GST Council: ಕೇಂದ್ರ ಸರ್ಕಾರದಿಂದ ಜನ ಸಾಮಾನ್ಯರಿಗೆ ಗುಡ್‌ನ್ಯೂಸ್: ಜೀವ ರಕ್ಷಕ ಔಷಧ ಸೇರಿ ಹಲವು ವಸ್ತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ
ಸರಕು ಮತ್ತು ಸೇವಾ ತೆರಿಗೆಯನ್ನು ಪರಿಷ್ಕೃತಗೊಳಿಸಿ ಕೇಂದ್ರ ಆದೇಶ ಹೊರಡಿಸಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಹೊಸ ನಿಯಮ ಸೆಪ್ಟೆಂಬರ್ 22ರಿಂದಲೇ ಜಾರಿಗೆ ಬರಲಿದೆ. 4 ಇದ್ದ ಜಿಎಸ್‌ಟಿ ಸ್ಲ್ಯಾಬ್ 2ಕ್ಕೆ ಇಳಿಸಲಾಗಿದೆ.

-

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಗುಡ್‌ನ್ಯೂಸ್ ನೀಡಿದೆ. ಸರಕು ಮತ್ತು ಸೇವಾ ತೆರಿಗೆ (GST)ಯನ್ನು ಪರಿಷ್ಕೃತಗೊಳಿಸಿ ಆದೇಶ ಹೊರಡಿಸಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಹೊಸ ನಿಯಮ ಸೆಪ್ಟೆಂಬರ್ 22ರಿಂದಲೇ ಜಾರಿಗೆ ಬರಲಿದೆ. 4 ಇದ್ದ ಜಿಎಸ್‌ಟಿ ಸ್ಲ್ಯಾಬ್ ಅನ್ನು 2ಕ್ಕೆ ಇಳಿಸಲಾಗಿದೆ. ಅಸ್ತಿತ್ವದಲ್ಲಿದ್ದ ಶೇ. 12 ಮತ್ತು ಶೇ. 28ರ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗಿದೆ. ಜೀವ ರಕ್ಷಕ ಔಷಧ ಸೇರಿ ಹಲವು ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಜಿಎಸ್‌ಟಿ ವಿನಾಯಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾವಿಸಿದ್ದರು.
#56thGSTCouncil || Union Finance Minister @nsitharaman says, "We have reduced the slabs. There shall be only two slabs, and we are also addressing the issues of compensation cess."#NextGenGST @FinMinIndia | @nsitharamanoffc pic.twitter.com/C0NdeKAY5Q
— All India Radio News (@airnewsalerts) September 3, 2025
ಇನ್ನು ಮುಂದೆ ಜಿಎಸ್‌ಟಿ ಸ್ಲ್ಯಾಬ್ ಶೇ. 5 ಮತ್ತು ಶೇ. 18 ಮಾತ್ರ ಇರಲಿದೆ. ಪಾನ್ ಮಸಾಲಾ, ಸಿಗರೇಟ್, ಕೂಲ್ ಡ್ರಿಂಕ್ಸ್, ಕಾರ್ಬೊನೇಟೆಡ್ ಪಾನೀಯಗಳು, ಐಷಾರಾಮಿ ಕಾರು, ದೊಡ್ಡ ಎಸ್‌ಯುವಿಗಳಿಗೆ ಶೇ. 40ರಷ್ಟು ಜಿಎಸ್‌ಟಿ ಇರಲಿದೆ.
