ಎಲಿವೇಟೆಡ್ ಲಿಪೊಪ್ರೋಟೀನ್(ಎ) ಕುರಿತು ಎಚ್ಚರಿಕೆ ವಹಿಸಲು ಜಾಗತಿಕ ತಜ್ಞರಿಂದ ಕರೆ
ವಿಶ್ವ ಹೃದಯ ದಿನಕ್ಕೆ (29 ಸೆಪ್ಟೆಂಬರ್) ಮುಂಚಿತವಾಗಿ ಗ್ಲೋಬಲ್ ಹಾರ್ಟ್ ಹಬ್ ಮತ್ತು ನೊವಾರ್ಟಿಸ್ ಸಂಸ್ಥೆಯು ಆಯೋಜಿಸಿದ್ದ “ಲಿಟಲ್ (ಎ) ವಿತ್ ಬಿಗ್ ಕಾನ್ಸೀಕ್ವೆನ್ಸಸ್” ಎಂಬ ಶೈಕ್ಷಣಿಕ ಮಾಧ್ಯಮ ವೆಬಿನಾರ್ ನಲ್ಲಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಮಟ್ಟದ ವೈದ್ಯಕೀಯ ತಜ್ಞರಿ ಎಲಿವೇಟೆಡ್ ಎಲ್‌ಪಿ(ಎ) ಅನ್ನು ಗಂಭೀರವಾದ, ಕಡಿಮೆ ಗಮನಹರಿಸಲ್ಪಟ್ಟ ಆನುವಂಶಿಕ ಸಮಸ್ಯೆ ಎಂದು ತಿಳಿಸಿದ್ದಾರೆ.

-

ಹೃದಯರಕ್ತನಾಳದ ಕಾಯಿಲೆ (ಸಿವಿಡಿ)ಯು ಪ್ರತಿವರ್ಷ ವಿಶ್ವಾದ್ಯಂತ ಸುಮಾರು 1.8 ಕೋಟಿ ಜೀವಗಳನ್ನು ಬಲಿತೆಗೆದುಕೊಳ್ಳುತ್ತದೆ, ಇದರಲ್ಲಿ ಸುಮಾರು ಐದನೇ ಒಂದು ಭಾಗದ ಮರಣಗಳು ಭಾರತ ದಲ್ಲಿ ನಡೆಯುತ್ತದೆ.
1 ಈ ಮರಣ ಪ್ರಮಾಣ ಎಲ್ಲಾ ರೀತಿಯ ಕ್ಯಾನ್ಸರ್ ಮರಣ ಪ್ರಮಾಣ ಗಳಿಗಿಂತಲೂ ಹೆಚ್ಚಾಗಿದೆ. ಇಷ್ಟಿದ್ದರೂ ಈ ಕಾಯಿಲೆಗಳಿಗೆ ಕಾರಣವಾಗುವ ಆನುವಂಶಿಕ ಸಮಸ್ಯೆಯೊಂದು ಇನ್ನೂ ಹೆಚ್ಚು ಜನರಿಗೆ ಗಮನಕ್ಕೆ ಬಾರದೆಯೇ ಉಳಿದಿದೆ.
2,3 ಆ ಸಮಸ್ಯೆಯನ್ನು ಎಲಿವೇಟೆಡ್ ಲಿಪೊಪ್ರೋಟೀನ್(ಎ) ಅಥವಾ ಎಲ್‌ಪಿ(ಎ) ಎಂದು ಕರೆಯ ಲಾಗುತ್ತದೆ. ಭಾರತದ ಜನಸಂಖ್ಯೆಯ ಸುಮಾರು ಶೇ.25ರಷ್ಟು ಜನರು ಈ ಎಲಿವೇಟೆಡ್ ಲಿಪೊ ಪ್ರೋಟೀನ್(ಎ) ಅಥವಾ ಎಲ್‌ಪಿ(ಎ) ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಈ ಸಮಸ್ಯೆಯು ಪರೀಕ್ಷಿಸಲ್ಪಡುವುದು ಬಹಳ ಕಡಿಮೆ ಮತ್ತು ಹೃದಯದ ಆರೋಗ್ಯ ಪಾಲನೆ ವಿಚಾರದಲ್ಲಿ ಈ ಅಂಶವನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ.
