ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pro Kabaddi: ಯುಪಿ ಯೋಧಾಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ವೀರೋಚಿತ ಸೋಲು!

ಬೆಂಗಳೂರು ಬುಲ್ಸ್‌ ತಂಡ, ಯುಪಿ ಯೋಧಾಸ್‌ ವಿರುದ್ದ ಟೈ ಬ್ರೇಕರ್‌ನಲ್ಲಿ 5-6 ಅಂತರದಲ್ಲಿ ಸೋಲು ಅನುಭವಿಸಿತು. ಪಂದ್ಯದ ಪೂರ್ಣಾವಧಿಯಲ್ಲಿ ಉಭಯ ತಂಡಗಳು 36-36 ಅಂಕಗಳಿಂದ ಸಮಬಲ ಸಾಧಿಸಿದ್ದವು. ನಂತರ ಹೊಸ ನಿಯಮದನ್ವಯ ನಡೆದಿದ್ದ ರೇಡಿಂಗ್‌ನಲ್ಲಿ ಯುಪಿ ಯೋಧಾಸ್‌ ಮೇಲುಗೈ ಸಾಧಿಸಿತು.

ಯುಪಿ ಯೋಧಾಸ್‌ ವಿರುದ್ದ ಟೈ ಬ್ರೇಕರ್‌ನಲ್ಲಿ ಸೋತ ಬೆಂಗಳೂರು ಬುಲ್ಸ್!

ಯುಪಿ ಯೋಧಾಸ್‌ ವಿರುದ್ಧ ಬೆಂಗಳೂರು ಬುಲ್ಸ್‌ ತಂಡಕ್ಕೆ ಸೋಲು. -

Profile Ramesh Kote Sep 25, 2025 10:21 PM

ಜೈಪುರ: ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಬೆಂಗಳೂರು ಬುಲ್ಸ್‌ (Bengaluru Bulls) ತಂಡ ಟೈ ಆದ ರೋಚಕ ಪಂದ್ಯದಲ್ಲಿ ಯು.ಪಿ ಯೋಧಾಸ್‌ (UP Yodhas) ತಂಡದ ವಿರುದ್ಧ ವೀರೋಚಿತ ಸೋಲನುಭವಿಸಿತು. ಇಲ್ಲಿನ ಸವಾಯಿ ಮಾನ್‌ ಸಿಂಗ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ 2025ರ ಪ್ರೊ ಕಬಡ್ಡಿ (Pro Kabaddi 2025) ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 5-6 ಅಂತರದಲ್ಲಿ ಸೋಲು ಕಂಡಿತು. ಪಂದ್ಯದ ಪೂರ್ಣಾವಧಿಯಲ್ಲಿ ಉಭಯ ತಂಡಗಳು 36-36 ಅಂಕಗಳಿಂದ ಸಮಬಲ ಸಾಧಿಸಿದ್ದವು. ನಂತರ ಹೊಸ ನಿಯಮದನ್ವಯ ನಡೆದ ರೇಡಿಂಗ್‌ನಲ್ಲಿ ಯೋಧಾಸ್‌ ಮೇಲುಗೈ ಸಾಧಿಸಿತು.

ಬೆಂಗಳೂರು ಬುಲ್ಸ್‌ ತಂಡದ ಪರ ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ 11 ಅಂಕ ಗಳಿಸಿದರೆ, ಆಕಾಶ್‌ ಶಿಂದೆ 7 ಅಂಕ ಸಂಪಾದಿಸಿ ತಂಡದ ಹೋರಾಟಕ್ಕೆ ಕಾರಣರಾದರು. ಅತ್ತ ಯೋಧಾಸ್‌ ತಂಡದ ಪರ ಭವಾನಿ 10 ಅಂಕ ಕಲೆಹಾಕಿದರೆ, ಗಗನ್‌ ಗೌಡ್‌ 6 ಅಂಕಗಳ ಕೊಡುಗೆ ನೀಡಿದರು. ಇವರಲ್ಲದೆ, ಆಶು ಸಿಂಗ್‌, ಹಿತೇಶ್‌ ಮತ್ತು ಸುಮಿತ್‌ ತಂಡದ ಹೋರಾಟಕ್ಕೆ ತಮ್ಮ ಕೊಡುಗೆ ನೀಡಿದರು. ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳ ಆಟ ಬಾಕಿ ಇರುವಾಗ ಬೆಂಗಳೂರು ಬುಲ್ಸ್‌ ಕೇವಲ 3 (29-32) ಅಂಕಗಳ ಹಿನ್ನಡೆಯಲ್ಲಿತ್ತು.