ಜಿಎಸ್‌ಟಿಯಿಂದ ವಿನಾಯಿತಿ ಪಡೆದ ಉತ್ಪನ್ನಗಳು
- 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು, ಅಪರೂಪದ ಕಾಯಿಲೆಗಳ ಔಷಧಗಳು
- ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು
- ಮ್ಯಾಪ್, ಚಾರ್ಟ್, ಗ್ಲೋಬ್‌ಗಳು, ಪೆನ್ಸಿಲ್‌ಗಳು, ಶಾರ್ಪನರ್‌ಗಳು, ಕ್ರಯೋನ್‌ಗಳು, ಪ್ಯಾಸ್ಟೆಲ್‌ಗಳು, ನೋಟ್‌ಬುಕ್‌ಗಳು, ಎರೇಸರ್
- ಅತಿ ಹೆಚ್ಚಿನ ತಾಪಮಾನ (UHT)ದ ಹಾಲು, ಪನೀರ್, ಪಿಜ್ಜಾ ಬ್ರೆಡ್, ಖಾಖ್ರಾ, ಚಪಾತಿ ಅಥವಾ ರೋಟಿ
ಜಿಎಸ್‌ಟಿ ದರ: ಶೇ. 5ರ ಉತ್ಪನ್ನಗಳು
- ಹೇರ್ ಆಯಿಲ್, ಶಾಂಪೂ, ಟೂತ್‌ಪೇಸ್ಟ್, ಸೋಪ್, ಟೂತ್ ಬ್ರಷ್, ಶೇವಿಂಗ್ ಕ್ರೀಮ್
- ಬೆಣ್ಣೆ, ತುಪ್ಪ, ಚೀಸ್, ಡೇರಿ ಉತ್ಪನ್ನಗಳು, ನಾಮ್‌ಕೀನ್‌ಗಳು, ಪಾತ್ರೆಗಳು
- ಫೀಡಿಂಗ್ ಬಾಟಲಿಗಳು, ಶಿಶುಗಳ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು
- ಹೊಲಿಗೆ ಯಂತ್ರಗಳು ಮತ್ತು ಭಾಗಗಳು
- ಥರ್ಮಾಮೀಟರ್, ವೈದ್ಯಕೀಯ ದರ್ಜೆಯ ಆಮ್ಲಜನಕ, ಎಲ್ಲ ರೋಗನಿರ್ಣಯ ಕಿಟ್, ಗ್ಲುಕೋಮೀಟರ್
- ಕನ್ನಡಕಗಳು
- ಟ್ರ್ಯಾಕ್ಟರ್ ಟೈರ್‌ಗಳು, ಭಾಗಗಳು, ಟ್ರ್ಯಾಕ್ಟರ್‌ಗಳು
- ನಿರ್ದಿಷ್ಟ ಜೈವಿಕ ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು
- ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್
- ಕೃಷಿ, ತೋಟಗಾರಿಕೆ ಯಂತ್ರಗಳು
ಜಿಎಸ್‌ಟಿ ದರ: ಶೇ. 18ರ ಉತ್ಪನ್ನಗಳು
- ಎಸಿ, ಟಿವಿ, ಡಿಶ್‌ವಾಶರ್‌ಗಳು
- ಸಣ್ಣ ಕಾರುಗಳು, 350 ಸಿಸಿಗಿಂತ ಕಡಿಮೆ ಇರುವ ಬೈಕ್‌ಗಳು, ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು
- ಪೆಟ್ರೋಲ್ ಮತ್ತು ಹೈಬ್ರಿಡ್, ಎಲ್‌ಪಿಜಿ, ಸಿಎನ್‌ಜಿ ಕಾರುಗಳು (1,200 ಸಿಸಿ ಮತ್ತು 4,000 ಎಂಎಂ ಒಳಗಿನ)
- ಡೀಸೆಲ್ ಮತ್ತು ಹೈಬ್ರಿಡ್ ಕಾರುಗಳು (1,500 ಸಿಸಿ ಮತ್ತು 4,000 ಎಂಎಂ ಒಳಗಿನ)
- ಎಲ್ಲ ಆಟೋ ಬಿಡಿಭಾಗಗಳು, ತ್ರಿಚಕ್ರ ವಾಹನಗಳು
- ಸಿಮೆಂಟ್
- ಮಾನಿಟರ್‌ಗಳು ಮತ್ತು ಪ್ರೊಜೆಕ್ಟರ್‌ಗಳು
Watch Live: Smt @nsitharaman addresses the media on the outcomes of 56th GST Council Meeting in New Delhi. @PIB_India @FinMinIndia @GST_Council https://t.co/saqmJf68Nu
— Nirmala Sitharaman Office (@nsitharamanoffc) September 3, 2025
ಜಿಎಸ್‌ಟಿ ದರ: ಶೇ. 40ರ ಉತ್ಪನ್ನಗಳು
- ಪಾನ್ ಮಸಾಲ, ಸಿಗರೇಟ್, ಗುಟ್ಕಾ, ಜಗಿಯುವ ತಂಬಾಕು, ಬೀಡಿಗಳು
- ಕೂಲ್ ಡ್ರಿಂಕ್ಸ್, ಕೆಫೀನ್‌ಯುಕ್ತ ಪಾನೀಯಗಳು, ಆಲ್ಕೊಹಾಲಿಕ್ ಇಲ್ಲದ ಪಾನೀಯಗಳು
- 350 ಸಿಸಿ ಮೀರಿದ ಬೈಕ್, ವಿಹಾರ ನೌಕೆಗಳು
The GST Council has approved significant reforms today. These reforms have a multi-sectoral and multi-thematic focus, aimed at ensuring ease of living for all citizens and ease of doing business for all: Office of Finance Minister Nirmala Sitharaman pic.twitter.com/7yg9zELOvs
— ANI (@ANI) September 3, 2025