ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬ್ರೇನ್ ಡೆಡ್ ಎಂದು ಘೋಷಿಸಿದ್ದ ಮಹಿಳೆ ಮತ್ತೆ ಉಸಿರಾಡಿದ್ಲು! ಏನಿದು ವಿಸ್ಮಯ?

woman breathing again: ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ ಎನ್ನಲಾದ ಮಹಿಳೆಯೊಬ್ಬರನ್ನು ಅಂತ್ಯಕ್ರಿಯೆಗಾಗಿ ಮನೆಗೆ ಕರೆದೊಯ್ಯುವಾಗ ಮತ್ತೆ ಉಸಿರಾಡಲು ಪ್ರಾರಂಭಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪಿಲಿಭಿತ್ ನಿವಾಸಿ ವಿನಿತಾ ಶುಕ್ಲಾ ಅವರು ಫೆಬ್ರವರಿ 22 ರಂದು ಮನೆಯಲ್ಲಿ ಕುಸಿದು ಬಿದ್ದರು. ಮೊದಲು ಅವರನ್ನು ಜಿಲ್ಲಾಸ್ಪತ್ರೆಗೆ, ನಂತರ ಬರೇಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬ್ರೇನ್ ಡೆಡ್ ಎಂದು ಘೋಷಿಸಿದ್ದ ಮಹಿಳೆ ಮತ್ತೆ ಉಸಿರಾಡಿದಳಾ?

ಬ್ರೇನ್ ಡೆಡ್ ಎಂದು ಘೋಷಿಸಿದ್ದ ಮಹಿಳೆ ಮತ್ತೆ ಉಸಿರಾಡಿದಳಾ? -

Priyanka P
Priyanka P Mar 11, 2026 7:27 PM

ಲಖನೌ, ಮಾ.11: ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ ಎನ್ನಲಾದ ಮಹಿಳೆಯೊಬ್ಬರನ್ನು ಅಂತ್ಯಕ್ರಿಯೆಗಾಗಿ ಮನೆಗೆ ಕರೆದೊಯ್ಯುವಾಗ ಮತ್ತೆ ಉಸಿರಾಡಲು ಪ್ರಾರಂಭಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಪಿಲಿಭಿತ್‌ನಲ್ಲಿ ನಡೆದಿದೆ. ಅನೇಕರು ಇದನ್ನು ಪವಾಡ ಎಂದು ಕರೆದರು. ಆದರೆ, ನರ ವಿಜ್ಞಾನ ತಜ್ಞರ ಪ್ರಕಾರ, ಈ ಘಟನೆ ಮತ್ತೊಂದು ಪ್ರಮುಖ ವಿಷಯವನ್ನು ಹೈಲೈಟ್ ಮಾಡುತ್ತದೆ: ಮೆದುಳು ನಿಷ್ಕ್ರಿಯ (brain dead) ಮತ್ತು ಕೋಮಾ ನಡುವಿನ ವ್ಯತ್ಯಾಸವನ್ನು ಇದು ತೋರಿಸಿದೆ.

ಪಿಲಿಭಿತ್ ನಿವಾಸಿ ವಿನಿತಾ ಶುಕ್ಲಾ ಅವರು ಫೆಬ್ರವರಿ 22 ರಂದು ಮನೆಯಲ್ಲಿ ಕುಸಿದು ಬಿದ್ದರು. ಮೊದಲು ಅವರನ್ನು ಜಿಲ್ಲಾಸ್ಪತ್ರೆಗೆ, ನಂತರ ಬರೇಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕುಟುಂಬ ಸದಸ್ಯರ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಯಾವುದೇ ಚಲನೆಯ ಲಕ್ಷಣಗಳನ್ನು ತೋರಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಎರಡು ದಿನಗಳ ಚಿಕಿತ್ಸೆಯ ನಂತರ, ಬದುಕುಳಿಯುವ ಭರವಸೆಯಿಲ್ಲ ಎಂಬುದಾಗಿ ಕುಟುಂಬಸ್ಥರಿಗೆ ತಿಳಿಸಲಾಯಿತು. ಹೀಗಾಗಿ ಕುಟುಂಬವು ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿತು. ಮಹಿಳೆಯ ಅಂತಿಮ ವಿಧಿಗಳಿಗೆ ಸಿದ್ಧತೆಗಳನ್ನು ಪ್ರಾರಂಭಿಸಿತು.