5
ವಿಶ್ವ ಹೃದಯ ದಿನಕ್ಕೆ (29 ಸೆಪ್ಟೆಂಬರ್) ಮುಂಚಿತವಾಗಿ ಗ್ಲೋಬಲ್ ಹಾರ್ಟ್ ಹಬ್ ಮತ್ತು ನೊವಾರ್ಟಿಸ್ ಸಂಸ್ಥೆಯು ಆಯೋಜಿಸಿದ್ದ “ಲಿಟಲ್ (ಎ) ವಿತ್ ಬಿಗ್ ಕಾನ್ಸೀಕ್ವೆನ್ಸಸ್” ಎಂಬ ಶೈಕ್ಷಣಿಕ ಮಾಧ್ಯಮ ವೆಬಿನಾರ್ ನಲ್ಲಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಮಟ್ಟದ ವೈದ್ಯಕೀಯ ತಜ್ಞರಿ ಎಲಿವೇಟೆಡ್ ಎಲ್‌ಪಿ(ಎ) ಅನ್ನು ಗಂಭೀರವಾದ, ಕಡಿಮೆ ಗಮನಹರಿಸಲ್ಪಟ್ಟ ಆನುವಂಶಿಕ ಸಮಸ್ಯೆ ಎಂದು ತಿಳಿಸಿದ್ದಾರೆ. ಯಾಕೆಂದರೆ ಈ ಸಮಸ್ಯೆಯು ಹೃದಯಾಘಾತ ಅಥವಾ ಪಾರ್ಶ್ವ ವಾಯುವಿನಂತಹ ಹೃದಯರಕ್ತನಾಳದ ಕಾಯಿಲೆ ಉಂಟಾಗುವ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
6,7
ಏಷಿಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಮೂರರಲ್ಲಿ ಇಬ್ಬರು (66%) ನಿಯಮಿತ ವಾದ ಹೃದಯ ತಪಾಸಣೆಗಳನ್ನು ಮಾಡುವುದಿಲ್ಲ. ಅದರಲ್ಲೂ ಸುಮಾರು ಅರ್ಧದಷ್ಟು ಜನರು (45%) ಹೃದಯ ಕಾಯಿಲೆಯ ಅಪಾಯಕ್ಕೆ ಆನುವಂಶಿಕ ಕಾರಣ ಇರಬಹುದು ಎಂದೇ ತಿಳಿದಿಲ್ಲ ಎಂದು ನೊವಾರ್ಟಿಸ್ ನಡೆಸಿದ ಇತ್ತೀಚಿನ ಸಮೀಕ್ಷಾ ವರದಿಯು ತಿಳಿಸಿದೆ. ಎಲ್‌ಪಿ(ಎ) ಕುರಿತು ಜಾಗೃತಿ ಕಡಿಮೆ ಇದೆ. ಈ ಸಮೀಕ್ಷೆಯಲ್ಲಿ ಉತ್ತರಿಸಿದ ಕೇವಲ ಶೇ.22 ಮಂದಿ ಮಾತ್ರ ಇದಕ್ಕೆ ಬಯೋ ಮಾರ್ಕರ್ ಪರೀಕ್ಷೆ ನಡೆಸುವ ಕುರಿತು ತಿಳಿದಿದ್ದಾರೆ ಮತ್ತು ಕೇವಲ ಶೇ.7ರಷ್ಟು ಜನರು ಮಾತ್ರ ಈ ಪರೀಕ್ಷೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅಪೋಲೋ ಹಾಸ್ಪಿಟಲ್ಸ್ ಭಾರತದ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕರಾದ ಡಾ. ಎ. ಶ್ರೀನಿವಾಸ್ ಕುಮಾರ್ ಅವರು, “ಹೃದಯರಕ್ತನಾಳದ ಕಾಯಿಲೆ ಭಾರತದಲ್ಲಿ ಹೆಚ್ಚು ಮರಣಕ್ಕೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಎಲಿವೇಟೆಡ್ ಎಲ್‌ಪಿ(ಎ) ಯಂತಹ ಅಪಾಯಕಾರಕಗಳ ಕುರಿತು ಜಾಗೃತಿ ಹೆಚ್ಚಾಗಿರಬೇಕಾದುದು ಅವಶ್ಯವಾಗಿದೆ. ದಕ್ಷಿಣ ಏಷಿಯನ್ನರು ಸಾಮಾನ್ಯವಾಗಿ ಸೂಕ್ಷ್ಮವಾಗಿರುತ್ತಾರೆ. ವಾಸ್ತವವಾಗಿ, ಭಾರತದ ಶೇ.34ರಷ್ಟು ತೀವ್ರವಾದ ಕೊರೋನರಿ ಸಿಂಡ್ರೋಮ್ ರೋಗಿಗಳು ಜಾಸ್ತಿ ಎಲ್‌ಪಿ(ಎ) ಹೊಂದಿದ್ದಾರೆ.8 ಈ ಅಂಶವು ಡಯಾಬಿಟೀಸ್, ಸ್ಥೂಲಕಾಯ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳ ಜೊತೆ ಸೇರಿಕೊಂಡರೆ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವವು ಗಣನೀಯವಾಗಿ ಹೆಚ್ಚಾಗುತ್ತದೆ. ಎಲ್‌ಪಿ(ಎ) ಪರೀಕ್ಷೆ ನಡೆಸುವುದು ಜಾಸ್ತಿ ಅಪಾಯ ಹೊಂದಿರುವ ಜನರನ್ನು ಮೊದಲೇ ಗುರುತಿಸಲು ಮತ್ತು ಸಂಭಾವ್ಯ ಹೃದಯದ ಅಪಾಯಗಳನ್ನು ತಡೆಗಟ್ಟಲು ಅತ್ಯಗತ್ಯವಾಗಿದೆ” ಎಂದು ಹೇಳಿದರು.
ಹಾರ್ಟ್ ಹೆಲ್ತ್ ಇಂಡಿಯಾ ಫೌಂಡೇಶನ್ ನ ಸಂಸ್ಥಾಪಕರಾದ ರಾಮ್ ಖಂಡೇಲ್‌ವಾಲ್ ಅವರು ಮಾತನಾಡಿ, “ಭಾರತದ ತುಂಬಾ ಜನರಿಗೆ ಒಂದು ಸರಳ ರಕ್ತ ಪರೀಕ್ಷೆ ಮಾಡುವುದರಿಂದ ತಮಗೆ ಆನುವಂಶಿಕ ಸಮಸ್ಯೆ ಎಲಿವೇಟೆಡ್ ಎಲ್‌ಪಿ(ಎ) ಯಿಂದ ಅಪಾಯ ಉಂಟಾಗುವುದನ್ನು ಅರಿಯ ಬಹುದು ಎಂದೇ ತಿಳಿದಿಲ್ಲ. ನಾವು ಈ ಕುರಿತು ರಾಷ್ಟ್ರವ್ಯಾಪಿ ವ್ಯಾಪಕವಾದ ಅರಿವನ್ನು ಮೂಡಿಸಬೇಕು ಮತ್ತು ಜನರಿಗೆ ಶಿಕ್ಷಣ ನೀಡಬೇಕು. ಇದರಿಂದ ಆರಂಭಿಕ ಹಂತದಲ್ಲಿಯೇ ಪರೀಕ್ಷೆ ನಡೆಸುವುದು ಹೃದಯ ಆರೋಗ್ಯದ ಪಾಲನೆ ವಿಚಾರದಲ್ಲಿ ಬದುಕಿನ ಸಹಜ ಭಾಗವಾಗುತ್ತದೆ ಮತ್ತು ಹೃದಯ ಸಮಸ್ಯೆ ಉಂಟಾದ ಬಳಿಕ ಮಾತ್ರವೇ ಜನರು ಈ ಕುರಿತು ಪರಿಗಣಿಸಬೇಕಾದ ಅಗತ್ಯ ಬೀಳುವುದಿಲ್ಲ” ಎಂದು ಹೇಳಿದರು.
