ್ಷವಾದರೂ ಸರ್ವಾಧಿಕಾರಿಯಾಗಲು ಮೋದಿ ವಿಫಲʼʼ: ಪ್ರಧಾನಿ ವಿರುದ್ಧ ತಿರುಗಿ ಬಿದ್ರಾ ಶೆಹಜಾದ್ ಪೂನಾವಾಲಾ?

ಬಿಜೆಪಿ ಕ್ಷೇತ್ರ ಮಂಜಲ್ಪುರ

ಮೂರು ಬಾರಿ ಶಾಸಕರಾಗಿದ್ದ ಬಿಜೆಪಿಯ ಯೋಗೇಶ್‌ಭಾಯ್ ನರಂದಾಸ್ ಪಟೇಲ್ ಅವರ ನಿಧನದಿಂದ ತೆರವಾದ ಮಂಜಲ್ಪುರ ಕ್ಷೇತ್ರಕ್ಕೆ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ನ ಮಾಜಿ ಕೌನ್ಸಿಲರ್ ಸತೀಶ್ ಗೋವಿಂದ್‌ಭಾಯ್ ಪಟೇಲ್ ಅವರು ಮಾಜಿ ಸಚಿವ ಮತ್ತು ಗುಜರಾತ್ ಕಾಂಗ್ರೆಸ್ ಉಪಾಧ್ಯಕ್ಷ, ಮಾಜಿ ಸಚಿವ ಭಿಖಾಭಾಯ್ ರಬಾರಿ ಅವರೊಂದಿಗೆ ಸ್ಪರ್ಧೆ ನಡೆಸುತ್ತಿದ್ದಾರೆ. 2022ರ ಚುನಾವಣೆಯಲ್ಲಿ ಇಲ್ಲಿ ಆಡಳಿತಾರೂಢ ಬಿಜೆಪಿ 182 ಸ್ಥಾನಗಳಲ್ಲಿ 156 ಸ್ಥಾನಗಳನ್ನು ಗೆದ್ದು ದಾಖಲೆ ಬರೆದಿತ್ತು.

ವಿದ್ಯಾ ಇರ್ವತ್ತೂರು

View all posts by this author