ಅಪಘಾತದಿಂದ ಮೆದುಳು ನಿಷ್ಕ್ರಿಯ: ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ನೀಡಿ, ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಆದರೆ ಮನೆಗೆ ಕರೆದೊಯ್ಯುವ ವೇಳೆ ಆಂಬ್ಯುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ವಾಹನ ಒಂದು ಗುಂಡಿಗೆ ಬಿದ್ದ ನಂತರ ಆಕೆ ಮತ್ತೆ ಉಸಿರಾಡುತ್ತಿರುವುದನ್ನು ಕುಟುಂಬದವರು ಗಮನಿಸಿದ್ದಾರೆ. ಮನೆಗೆ ಕರೆದೊಯ್ಯುವುದನ್ನು ಬಿಟ್ಟು, ಕುಟುಂಬದವರು ತಕ್ಷಣವೇ ಆಕೆಯನ್ನು ಫಿಲಿಬಿತ್‌ನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆಯನ್ನು ದಾಖಲಿಸಿ ಚಿಕಿತ್ಸೆ ಆರಂಭಿಸಿದರು. ಸುಮಾರು ಎರಡು ವಾರಗಳ ಚಿಕಿತ್ಸೆಯ ಬಳಿಕ ಆಕೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ, ಶ್ರೀಮತಿ ಶುಕ್ಲಾ ಬದುಕುಳಿದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬ ಸಂತೋಷವಾಗಿದೆ. ಇದು ಒಂದು ಪವಾಡ, ನಾನು ದೇವರಿಗೆ ಮತ್ತು ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

ಈ ಘಟನೆ ಕುರಿತು ಒಂದು ಸಂಚಲನಕಾರಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಯಿತು. ಅದೇನೆಂದರೆ, ಆಂಬ್ಯುಲೆನ್ಸ್ ಒಂದು ಗುಂಡಿಗೆ ಬಿದ್ದ ನಂತರ ಬ್ರೇನ್ ಡೆಡ್ ಆಗಿದ್ದ ಮಹಿಳೆ ಮತ್ತೆ ಜೀವಂತವಾದಳು ಎಂಬುದು. ಆದರೆ ವೈದ್ಯರ ಪ್ರಕಾರ, ಈ ರೀತಿಯ ವ್ಯಾಖ್ಯಾನ ಬಹುತೇಕ ತಪ್ಪು ಎಂದು ಹೇಳಿದ್ದಾರೆ.

ಬ್ರೇನ್ ಡೆತ್ ಎಂದರೇನು?

ವೈದ್ಯಕೀಯದಲ್ಲಿ ಬ್ರೈನ್ ಡೆತ್ ಎಂದರೆ ಕೇವಲ ಕೋಮಾ ಅಲ್ಲ. ಇದು ಮೆದುಳು ಹಾಗೂ ಬ್ರೇನ್‌ಸ್ಟೆಮ್‌ನ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ನಿಂತಿರುವ ಸ್ಥಿತಿ. ಇದರಲ್ಲಿ ಮೆದುಳಿನ ಉಸಿರಾಟ ನಿಯಂತ್ರಣ ಕೇಂದ್ರವೂ ಸೇರಿದೆ.

ಕಡಲೇಬೀಜ ಸಿಲುಕಿ ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾದ 10 ತಿಂಗಳ ಮಗು- ಕೆಎಂಸಿ ವೈದ್ಯರಿಂದ ರಕ್ಷಣೆ

ಬ್ರೇನ್ ಡೆತ್ ದೃಢಪಟ್ಟ ನಂತರ ವೈದ್ಯಕೀಯವಾಗಿ ಚೇತರಿಕೆ ಸಾಧ್ಯವಿಲ್ಲ ಎಂದು ಹೈದರಾಬಾದ್‍ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಹೇಳಿದರು.