ನೊವಾರ್ಟಿಸ್ ಇಂಡಿಯಾದ ಕಂಟ್ರಿ ಪ್ರೆಸಿಡೆಂಟ್ & ಮ್ಯಾನೇಜಿಂಗ್ ಡೈರೆಕ್ಟರ್ ಅಮಿತಾಭ್ ದುಬೆ ಅವರು ಮಾತನಾಡಿ, “ಎಲ್‌ಪಿ(ಎ) ಪರೀಕ್ಷೆಯು ಹೃದಯಾಘಾತವನ್ನು ತಡೆಗಟ್ಟಲು ಮತ್ತು ಜೀವ ಗಳನ್ನು ಉಳಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ. ನೊವಾರ್ಟಿಸ್ ನಲ್ಲಿ ನಾವು ಕಳೆದ ಮೂರು ದಶಕಗಳಿಂದ ಅತ್ಯಾಧುನಿಕ ಸಂಶೋಧನೆಯನ್ನು ನಡೆಸುತ್ತಿದ್ದೇವೆ. ಜೊತೆಗೆ ರೋಗಿಗಳಿಗೆ ಅತ್ಯಾ ಧುನಿಕ ಚಿಕಿತ್ಸೆಗಳನ್ನು ಒದಗಿಸುತ್ತಿದ್ದೇವೆ. ಇದರಿಂದ ಅಪಾಯ ಎದುರಿಸಬಹುದಾದ ಲಕ್ಷಾಂತರ ಭಾರತೀಯರು ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು” ಎಂದು ಹೇಳಿದರು.
ರೋಗಿಗಳಿಂದ ಹಿಡಿದು ಪಾಲಿಸಿ ಬದಲಾವಣೆವರೆಗೆ: ಜಾಗತಿಕ ಮಟ್ಟದ ಕ್ರಮಕ್ಕೆ ಕರೆ
ಈ ಕಾರ್ಯಕ್ರಮದಲ್ಲಿ ರೋಗಿಗಳ ಪರ ಗುಂಪುಗಳು, ವೈದ್ಯಕೀಯ ವಿಜ್ಞಾನ ಮತ್ತು ಹೆಲ್ತ್ ಕೇರ್ ಪಾಲಿಸಿ ಕ್ಷೇತ್ರಗಳ ಪ್ರಮುಖರು ಭಾಗವಹಿಸಿದ್ದರು.
- ರೋಗಿಯ ದೃಷ್ಟಿಕೋನ: 33ನೇ ವಯಸ್ಸಿನಲ್ಲಿ ಹೃದಯಾಘಾತ ಉಂಟಾಗಿ ಅದರಿಂದ ಬದುಕು ಳಿದ ರಾಮ್ ಖಂಡೇಲ್ ವಾಲ್ ಅವರು ಈ ಅನುಭವವು ಹೃದಯ ರೋಗಿಗಳಿಗೆ ಬೆಂಬಲ ನೀಡುವ ಭಾರತದ ಮೊದಲ ಸಂಸ್ಥೆ ಹಾರ್ಟ್ ಹೆಲ್ತ್ ಇಂಡಿಯಾ ಫೌಂಡೇಶನ್ ಮೂಲಕ ಕೆಲಸ ಮಾಡಲು ಹೇಗೆ ಪ್ರೇರಣೆಯಾಯಿತು ಎಂದು ಹೇಳಿಕೊಂಡರು. ವಿಶೇಷವಾಗಿ ತನ್ನ ಫೌಂಡೇಷನ್ ನ ಸದಸ್ಯರಲ್ಲಿ ಎಲಿವೇಟೆಡ್ ಎಲ್‌ಪಿ(ಎ) ಯ ಅಪಾಯಗಳ ಬಗ್ಗೆ ಎಚ್ಚರಿಕೆ ಮೂಡಿಸುವ ತಮ್ಮ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.
- ವೈಜ್ಞಾನಿಕ ಒಳನೋಟ: ಯೂನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾದ ಕಾರ್ಡಿಯೋ- ಮೆಟಾಬಾಲಿಕ್ ಮೆಡಿಸಿನ್ ತಜ್ಞರಾದ ಪ್ರೊ. ಜೆರಾಲ್ಡ್ ವಾಟ್ಸ್ ಅವರು ಎಲಿವೇಟೆಡ್ ಎಲ್‌ಪಿ(ಎ) ರ ಹಿಂದಿನ ಜೆನೆಟಿಕ್ ಸೈನ್ಸ್ ಮತ್ತು ಹೃದಯ ಆರೋಗ್ಯದ ಮೇಲೆ ಅದು ಉಂಟು ಮಾಡುವ ಪರಿಣಾಮವನ್ನು ವಿವರಿಸಿದರು.
