ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2029ರ ಚುನಾವಣೆಯೊಳಗೆ ಮಹಿಳಾ ಮೀಸಲಾತಿ ಜಾರಿಗೊಳಿಸಲು ಕೇಂದ್ರದ ಯೋಜನೆ; ಈ ಅಧಿವೇಶನದಲ್ಲೇ ತಿದ್ದುಪಡಿ?

Women’s reservation in Parliament: ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೀಘ್ರ ಜಾರಿಗೆ ತರುವ ಮಾರ್ಗಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. 2029ರ ಲೋಕಸಭೆ ಚುನಾವಣೆಯೊಳಗೆ ಶೇಕಡಾ 33 ಮಹಿಳಾ ಮೀಸಲಾತಿ ಜಾರಿಗೆ ಬರುವಂತೆ ಮಾಡಲು ಮೋದಿ ಸರ್ಕಾರ ಉದ್ದೇಶಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮಾ. 10: ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು (Women’s reservation) ಶೀಘ್ರ ಜಾರಿಗೆ ತರಲು ಕೇಂದ್ರ ಸರ್ಕಾರ (Central Government) ಚಿಂತನೆ ನಡೆಸಿದೆ. ಪ್ರಸ್ತುತ ಅಧಿವೇಶನದಲ್ಲೇ ಸಂವಿಧಾನಕ್ಕೆ ತಿದ್ದುಪಡಿ ತರಬಹುದೆಂದು ಮೂಲಗಳು ತಿಳಿಸಿವೆ. ವಿಳಂಬದ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, 2029ರ ಲೋಕಸಭೆ ಚುನಾವಣೆಯೊಳಗೆ ಶೇಕಡಾ 33 ಮಹಿಳಾ ಮೀಸಲಾತಿ ಜಾರಿಗೆ ಬರುವಂತೆ ಮಾಡಲು ಮೋದಿ ಸರ್ಕಾರ ಉದ್ದೇಶಿಸಿದೆ.

2023ರ ನಾರಿ ಶಕ್ತಿ ವಂದನ್ ಅಧಿನಿಯಮ್ ಪ್ರಕಾರ ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ನಂತರ ನಡೆಯುವ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಬಳಿಕ ಜಾರಿಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ಈಗ ಸರ್ಕಾರ ಈ ಎರಡು ಷರತ್ತುಗಳಿಂದ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರಲು ಮುಂದಾಗಿದೆ.

2025ರ ಡಿಸೆಂಬರ್‌ನಲ್ಲಿ ಸಚಿವ ಸಂಪುಟವು ಎರಡು ಹಂತದ ಡಿಜಿಟಲ್ ಜನಗಣತಿಗೆ ಅನುಮೋದನೆ ನೀಡಿರುವುದರಿಂದ, ಜನಸಂಖ್ಯೆ ಎಣಿಕೆ ಪ್ರಕ್ರಿಯೆ ಮತ್ತು ನಂತರ ಡಿಲಿಮಿಟೇಶನ್ ಆಯೋಗ ರಚನೆಯ ಸಾಮಾನ್ಯ ಸಮಯಾವಧಿ ಪ್ರಕಾರ ಮಹಿಳಾ ಮೀಸಲಾತಿಯ ಜಾರಿಗೊಳಿಸುವಿಕೆ 2029ರ ನಂತರಕ್ಕೆ ಮುಂದೂಡಲ್ಪಡುವ ಸಾಧ್ಯತೆ ಇದೆ ಎನ್ನಲಾಗಿತ್ತು.

2032-33ರಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರಬಹುದು: ಎಚ್‌.ಡಿ. ಕುಮಾರಸ್ವಾಮಿ

ಮಾಹಿತಿ ಪ್ರಕಾರ, ಜನಗಣತಿ ಪ್ರಕ್ರಿಯೆ 2027ರ ಮಾರ್ಚ್‌ವರೆಗೆ ಪೂರ್ಣಗೊಳ್ಳದೇ ಇರಬಹುದು. ಅದರ ಬಳಿಕ ಕ್ಷೇತ್ರಗಳ ಗಡಿ ಪುನರ್‌ನಿರ್ಧಾರ (ಡಿಲಿಮಿಟೇಶನ್) ಮಾಡಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು.