ಸೆ. 27 ರಂದು 2025ರ ಜೆ.ಕೆ ರೇಸಿಂಗ್‌ ಎರಡನೇ ಸುತ್ತು ಆರಂಭ: ಬೆಂಗಳೂರಿನ ಅನೀಶ್‌ ಶೆಟ್ಟಿ ಪ್ರಮುಖ ಆಕರ್ಷಣೆ!

ಇದಕ್ಕೂ ಮುನ್ನ ಉಭಯ ತಂಡಗಳು ಮುನ್ನಡೆ ಸಾಧಿಸುವ ಛಲದೊಂದಿಗೆ ದ್ವಿತೀಯಾರ್ಧ ಆರಂಭಿಸಿದವು. ಇತ್ತಂಡಗಳು ಆಕ್ರಣಕಾರಿ ಆಟಕ್ಕೆ ಒತ್ತು ನೀಡಿದವು. ರೇಡರ್‌ ಭವಾನಿ ರಜಪೂತ್‌ ಆಕ್ರಮಣಕಾರಿ ದಾಳಿ ನಡೆಸಿದ ಕಾರಣ ಯೋಧಾಸ್‌ 27-25 ಅಂತರದಲ್ಲಿ ಪಂದ್ಯದಲ್ಲಿ ಮೊದಲ ಬಾರಿ ಮೇಲುಗೈ ಸಾಧಿಸಿತ್ತು. ಹಿನ್ನಡೆ ತಗ್ಗಿಸಲು ಬುಲ್ಸ್‌ ಆಟಗಾರರು ಹರಸಾಹಸ ನಡೆಸಿದರೂ ಹೊಂದಾಣಿಕೆ ಆಟ ಸಾಧ್ಯವಾಗಲಿಲ್ಲ. 32ನೇ ನಿಮಿಷದಲ್ಲಿ ಮತ್ತೊಮ್ಮೆ ಬುಲ್ಸ್‌ ಮನೆಯನ್ನು ಖಾಲಿ ಮಾಡಿಸಿದ ಯೋಧಾಸ್‌, 31-26 ಅಂತರದಲ್ಲಿ ಮೇಲುಗೈ ಸಾಧಿಸಿ ಗೆಲುವಿನ ಧ್ಯಾನ ಮಾಡಿತು. ಆದರೆ ಈ ಹಂತದಲ್ಲಿಎಚ್ಚರಿಕೆ ಆಟದ ಮೊರೆ ಹೋದ ಬುಲ್ಸ್‌, ದಾಳಿ ಮತ್ತು ಟ್ಯಾಕಲ್‌ ಎರಡರಲ್ಲೂ ಪುಟಿದೇಳುವ ಮೂಲಕ 29-32 ಅಂತರದಲ್ಲಿ ಹಿನ್ನಡೆ ತಗ್ಗಿಸುವ ಸಾಹಸ ಮಾಡಿದರು.