- ಪಾಲಿಸಿ ದೃಷ್ಟಿಕೋನ: ಎಫ್ಎಚ್ ಯೂರೋಪ್ ಫೌಂಡೇಶನ್ (ಎಫ್ಎಚ್ಇಎಫ್) ನ ಎಲ್‌ಪಿ (ಎ) ಇಂಟರ್ ನ್ಯಾಷನಲ್ ಟಾಸ್ಕ್ ಫೋರ್ಸ್ ನ ಸೀನಿಯರ್ ಪಾಲಿಸಿ ಅಡ್ವೈಸರ್/ಪ್ರಾಜೆಕ್ಟ್ ಲೀಡ್ ನಿಕೋಲಾ ಬೆಡ್ಲಿಂಗ್ಟನ್ ಅವರು ನೀತಿ ನಿರೂಪಕರಿಗೆ ರಾಷ್ಟ್ರೀಯ ಸಿವಿಡಿ ಮಾರ್ಗಸೂಚಿಗಳಲ್ಲಿ ಎಲ್‌ಪಿ(ಎ) ಪರೀಕ್ಷೆಯನ್ನು ಸೇರಿಸಲು ಒತ್ತಾಯಿಸಿದರು. ಅದನ್ನು ಬೆಂಬಲಿಸಿದ ಎಫ್ಎಚ್ ಯೂರೋಪ್ ಫೌಂಡೇಶನ್ (ಎಫ್ಎಚ್ಇಎಫ್) ನ ಎಲ್‌ಪಿ(ಎ) ಇಂಟರ್ ನ್ಯಾಷನಲ್ ಟಾಸ್ಕ್ ಫೋರ್ಸ್ ನ ಮೊನಾಶ್ ಯೂನಿವರ್ಸಿಟಿಯ ಹೆಲ್ತ್ ಎಕನಾಮಿಕ್ಸ್ ಪ್ರೊಫೆಸರ್ ಪ್ರೊ. ಝಾನ್ ಫಿನಾ ಅಡೆಮಿ ಅವರು ಎಲ್‌ಪಿ(ಎ) ಪರೀಕ್ಷೆಯ ಕಡಿಮೆ ವೆಚ್ಚ ಮತ್ತು ವೈದ್ಯಕೀಯ ವ್ಯವಸ್ಥೆಗಳು ಮತ್ತು ಈ ಪ್ರದೇಶದ ಸಮಾಜದ ಮೇಲೆ ಅದರಿಂದ ಉಂಟಾಗ ಬಹುದಾದ ಆರ್ಥಿಕ ಪರಿಣಾಮಗಳ ಕುರಿತು ಮಾತನಾಡಿದರು.
- ಅಂತರ್ ಪ್ರಾದೇಶಿಕ ಸಂವಾದ: ಭಾರತ, ಕೊರಿಯಾ, ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯದ ತಜ್ಞರು (ಅಪೋಲೋ ಹಾಸ್ಪಿಟಲ್ಸ್ ನ ಡಾ. ಎ. ಶ್ರೀನಿವಾಸ್ ಕುಮಾರ್ ಮತ್ತು ಗಚಾನ್ ಯೂನಿವರ್ಸಿಟಿಯ ಗಿಲ್ ಮೆಡಿಕಲ್ ಸೆಂಟರ್ ನ ಪ್ರೊ. ಯಂಗ್‌ವೂ ಜಾಂಗ್ ಸೇರಿದಂತೆ) ಎಲಿವೇಟೆಡ್ ಎಲ್‌ಪಿ(ಎ) ರೋಗನಿರ್ಣಯ ಮತ್ತು ನಿರ್ವಹಣೆಯಲ್ಲಿನ ಸವಾಲುಗಳನ್ನು ಮತ್ತು ಅದರ ಪರೀಕ್ಷೆ ನಡೆಸುವುದರಿಂದ ಉಂಟಾಗುವ ಸಂಭವನೀಯ ಆರ್ಥಿಕ ಲಾಭಗಳ ಕುರಿತು ಚರ್ಚಿಸಿದರು.
ಏಷಿಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ಪ್ರದೇಶದಾದ್ಯಂತ ಎಲ್‌ಪಿ(ಎ) ಪರೀಕ್ಷೆ ಹೆಚ್ಚಿಸಲು, ಎಲಿವೇಟೆಡ್ ಎಲ್‌ಪಿ(ಎ) ರೋಗನಿರ್ಣಯ ಮತ್ತು ನಿರ್ವಹಣೆಗೆ ಪೂರಕವಾದ ಪಾಲಿಸಿಗಳನ್ನು ವೈದ್ಯಕೀಯ ವ್ಯವಸ್ಥೆಗಳಲ್ಲಿ ಅಳವಡಿಸಿಕೊಳ್ಳುವ ಒಮ್ಮತದ ನಿರ್ಣಯದೊಂದಿಗೆ ವೆಬಿನಾರ್ ಮುಕ್ತಾಯಗೊಂಡಿತು.
ಸಂಪಾದಕರಿಗೆ ಟಿಪ್ಪಣಿಗಳು
ಎಲ್‌ಪಿ(ಎ) ಕುರಿತು ಎಲ್‌ಪಿ(ಎ) ಎಂಬುದು ಲಿಪೊಪ್ರೋಟೀನ್ ಕಣವಾಗಿದ್ದು, ಇದು ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್ (ಎಲ್ ಡಿ ಎಲ್) ಗೆ ರಚನಾತ್ಮಕವಾಗಿ ಹೋಲುತ್ತದೆ. ಆದರೆ ಇದರ ಅಪೊಲಿಪೊಪ್ರೋಟೀನ್(ಎ) ಘಟಕದಿಂದ ಪ್ರತ್ಯೇಕವಾಗಿರುತ್ತದೆ.9 ಈ ಹೆಚ್ಚುವರಿ ಪ್ರೋಟೀನ್, ಎಲ್‌ಪಿ(ಎ) ಅನ್ನು ವಿಶೇಷವಾಗಿ ‘ಸ್ಟಿಕಿ’ ಆಗಿ ಮಾಡುತ್ತದೆ, ಇದು ಧಮನಿಗಳಲ್ಲಿ ಪ್ಲಾಕ್ ಶೇಖರಣೆಗೆ ಕಾರಣವಾಗಬಹುದಾಗಿದೆ.
10
ಎಲಿವೇಟೆಡ್ ಎಲ್‌ಪಿ(ಎ) ಮಟ್ಟಗಳು ಅಥೆರೋಸ್ಕ್ಲೆರೋಟಿಕ್ ಪ್ಲಾಕ್ ನ ಅಭಿವೃದ್ಧಿ ಮತ್ತು ಪ್ರಗತಿ ಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದು ರಕ್ತನಾಳಗಳನ್ನು ಕಿರಿದಾಗಿಸುತ್ತದೆ ಮತ್ತು ಗಟ್ಟಿಯಾಗಿಸುತ್ತದೆ. ರಕ್ತದ ಹರಿವು ಮತ್ತು ಪ್ರಮುಖ ಅಂಗಗಳಿಗೆ ಆಮ್ಲಜನಕದ ಪೂರೈಕೆಯನ್ನು ನಿರ್ಬಂಧಿಸುತ್ತದೆ. ರಕ್ತನಾಳದಲ್ಲಿ ರಕ್ತ ಗಟ್ಟಿಯಾಗುವ ಅಪಾಯವನ್ನು ಸಹ ಹೆಚ್ಚಿಸುತ್ತದೆ. ಈ ರಕ್ತ ಹೆಪ್ಪುಗಟ್ಟುವಿಕೆಯಿಂದ ರಕ್ತದ ಹರಿವಿಗೆ ತಡೆ ಉಂಟಾಗಬಹುದು, ಇದರಿಂದ ಹೃದಯಾಘಾತ, ಪೆರಿಫೆರಲ್ ಆರ್ಟರಿ ಡಿಸೀಸ್ ಅಥವಾ ಪಾರ್ಶ್ವವಾಯುವಿನಂತಹ ಹೃದಯರಕ್ತನಾಳದ ಸಮಸ್ಯೆಗಳು ಉಂಟಾಗಬಹುದು.
11
ಎಲ್‌ಪಿ(ಎ) ಮಟ್ಟಗಳು ಸುಮಾರು ಶೇ.90ರಷ್ಟು ಆನುವಂಶಿಕವಾಗಿರುತ್ತವೆ, ಮುಖ್ಯವಾಗಿ 5 ವರ್ಷದ ವಯಸ್ಸಿನಿಂದಲೇ ಉಂಟಾಗುತ್ತವೆ ಮತ್ತು ಜೀವನದುದ್ದಕ್ಕೂ ತುಲನಾತ್ಮಕವಾಗಿ ಸ್ಥಿರವಾಗಿರುತ್ತವೆ.
