ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gujarat Ropeway Accident: ಗುಜರಾತ್​ನ ಪಾವಗಡ ಬೆಟ್ಟದ ಬಳಿ ರೋಪ್‌ವೇ ಕುಸಿದು 6 ಮಂದಿ ಸಾವು

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಪಾವಗಡದ ಮಹಾಕಾಳಿ ಮಂದಿರ ಶಕ್ತಿಪೀಠದ ಬಳಿ ಶನಿವಾರ (ಸೆಪ್ಟೆಂಬರ್‌ 6) ಸರಕು ಸಾಗಣೆ ಮಾಡುವ ರೋಪ್‌ವೇ ಅಪಘಾತಕ್ಕೀಡಾಗಿ 6 ಮಂದಿ ಮೃತಪಟ್ಟಿದ್ದಾರೆ. ಸದ್ಯ ರಕ್ಷಣಾ ಕಾರ್ಯಾರಣೆ ನಡೆಯುತ್ತಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್​: ರೋಪ್‌ವೇ ಕುಸಿದು 6 ಮಂದಿ ಸಾವು

-

Ramesh B Ramesh B Sep 6, 2025 9:16 PM

ಗಾಂಧಿನಗರ: ಗುಜರಾತ್‌ನ ಪಂಚಮಹಲ್ ಜಿಲ್ಲೆಯ (Panchmahal district) ಪಾವಗಡದ ಮಹಾಕಾಳಿ ಮಂದಿರ ಶಕ್ತಿಪೀಠದ ಬಳಿ ಶನಿವಾರ (ಸೆಪ್ಟೆಂಬರ್‌ 6) ಸರಕು ಸಾಗಣೆ ಮಾಡುವ ರೋಪ್‌ವೇ ಅಪಘಾತಕ್ಕೀಡಾಗಿ 6 ಮಂದಿ ಮೃತಪಟ್ಟಿದ್ದಾರೆ (Gujarat Ropeway Accident). ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಹರೇಶ್ ದುಧಾತ್, ಸದ್ಯ ರಕ್ಷಣಾ ಕಾರ್ಯಾರಣೆ ನಡೆಯುತ್ತಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ ಎಂದು ತಿಳಿಸಿದ್ದಾರೆ.

ಬೆಟ್ಟದ ತುದಿಗೆ ನಿರ್ಮಾಣ ಸಾಮಗ್ರಿಗಳನ್ನು ಕೊಂಡೊಯ್ಯುವಾಗ ಹಗ್ಗ ತುಂಡಾಗಿ ಅಪಘಾತ ಸಂಭವಿಸಿದ್ದು, ಮೃತರಲ್ಲಿ ಇಬ್ಬರು ಲಿಫ್ಟ್‌ಮೆನ್, ಇಬ್ಬರು ಕಾರ್ಮಿಕರು ಮತ್ತು ಇಬ್ಬರು ಸಾಮಾನ್ಯ ವ್ಯಕ್ತಿಗಳು ಸೇರಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ವಸ್ತುಗಳನ್ನು ಸಾಗಿಸಲು ಸ್ಥಾಪಿಸಲಾದ ರೋಪ್‌ವೇ ಘಟನೆ ನಡೆದಾಗ 6 ಜನರೊಂದಿಗೆ ಕೆಳಮುಖವಾಗಿ ಚಲಿಸುತ್ತಿತ್ತು ಎಂದು ಪಂಚಮಹಲ್ ಜಿಲ್ಲಾಧಿಕಾರಿ ಅಜಯ್ ದಹಿಯಾ ತಿಳಿಸಿದ್ದಾರೆ. "ಮೃತರಲ್ಲಿ ಇಬ್ಬರು ಲಿಫ್ಟ್ ಆಪರೇಟರ್‌ಗಳು, ಇಬ್ಬರು ಕಾರ್ಮಿಕರು ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ" ಎಂದು ಅವರು ಹೇಳಿದ್ದಾರೆ. ದೇವಾಲಯವು ಸುಮಾರು 800 ಮೀಟರ್ ಎತ್ತರದಲ್ಲಿದ್ದು, ಯಾತ್ರಿಕರು ಬೆಟ್ಟವನ್ನು ಏರಲು ಸುಮಾರು 2,000 ಮೆಟ್ಟಿಲುಗಳನ್ನು ಬಳಸುತ್ತಾರೆ ಅಥವಾ ಕೇಬಲ್ ಕಾರುಗಳನ್ನು ಆಯ್ಕೆ ಮಾಡುತ್ತಾರೆ. ಅವಘಡದ ಬಳಿಕ ಪ್ರತಿಕೂಲ ಹವಾಮಾನದಿಂದಾಗಿ ಸಾರ್ವಜನಿಕರ ಬಳಕೆಗೆ ಮುಖ್ಯ ರೋಪ್‌ವೇ ಅನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ ಎಂದು ದಹಿಯಾ ಮಾಹಿತಿ ನೀಡಿದ್ದಾರೆ.



ಈ ಸುದ್ದಿಯನ್ನೂ ಓದಿ: Viral Video: ಬಂಗೀ ಜಂಪಿಂಗ್‍ಗೆ ಹೋಗಿ ಹೀಗ್‌ ಭಯ ಪಟ್ರೆ ಹೆಂಗಮ್ಮ? ಸಖತ್‌ ಫನ್ನಿ ಆಗಿದೆ ಈ ವಿಡಿಯೊ

ಅದಾಗ್ಯೂ ಕೇಬಲ್ ಕಾರು ಎಷ್ಟು ಎತ್ತರದಿಂದ ಬಿದ್ದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. "ಈ ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. ತನಿಖೆಯ ಸಮಯದಲ್ಲಿ ನಿರ್ಲಕ್ಷ್ಯ ಕಂಡುಬಂದರೆ, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು" ಎಂದು ಹರೇಶ್ ದುಧಾತ್ ಎಚ್ಚರಿಸಿದ್ದಾರೆ.

ಪಾವಗಡ ಬೆಟ್ಟದ ಮಹಾಕಾಳಿ ದೇವಸ್ಥಾನದ ಕಾಳಿಕಾ ಮಾತಾ ಟ್ರಸ್ಟ್‌ನ ಅಧ್ಯಕ್ಷ ಸುರೇಂದ್ರ ಪಟೇಲ್ ಮಾತನಾಡಿ, ನಿರ್ವಾಹಕರು ರೋಪ್‌ವೇ ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ʼಇಂಡಿಯನ್ ಎಕ್ಸ್‌ಪ್ರೆಸ್‌ʼಗೆ ತಿಳಿಸಿದ್ದಾರೆ. "ನಿರ್ವಾಹಕರು ಮೆಟೀರಿಯಲ್ ರೋಪ್‌ವೇ ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕ್ಯಾಬಿನ್‌ನಲ್ಲಿ ನಾಲ್ವರು ಉದ್ಯೋಗಿಗಳು ಮತ್ತು ಇತರ ಇಬ್ಬರು ವ್ಯಕ್ತಿಗಳು ಇದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ" ಎಂದಿದ್ದಾರೆ.