ಉಭಯ ತಂಡಗಳು ಮುನ್ನಡೆ ಸಾಧಿಸುವ ಛಲದೊಂದಿಗೆ ದ್ವಿತೀಯಾರ್ಧ ಆರಂಭಿಸಿದವು. ಇತ್ತಂಡಗಳು ಆಕ್ರಣಕಾರಿ ಆಟಕ್ಕೆ ಒತ್ತು ನೀಡಿದವು. ರೇಡರ್‌ ಭವಾನಿ ರಜ್‌ಪೂತ್‌ ಆಕ್ರಮಣಕಾರಿ ದಾಳಿ ನಡೆಸಿದ ಕಾರಣ ಯೋಧಾಸ್‌ 27-25 ಅಂತರದಲ್ಲಿ ಪಂದ್ಯದಲ್ಲಿ ಮೊದಲ ಬಾರಿ ಮೇಲುಗೈ ಸಾಧಿಸಿತು. ಹಿನ್ನಡೆ ತಗ್ಗಿಸಲು ಬುಲ್ಸ್‌ ಆಟಗಾರರು ಹರಸಾಹಸ ನಡೆಸಿದರೂ ಹೊಂದಾಣಿಕೆ ಆಟ ಸಾಧ್ಯವಾಗಲಿಲ್ಲ.



32ನೇ ನಿಮಿಷದಲ್ಲಿ ಮತ್ತೊಮ್ಮೆ ಬುಲ್ಸ್‌ ಮನೆಯನ್ನು ಖಾಲಿ ಮಾಡಿಸಿದ ಯೋಧಾಸ್‌ 31-26 ರಲ್ಲಿ ಮೇಲುಗೈ ಸಾಧಿಸಿ ಗೆಲುವಿನ ಧ್ಯಾನ ಮಾಡಿತು. ಆದರೆ ಈ ಹಂತದಲ್ಲಿ ಎಚ್ಚರಿಕೆ ಆಟದ ಮೊರೆ ಹೋದ ಬುಲ್ಸ್‌, ದಾಳಿ ಮತ್ತು ಟ್ಯಾಕಲ್‌ ಎರಡರಲ್ಲೂ ಪುಟಿದೇಳುವ ಮೂಲಕ 29-32 ರಲ್ಲಿ ಹಿನ್ನಡೆ ತಗ್ಗಿಸುವ ಸಾಹಸ ಮಾಡಿದರು.



ಮೊದಲ ಹತ್ತು ನಿಮಿಷಗಳ ಆಟದಲ್ಲಿ ಲಭಿಸಿದ ಮುನ್ನಡೆಯನ್ನು ಕಾಪಿಟ್ಟುಕೊಳ್ಳುವಲ್ಲಿಎಡವಿದ ಬೆಂಗಳೂರು ಬುಲ್ಸ್‌ ತಂಡದ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಕೇವಲ ಒಂದು ಅಂಕದಿಂದ (20-19) ಮುನ್ನಡೆ ಕಂಡುಕೊಂಡಿತು. 11ನೇ ನಿಮಿಷದಲ್ಲಿ ಯೋಧಾಸ್‌ ತಂಡವನ್ನು ಅಂಗಣದಿಂದ ಖಾಲಿ ಮಾಡಿಸಿದ ಬುಲ್ಸ್‌ ಆಟಗಾರರು ಮೊದಲಾರ್ಧದ ಬಹುತೇಕ ಸಮಯ ಮೇಲುಗೈ ಸಾಧಿಸಿದರು. ಆದರೆ ವಿರಾಮಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಸಮನ್ವತೆಯ ಕೊರತೆಯಿಂದ ಆಲೌಟ್‌ ಬಲೆಗೆ ಬಿದ್ದರು. ಹೀಗಾಗಿ ಸೇಡು ತೀರಿಸಿಕೊಂಡ ಯೋಧಾಸ್‌ ಕೇವಲ 1 ಅಂಕ ಹಿನ್ನಡೆ ಅನುಭವಿಸಿತು.

ಬೆಂಗಳೂರು ಬುಲ್ಸ್‌ ತನ್ನ ಮುಂದಿನ ಪಂದ್ಯದಲ್ಲಿಅಕ್ಟೋಬರ್‌ 2ರಂದು ಪುಣೇರಿ ಪಲ್ಟನ್‌ ತಂಡದ ಸವಾಲು ಎದುರಿಸಲಿದೆ.