12,13
ಆದ್ದರಿಂದ, ಆಹಾರ ಮತ್ತು ವ್ಯಾಯಾಮದಂತಹ ಜೀವನಶೈಲಿ ಬದಲಾವಣೆಗಳಿಂದ ಎಲ್‌ಪಿ(ಎ) ಸಾಂದ್ರತೆಯ ಮೇಲೆ ಅಷ್ಟೇನೂ ಪರಿಣಾಮ ಉಂಟಾಗುವುದಿಲ್ಲ.
* ಹೃದಯರಕ್ತನಾಳದ ಕಾಯಿಲೆ (ಸಿವಿಡಿ)ಯಿಂದ ಪ್ರತೀವರ್ಷ ಸುಮಾರು 1.8 ಕೋಟಿ ಜನರು ಮರಣವನ್ನಪ್ಪುತ್ತಾರೆ. ಇದರಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಮರಣ ಭಾರತದಲ್ಲಿ ಸಂಭವಿಸುತ್ತಿದ್ದು,1 ಎಲ್ಲಾ ರೀತಿಯ ಕ್ಯಾನ್ಸರ್ ಗಳಿಗಿಂತಲೂ ಸಿವಿಡಿಯಿಂದ ಉಂಟಾಗುವ ಮರಣ ಪ್ರಮಾಣವೇ ಹೆಚ್ಚಾಗಿದೆ.2,3
* ಎಲಿವೇಟೆಡ್ ಲಿಪೊಪ್ರೋಟೀನ್(ಎ) ಅಥವಾ ಎಲ್‌ಪಿ(ಎ) ಎಂಬುದು ಸಿವಿಡಿ ಉಂಟಾಗುವ ಅಪಾಯವನ್ನು ಹೆಚ್ಚಿಸುವ ಆನುವಂಶಿಕ ಸ್ಥಿತಿಯಾಗಿದ್ದು, ಭಾರತದಲ್ಲಿ 4 ಜನರಲ್ಲಿ ಒಬ್ಬರಿಗೆ ಸಿವಿಡಿ ಉಂಟುಮಾಡುತ್ತದೆ. ಈ ಸಮಸ್ಯೆ ಪರೀಕ್ಷಿಸಲ್ಪಡುವುದು ಬಹಳ ಕಡಿಮೆ.5
* ಏಷಿಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯದಾದ್ಯಂತ ನಡೆಸಿದ ಹೊಸ ಸಮೀಕ್ಷೆಯ ಪ್ರಕಾರ ಶೇ.66ರಷ್ಟು ಜನರು ನಿಯಮಿತವಾಗಿ ಹೃದಯ ಪರೀಕ್ಷೆ ಮಾಡುವುದನ್ನು ಬಿಟ್ಟುಬಿಡುತ್ತಾರೆ ಮತ್ತು ಸುಮಾರು ಅರ್ಧದಷ್ಟು ಜನರಿಗೆ (ಶೇ.45) ಹೃದಯ ಕಾಯಿಲೆಗೂ ಆನುವಂಶಿಕತೆಗೂ ಸಂಬಂಧ ಇರುವುದೆಂದೇ ತಿಳಿದಿಲ್ಲ.
* ತಜ್ಞರು ಹೃದಯರಕ್ತನಾಳದ ಪರೀಕ್ಷೆ ನಡೆಸುವಾಗ ಎಲ್‌ಪಿ(ಎ)ಗೆ ಆದ್ಯತೆ ನೀಡಲು ತಿಳಿಸಿದ್ದಾರೆ. ಜೊತೆಗೆ ಜಾಗೃತಿ ಕೊರತೆಯನ್ನು ನೀಗಿಸಲು ಮತ್ತು ಪರೀಕ್ಷೆ ಮತ್ತು ಚಿಕಿತ್ಸೆ ಸುಲಭವಾಗಿ ಪಡೆಯುವಂತೆ ಮಾಡಲು ಕರೆ ನೀಡಿದ್ದಾರೆ.