Cancer In India: ಭಾರತದಲ್ಲಿ ಅತೀ ಹೆಚ್ಚಿನ ಸಾವಿಗೆ ಕಾರಣವಾಗುತ್ತಿದೆ ಕ್ಯಾನ್ಸರ್
ಭಾರತೀಯರೆಲ್ಲರೂ ಆತಂಕ ಪಡುವ ವರದಿಯೊಂದಿದೆ. ಭಾರತದಲ್ಲಿ ಹೆಚ್ಚಿನ ಸಾವು ಕ್ಯಾನ್ಸರ್‌ನಿಂದ ಬರುತ್ತಿದ್ದು, ಇದರಲ್ಲಿ ಸ್ತನ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಅನಂತರ ಹೆಚ್ಚಿನ ಸಾವು ಶ್ವಾಸಕೋಶ ಮತ್ತು ಅನ್ನನಾಳದ ಕ್ಯಾನ್ಸರ್‌ನಿಂದ ಉಂಟಾಗುತ್ತಿದೆ. ಈ ಕುರಿತು ದಿ ಲ್ಯಾನ್ಸೆಟ್‌ನಲ್ಲಿ ಅಧ್ಯಯನವೊಂದು ಪ್ರಕಟವಾಗಿದ್ದು ಹೃದಯ ರಕ್ತನಾಳದ ಕಾಯಿಲೆಗಳ ಅನಂತರ ಕ್ಯಾನ್ಸರ್ ಮನುಷ್ಯನ ಸಾವಿಗೆ ವಿಶ್ವದ ಎರಡನೇ ಪ್ರಮುಖ ಕಾರಣ ಎಂದು ಹೇಳಿದೆ.

-

ನವದೆಹಲಿ: ಭಾರತದಲ್ಲಿ ಅತೀ ಹೆಚ್ಚಿನ ಸಾವು ಕ್ಯಾನ್ಸರ್ (Cancer)ನಿಂದ ಉಂಟಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD)ನ ಇತ್ತೀಚಿನ ಅಧ್ಯಯನದ ಪ್ರಕಾರ ದೇಶದಲ್ಲಿ ಐದು ಪ್ರಮುಖ ಮಾರಕ ಕ್ಯಾನ್ಸರ್‌ಗಳಿದ್ದು, ಇದರಲ್ಲಿ ಸ್ತನ (Breast Cancer), ಶ್ವಾಸನಾಳ(Lung cancer), ಶ್ವಾಸಕೋಶ, ಅನ್ನನಾಳ, ಹೊಟ್ಟೆ, ತುಟಿ ಮತ್ತು ಬಾಯಿಯ ಕ್ಯಾನ್ಸರ್‌ಗಳು ಸೇರಿವೆ.ಅತೀ ಹೆಚ್ಚಿ ನ ಸಾವು ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಉಂಟಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ಭಾರತದಲ್ಲಿ ಹೆಚ್ಚಿನ ಸಾವು ಕ್ಯಾನ್ಸರ್‌ನಿಂದ ಬರುತ್ತಿದ್ದು, ಇದರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖ ಕಾರಣ ಎನಿಸಿಕೊಂಡಿದೆ. ಬಳಿಕ ಶ್ವಾಸಕೋಶ ಮತ್ತು ಅನ್ನನಾಳದ ಕ್ಯಾನ್ಸರ್ ಸ್ಥಾನ ಪಡೆದಿದೆ. ಈ ಕುರಿತು ʼದಿ ಲ್ಯಾನ್ಸೆಟ್ʼನಲ್ಲಿ ಅಧ್ಯಯನವೊಂದು ಪ್ರಕಟವಾಗಿದ್ದು, ಹೃದಯ ರಕ್ತನಾಳದ ಕಾಯಿಲೆಗಳ ಅನಂತರ ಕ್ಯಾನ್ಸರ್ ಮನುಷ್ಯನ ಸಾವಿಗೆ ವಿಶ್ವದ ಎರಡನೇ ಪ್ರಮುಖ ಕಾರಣ. ಇದು ಮುಂಬರುವ ದಶಕಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಜಿಬಿಡಿ 2023 ವಿಶ್ಲೇಷಣೆಯ ಪ್ರಕಾರ 2023ರಲ್ಲಿ ವಿಶ್ವಾದ್ಯಂತ 18.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 10.4 ಮಿಲಿಯನ್ ಸಾವುಗಳು ಸಂಭವಿಸಿವೆ. ಇವುಗಳಲ್ಲಿ ಸುಮಾರು ಮೂರನೇ ಎರಡರಷ್ಟು ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಉಂಟಾಗುತ್ತಿದೆ. ತಂಬಾಕು ಬಳಕೆ, ಆಹಾರ ಪದ್ಧತಿ, ಸೋಂಕುಗಳು ಮತ್ತು ಮಾಲಿನ್ಯದಂತಹ ಅಪಾಯಕಾರಿ ಅಂಶಗಳು ಕ್ಯಾನ್ಸರ್ ಸಾವುಗಳಿಗೆ ಶೇ. 40ರಷ್ಟು ಕಾರಣವಾಗಿವೆ.