ಇದಲ್ಲದೆ, ಭಾರತದಲ್ಲಿ ರೋಗನಿರ್ಣಯವನ್ನು ಮಾನವ ಅಂಗಾಂಗ ಕಸಿ ಕಾಯ್ದೆಯಿಂದ ನಿಯಂತ್ರಿಸಲಾಗುತ್ತದೆ. ಯಾರನ್ನಾದರೂ ಬ್ರೇನ್ ಡೆಡ್ ಎಂದು ಘೋಷಿಸುವ ಮೊದಲು ಕಟ್ಟುನಿಟ್ಟಿನ ಪರೀಕ್ಷೆಗಳು ಅಗತ್ಯವಿರುತ್ತವೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯಲ್ಲಿ ಕೆಳಗಿನ ಪರೀಕ್ಷೆಗಳು ಒಳಗೊಂಡಿರುತ್ತವೆ:

- ಗಂಭೀರ ಕೋಮಾ ಸ್ಥಿತಿಯನ್ನು ದೃಢೀಕರಿಸುವುದು

- ಬ್ರೇನ್‌ಸ್ಟೆಮ್ ಪ್ರತಿಕ್ರಿಯೆಗಳಿಲ್ಲದಿರುವುದು

- ಸ್ವಯಂ ಉಸಿರಾಟ ಇಲ್ಲವೆಂಬುದನ್ನು ತೋರಿಸುವ ಅಪ್ನಿಯಾ ಪರೀಕ್ಷೆ

- ವೈದ್ಯರ ಸಮಿತಿಯಿಂದ ಎರಡು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುವುದು

ಒಬ್ಬ ರೋಗಿಯು ನಂತರ ಮತ್ತೆ ಉಸಿರಾಡಲು ಆರಂಭಿಸಿದರೆ ಅಥವಾ ನರ ಸಂಬಂಧಿತ ಚೇತರಿಕೆ ಕಾಣಿಸಿದರೆ, ಅದರಿಂದ ಅವರಿಗೆ ಆರಂಭದಲ್ಲೇ ಬ್ರೇನ್ ಡೆಡ್ ಆಗಿರಲಿಲ್ಲ ಎಂಬುದೇ ಅರ್ಥ ಎಂದು ವೈದ್ಯರು ತಿಳಿಸಿದ್ದಾರೆ.

ನರ ವಿಜ್ಞಾನ ತಜ್ಞರ ಪ್ರಕಾರ, ಕೆಲವು ವೈದ್ಯಕೀಯ ಸ್ಥಿತಿಗಳು ಬ್ರೇನ್ ಡೆತ್‌ನಂತೆ ಕಾಣುವ ಸ್ಥಿತಿಯನ್ನು ಉಂಟುಮಾಡಬಹುದು. ಆದರೆ ಅವುಗಳಲ್ಲಿ ಕೆಲವು ಸಂದರ್ಭಗಳಲ್ಲಿ ಚೇತರಿಕೆ ಸಾಧ್ಯವಾಗಿರುತ್ತದೆ. ಮಿತಿ ಮೀರಿದ ಔಷಧ ಪ್ರಮಾಣ, ತೀವ್ರ ಚಯಾಪಚಯ ಅಸಮತೋಲನ, ದೇಹದ ತಾಪಮಾನ ಅತಿಯಾಗಿ ಕಡಿಮೆಯಾಗುವ ಸ್ಥಿತಿ, ನ್ಯೂರೋಟಾಕ್ಸಿಕ್ ಪಾಯ್ಸನಿಂಗ್ ಇತ್ಯಾದಿಗಳಿಂದ ಈ ಸ್ಥಿತಿ ಉಂಟಾಗಬಹುದು.