ಈ ಕಾಲಮಿತಿಯನ್ನು ತಪ್ಪಿಸಲು, ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಸ್ಥಿತಿಯನ್ನು ಪರಿಗಣಿಸದೆ ಮಹಿಳಾ ಮೀಸಲಾತಿ ಜಾರಿಗೆ ಬರುವಂತೆ ಮಾಡುವ ಶಾಸನಾತ್ಮಕ ಬದಲಾವಣೆಯ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಡೆಯುತ್ತಿರುವ ಅಧಿವೇಶನದಲ್ಲಿ ಮಹತ್ವದ ಮಸೂದೆಯನ್ನು ಮಂಡಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಮಹಿಳಾ ಮೀಸಲಾತಿಯನ್ನು ಜನಗಣತಿಯೊಂದಿಗೆ ಕೊಂಡಿ ಹಾಕಿರುವುದು ತಂತ್ರಾತ್ಮಕ ವಿಳಂಬ ಎಂದು ಹಿಂದಿನಿಂದಲೇ ವಿಪಕ್ಷಗಳು ಮಾಡುತ್ತಿದ್ದ ಟೀಕೆಯ ನಂತರ ಈ ನಿರ್ಧಾರ ಹೊರ ಬಂದಿದೆ. ಇದೀಗ ಈ ಪರಿಷ್ಕೃತ ವಿಧಾನಕ್ಕೆ ಬೆಂಬಲವಿದೆಯೇ ಎಂಬುದನ್ನು ತಿಳಿಯಲು ಸರ್ಕಾರ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ.

“ಕಾಂಗ್ರೆಸ್‌ನಲ್ಲಿ ನಾಯಕಿ ಹೊರಹೊಮ್ಮಲು ಇಂದಿರಾ ಗಾಂಧಿ ಅವಕಾಶ ನೀಡಲಿಲ್ಲ”

ರಾಜಕೀಯದಲ್ಲಿ ಮಹಿಳೆಯರ ಬಗ್ಗೆ ಕಾಳಜಿ ವಹಿಸುವ ಏಕೈಕ ಪಕ್ಷ ಬಿಜೆಪಿ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಆದರೆ ಅವರ ಸಚಿವಾಲಯದಲ್ಲಿ ಒಬ್ಬ ಮಹಿಳೆಯೂ ಇರಲಿಲ್ಲ. ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ನಲ್ಲಿ ಬೇರೆ ಯಾವುದೇ ಮಹಿಳೆಯರು ಮೇಲೇರಲು ಬಿಡಲಿಲ್ಲ. ಇಂದು ಬೇರೆ ಯಾವುದೇ ಮಹಿಳೆಯರು ಮೇಲೇರಿದ್ದರೆ, ಅದು ಅವರ ಕುಟುಂಬದವರೇ ಆಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಕನ್ನಡಿಗರಿಗೆ ಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ; ಉದ್ಯಮಿ ಕಿರಣ್‌ ಮಜುಂದಾರ್‌ ಶಾ ವಿರೋಧ

ನಮ್ಮ ಪ್ರಧಾನಿಯವರಿಂದಾಗಿ, ಸಂಸತ್ತಿನಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ನಮ್ಮ ಪಕ್ಷವೇ ಕಾರಣ. ಬೇರೆ ಯಾವ ಪಕ್ಷಕ್ಕೆ ಅಂತಹ ಕಾನೂನನ್ನು ಪರಿಚಯಿಸುವ ಧೈರ್ಯ ಮತ್ತು ಇಚ್ಛಾಶಕ್ತಿ ಇತ್ತು? ಇಂದು, ಮಹಿಳೆಯರು ರಾಷ್ಟ್ರಪತಿಯಿಂದ ಹಿಡಿದು ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರವರೆಗೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಮ್ಮ ಪಕ್ಷವನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷವು ಮಹಿಳೆಯರು ಅಂತಹ ಜವಾಬ್ದಾರಿಯುತ ಸ್ಥಾನಗಳಿಗೆ ಏರಲು ಅವಕಾಶ ನೀಡಿಲ್ಲ ಎಂದರು.

ಉಜ್ವಲ ಮತ್ತು ಸ್ವಚ್ಛ ಭಾರತ ಹಾಗೂ ಮಹಿಳಾ ಕೇಂದ್ರಿತ ಆಡಳಿತದಂತಹ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳನ್ನು ಉತ್ತೇಜಿಸಿದ ಪಕ್ಷ ನಮ್ಮದು. ನಾನು ಇದಕ್ಕೆ ಜೀವಂತ ಉದಾಹರಣೆ. ನನ್ನನ್ನು ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಕೆಲಸ ಮಾಡಲು ಅವಕಾಶ ಮತ್ತು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಯಿತು ಎಂದು ತಿಳಿಸಿದರು.