ವಿಶ್ವದಾದ್ಯಂತ 2050ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳು 30.5 ಮಿಲಿಯನ್ ಮತ್ತು ಇದರಿಂದ ಉಂಟಾಗುವ ಸಾವಿನ ಪ್ರಮಾಣ 18.6 ಮಿಲಿಯನ್‌ಗೆ ಏರುವ ಸಾಧ್ಯತೆ ಇದೆ ಎನ್ನುತ್ತದೆ ಅಂಕಿ ಅಂಶ. ಹೆಚ್ಚಿನ ಆದಾಯದ ದೇಶಗಳಿಗೆ ಹೋಲಿಸಿದರೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಭಾರತದ ಅಂಕಿ-ಅಂಶ
2023ರಲ್ಲಿ ಭಾರತದಲ್ಲಿ ಸ್ತನ, ಶ್ವಾಸನಾಳ, ಶ್ವಾಸಕೋಶ, ಅನ್ನನಾಳ, ಹೊಟ್ಟೆ, ತುಟಿ ಮತ್ತು ಬಾಯಿ ಪ್ರಮುಖ ಮಾರಕ ಕ್ಯಾನ್ಸರ್‌ಗಳಾಗಿವೆ. ಸ್ತನ ಕ್ಯಾನ್ಸರ್ 1,00,000ಕ್ಕೆ ಶೇ. 8.5 ಸಾವುಗಳಿಗೆ ಕಾರಣವಾಗಿದ್ದು, ಇದು ಮಹಿಳೆಯರಲ್ಲಿ ಹೆಚ್ಚುತ್ತಿದೆ. ಧೂಮಪಾನ, ವಾಯು ಮಾಲಿನ್ಯ ಮತ್ತು ಔದ್ಯೋಗಿಕ ಅಪಾಯಗಳಿಂದ ಉಂಟಾಗುವ ಶ್ವಾಸಕೋಶದ ಕ್ಯಾನ್ಸರ್ ಶೇ. 8.4ರಷ್ಟಿದೆ. ಅನ್ನನಾಳದ ಕ್ಯಾನ್ಸರ್ ಶೇ. 8.2, ಹೊಟ್ಟೆಯ ಕ್ಯಾನ್ಸರ್ ಶೇ. 6.9ರಷ್ಟಿದೆ. ಬಾಯಿಯ ಕ್ಯಾನ್ಸರ್ ಶೇ. 6.5ರಷ್ಟಿದೆ. ಇತರ ಹಲವು ದೇಶಗಳಿಗೆ ಹೋಲಿಸಿದರೆ ಇದು ಭಾರತದಲ್ಲಿ ಹೆಚ್ಚು.
1990 ಮತ್ತು 2023ರ ನಡುವೆ ಭಾರತದಲ್ಲಿ ವಯಸ್ಸಿನ ಆಧಾರದಲ್ಲಿ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವು 1,00,000ಕ್ಕೆ ಶೇ. 84.8ರಿಂದ ಶೇ. 107.2ರಷ್ಟು ಏರಿದೆ. ಇದರಲ್ಲಿ ಶೇ. 26ರಷ್ಟು ಹೆಚ್ಚಳವಾಗಿದೆ. ಮರಣ ಪ್ರಮಾಣವೂ ಏರಿದೆ. ವಯಸ್ಸಿನ ಆಧಾರದಲ್ಲಿ ಸಾವಿನ ಪ್ರಮಾಣವು 1,00,000ಕ್ಕೆ ಶೇ. 21ರಷ್ಟು ಹೆಚ್ಚಳವಾಗಿದೆ.
ಸಾಮಾನ್ಯ ಕ್ಯಾನ್ಸರ್‌ಗಳು
ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ 112 ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಅನಂತರ ಶ್ವಾಸನಾಳ, ಶ್ವಾಸಕೋಶದ ಕ್ಯಾನ್ಸರ್‌ಗಳು 53 ದೇಶಗಳಲ್ಲಿ, ಕೊಲೊರೆಕ್ಟಲ್ ಕ್ಯಾನ್ಸರ್ 17 ದೇಶಗಳಲ್ಲಿ ಇವೆ. ಮಹಿಳೆಯರಲ್ಲಿ 164 ದೇಶಗಳಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯ ಎನಿಸಿಕೊಂಡಿದೆ. ಅನಂತರ ಗರ್ಭಕಂಠದ ಕ್ಯಾನ್ಸರ್ 37 ದೇಶಗಳು ಕಂಡು ಬಂದಿವೆ.
ಇದನ್ನೂ ಓದಿ: Supreme Court: ವಯಸ್ಸಾದ ಪೋಷಕರನ್ನು ಬೀದಿಗೆ ಬಿಡೋ ಮಕ್ಕಳೇ ಹುಷಾರ್... ಆಸ್ತಿಯಲ್ಲಿ ಸಿಗಲ್ಲ ಬಿಡಿಗಾಸು!
ಸಾವಿನ ಪ್ರಮಾಣ 111 ದೇಶಗಳಲ್ಲಿ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಅನಂತರ ಪ್ರಾಸ್ಟೇಟ್ ಕ್ಯಾನ್ಸರ್ 57 ದೇಶಗಳಲ್ಲಿವೆ. ಹೊಟ್ಟೆ ಕ್ಯಾನ್ಸರ್ 14 ದೇಶಗಳಲ್ಲಿವೆ. ಇನ್ನು ಮಹಿಳೆಯರಲ್ಲಿ 134 ದೇಶಗಳಲ್ಲಿ ಕ್ಯಾನ್ಸರ್ ಸಾವಿಗೆ ಸ್ತನ ಕ್ಯಾನ್ಸರ್ ಸಾಮಾನ್ಯ ಕಾರಣವಾಗಿದೆ. ಅನಂತರ ಶ್ವಾಸನಾಳ, ಶ್ವಾಸಕೋಶದ ಕ್ಯಾನ್ಸರ್ 29 ದೇಶಗಳಲ್ಲಿ ಸಾವಿಗೆ ಪ್ರಮುಖ ಕಾರಣವಾಗಿವೆ.